• Home
 • »
 • News
 • »
 • state
 • »
 • Heart Shaped Traffic Lights: ಟ್ರಾಫಿಕ್ ಸಿಗ್ನಲ್ ಲೈಟ್‍ಗಳಲ್ಲಿ ಹಾರ್ಟ್ ಶೇಪ್, ಇದರ ಉದ್ದೇಶ ಗೊತ್ತಾದ್ರೆ ಸೂಪರ್ ಅಂತೀರಿ

Heart Shaped Traffic Lights: ಟ್ರಾಫಿಕ್ ಸಿಗ್ನಲ್ ಲೈಟ್‍ಗಳಲ್ಲಿ ಹಾರ್ಟ್ ಶೇಪ್, ಇದರ ಉದ್ದೇಶ ಗೊತ್ತಾದ್ರೆ ಸೂಪರ್ ಅಂತೀರಿ

ಟ್ರಾಫಿಕ್ ಸಿಗ್ನಲ್ ಲೈಟ್‍ಗಳಲ್ಲಿ ಹಾರ್ಟ್ ಶೇಪ್

ಟ್ರಾಫಿಕ್ ಸಿಗ್ನಲ್ ಲೈಟ್‍ಗಳಲ್ಲಿ ಹಾರ್ಟ್ ಶೇಪ್

ಬೆಂಗಳೂರು ಹಾರ್ಟ್ ಸ್ಮಾರ್ಟ್ ಸಿಟಿ ಆಗಲು ಪ್ರೋತ್ಸಾಹಿಸಲು ವಿಶ್ವ ಹೃದಯ ದಿನದಂದು ಹೃದಯಾಕಾರದ ಟ್ರಾಫಿಕ್ ದೀಪಗಳನ್ನು ಅಳವಡಿಸಲಾಗಿದೆ. ಪ್ರತಿಯೊಂದು ಜೀವವೂ ಮುಖ್ಯ ಎಂಬುದನ್ನು ಸೂಚಿಸಲು ಹೃದಯ ಆಕಾರದ ಟ್ರಾಫಿಕ್​ ಸಿಗ್ನಲ್​ ಅನ್ನು ಸೂಚಿಸಲಾಗುತ್ತಿದೆ.

 • News18 Kannada
 • Last Updated :
 • Karnataka, India
 • Share this:

  ಬೆಂಗಳೂರಿನ (Bengaluru) ಪ್ರಯಾಣಿಕರು ಇತ್ತೀಚೆಗೆ ನಗರದಾದ್ಯಂತ ಅನೇಕ ಟ್ರಾಫಿಕ್ (Traffic) ಲೈಟ್‍ಗಳಲ್ಲಿ ಹೃದಯದ ಸಿಂಬಲ್ (Heart Shape) ನೋಡಿ ಆಶ್ಚರ್ಯಗೊಂಡಿದ್ದಾರೆ. ವಾವ್ ಸೂಪರ್ ಎಂದಿದ್ದಾರೆ. ಅಲ್ಲದೇ ಇದ್ದಕ್ಕಿದ್ದ ಹಾಗೇ ಯಾಕೆ ಹಾರ್ಟ್ ಶೇಪ್ ಬಂದಿದೆ ಎಂದು ಚಿಂತೆ ಮಾಡಿದ್ದಾರೆ. ಇನ್ನೂ ಕೆಲವರು ಅದರ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಕರ್ನಾಟಕದ (Karnataka) ರಾಜಧಾನಿಯಲ್ಲಿ ಕೆಂಪು ಟ್ರಾಫಿಕ್ ದೀಪಗಳಲ್ಲಿ ಇದ್ದಕ್ಕಿದ್ದಂತೆ ಹೃದಯ ಮಿನುಗುತ್ತಿದೆ ಎಂದು ಬರೆದುಕೊಂಡಿದ್ದಾರೆ. ಈ ಹೃದಯಾಕಾರದ ಟ್ರಾಫಿಕ್ ಲೈಟ್‍ಗಳನ್ನು, ಮಣಿಪಾಲ್ ಆಸ್ಪತ್ರೆ, ಬೆಂಗಳೂರು ಟ್ರಾಫಿಕ್ ಪೊಲೀಸ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಜಂಟಿ ಉಪಕ್ರಮದ ಸೇರಿ ನಿರ್ಧರಿಸಿದ್ದರ ಫಲಿತಾಂಶ ಇದು. ಇದರಿಂದ ಹೃದಯದ ತುರ್ತು (Emergencies) ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆಗೆ ತ್ವರಿತ ಪ್ರವೇಶವನ್ನು ಒದಗಿಸುತ್ತವೆ.


  ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ್ರೆ ತುರ್ತು ಸೇವೆ
  ಮಣಿಪಾಲ್ ಆಸ್ಪತ್ರೆಗಳ ಪ್ರಕಾರ, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಬಳಸಲು ನಗರದ ಎಲ್ಲಾ ಟ್ರಾಫಿಕ್ ಸಿಗ್ನಲ್ ಜಂಕ್ಷನ್‍ಗಳಲ್ಲಿ ಕ್ಯೂಆರ್ ಕೋಡ್‍ಗಳನ್ನು ಪೋಸ್ಟ್ ಮಾಡಲಾಗಿದೆ. ಆದ್ದರಿಂದ ಬೆಂಗಳೂರಿನ ನಿವಾಸಿಗಳು ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ಕಿಖ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ತುರ್ತು ಸೇವೆಗಳನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.


  ಬೆಂಗಳೂರು ಹಾರ್ಟ್ ಸ್ಮಾರ್ಟ್ ಸಿಟಿ
  ಬೆಂಗಳೂರು ಹಾರ್ಟ್ ಸ್ಮಾರ್ಟ್ ಸಿಟಿ ಆಗಲು ಪ್ರೋತ್ಸಾಹಿಸಲು ವಿಶ್ವ ಹೃದಯ ದಿನದಂದು ಹೃದಯಾಕಾರದ ಟ್ರಾಫಿಕ್ ದೀಪಗಳನ್ನು ಅಳವಡಿಸಲಾಗಿದೆ. ನಗರದ 20 ಕ್ಕೂ ಹೆಚ್ಚು ಸ್ಥಳಗಳು ಸಂಚಾರ ದೀಪಗಳನ್ನು ಪಡೆದಿವೆ ಎಂದು ಮಣಿಪಾಲ್ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.


  ಇದನ್ನೂ ಓದಿ: Ola-Uber Auto: ಓಲಾ, ಉಬರ್‌ಗಳಿಗೆ ಸರ್ಕಾರದ ಮೂಗುದಾರ! ಜಿಎಸ್‌ಟಿ ಜೊತೆಗೆ ಫಿಕ್ಸ್ ಆಯ್ತು 30 ರೂಪಾಯಿ ಆಟೋ ದರ!


  ಜಾಗೃತಿ ಮೂಡಿಸುವ ಆಡಿಯೋ ಸಂದೇಶ
  ಹೃದಯದ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಆಡಿಯೋ ಸಂದೇಶಗಳನ್ನು ಸಹ ನಗರದಲ್ಲಿ ಪ್ಲೇ ಮಾಡಲಾಯಿತು. ಕ್ಯೂಆರ್ ಕೋಡ್‍ಗಳು ಬಳಕೆದಾರರಿಗೆ ತುರ್ತು ಸೇವೆಗಳನ್ನು ಡಯಲ್ ಮಾಡುವ ಬದಲು ಸುಲಭವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ ಎಂದು ಮಣಿಪಾಲ್ ಹಾಸ್ಪಿಟಲ್ಸ್ ಹೇಳಿದೆ. ಒಂದೇ ಕ್ಲಿಕ್‍ನಲ್ಲಿ ಬಳಕೆದಾರರನ್ನು ಆಂಬ್ಯುಲೆನ್ಸ್ ಸೇವೆಗೆ ನಿರ್ದೇಶಿಸಲಾಗುತ್ತದೆ.


  ಪ್ರತಿಯೊಂದು ಜೀವವೂ ಮುಖ್ಯ
  ಪ್ರತಿಯೊಂದು ಜೀವವೂ ಮುಖ್ಯ ಎಂಬುದನ್ನು ಸೂಚಿಸಲು ಹೃದಯ ಆಕಾರದ ಟ್ರಾಫಿಕ್ ಸಿಗ್ನಲ್ ಅನ್ನು ಹಾಕಲಾಗಿದೆ ಎಂದು ಕಬ್ಬನ್ ಪಾರ್ಕ್ ಟ್ರಾಫಿಕ್ ಪೊಲೀಸ್‍ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವೇಗವಾಗಿ ಗಾಡಿ ಓಡಿಸಬಾರದು ಮತ್ತು ಸಿಗ್ನಲ್‍ಗಳನ್ನು ಜಂಪ್ ಮಾಡಬಾರದು. ಜನರು ಜಾಗರೂಕರಾಗಿರಬೇಕು ಮತ್ತು ಸಂಚಾರ ನಿಯಮಗಳನ್ನು ಪಾಲಿಸಬೇಕು. ಇದರ ಹೊರತಾಗಿ, ಅವರ ಪ್ರೀತಿಪಾತ್ರರು ಮನೆಯಲ್ಲಿ ಕಾಯುತ್ತಾ ಇರುತ್ತಾರೆ. ಒಬ್ಬರು ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸೂಚಿಸುತ್ತದೆ ಎಂದು ಹೇಳಿದ್ದಾರೆ.


  Heart shaped traffic lights in Bengaluru, Manipal Hospitals, Bengaluru Traffic Police, BBMP, QR code in case of medical emergencies, ಬೆಂಗಳೂರು ಟ್ರಾಫಿಕ್ ಸಿಗ್ನಲ್ ಲೈಟ್‍ಗಳಲ್ಲಿ ಹಾರ್ಟ್ ಶೇಪ್, ಬೆಂಗಳೂರು ಹಾರ್ಟ್ ಸ್ಮಾರ್ಟ್ ಸಿಟಿ, Kannada news, Karnataka news,
  ಟ್ರಾಫಿಕ್ ಸಿಗ್ನಲ್ ಲೈಟ್‍ಗಳಲ್ಲಿ ಹಾರ್ಟ್ ಶೇಪ್


  ಬೆಂಗಳೂರಲ್ಲಿ ಚಾಪರ್ ಸೇವೆ
  ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಅನುಭವಿಸಿದವರಿಗೇ ಗೊತ್ತು. ಅದರಲ್ಲೂ ದಿನವೂ ಆಫೀಸ್ ಮನೆ ಅಂತ ಓಡಾಡೋರ ಪಾಡಂತೂ ಹೇಳತೀರದು. ಇನ್ನು ಏರ್ ಪೆÇೀರ್ಟ್ ಹೋಗೋರು ಕೂಡ ಟ್ರಾಫಿಕ್ ನಿಂದಾಗಿ ಫ್ಲೈಟ್ ಮಿಸ್ ಮಾಡಿಕೊಂಡ ಅದೆಷ್ಟೋ ಉದಾಹರಣೆಗಳಿವೆ. ಆದರೆ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಇಂದ ತಪ್ಪಿಸಿಕೊಳ್ಳಲು ಇಲ್ಲಿನ ಜನರಿಗೆ ಹೊಸದೊಂದು ಮಾರ್ಗ ಸಿಕ್ಕಿದೆ. ಅದೇ ವಿಮಾನ ಪ್ರಯಾಣ.


  ಇದನ್ನೂ ಓದಿ: Kannada: ಕನ್ನಡದಲ್ಲಿ ಮಾತಾಡಿ ಪಾಸ್ ಆದ ರೈಲ್ವೆ ಸಚಿವರು; ಧಾರವಾಡ ಪೇಡೆ ಸಿಗುತ್ತೆ ಅಂತ ಅಶ್ವಿನಿ ವೈಷ್ಣವ್ ಖುಷಿ


  ಬ್ಲೇಡ್ ಇಂಡಿಯಾ ಕಂಪನಿ ಬೆಂಗಳೂರಿನ ಒಳಗೆ ಚಾಪರ್ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಸಿಟಿಯ ಒಳಗೆ ಪ್ರಯಾಣಿಸಲು ಅನುಕೂಲವಾಗುವಂತೆ ಚಾಪರ್ ಸೇವೆ ಒದಗಿಸಲಿದೆ. ಇದರಿಂದ ಏರ್ ಪೋರ್ಟ್ ಇಂದ ಸಿಟಿಗೆ ಹೋಗಲು ತಗಲುವ ಎರಡು ಗಂಟೆಗಳ ಬದಲಿಗೆ ನೀವು 15 ನಿಮಿಷಗಳಲ್ಲಿ ಸಿಟಿಗೆ ತಲುಪಬಹುದಾಗಿದೆ.

  Published by:Savitha Savitha
  First published: