Bengaluru Rain: ಬೆಂಗಳೂರಿನಲ್ಲಿ ಮುಂಜಾನೆಯೇ ಸೂರ್ಯನ ದರ್ಶನ; ಹೀಗಿರಲಿದೆ ಇಂದಿನ ಕರ್ನಾಟಕ ಹಾಗೂ ಉದ್ಯಾನ ನಗರಿ ಹವಾಮಾನ

12ಗಂಟೆವರೆಗೆ ಮಾತ್ರ ಸೂರ್ಯನ ದರ್ಶನ ಸಿಗಲಿದೆ. ನಂತರ ಮೋಡ ಕವಿಯಲಿದೆ. ಮಧ್ಯಾಹ್ನ ಮೂರು ಗಂಟೆಗೆ ವರುಣನ ಆರ್ಭಟ ಆರಂಭವಾಗಲಿದೆ.

Rajesh Duggumane | news18-kannada
Updated:October 23, 2019, 7:53 AM IST
Bengaluru Rain: ಬೆಂಗಳೂರಿನಲ್ಲಿ ಮುಂಜಾನೆಯೇ ಸೂರ್ಯನ ದರ್ಶನ; ಹೀಗಿರಲಿದೆ ಇಂದಿನ ಕರ್ನಾಟಕ ಹಾಗೂ ಉದ್ಯಾನ ನಗರಿ ಹವಾಮಾನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಅ.21): ಇಂದು ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಸೂರ್ಯನ ದರ್ಶನವಾಗಿದೆ. ಹಾಗಂದ ಮಾತ್ರಕ್ಕೆ ನೀವು ಸಂತಸ ಪಡುವಂತಿಲ್ಲ. ಕಾರಣ, ಸಂಜೆ ವೇಳೆಗೆ ಮಳೆ ಸುರಿಯಲಿದೆ. ರಾತ್ರಿಯೂ ವರುಣನ ಅಬ್ಬರ ಮುಂದುವರಿಯಲಿದೆ.

ಮಂಗಳವಾರ ನಗರಾದ್ಯಂತ ಗುಡುಗು ಮಿಂಚು ಸಹಿತ ಮಳೆ ಆಗಿತ್ತು. ರಾತ್ರಿ ಮಿತಿಮೀರಿ ಮಳೆ ಸುರಿದಿತ್ತು. ಚರಂಡಿಗಳು ತುಂಬಿ ಹರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತು ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ನಿಂತರೂ ಬೈಕ್​ ಸವಾರರು ಮನೆ ಸೇರಲು ಕಷ್ಟಪಡುತ್ತಿದ್ದರು. ಮಧ್ಯ ರಾತ್ರಿ ಕೂಡ ವರುಣನ ಅಬ್ಬರ ಜೋರಾಗಿತ್ತು. ಇದೇ ರೀತಿ ಇಂದು ಕೂಡ ಮಳೆ ಆಗಲಿದೆ.

12ಗಂಟೆವರೆಗೆ ಮಾತ್ರ ಸೂರ್ಯನ ದರ್ಶನ ಸಿಗಲಿದೆ. ನಂತರ ಮೋಡ ಕವಿಯಲಿದೆ. ಮಧ್ಯಾಹ್ನ ಮೂರು ಗಂಟೆಗೆ ವರುಣನ ಆರ್ಭಟ ಆರಂಭವಾಗಲಿದೆ. ಮಳೆಯ ಜೊತೆ ಗುಡುಗು-ಮಿಂಚು ಕೂಡ ಕಾಣಿಸಿಕೊಳ್ಳಲಿದೆ. ಸಂಜೆ 5 ಗಂಟೆ ಸುಮಾರಿಗೆ ಮಳೆ ಕೊಂಚ ವಿರಾಮ ನೀಡಲಿದ್ದು, ಮತ್ತೆ ರಾತ್ರಿ ಮಳೆ ಕಾಣಿಸಿಕೊಳ್ಳಲಿದೆ.

ನಗರದಲ್ಲಿ ಮಂಗಳವಾರ ಸಂಜೆ ಮಳೆ ಸುರಿದಿತ್ತು. 3 ಗಂಟೆಗೆ ಆರಂಭವಾದ ಮಳೆ ನಂತರ ದೊಡ್ಡ ಪ್ರಮಾಣದಲ್ಲಿ ಸುರಿದಿತ್ತು. ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿತ್ತು.

ಇದನ್ನೂ ಓದಿ: ಪ್ರವಾಹಕ್ಕೆ ಮೂರು ಬಲಿ; ದೇವದುರ್ಗದಲ್ಲಿ ಕೃಷ್ಣಾ ನದಿಗೆ ಕೊಚ್ಚಿ ಹೋದ ಯುವಕ, ಡೋಣಿ ನದಿಯಲ್ಲಿ ಸಿಲುಕಿದವರ ರಕ್ಷಣೆ

ಹೇಗಿರಲಿದೆ ಕರ್ನಾಟಕದ ಹವಾಮಾನ?

ಈಗಾಗಲೇ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಇಂದು ಕೂಡ ವರಣು ಅಬ್ಬರಿಸಲಿದ್ದಾನೆ. ಬಾಗಲಕೋಟೆ, ಹಾವೇರಿ, ಉತ್ತರ ಕನ್ನಡ, ಚಿತ್ರದುರ್ಗ, ಚಿಕ್ಕಮಗಳೂರು, ಮಂಗಳೂರು, ದೊಡ್ಡ ಬಳ್ಳಾಪುರ, ದಾವಣಗೆರೆ, ದಕ್ಷಿಣ ಕನ್ನಡ ಭಾಗಗಳಲ್ಲಿ ಮಳೆ ಸುರಿಯಲಿದೆ. ಮಂಗಳೂರು ಸೇರಿ ಕೆಲ ಪ್ರದೇಶಗಳಲ್ಲಿ ಮಾತ್ರ ಸೂರ್ಯನ ದರ್ಶನವಾಗಲಿದೆ.
First published:October 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading