Nitrogen Dioxide in Bangalore| ಬೆಂಗಳೂರಿನಲ್ಲಿ ಶೇ.90ರಷ್ಟು ಹೆಚ್ಚಳವಾಯ್ತು ನೈಟ್ರೋಜನ್ ಡೈ ಆಕ್ಸೈಡ್ ..!

ನೈಟ್ರೋಜನ್ ಡೈಆಕ್ಸೈಡ್ ಅಪಾಯಕಾರಿ ವಾಯು ಮಾಲಿನ್ಯಕಾರಕವಾಗಿದ್ದು, ಇದು ಮೋಟಾರು ವಾಹನಗಳು, ವಿದ್ಯುತ್ ಉತ್ಪಾದನೆ ಮತ್ತು ಕೈಗಾರಿಕಾ ಪ್ರಕ್ರಿಯೆಗಳಲ್ಲಿರುವಂ ತಹ ಇಂಧನ ಬರ್ನ್ ಮಾಡಿದಾಗ ಬಿಡುಗಡೆಯಾಗುತ್ತದೆ.

ಬೆಂಗಳೂರಿನ ಟ್ರಾಫಿಕ್.

ಬೆಂಗಳೂರಿನ ಟ್ರಾಫಿಕ್.

  • Share this:
ಬೆಂಗಳೂರು: ಕೋವಿಡ್-19 ಹಾವಳಿಯಿಂದ ಅನೇಕ ಬಾರಿ ನಗರವನ್ನು ಲಾಕ್‌ಡೌನ್‌ ಮಾಡಿ ಎಲ್ಲಾ ಖಾಸಗಿ ಕಂಪೆನಿಗಳು ಬೀಗ ಹಾಕಿದ್ದರೂ, ಜನರು ಯಾರು ಹೆಚ್ಚಾಗಿ ರಸ್ತೆಯ ಮೇಲೆ ಕಾಣಸಿಗದಿದ್ದರೂ, ತಮ್ಮ ವಾಹನಗಳನ್ನ ಹೊರಗಡೆ ತೆಗೆಯದಿದ್ದರೂ ಸಹ ಬೆಂಗಳೂರಿನ ವಾತಾವರಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಕಳೆದ ಒಂದು ವರ್ಷದಲ್ಲಿ 90 ಪ್ರತಿಶತ ಹೆಚ್ಚಳವಾಗಿರುವ ಸಂಗತಿ ನಿಜಕ್ಕೂ ಎಂತವರಲ್ಲೂ ಭಯವನ್ನು ಮೂಡಿಸುತ್ತದೆ. ಗ್ರೀನ್ ಪೀಸ್ ಇಂಡಿಯಾ ಎಂಬ ಸಂಸ್ಥೆಯು ತಾನು ಅಧ್ಯಯನ ಮಾಡಿ ವರದಿಯೊಂದನ್ನು ಬಿಡುಗಡೆ ಮಾಡಿದ್ದು, ದೇಶದ ಹೆಚ್ಚು ಜನಸಂದಣಿ ಇರುವಂತಹ ಎಂಟು ಮಹಾ ನಗರಗಳಾದಂತಹ ಮುಂಬೈ, ದೆಹಲಿ, ಬೆಂಗಳೂರು, ಹೈದರಾಬಾದ್, ಚೆನ್ನೈ ಕೋಲ್ಕತ್ತಾ, ಜೈಪುರ ಮತ್ತು ಲಕ್ನೋಗಳಲ್ಲಿ ಕಳೆದ ವರ್ಷದ ಏಪ್ರಿಲ್ನಿಂದ ಈ ವರ್ಷದ ಏಪ್ರಿಲ್ ವರೆಗೆ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯದ ಪ್ರಮಾಣವು ಹೆಚ್ಚಾಗಿರುವುದು ನಿಜಕ್ಕೂ ಆಲೋಚನೆ ಮಾಡುವಂತಹ ಸಂಗತಿಯಾಗಿದೆ.  

ನೈಟ್ರೋಜನ್ ಡೈಆಕ್ಸೈಡ್ ಅಪಾಯಕಾರಿ ವಾಯು ಮಾಲಿನ್ಯಕಾರಕವಾಗಿದ್ದು, ಇದು ಮೋಟಾರು ವಾಹನಗಳು, ವಿದ್ಯುತ್ ಉತ್ಪಾದನೆ ಮತ್ತು ಕೈಗಾರಿಕಾ ಪ್ರಕ್ರಿಯೆಗಳಲ್ಲಿರುವಂ ತಹ ಇಂಧನ ಬರ್ನ್ ಮಾಡಿದಾಗ ಬಿಡುಗಡೆಯಾಗುತ್ತದೆ. ಇದು ಎಲ್ಲಾ ವಯಸ್ಸಿನ ಜನರ ಆರೋಗ್ಯದ ಮೇಲೆ ಗಂಭೀರವಾದಂತಹ ಪರಿಣಾಮವನ್ನು ಬೀರಬಹುದಾಗಿದೆ. ಇದರ ಮಾಲಿನ್ಯದ ಪ್ರಮಾಣ ಹೆಚ್ಚಾಗುವುದರಿಂದ ಶ್ವಾಸಕೋಶಗಳ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೇಲೆ ಜೊತೆಗೆ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ.

ಗ್ರೀನ್ ಪೀಸ್ ಇಂಡಿಯಾ ವರದಿಯು ಸ್ಯಾಟಲೈಟ್‌ನಿಂದ ನೈಟ್ರೋಜನ್‌ ಡೈ ಆಕ್ಸೈಡ್ ಅನ್ನು ಅಧ್ಯಯನ ಮಾಡಿ ನಂತರ ವರದಿಯನ್ನು ಬಿಡುಗಡೆ ಮಾಡಿದ್ದು, ಏಪ್ರಿಲ್ 2020 ರಿಂದ ಏಪ್ರಿಲ್ 2021 ರವರೆಗೆ ಬೆಂಗಳೂರಿನ ವಾತಾವರಣದಲ್ಲಿ 90 ಪ್ರತಿಶತ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣವು ಕಳೆದ ವರ್ಷಕ್ಕಿಂತಲೂ ಹೆಚ್ಚಳ ಆಗಿರುವುದರ ಬಗ್ಗೆ ತಿಳಿಸಿದೆ. ಈ ನೈಟ್ರೋಜನ್ ಡೈ ಆಕ್ಸೈಡ್ ಪ್ರಮಾಣವು ಹೆಚ್ಚಳವಾಗಲು ಹವಾಮಾನದ ಕೊಡುಗೆ ತುಂಬಾ ಕಡಿಮೆ ಇರುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದನ್ನೂ ಓದಿ: Sumalatha Ambrish| ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತನ್ನಿ; ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸವಾಲು!

ದೇಶದ ಎಂಟು ಮಹಾ ನಗರಗಳಲ್ಲಿಯೂ ಸಹ ನೈಟ್ರೋಜನ್ ಡೈಆಕ್ಸೈಡ್ ಮಾಲಿನ್ಯದ ಪ್ರಮಾಣ ಕಳೆದ ಹಲವು ವರ್ಷಗಳಿಗೆ ಹೋಲಿಸಿ ನೋಡಿದರೆ  ಗಣನೀಯವಾಗಿ ಏರಿಕೆಯಾಗಿರುವುದನ್ನು ಗಮನಿಸಬಹುದಾಗಿದೆ. ಚೆನ್ನೈ ನಗರದಲ್ಲಿ 94 ಪ್ರತಿಶತ, ದೆಹಲಿಯಲ್ಲಿ 125 ಪ್ರತಿಶತ, ಮುಂಬೈಯಲ್ಲಿ 52 ಪ್ರತಿಶತ, ಜೈಪುರದಲ್ಲಿ 47 ಪ್ರತಿಶತ, ಲಕ್ನೋದಲ್ಲಿ 32 ಪ್ರತಿಶತ ಮತ್ತು 11 ಪ್ರತಿಶತ ಕೋಲ್ಕತ್ತಾದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ವರದಿಯಿಂದ ನಾವು ತಿಳಿಯಬಹುದಾಗಿದೆ.

ಈ ವಾಯು ಮಾಲಿನ್ಯವು ಈ ನಗರಗಳಲ್ಲಿ ಎಚ್ಚರಿಕೆಯ ಗಂಟೆಯನ್ನಾಗಿ ಪರಿಗಣಿಸಿ ಸರ್ಕಾರವು ಮತ್ತು ಅನೇಕ ಪರಿಸರ ಪರ ಸಂಘ ಸಂಸ್ಥೆಗಳು ವಾಯುಮಾಲಿನ್ಯವನ್ನು ತಡೆಗಟ್ಟುವಲ್ಲಿ ಕೆಲಸ ಮಾಡಬೇಕಿದೆ ಎಂದು ಗ್ರೀನ್ ಪೀಸ್ ಇಂಡಿಯಾದವರು ಹೇಳಿದ್ದಾರೆ.

ಇದನ್ನೂ ಓದಿ: ಅಂಬರೀಶ್ ವಿರುದ್ಧ ಶಾಸಕ ಶ್ರೀಕಂಠಯ್ಯ ಅಕ್ರಮ ಗಣಿಗಾರಿಕೆ ಆರೋಪ; ಅಭಿಮಾನಿಗಳಿಂದ ಇಂದು ಮಂಡ್ಯದಲ್ಲಿ ಸಭೆ

ಏರ್ ಕ್ವಾಲಿಟಿ ಸೂಚ್ಯಂಕವು ಈ ಲಾಕ್‌ಡೌನ್‌ ಅವಧಿಯಲ್ಲಿ ಸುಧಾರಣೆ ಕಂಡಿದ್ದು, ನಮಗೆ ಯಾವುದೇ ರೀತಿಯ  ನೈಟ್ರೋಜನ್ ಡೈ ಆಕ್ಸೈಡ್ ಪ್ರಮಾಣದಲ್ಲಿ ಹೆಚ್ಚಳವಾಗಿರುವುದರ ಬಗ್ಗೆ ಅಧ್ಯಯನಗಳು, ವರದಿಗಳು ಯಾರಿಂದಲೂ ಬಂದಿಲ್ಲ ಹಾಗು ಎಲ್ಲಾ ಕೈಗಾರಿಕೋದ್ಯಮಗಳು ತಮ್ಮ ಕೆಲಸಗಳನ್ನು ನಿಲ್ಲಿಸಿದ್ದವು ಹಾಗು ವಾಹನಗಳು ಸಹ ರಸ್ತೆಗಿಳಿಯದೆ ಮನೆಯಲ್ಲಿಯೇ ಇದ್ದವು. ನನಗೆ ಈ ಲಾಕ್‌ಡೌನ್‌ನಲ್ಲಿ ಯಾವುದೇ ರೀತಿಯ ನೈಟ್ರೋಜನ್ ಡೈ ಆಕ್ಸೈಡ್ ವಾತಾವರಣದಲ್ಲಿ ಹೆಚ್ಚಾಗಿರುವ ಸಂಭವ ಕಾಣಿಸುತ್ತಿಲ್ಲ ಎಂದು ಕರ್ನಾಟಕ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಗಳು ಹೇಳಿದ್ದಾರೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published: