• Home
 • »
 • News
 • »
 • state
 • »
 • Bengaluru: ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್, ಮುಖಕ್ಕೆ ಮೂತ್ರ ಎರಚಿ ಕಿರುಕುಳ ನೀಡಿದ್ರಾ ಪೊಲೀಸರು?

Bengaluru: ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್, ಮುಖಕ್ಕೆ ಮೂತ್ರ ಎರಚಿ ಕಿರುಕುಳ ನೀಡಿದ್ರಾ ಪೊಲೀಸರು?

ಆರೋಪ ಮಾಡಿರುವ ರಾಜೇಶ್

ಆರೋಪ ಮಾಡಿರುವ ರಾಜೇಶ್

ಅಲ್ಲಿ ಗಾಡಿಯಿಂದ ಬಿದ್ದ ಪೆಟ್ಟು ಅಂತ ನನ್ನಿಂದ ಬಲವಂತವಾಗಿ ಹೇಳಿಸಲಾಯ್ತು. ಚಿಕಿತ್ಸೆ ಕೊಡಿಸಿ ಮತ್ತೆ ಠಾಣೆಗೆ ಕರೆದುಕೊಂಡು ಬಂದು ಗಾಯಗಳ ಮೇಲೆ ಮತ್ತು ಕಣ್ಣಿಗೆ ಖಾರದ ಪುಡಿ ಎರಚಿ ಚಿತ್ರಹಿಂಸೆ ಕೊಡಲಾಯ್ತು. ಪೊಲೀಸರ ಹಲ್ಲೆಯಿಂದಾಗಿ ಬಲಗಾಲಿನ ಮೂಳೆ ಮುರಿದಿದೆ.

 • Share this:

  ರಾಮಮೂರ್ತಿನಗರ ಪೊಲೀಸರ (Ramamurthy nagara Police Station) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಠಾಣೆಗೆ ಯುವಕನೋರ್ವನನ್ನು (Youth) ಕರೆದುಕೊಂಡು ಬಂದು ಪ್ರಕರಣವೊಂದನ್ನ ಒಪ್ಪಿಕೊಳ್ಳುವಂತೆ ಹಲ್ಲೆ ಮಾಡಿರುವ ಆರೋಪ (Allegation) ಕೇಳಿ ಬಂದಿದೆ. ಇನ್ನು ಹಲ್ಲೆಗೊಳಗಾದ 29 ವರ್ಷದ ರಾಜೇಶ್, ಹೈ ಕೋರ್ಟ್ ಜಡ್ಜ್, ರಾಜ್ಯ ಸರ್ಕಾರ, ಗೃಹ ಇಲಾಖೆ, ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದು, ತನ್ನ ಜೊತೆ ಅಮಾನವೀಯವಾಗಿ ನಡೆದುಕೊಂಡ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಠಾಣೆಯಲ್ಲಿ ಅಕ್ರಮವಾಗಿ ಬಂಧನದಲ್ಲಿರಿಸಿಕೊಂಡು ಕೋಳಿ ರಾಜ ಅಲಿಯಾಸ್ ಪುಷ್ಪರಾಜ್ ಎಂಬಾತನ ಪ್ರಕರಣವನ್ನ ಒಪ್ಪಿಕೊಳ್ಳುವಂತೆ ಹಲ್ಲೆ ನಡೆಸಿದ್ದಾರೆ ಎಂದು ರಾಜೇಶ್ ಆರೋಪಿಸಿದ್ದಾರೆ. ಈ ಸಂಬಂಧ ದೂರು ಸಲ್ಲಿಸಿರುವ ರಾಜೇಶ್, ದೇಹದ ಮೇಲಾದ ಗಾಯಗಳ ಫೋಟೋ, ವಿಡಿಯೋ ಮತ್ತು ಆಸ್ಪತ್ರೆಯಲ್ಲಿ ಪಡೆದ ಚಿಕಿತ್ಸೆಯ ದಾಖಲೆಗಳನ್ನು ಸಲ್ಲಿಸಿದ್ದಾರೆ.


  ರಾಜೇಶ್​ನನ್ನು 12 ದಿನ ಪೊಲೀಸ್ ಠಾಣೆಯಲ್ಲಿರಿಸಿಕೊಂಡು ಮೂತ್ರ ಎಸೆದು ಕಿರುಕುಳ ನೀಡಿದ್ದಾರೆ. ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ನೀಡಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.


  ರಾಜೇಶ್ ನೀಡಿದ ದೂರಿನಲ್ಲಿ ಏನಿದೆ?


  ಸೆಪ್ಟೆಂಬರ್ 4ರಂದು ನನ್ನನ್ನು ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಯ್ತು. ನನ್ನ ಬಟ್ಟೆ ಕಳಚಿ ಬೆತ್ತಲು ಮಾಡಿದ ನಂತರ ಇನ್​ಸ್ಪೆಕ್ಟರ್ ಶಿವರಾಜ್ ವಿಡಿಯೋ ತೆಗೆದುಕೊಂಡರು. ನಂತರ ಇನ್​ಸ್ಪೆಕ್ಟರ್ ಮೆಲ್ಟಿನ್ ಫ್ರಾನ್ಸಿಸ್​ ಬಳಿ ಕರೆದುಕೊಂಡು ಹೋಗಲಾಯ್ತು. ಫ್ರಾನ್ಸಿಸ್​ ಅವರ ಆದೇಶದ ಮೇರೆಗೆ ಠಾಣೆಯ ಮೇಲಿನ ಮಹಡಿಗೆ ಕರೆದುಕೊಂಡು ಹೋಗಲಾಯ್ತು.


  ಅಲ್ಲಿ ಮತ್ತೆ ಬಟ್ಟೆ ಕಳಸಿ ದೊಣ್ಣೆ, ಬ್ಯಾಟ್​ನಿಂದ ಹೊಡೆದರು. ನೋವು ತಾಳಲಾರದೇ ಅಲ್ಲೇ ಮೂತ್ರ ವಿಸರ್ಜನೆ ಮಾಡಿದೆ. ಕಾಲಿನಿಂದ ಮೂತ್ರವನ್ನು ನನ್ನ ಮೇಲೆ ಎರಚಿದರು. ಒಟ್ಟು 12 ದಿನ ಅಕ್ರಮ ಬಂಧನಲ್ಲಿರಿಸಿಕೊಂಡು ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ.


  ಗುದದ್ವಾರದ ಬಳಿ ರಕ್ತಸ್ರಾವ, ಮರ್ಮಾಂಗಕ್ಕೆ ಎಲೆಕ್ರಿಕ್ ಶಾಕ್


  ಸೆಪ್ಟೆಂಬರ್ 4, 5 ಮತ್ತು 6ರಂದು  ನನ್ನ ಮರ್ಮಾಂಗಕ್ಕೆ ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ. ನನ್ನ ಎದೆಯ ಮೇಲೆ ಕುಳಿ ಇನ್​ಸ್ಪೆಕ್ಟರ್ ಶಿವರಾಜ್ ಬೂಟ್​ನಿಂದ ಮುಖಕ್ಕೆ ಹೊಡೆದಿದ್ದಾರೆ. ಕೈ ಕಾಲುಗಳನ್ನು ಮೇಲೆ ತಲೆ ಕೆಳಗಾಗಿಸಿ ಹೊಡೆಯಾಲಾಗಿದೆ. ಈ ವೇಳೆ ಗುದದ್ವಾರದ ಬಳಿ ರಕ್ತಸ್ರಾವ ಆಗಿತ್ತು. ಆಗ ನನ್ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ.


  ಇದನ್ನೂ ಓದಿ:  Arrested 10 People: ಚಿನ್ನದ ವ್ಯಾಪಾರಿಗಳನ್ನು ಅಡ್ಡಗಟ್ಟಿ ದರೋಡೆ ಕೇಸ್​: ಪೊಲೀಸರಿಂದ 10 ಮಂದಿಯ ಬಂಧನ


  ಅಲ್ಲಿ ಗಾಡಿಯಿಂದ ಬಿದ್ದ ಪೆಟ್ಟು ಅಂತ ನನ್ನಿಂದ ಬಲವಂತವಾಗಿ ಹೇಳಿಸಲಾಯ್ತು. ಚಿಕಿತ್ಸೆ ಕೊಡಿಸಿ ಮತ್ತೆ ಠಾಣೆಗೆ ಕರೆದುಕೊಂಡು ಬಂದು ಗಾಯಗಳ ಮೇಲೆ ಮತ್ತು ಕಣ್ಣಿಗೆ ಖಾರದ ಪುಡಿ ಎರಚಿ ಚಿತ್ರಹಿಂಸೆ ಕೊಡಲಾಯ್ತು. ಪೊಲೀಸರ ಹಲ್ಲೆಯಿಂದಾಗಿ ಬಲಗಾಲಿನ ಮೂಳೆ ಮುರಿದಿದೆ.


  ಮಾಡದ ತಪ್ಪು ಒಪ್ಪಿಕೊಳ್ಳಲು ಒಪ್ಪದಿದ್ದಾಗ ಖಾಲಿ ಪತ್ರಕ್ಕೆ ಸಹಿ ಮಾಡಿಸಿಕೊಂಡು ಕಳುಹಿಸಲಾಗಿದೆ. ನನ್ನ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳು ಠಾಣೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ದೃಶ್ಯಾವಳಿ ವಶಕ್ಕೆ ಪಡೆದು ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನ ಪತ್ರದಲ್ಲಿ ಆಗ್ರಹಿಸಲಾಗಿದೆ.


  ಇದನ್ನೂ ಓದಿ:  Hubballi: ಕಾಂಗ್ರೆಸ್​ನಿಂದ ಪೇ ಮೇಯರ್ ಅಭಿಯಾನ; ರಾಷ್ಟ್ರಪತಿ ಕಾರ್ಯಕ್ರಮದಲ್ಲಿಯೂ ನಡೀತಾ ಭ್ರಷ್ಟಾಚಾರ?


  ಡಿಸಿಪಿ ಭಿಮಾಶಂಕರ್ ಗುಳೇದ್ ಪ್ರತಿಕ್ರಿಯೆ


  ರಾಜೇಶ್ ಆರೋಪಕ್ಕೆ ಪ್ರತಿಕ್ರಿಯಿಸಿರುವ  ಪೂರ್ವ ವಿಭಾಗದ ಡಿಸಿಪಿ ಭಿಮಾಶಂಕರ್ ಗುಳೇದ್, ಆರೋಪಿ ಕಳ್ಳತನ ಯತ್ನ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಬಂಧನ ಭೀತಿಯಿಂದ ಪೊಲೀಸರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾನೆ. ಆತನ ಆರೋಪದ ಹಿಂದೆ ಜಗನ್ ಎಂಬಾತನ ಕೈವಾಡವಿದೆ. ಅಪರಾಧ ಪ್ರಕರಣವೊಂದರಲ್ಲಿ ರಾಜೇಶ್ ವಿರುದ್ಧ 2018 ರಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ರಾಮಮೂರ್ತಿನಗರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹಳೆ ದ್ವೇಷಕ್ಕಾಗಿ‌ ಪೊಲೀಸರ ವಿರುದ್ಧ ಎತ್ತಿ ಕಟ್ಟಿದ್ದಾನೆ ಎಂದು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

  Published by:Mahmadrafik K
  First published: