Accident: ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಭೀಕರ ಅಪಘಾತ, ಮಹಿಳೆ ಮೇಲೆ ಹರಿದ KSRTC
ಬೆಂಗಳೂರಿನಲ್ಲಿ (Bangaluru) ಭೀಕರ ರಸ್ತೆ ಅಪಘಾತ (Accident) ಸಂಭವಿಸಿದ್ದು, KSRTC ಬಸ್ ಒಂದು ಮಹಿಳೆ ಹರಿದಿದೆ. ನಗರದ ಪ್ಯಾಲೆಸ್ ರಸ್ತೆಯಲ್ಲಿ (Palace Road) ಈ ಭೀಕರ ಅಪಘಾತ ಸಂಭವಿಸಿದೆ.
ಬೆಂಗಳೂರು (ಏ.18): ಬೆಂಗಳೂರಿನಲ್ಲಿ (Bangaluru) ಭೀಕರ ರಸ್ತೆ ಅಪಘಾತ (Accident) ಸಂಭವಿಸಿದ್ದು, KSRTC ಬಸ್ ಒಂದು ಮಹಿಳೆ ಹರಿದಿದೆ. ನಗರದ ಪ್ಯಾಲೆಸ್ ರಸ್ತೆಯಲ್ಲಿ (Palace Road) ಈ ಭೀಕರ ಅಪಘಾತ ಸಂಭವಿಸಿದ್ದು, 50 ವರ್ಷದ ಲಕ್ಷ್ಮಿದೇವಿ ಎಂಬ ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು, ಲಕ್ಷ್ಮಿದೇವಿ ಸಹೋದರನ ಜೊತೆ ಆಸ್ಪತ್ರೆಗೆಂದು ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಹಿಂಬದಿಯಿಂದ ಬಂದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀರ್ವತೆಗೆ ಬಸ್ ಮಹಿಳೆಯ ತಲೆಯ ಮೇಲೆ ಹರಿದಿದೆ. ಈ ಅಪಘಾತವು ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಸದ್ಯ ಸದಾಶಿವನಗರ ಪೊಲೀಸರ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಭೀಕರ ಅಪಘಾತಕ್ಕೆ ಮಹಿಳೆ ಸಾವು:
ಇನ್ನು, ಪುಟ್ಟಪರ್ತಿಯಿಂದ ಬೆಂಗಳೂರಿನತ್ತ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ ದ್ವಿಚಕ್ರ ವಾಹನದ ಮೇಲೆ ಹರಿದಿದೆ. ಈ ವೇಳೆ ಬಸ್ ಚಕ್ರದ ಅಡಿಯಲ್ಲಿ ಮಹಿಳೆ ಲಕ್ಷ್ಮೀದೇವಿ ಸಿಲುಕಿ ಸಾವನ್ನಪ್ಪಿದ್ದಾರೆ. ಈ ಅಪಘಾತಕ್ಕೆ ಕೆಎಸ್ಆರ್ಟಿಸಿ ಬಸ್ ಚಾಲಕನ ನಿರ್ಲಕ್ಷ್ಯವೇ ಕಾರಣ ಎನ್ನಲಾಗುತ್ತಿದ್ದು, ಸದ್ಯ ಸ್ಥಳಕ್ಕೆ ಸದಾಶಿವನಗರ ಪೊಲೀಸರು ಆಗಮಿಸಿದ್ದಾರೆ. ಜೊತೆಗೆ ಹೆಚ್ಚಿನ ತಪಾಸಣೆ ನಡೆಸುತ್ತಿದ್ದಾರೆ. ಚಿಂತಾಮಣಿ ನಿವಾಸಿಯಾದ ಮೃತ ಲಕ್ಷ್ಮೀ ದೇವಿ ಇಂದು ಆರೋಗ್ಯ ತಪಾಸಣೆಗೆಂದು ಬೆಂಗಳೂರಿಗೆ ಆಗಮಿಸಿದ್ದರು.
ಇಲ್ಲಿನ ಕೋಡಿಹಳ್ಳಿಯಲ್ಲಿ ವಾಸಿಸುತ್ತಿದ್ದ ಸಹೋದರ ರಘುನಾಥ್ ಮನೆಯಿಂದ ಮಲ್ಲಿಗೆ ಆಸ್ಪತ್ರೆಗೆ ತೆರಳುತ್ತಿದ್ದಾಗ ಹಿಂಬಂದಿಯಿಂದ ಬಂದ ಕೆಎಸ್ಆರ್ಟಿಸಿ ಬಸ್ ಇವರ ಮೇಲೆ ಹರಿದಿದೆ. ಇದರ ಪರಿಣಾಮ ಕೆಳಗೆ ಬಿದ್ದ ಲಕ್ಷ್ಮೀದೇವಿ ಅವರ ತಲೆ ಮೇಲೆಯೇ ಬಸ್ ಹರಿದಿದ್ದು, ಮಹಿಳೆ ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಅಲ್ಲದೇ ಅಪಘಾತದದ ರಭಸಕ್ಕೆ ಮಹಿಳೆಯ ಕುತ್ತಿಗೆಯ ಭಾಗವು ದೇಹದಿಂದ ಬೇರೆಯಾಗಿರುವುದಾಗಿ ತಿಳಿದುಬಂದಿದೆ.
ಕಲಬುರ್ಗಿಯ ಹುಮನಾಬಾದ್ ರಿಂಗ್ ರಸ್ತೆಯ ಹೊರವಲಯದಲ್ಲಿ ಖಾಸಗಿ ಬಸ್ ಹಾಗೂ ಸಿಮೆಂಟ್ ಟ್ಯಾಂಕರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಈ ಅಪಘಾತದಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂಬುದು ತಿಳಿದುಬಂದಿದೆ. ಅಲ್ಲದೇ ಹಲವರು ಅಪಘಾತದಲ್ಲಿ ಗಾಯಗೊಂಡಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಹುಮನಾಬಾದ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉತ್ತರ ಪ್ರದೇಶದ ಅಮೇಥಿಯಲ್ಲಿ ತಡರಾತ್ರಿ ಟ್ರಕ್ ಮತ್ತು ಬೊಲೆರೊ ನಡುವೆ ಭೀಕರ ಅಪಘಾತ ಸಂಭವಿಸಿದೆ. ಇದರಲ್ಲಿ 6 ಮಂದಿ ಮತಪಟ್ಟಿದ್ದು, 4 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂಇದೆ. ಗೌರಿಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುಗಂಜ್ ಪ್ರದೇಶದಲ್ಲಿ ಈ ದುರ್ಘಟನೆ ನಡೆದಿದ್ದು, ಗೌರಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ರಾಯ್ ಬರೇಲಿಯ ನಾಸಿರಾಬಾದ್ನಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿ ಬೊಲೆರೋ ವಾಹನದಲ್ಲಿ ಹಿಂದಿರುಗುವ ವೇಳೆ ಈ ದುರ್ಘಟನೆ ನಡೆದಿದೆ. ಅಲ್ಲದೇ ಅಪಘಾತದ ತೀರ್ವತೆಗೆ ಸ್ಥಳದಲ್ಲಿಯೇ ಬೊಲೆರೋ ಸ್ಪೋಟಗೊಂಡಿದ್ದು, ಸ್ಥಳದಲ್ಲಿಯೇ 6 ಜನ ಸಾವನ್ನಪ್ಪಿದ್ದಾರೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ