Bengaluru Rent Home: ಮುಸ್ಲಿಂ ಆಗಿದ್ದಕ್ಕೆ ಬೆಂಗಳೂರಲ್ಲಿ ಬಾಡಿಗೆಮನೆ ಸಿಕ್ಕಿಲ್ಲ; ವೈರಲ್ ಆಯ್ತು ಟ್ವೀಟ್

ನಾನ್​ವೆಜ್ ಸೇವಿಸುವ ಅನೇಕ ಹಿಂದೂಗಳಿಗೆ ಬಾಡಿಗೆ ಮನೆ ಸಿಗುವುದಿಲ್ಲ. ಬ್ಯಾಚುಲರ್ ಪುರುಷರಿಗೆ ಮನೆ ಸಿಗುವುದಿಲ್ಲ ಏಕೆಂದರೆ ಅವರು ಕುಡಿಯುತ್ತಾರೆ ಮತ್ತು ಧೂಮಪಾನ ಮಾಡುತ್ತಾರೆ ಎಬುದು ಬಾಡಿಗೆ ಮನೆ ಮಾಲೀಕರ ಆರೋಪ. ಜೊತೆಗೆ ಒಂಟಿ ಮಹಿಳೆಯರಿಗೂ ಬಾಡಿಗೆಗೆ ಮನೆ ಸಿಗುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಬೆಂಗಳೂರಲ್ಲಿ ಮನೆ ಹುಡುಕಾಟ ನಡೆಸುವುದೇ ಒಂದು ದೊಡ್ಡ ಕೆಲಸ! ಸದ್ಯ ಮಹಿಳೆಯೊಬ್ಬರು ಮನೆ ಹುಡುಕಾಟ ನಡೆಸಿದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ (Viral Post) ಆಗುತ್ತಿದೆ.  ತಮ್ಮ ಧರ್ಮದ ಕಾರಣದಿಂದ ಅವರಿಗೆ ಬಾಡಿಗೆ ಮನೆ ಸಿಕ್ಕಿಲ್ಲ. ಬೆಂಗಳೂರಿನ ಹೈಫಾ ಮುಸ್ಲಿಂ ಮಹಿಳೆಯೇ (Bengaluru Woman) ಬಾಡಿಗೆಗೆ ಮನೆ ಸಿಗುತ್ತಿಲ್ಲ ಎಂದು ಅಳಲು ತೋಡಿಕೊಂಡ ಮಹಿಳೆ. ಎಲ್ಲರೂ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು (Azadi Ka Amrit Mahotsav) ಆಚರಿಸಿದರೆ, ನನ್ನ ಆಗಸ್ಟ್ 15 ಅನ್ನು ನಾನು ಹೇಗೆ ಕಳೆದಿದ್ದೇನೆ ಎಂಬುದು ಇಲ್ಲಿದೆ ಎಂದು ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದಾರೆ.

    ಹೈಫಾ ಮನೆ ಹುಡುಕಾಟದಲ್ಲಿದ್ದರು. ಮನೆ ಬಾಡಿಗೆಗೆ ಇದೆ ಎಂದು ಹಾಕಲಾದ ಮೊಬೈಲ್ ನಂಬರ್​ಗಳನ್ನು ಆಕೆ ಸಂಪರ್ಕಿಸಿದ್ದಾಳೆ. ವಾಟ್ಸ್​ಆ್ಯಪ್​ನಲ್ಲಿ ಚಾಟ್ ಮಾಡಿ ಮನೆ ಬಾಡಿಗೆಗೆ ಲಭ್ಯವಿದೆಯೇ ಎಂದು ವಿಚಾರಿಸಿದ್ದಾರೆ. ಆಗ ಮನೆ ಮಾಲೀಕರು ಮಹಿಳೆಯ ಹೆಸರು ಕೇಳಿದ್ದಾರೆ. ಆಗ ತನ್ನ ಹೆಸರು ಹೈಫಾ ಎಂದು ಹೇಳಿದ್ದಾಳೆ. "ನೀವು ಮುಸ್ಲಿಂ ಮಹಿಳೆಯೇ?" ಎಂದು ಮನೆ ಮಾಲೀಕರು ಪ್ರಶ್ನಿಸಿದ್ದಾರೆ? "ಹೌದು" ಎಂದಿದ್ದಾರೆ ಹೈಫಾ.



    ಮುಸ್ಲಿಂ ಆಗಿದ್ದಕ್ಕೆ ಏನಾದರೂ ಸಮಸ್ಯೆ ಇದೆಯೇ?
    ಅಲ್ಲದೇ "ಇದರಿಂದ ಏನಾದರೂ ಸಮಸ್ಯೆ ಇದೆಯೇ? ನನಗೆ ಮನೆ ಸಿಗುವುದಿಲ್ಲವೇ?" ಎಂದು ಸಹ ಪ್ರಶ್ನಿಸಿದ್ದಾರೆ. ಆಗ ಮನೆ ಮಾಲೀಕರು "ಹೌದು, ಸಮಸ್ಯೆ ಇದೆ.  ಹಿಂದೂ ಕುಟುಂಬಕ್ಕೆ ಮಾತ್ರ ಮನೆ ಬಾಡಿಗೆಗೆ ಕೊಡುತ್ತೇವೆ" ಎಂದು ಹೇಳಿದ್ದಾರೆ.

    ಮುಸ್ಲಿಂ ಆಗಿದ್ದಕ್ಕೆ ಬಾಡಿಗೆ ಮನೆ ಸಿಕ್ಕಿಲ್ಲ
    ಈ ವಾಟ್ಸ್​ಆ್ಯಪ್ ಚಾಟ್​ನ ಸ್ಕ್ರೀನ್​ಶಾಟ್​ಗಳನ್ನು ಹೈಫಾ ಟ್ವೀಟ್ ಮಾಡಿ "ನಾನು ಮುಸ್ಲಿಂ ಎಂಬ ಕಾರಣಕ್ಕೆ ಮನೆ ಬಾಡಿಗೆಗೆ ಸಿಕ್ಕಿಲ್ಲ" ಎಂದು ಅಳಲು ತೋಡಿಕೊಂಡಿದ್ದಾರೆ. 

    ಈ ಕಾರಣಕ್ಕೆಲ್ಲ ಬಾಡಿಗೆ ಮನೆ ಸಿಗಲ್ಲ; ಹರಿದುಬಂತು ಪ್ರತಿಕ್ರಿಯೆ
    ನವೀನ್ ಎಂಬ ಬಳಕೆದಾರರು ಈ ಘಟನೆಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ.  ನಮ್ಮ ಆಧುನಿಕ ಮೆಟ್ರೋ ನಗರಗಳಲ್ಲಿ  ನಾನ್​ವೆಜ್ ಸೇವಿಸುವ ಅನೇಕ ಹಿಂದೂಗಳಿಗೆ ಬಾಡಿಗೆ ಮನೆ ಸಿಗುವುದಿಲ್ಲ. ಬ್ಯಾಚುಲರ್ ಪುರುಷರಿಗೆ ಮನೆ ಸಿಗುವುದಿಲ್ಲ ಏಕೆಂದರೆ ಅವರು ಕುಡಿಯುತ್ತಾರೆ ಮತ್ತು ಧೂಮಪಾನ ಮಾಡುತ್ತಾರೆ ಎಬುದು ಬಾಡಿಗೆ ಮನೆ ಮಾಲೀಕರ ಆರೋಪ. ಜೊತೆಗೆ ಒಂಟಿ ಮಹಿಳೆಯರಿಗೂ ಬಾಡಿಗೆಗೆ ಮನೆ ಸಿಗುವುದಿಲ್ಲ. ಒಂಟಿ ಮಹಿಳೆಯರಿಗೆ ಬಾಡಿಗೆ ಮನೆ ಕೊಡುವುದರಿಂದ ತೊಂದರೆಯೇ ಹೆಚ್ಚು ಎಂಬುದು ಮನೆ ಮಾಲೀಕರ ಅಭಿಪ್ರಾಯ. ಇನ್ನು ಪೊಲೀಸರು, ವಕೀಲರು ಮತ್ತು ಪತ್ರಕರ್ತರಿಗೂ ಮನೆ ಬಾಡಿಗೆಗೆ ನೀಡಲು ಮಾಲೀಕರು ಹಿಂದೇಟು ಹಾಕುತ್ತಾರೆ. ಇವರೆಲ್ಲ ಕಾನೂನು ಬಗ್ಗೆ ಹೆಚ್ಚು ಮಾತನಾಡುತ್ತಾರೆ ಎಂಬ ಕಾರಣಕ್ಕೆ ಮನೆ ಸಿಗುವುದಿಲ್ಲ ಎಂದು ನವೀನ್ ಬರೆದುಕೊಂಡಿದ್ದಾರೆ.



    ಇದನ್ನೂ ಓದಿ: Bengaluru News: ಬೆಂಗಳೂರಿನ ಪ್ರಮುಖ ರಸ್ತೆ 1 ತಿಂಗಳು ಬಂದ್; ಬದಲಿ ಮಾರ್ಗ ಇಲ್ಲಿದೆ

    ನಯವಾಗಿಯೂ ಹೇಳಬಹುದಲ್ಲ? ಪ್ರಶ್ನಿಸಿದ ನೆಟ್ಟಿಗರು
    ಇನ್ನೋರ್ವ ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಸಹ ಇದೇ ರೀತಿಯ ಅಭಿಪ್ರಾಯ ಹಂಚಿಕೊಂಡಿದ್ದಾರೆ. "ಇದು ದೊಡ್ಡ ವಿಷಯವಲ್ಲ, ನಾನು ಮುಸ್ಲಿಂ ಧರ್ಮಕ್ಕೆ ಸೇರಿದ ವ್ಯಕ್ತಿಯಾದ ಕಾರಣ ಬಾಡಿಗೆಗೆ ಮನೆ ಪಡೆಯಲು ಸಾಧ್ಯವಾಗಲಿಲ್ಲ. ಅಲ್ಲದೆ, ಅಂತಹ ಸಮಸ್ಯೆಗಳನ್ನು ಹೊಂದಿರದ ಜನರಿದ್ದಾರೆ. ಇನ್ನು ಕೆಲವರು ನನಗೆ ನಾನ್ ವೆಜ್  ಸೇವಿಸುವವರು  ಬೇಡ, ಬೇಜಾರು ಮಾಡಿಕೊಳ್ಳಬೇಡಿ ಎಂದು ನಯವಾಗಿ ಹೇಳಿದ್ದರು  ಎಂದು ಅವರು ತಿಳಿಸಿದ್ದಾರೆ.

    ಇದನ್ನೂ ಓದಿ: DigiYatra: ಬೆಂಗಳೂರು ಜನರಿಗೆ ಖುಷಿಸುದ್ದಿ! ವಿಮಾನ ಪ್ರಯಾಣ ಇನ್ನಷ್ಟು ಸುಲಭ, ಸಲೀಸು!

    ಇದು ಅವರ ಮನೆ. ಅಲ್ಲಿ ವಾಸಿಸುವವರು ಹೇಗಿರಬೆಕು? ಯಾವ ನಿಯಮ ಅನುಸರಿಸಬೇಕು ಎಂಬುದನ್ನು ಮನೆ ಮಾಲೀಕರು ನಿರ್ಧರಿಸುತ್ತಾರೆ. ಬಾಡಿಗೆ ಮನೆ ಓನರ್ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ ಎಂದು ಸಹ ಹಲವು ಪ್ರತಿಕ್ರಿಯೆ ನೀಡಿದ್ದಾರೆ.
    Published by:guruganesh bhat
    First published: