ಬೆಂಗಳೂರು:ಬೆಂಗಳೂರು ಆರ್ ಟಿ ನಗರದ (R T Nagara) ಯುವಜೋಡಿಗಳು ಉಡುಪಿಯ ಮಂದಾರ್ತಿ ಸಮೀಪದ ಹೆಗ್ಗುಂಜೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾರೆ. ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದ ಕಾರು ಪತ್ತೆಯಾದ ಘಟನೆ ಸಂಭವಿಸಿದೆ. ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಜೋಡಿಗಳು ಶವವಾಗಿ ಪತ್ತೆಯಾಗಿದ್ದಾರೆ. ಜ್ಯೋತಿ ಚೋಳನಾಯಕನಹಳ್ಳಿ (Cholanayakanahalli) ನಿವಾಸಿಯಾಗಿದ್ದಾರೆ, ಯಶವಂತ್ ಯಾದವ್ (Yashavanth Yadav) ಮುನಿಯಪ್ಪ ಲೇಔಟ್ (Muniyappa Layout) ನಿವಾಸಿ. ಮೇ 19 ರಂದು ಹುಡುಗಿ ಪೋಷಕರು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಇನ್ನು ಯುವಕನ ಪೋಷಕರು ಮೇ 20ಕ್ಕೆ ದೂರು ದಾಖಲಿಸಿದ್ದರು.
ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿಯಿಂದ ದೂರು ಯಶವಂತ್(23) ಮತ್ತು ಜ್ಯೋತಿ(23) ಆತ್ಮಹತ್ಯೆ ಮಾಡಿಕೊಂಡಿರುವ ಯುವಜೋಡಿಗಳು. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಯುವತಿಯ ತಾಯಿ ತಮ್ಮ ಮಗಳು ಇಂಟರ್ವ್ಯೂಗೆ ಹೋಗುತ್ತೇನೆ ಎಂದವಳು ವಾಪಸ್ ಬಂದಿರುವುದಿಲ್ಲ ಎಂದು ದೂರು ನೀಡಿದ್ದಾರೆ. ಆಕೆಯನ್ನು ಪತ್ತೆಹಚ್ಚಿ ಕೊಡುವಂತೆ ಪೊಲೀಸರಲ್ಲಿ ತಾಯಿ ದೂರು ನೀಡಿದ್ದರು ಈ ದೂರಿನ ಮೇರೆಗೆ ಪೊಲೀಸ್ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.
ಯುವಕ ಯಶವಂತ ನಾಪತ್ತೆಯಾಗಿರುವ ದೂರು ಕೂಡ ದಾಖಲು ಅದೇ ರೀತಿ 20ನೇ ತಾರೀಖಿನಂದು ಯುವಕ ಯಶವಂತ ನಾಪತ್ತೆಯಾಗಿರುವ ದೂರು ಕೂಡ ದಾಖಲಾಗಿದೆ. ಟ್ಯಾಲಿ ಕ್ಲಾಸಿಗೆ ತೆರಳುತ್ತೇನೆ ಎಂದು ಮನೆಯಿಂದ ಹೋಗಿದ್ದ ಯುವಕ ಮರಳಿ ಮನೆ ಕಡೆ ಬರಲಿಲ್ಲ ಎಂದು ಯುವಕನ ತಂದೆ ಠಾಣೆಯಲ್ಲಿ ದೂರು ನೀಡಿದ್ದಾರೆ. ಯಶವಂತ್ ಮತ್ತು ಜ್ಯೋತಿ ಇದೇ ತಿಂಗಳು 18ರ ಮಧ್ಯಾಹ್ನ ಮನೆಯಿಂದ ತೆರಳಿದ್ದಾರೆ.
ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರ್ ಬಾಡಿಗೆಗೆ ಪಡೆದಿದ್ದರು ಮೃತ ಯುವಜೋಡಿಗಳು ಮೇ 21 ನೇ ತಾರೀಖಿನಂದು ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರ್ ಬಾಡಿಗೆಗೆ ಪಡೆದಿದ್ದರು. ಅದೇ ರೀತಿ ಅದೇ ಕಾರಿನಲ್ಲಿ ಉಡುಪಿಗೆ ಬಂದಿದ್ದ ಜೋಡಿ ಇಂದು ಶವವಾಗಿ ಪತ್ತೆಯಾಗಿರುವುದು ಸಂಶಯಾಸ್ಪದವಾಗಿದೆ. ಸಾವು ನಿಗೂಢವಾಗಿದ್ದು ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಇನ್ನೂ ತಿಳಿದುಬಂದಿಲ್ಲ ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ. ಬೆಂಗಳೂರಲ್ಲಿ ಇಂದು ಬೆಳ್ಳಂಬೆಳಗ್ಗೆ ಏರ್ಪೋರ್ಟ್ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ವಾಹನ ಸವಾರ ಸಾವನ್ನಪ್ಪಿದ್ದಾನೆ. ಜಕ್ಕೂರು ಏರ್ ಡ್ರಮ್ ಬಳಿ ಘಟನೆ ನಡೆದಿದೆ. ಏರ್ಪೋರ್ಟ್ ಫ್ಲೈ ಓವರ್ ಮೇಲೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವಾಗ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ 45 ವರ್ಷದ ಗೋವಿಂದಪ್ಪ ಎಂಬುವರು ಮೃತಪಟ್ಟಿದ್ದಾರೆ. ಅವರ ಜೊತೆ ಬೈಕ್‌ನಲ್ಲಿದ್ದ 12 ವರ್ಷದ ಬಾಲಕ ಸಂಜಯ್ ಎಂಬಾತ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ.
ಬಾಲಕನಿಗೆ ಏರೋಡ್ರಮ್ ತೋರಿಸುವಾಗ ಅನಾಹುತ ಮೃತ ಗೋವಿಂದಪ್ಪ ಅವರು ತಮ್ಮ ತಂಗಿ ಮಗನಾದ ಬಾಲಕ ಸಂಜಯ್‌ಗೆ ಜಕ್ಕೂರು ಏರೋಡ್ರಮ್ ತೋರಿಸಲು ಬಂದಿದ್ದರು. ಏರ್ಪೋರ್ಟ್ ಫ್ಲೈಓವರ್ ಮೇಲೆ ಮೊಪೆಡ್ ಬೈಕ್ ನಿಲ್ಲಿಸಿ, ಏರೋಡ್ರಮ್ ತೋರಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಕಾರು ಮೊಪೆಡ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಗೋವಿಂದಪ್ಪ ಫ್ಲೈ ಓವರ್ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾರೆ.
Published by:Swathi Nayak
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ