HOME » NEWS » State » BENGALURU WEATHER BANGALORE RAIN WILL CONTINUE FOR NEXT TWO DAYS IN CITY RMD

Bengaluru Weather: ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆ; ಇಂದಿನ ವಾತಾವರಣ ಹೇಗಿರಲಿದೆ?

ಭಾರೀ ಮಳೆಯಿಂದಾಗಿ  ಹೊರಮಾವು ಹಾಗೂ ಸಾಯಿಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ.  ಹೊರಮಾವು ಕೆರೆ ಪಕ್ಕದಲ್ಲಿರುವ ವಿವಿಧ ಬಡಾವಣೆಯೊಳಗೆ ನೀರು ನುಗ್ಗಿದೆ. ಹೀಗಾಗಿ, ಇಲ್ಲಿನ ಜನ ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿತ್ತು.

news18-kannada
Updated:September 9, 2020, 7:58 AM IST
Bengaluru Weather: ಬೆಂಗಳೂರಿನಲ್ಲಿ ರಾತ್ರಿಯಿಡೀ ಸುರಿದ ಮಳೆ; ಇಂದಿನ ವಾತಾವರಣ ಹೇಗಿರಲಿದೆ?
ಮಳೆಗೆ ತತ್ತರಿಸಿದ ಬೆಂಗಳೂರು
  • Share this:
ಬೆಂಗಳೂರು (ಸೆಪ್ಟೆಂಬರ್​ 9): ಸೋಮವಾರ ರಾತ್ರಿ ವರುಣ ಆರ್ಭಟಿಸಿದ್ದಾನೆ.  ರಾತ್ರಿ ಆರಂಭವಾದ ಮಳೆ ಮುಂಜಾನೆವರೆಗೂ ಮುಂದುವರಿದೇ ಇತ್ತು.  ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಗಾಳಿ ಬೀಸಲು ಆರಂಭವಾಗಿತ್ತು.  ಏಕಾಏಕಿ ಕರಿಮೋಡಗಳೆಲ್ಲ ಮಳೆ ಆಗಿತ್ತು. ನಂತರ 11 ಗಂಟೆ ಸುಮಾರಿಗೆ ಮತ್ತೆ ಅಬ್ಬರದ ಮಳೆ ಸುರಿಯಲು ಆರಂಭವಾಗಿತ್ತು. ಮೆಜೆಸ್ಟಿಕ್, ನಾಗರಬಾವಿ ಶಾಂತಿನಗರ, ವಿಲ್ಸನ್ ಗಾರ್ಡನ್, ಲಕ್ಕಸಂದ್ರ, ಗಿರಿನಗರ, ನಾಗೇಂದ್ರ ಬ್ಲಾಕ್​, ಹೊಸಕೆರೆ ಹಳ್ಳಿ, ಇಂದಿರಾ ನಗರ, ಚಾಮರಾಜ ಪೇಟೆ, ಶ್ರೀರಾಂಪುರ, ರಾಜಾಜಿನಗರ, ಆರ್​ ಆರ್​ ನಗರ ಸೇರಿದಂತೆ ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಭಾರೀ ಮಳೆ ಆಗಿದೆ.

ಇನ್ನು, ಅಬ್ಬರದ ಮಳೆಗೆ ರಸ್ತೆಗಳೆಲ್ಲ ಬಹುತೇಕ ನದಿಗಳಂತಾಗಿದ್ದವು. ರಾತ್ರಿಯಾದ್ದರಿಂದ ಯಾರಿಗೂ ಅಷ್ಟೊಂದು ಸಮಸ್ಯೆ ಉಂಟಾಗಿಲ್ಲ. ಇನ್ನು, ಭಾರೀ ಮಳೆಯಿಂದಾಗಿ ನಗರದ ಬಹುತೇಕ ಕಡೆಗಳಲ್ಲಿ ವಿದ್ಯುತ್​ ವ್ಯತ್ಯಯ ಉಂಟಾಗಿತ್ತು. ಹೀಗಾಗಿ ಜನರು ಫ್ಯಾನ್​, ಎಸಿ ಇಲ್ಲದೆ ರಾತ್ರಿ ಕಳೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು.

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಭಾರೀ ಸೆಖೆ ಕಾಣಿಸಿಕೊಂಡಿತ್ತು. ಯಾಕಿಷ್ಟು ಸೆಖೆಯಪ್ಪ ಎಂದು ಜನರು ಹೇಳಿಕೊಳ್ಳುತ್ತಿದ್ದರು. ಆದರೆ, ಈಗ ರಾತ್ರಿಯಿಡೀ ಸುರಿದ ಮಳೆ ಬೆಂಗಳೂರನ್ನು ತಂಪಾಗಿಸಿದೆ.

ಜಾಗರಣೆ ಮಾಡಿದ ಸ್ಥಳೀಯರು:

ಭಾರೀ ಮಳೆಯಿಂದಾಗಿ  ಹೊರಮಾವು ಹಾಗೂ ಸಾಯಿಬಡಾವಣೆ ಸಂಪೂರ್ಣ ಜಲಾವೃತಗೊಂಡಿದೆ.  ಹೊರಮಾವು ಕೆರೆ ಪಕ್ಕದಲ್ಲಿರುವ ವಿವಿಧ ಬಡಾವಣೆಯೊಳಗೆ ನೀರು ನುಗ್ಗಿದೆ. ಹೀಗಾಗಿ, ನೀರು ಮನೆ ಸೇರಿದ್ದರಿಂದ ಇಲ್ಲಿನ ಜನ ರಾತ್ರಿಯೆಲ್ಲ ಜಾಗರಣೆ ಮಾಡುವಂತಾಗಿತ್ತು.

ಇನ್ನೂ ಎರಡು ದಿನ ಮಳೆ?:

ಬೆಂಗಳೂರಿನಲ್ಲಿ ಇನ್ನೂ ಎರಡು ದಿನ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ನಿತ್ಯ ಸಂಜೆ ಹಾಗೂ ರಾತ್ರಿ ವೇಳೆಗೆ ಮಳೆ ಆಗುವ ಸಾಧ್ಯತೆ ಇದೆ ಎಂಬುದು ಹವಾಮಾನ ಇಲಾಖೆಯ ಎಚ್ಚರಿಕೆ. ಹೀಗಾಗಿ ಕಚೇರಿಗೆ ಬೈಕ್​ನಲ್ಲಿ ತೆರಳುವವರು ಈ ಬಗ್ಗೆ ಕೊಂಚ ಗಮನಸವಹಿಸಬೇಕು.
Youtube Video

ಈ ಸಮಯದಲ್ಲಿ ಮಳೆಯಲ್ಲಿ ನೆನೆಯುವುದು ಅಷ್ಟು ಸೂಕ್ತವಲ್ಲ. ನಿಮಗೆ ಸಾಮಾನ್ಯ ಜ್ವರ ಕಾಣಿಸಿಕೊಂಡರೂ ಅದು ಕೊರೋನಾ ಇರಬಹುದೇ ಎನ್ನುವ ಆಲೋಚನೆ ಕಾಡುತ್ತದೆ. ಹೀಗಾಗಿ, ಆ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳಿತು.
Published by: Rajesh Duggumane
First published: September 9, 2020, 7:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories