ಮೊದಲ ಬಾರಿಗೆ ಮುಸ್ಲಿಮೇತರರಿಗೂ ಬಾಗಿಲು ತೆಗೆದ ನಗರದ 170 ವರ್ಷದ ಐತಿಹಾಸಿಕ ಮೋದಿ ಮಸೀದಿ; ದಾಖಲಾಯ್ತು ಹೊಸ ಇತಿಹಾಸ

ಈ ಅಪರೂಪದ ಅನುಭವವನ್ನು ವಿವರಿಸಿರುವ ಬೆಂಗಳೂರು ಮೂಲದ ಬರಹಗಾರರಾದ ಅಮಂದೀಪ್ ಸಿಂಗ್ ಸಂಧು, ಪರಸ್ಪರ ಧರ್ಮ ಮತ್ತು ನಂಬಿಕೆ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಇದು ಅತ್ಯುತ್ತಮ ಉಪಕ್ರಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

170 ವರ್ಷದ ಐತಿಹಾಸಿಕ ಮೋದಿ ಮಸೀದಿ.

170 ವರ್ಷದ ಐತಿಹಾಸಿಕ ಮೋದಿ ಮಸೀದಿ.

  • Share this:
ಬೆಂಗಳೂರು: ನಗರದ ಹೃದಯ ಭಾಗದಲ್ಲಿರುವ 170 ವರ್ಷಕ್ಕೂ ಹಳೆಯದಾದ ಮೊದಿ ಮಸೀದಿ ಇಂದು ಮುಸ್ಲಿಮೇತರರಿಗೂ ಬಾಗಿಲು ತೆರೆಯುವ ಮೂಲಕ ಹೊಸ ಇತಿಹಾಸಕ್ಕೆ ಕಾರಣವಾಗಿದೆ. ಹೀಗಾಗಿ ನೂರಾರು ಸಂಖ್ಯೆಯಲ್ಲಿ ಹಿಂದೂಗಳು, ಕ್ರಿಶ್ಚಿಯನ್ನರು ಹಾಗೂ ಸಿಖ್ಖರು ಮಸೀದಿ ಪ್ರವೇಶಿಸಿದರು. ಈ ದೃಶ್ಯ ನಿಜಕ್ಕೂ ಅಪರೂಪದ ಮತ್ತು ಅಭುತಪೂರ್ವ ದೃಶ್ಯವಾಗಿತ್ತು ಎಂದರೆ ತಪ್ಪಾಗಲಾರದು.

ಇತರೆ ಧರ್ಮದ ಸಾಮಾನ್ಯರಿಗೆ ಅಂತರ್ ಧರ್ಮಗಳ ನಡುವಿನ ಸಂವಾದವನ್ನು ಉತ್ತೇಜಿಸುವ ಹಾಗೂ ಮುಸ್ಲಿಮೇತರರು ತಮ್ಮ ಧರ್ಮ ಮತ್ತು ಮಸೀದಿಯ ಕಾರ್ಯಚಟುವಟಿಕೆಗಳನ್ನು ಇತರೆ ಧರ್ಮದವರಿಗೆ ಅರ್ಥಮಾಡಿಸುವ ಮಹತ್ವಾಕಾಂಕ್ಷೆಯ ಉದ್ದೇಶದ ಸಲುವಾಗಿ ಇಂದು ಮುಸ್ಲಿಮೇತರರಿಗೂ ಪ್ರಾಚೀನ ಮಸೀದಿಯ ಬಾಗಿಲನ್ನು ತೆರೆಯಲಾಗಿತ್ತು.

ಥಾಣೆ ಮತ್ತು ಬೆಂಗಳೂರಿನ ರಹಮತ್ ಸಮೂಹದ ಅಪರೂಪದ ಉಪಕ್ರಮವಾದ “Visit My Mosque Day” ಎಂಬ ಹೆಸರಿನ ಕಾರ್ಯಕ್ರಮ ಇತ್ತೀಚೆಗೆ ಮುಸ್ಲಿಮೇತರರ ನಡುವೆ ದೊಡ್ಡ ಮಟ್ಟದ ಯಶಸ್ಸು ಸಾಧಿಸಿದೆ. ಇದೇ ಕಾರಣಕ್ಕೆ ಈ ಕಾರ್ಯಕ್ರಮವನ್ನು ನಗರದಲ್ಲೂ ಆಯೋಜಿಸಲಾಗಿದ್ದು, ಸಂಘಟಕರು ಕೇವಲ 170 ಮುಸ್ಲಿಮೇತರರಿಗೆ ಮಾತ್ರ ಮಸೀದಿಯ ಪ್ರವೇಶವನ್ನು ಸೀಮಿತಗೊಳಿಸಿದ್ದರು. ಆದರೆ, 400ಕ್ಕೂ ಹೆಚ್ಚು ಉತ್ಸಾಹಿ ಜನ ಮಧ್ಯಾಹ್ನದ ಹೊತ್ತಿಗೆ ಮಸೀದಿಯನ್ನು ಪ್ರವೇಶಿಸುವ ಮೂಲಕ ಕಾರ್ಯಕ್ರಮವನ್ನು ಮತ್ತಷ್ಟು ಯಶಸ್ವಿಗೊಳಿಸಿದ್ದಾರೆ.

childrens.
ಭಾರತೀಯ ಎಲ್ಲಾ ಭಾಷೆಗಳಲ್ಲೂ ಮುಸ್ಲಿಮೇತರರನ್ನು ಆಹ್ವಾನಿಸುತ್ತಿರುವ ಮಕ್ಕಳು.


ವೃತ್ತಿಪರರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ಬರಹಗಾರರು, ಗೃಹಿಣಿಯರು ಹಾಗೂ ನಿವೃತ್ತರು ಸೇರಿದಂತೆ ಎಲ್ಲಾ ವರ್ಗದ ಜನರಿಗೂ ಈ ಕಾರ್ಯಕ್ರಮದ ಸಂಘಟಕರು ಪ್ರವೇಶ ಕಲ್ಪಿಸಿದ್ದರು. ಆದರೆ, ಸಂದರ್ಶಕರಿಗೆ ಮಸೀದಿ ಪ್ರವೇಶದ ವೇಳೆ ಕೇಂದ್ರ ಸರ್ಕಾರದ ನೂತನ ಪೌರತ್ವ ತಿದ್ದುಪಡಿ ಮಸೂದೆ, ನಾಗರೀಕ ರಾಷ್ಟ್ರೀಯ ನೋಂದಣಿ ಕಾಯ್ದೆ ಸೇರಿದಂತೆ ಯಾವುದೇ ರಾಜಕೀಯ ವಿಚಾರವನ್ನು ಮಾತನಾಡಬಾರದು. ಅಲ್ಲದೆ, ಸೂಕ್ಷ್ಮ ವಿಚಾರಗಳ ಕುರಿತು ಅನವಶ್ಯಕ ಚರ್ಚೆ ನಡೆಸಬಾರದು ಎಂದು ಕಟ್ಟುನಿಟ್ಟಾಗಿ ತಿಳಿಸಲಾಗಿತ್ತು.

ಈ ಅಪರೂಪದ ಅನುಭವವನ್ನು ವಿವರಿಸಿರುವ ಬೆಂಗಳೂರು ಮೂಲದ ಬರಹಗಾರರಾದ ಅಮಂದೀಪ್ ಸಿಂಗ್ ಸಂಧು, “ಪರಸ್ಪರ ಧರ್ಮ ಮತ್ತು ನಂಬಿಕೆ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಇದು ಅತ್ಯುತ್ತಮ ಉಪಕ್ರಮವಾಗಿದೆ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.

WhatsApp-Image-2020-01-19-at-13.57.33
ಪ್ರಾರ್ಥನಾ ಸ್ಥಳದಲ್ಲಿ ಕುಳಿತಿರುವ ಸಂದರ್ಶಕರು.


ಈ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿರುವ ರಹಮತ್ ಸಮೂಹದ ಪ್ರತಿನಿಧಿಯೊಬ್ಬರು, “ಈ ಕಾರ್ಯಕ್ರಮ ದೇಶದ ಪ್ರಸ್ತುತ ಯಾವುದೇ ರಾಜಕೀಯ ಘಟನೆಗಳೊಂದಿಗೆ ಸಂಬಂಧ ಹೊಂದಿಲ್ಲ. ಇದು ಸಂಪೂರ್ಣ ರಾಜಕೀಯ ವಿರೋಧಿ ಕಾರ್ಯಕ್ರಮ. ಮುಸ್ಲಿಮೇತರರು ಇಸ್ಲಾಂ ಮತ್ತು ಮಸೀದಿಯ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಬೇಕು ಎಂದು ನಾವು ಬಯಸುತ್ತೇವೆ.

ಮಸೀದಿ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ. ಹೀಗಾಗಿ ಮುಸ್ಲಿಮೇತರರನ್ನು ನಾವು ಮಸೀದಿಗೆ ಆಹ್ವಾನಿಸಲು ಮುಂದಾದೆವು. ಈ ಕಾರ್ಯಕ್ರಮ ಇದೀಗ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಹಲವು ಕಾರ್ಯಕ್ರಮಗಳನ್ನು ನಡೆಸಲು ನಾವು ಯೋಜಿಸಿದ್ದೇವೆ” ಎಂದು ತಿಳಿಸಿದ್ದಾರೆ.

ಮುಂದಿನ ಸೆಪ್ಟೆಂಬರ್​ನಲ್ಲಿ ರಹಮತ್ ಸಮೂಹ ಬೆಂಗಳೂರಿನ ಕ್ರಿಶ್ಚಿಯನ್ ಸೆಮಿನರಿಯಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಇದೇ ರೀತಿಯ ಭೇಟಿಯ ಅವಕಾಶವನ್ನು ಏರ್ಪಡಿಸಲಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್​ ಹೈಕಮಾಂಡ್​ ಲೋ ಕಮಾಂಡ್​ ಆಗಿದೆ, ಕೆಪಿಸಿಸಿ ಮನೆಯೊಂದು ಮೂರು ಬಾಗಿಲು; ಕಿಡಿಕಾರಿದ ಎಂಟಿಬಿ ನಾಗರಾಜ್
First published: