• Home
  • »
  • News
  • »
  • state
  • »
  • Bengaluru: 19 ವರ್ಷದಿಂದ ನೀರಿನ ಬಿಲ್ ಕಟ್ಟದ UVCE ಹಾಸ್ಟೆಲ್​ಗೆ 9 ಕೋಟಿ ಪಾವತಿಸಲು ನೋಟಿಸ್!

Bengaluru: 19 ವರ್ಷದಿಂದ ನೀರಿನ ಬಿಲ್ ಕಟ್ಟದ UVCE ಹಾಸ್ಟೆಲ್​ಗೆ 9 ಕೋಟಿ ಪಾವತಿಸಲು ನೋಟಿಸ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

UVCEಯನ್ನುಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಿದೆ. ಆದರೀಗ ಇದರ ಹಾಸ್ಟೆಲ್ ಸುಮಾರು 20 ವರ್ಷಗಳಿಂದ 8.8 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿ ಇಟ್ಟುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಮೊತ್ತವನ್ನು ಪಾವತಿಸದ ಕಾರಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಾಸ್ಟೆಲ್‌ಗೆ ಆರು ತಿಂಗಳ ಹಿಂದೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ.

ಮುಂದೆ ಓದಿ ...
  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು(ಅ.28): ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನಿಯರಿಂಗ್‌ನ (University Visvesvaraya College of Engineering) ಪುರುಷರ ಹಾಸ್ಟೆಲ್ - ಇತ್ತೀಚೆಗಷ್ಟೇ ಸಂಯೋಜಿತವಲ್ಲದ ವಿಶ್ವವಿದ್ಯಾನಿಲಯವಾಗಿ (Non-Affiliating University) ಉನ್ನತೀಕರಿಸಲ್ಪಟ್ಟಿದೆ. ಹೀಗಿರುವಾಗ ರಾಜ್ಯವು ಇದನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಯೋಜಿಸಿದೆ. ಆದರೀಗ ಇದು ಸುಮಾರು 20 ವರ್ಷಗಳಿಂದ 8.8 ಕೋಟಿ ರೂಪಾಯಿ ನೀರಿನ ಬಿಲ್ ಬಾಕಿ ಇಟ್ಟುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ. ಮೊತ್ತವನ್ನು ಪಾವತಿಸದ ಕಾರಣ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಹಾಸ್ಟೆಲ್‌ಗೆ ಆರು ತಿಂಗಳ ಹಿಂದೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿದೆ. ನಗರದ ಹೃದಯ ಭಾಗದಲ್ಲಿರುವ ಕೆ.ಆರ್.ವೃತ್ತ ಹಾಗೂ ವಿಧಾನಸೌಧದಿಂದ 500 ಮೀಟರ್ ಅಂತರದಲ್ಲಿರುವ ಹಾಸ್ಟೆಲ್ ಸದ್ಯ ಬೋರ್‌ವೆಲ್ ನೀರನ್ನೇ ಬಳಸುತ್ತಿದೆ.


ಬಿಡಬ್ಲ್ಯುಎಸ್‌ಎಸ್‌ಬಿ ಅಧಿಕಾರಿಗಳ ಪ್ರಕಾರ, ಹಾಸ್ಟೆಲ್‌ 2003 ರಿಂದ ನೀರಿನ ಬಿಲ್ ಪಾವತಿಸಿಲ್ಲ. ದಂಡದ ಬಡ್ಡಿಯಾಗಿ ವಿಧಿಸಿದ 15 ಲಕ್ಷ ಸೇರಿದಂತೆ ವರ್ಷಗಳಲ್ಲಿ ಬಳಸಿದ ನೀರಿನ ಮೊತ್ತ 8.8 ಕೋಟಿ ರೂ. ವಿಧಿಸಲಾಗಿದೆ. UVCE ಅನ್ನು ನಿಯಂತ್ರಿಸುವ ಬೆಂಗಳೂರು ವಿಶ್ವವಿದ್ಯಾಲಯವು ಕನಿಷ್ಠ ಬಡ್ಡಿ ಮೊತ್ತವನ್ನು ಮನ್ನಾ ಮಾಡುವಂತೆ BWSSBಗೆ ಮನವಿ ಮಾಡಲು ನಿರ್ಧರಿಸಿದೆ.


ಇದನ್ನೂ ಓದಿ: Death from Rain: ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!


ಇತ್ತೀಚಿನ ಪರಿಶೀಲನಾ ಸಭೆಯಲ್ಲಿ, ವಿಶ್ವವಿದ್ಯಾಲಯವು ಮತ್ತೊಮ್ಮೆ ಮನ್ನಾ ಮಾಡುವಂತೆ ಕೋರಲು ಪ್ರಯತ್ನಿಸಿದೆ. ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಮಹೇಶ್ ಬಾಬು ಎನ್ ಅವರು ಅದನ್ನು ಪರಿಶೀಲಿಸುತ್ತಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾಗೆ ತಿಳಿಸಿದ್ದಾರೆ. "ಸಮಸ್ಯೆಯು ಉನ್ನತ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಅದನ್ನು ಪರಿಹರಿಸಲು ಸರ್ಕಾರವು ನಮಗೆ ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ" ಎಂದಿದ್ದಾರೆ.


"ಯುವಿಸಿಇ ಮೊತ್ತವನ್ನು ಪಾವತಿಸುವ ಪ್ರಕ್ರಿಯೆಯಲ್ಲಿದೆ. ಮೊತ್ತ ಪಾವತಿಸದ ಕಾರಣ ನಾವು ಆರು ತಿಂಗಳ ಹಿಂದೆ ನೀರು ಸರಬರಾಜು ಕಡಿತಗೊಳಿಸಿದ್ದೇವೆ. ಬಡ್ಡಿಯನ್ನು ಮನ್ನಾ ಮಾಡುವ ಅಧಿಕಾರ ನಮಗಿಲ್ಲ. ಅದರ ಬಗ್ಗೆ ನಿರ್ಧರಿಸುವುದು ಸರ್ಕಾರಕ್ಕೆ ಬಿಟ್ಟದ್ದು. ಅವರು ಅಸಲು ಮೊತ್ತವನ್ನು ಪಾವತಿಸಿದರೆ , ನಾವು ಸರ್ಕಾರಕ್ಕೆ ಮನ್ನಾ ಮಾಡಲು ಪ್ರಸ್ತಾಪಿಸಬಹುದು. ಆದರೆ ಅದು ನಮ್ಮ ಕೈಯಲ್ಲಿಲ್ಲ ಎಂದು ಬಿಡಬ್ಲ್ಯೂಎಸ್ಎಸ್ಬಿ ಮುಖ್ಯ ಎಂಜಿನಿಯರ್ (ದಕ್ಷಿಣ) ವೆಂಕಟೇಶ್ ಎಸ್ವಿ ಹೇಳಿದರು.


ಇದನ್ನೂ ಓದಿ: Bengaluru Rain: ಮಹಾಮಳೆಗೆ ಮುಳುಗಿದ ಮಹಾನಗರಿ! ಬೆಂಗಳೂರಿನ ಮಳೆ ಅವಾಂತರದ ಚಿತ್ರಗಳು ಇಲ್ಲಿವೆ


ಹಾಸ್ಟೆಲ್‌ನಲ್ಲಿ 350 ವಿದ್ಯಾರ್ಥಿಗಳು ಇದ್ದಾರೆ, ಇದರಲ್ಲಿ ಕೆಲವು SC/ST/OBC ಮತ್ತು ಮೀಸಲು ವರ್ಗಗಳು ಸೇರಿವೆ. "ನಾವು ಬೋರ್‌ವೆಲ್ ನೀರನ್ನು ಅವಲಂಬಿಸಿದ್ದೇವೆ. ನಮ್ಮಲ್ಲಿ ಎರಡು ವಾಟರ್ ಫಿಲ್ಟರ್‌ಗಳಿವೆ. ಸಾಕಷ್ಟು ನೀರಿದೆ. ಆದರೆ, ಕೆಲವು ವಿದ್ಯಾರ್ಥಿಗಳು ಹೊರಗಿನಿಂದ ಖರೀದಿಸುವ ಕ್ಯಾನ್ ನೀರನ್ನು ಅವಲಂಬಿಸಿದ್ದಾರೆ" ಎಂದು ಯುವಿಸಿಇ ಅಧಿಕಾರಿಯೊಬ್ಬರು ಹೇಳಿದರು.


"ನಾವು ತಿಂಗಳಿಗೆ ಸುಮಾರು 20,000 ರೂ ಬಿಲ್ ಪಡೆಯುತ್ತಿದ್ದೆವು. ಆದರೀಗ ಹಲವಾರು ವರ್ಷಗಳಿಂದ ಇದು ಬಾಕಿ ಉಳಿದಿದೆ. ಈ ವಿಚಾರವಾಗಿ ಮಧ್ಯಪ್ರವೇಶಿಸುವಂತೆ ಹಲವಾರು ಬಾರಿ ಹಾಸ್ಟೆಲ್ ಸಿಬ್ಬಂದಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಆದರೆ ಅದು ಯಾವತ್ತೂ ಈ ವಿಚಾರವನ್ನುಗಂಭೀರವಾಗಿ ಪರಿಗಣಿಸಿಲ್ಲ ಎಂದೂ ಅವರು ಹೇಳಿದ್ದಾರೆ.

Published by:Precilla Olivia Dias
First published: