ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್, ಲಾಭ ಇಲ್ಲದೆ ಏನೂ ಮಾಡುವುದಿಲ್ಲ: Zameer khan ಟ್ವೀಟಾಸ್ತ್ರ

, Zameer Ahmed Khan HD Kumaraswamy tweet war : ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್. ದಿನದ 16 ಗಂಟೆ ಅವರ ಜೊತೆಗಿದ್ದವನು ನಾನು. ಅವರು ಲಾಭ ಇಲ್ಲದೆ ಏನೂ ಮಾಡುವುದಿಲ್ಲ. ಈಗ ಹಾನಗಲ್, ಸಿಂದಗಿಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು. ಇದೂ ಕೂಡ ಒಂದು ಡೀಲ್ ಎಂದು ಆರೋಪಿಸಿದ್ದಾರೆ.

ಜಮೀರ್ ಅಹ್ಮದ್

ಜಮೀರ್ ಅಹ್ಮದ್

  • Share this:
ಬೆಂಗಳೂರು: ರಾಜ್ಯದಲ್ಲಿ ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪ ಚುನಾವಣೆ (by election) ಸಂಬಂಧ ರಾಜಕೀಯ ಮುಖಂಡರ ಮಧ್ಯೆ ವಾಕ್ಸಮರ ಜೋರಾಗಿದೆ. ಎರಡೂ ಕ್ಷೇತ್ರಗಳಿಗೆ ಜೆಡಿಎಸ್ (JDS)​ ಮುಸ್ಲಿಂ ಅಭ್ಯರ್ಥಿಗಳನ್ನು ಹಾಕಿರುವ ಸಂಬಂಧ ಜೆಡಿಎಸ್​ ನಾಯಕರು ಹಾಗೂ ಕಾಂಗ್ರೆಸ್​ ನಾಯಕರ ಮಧ್ಯೆ ನಡೆಯುತ್ತಿರುವ ಟಾಕ್​ ವಾರ್​ ಗೆ ಕಾಂಗ್ರೆಸ್​​ ಶಾಸಕ ಜಮೀರ್​ ಅಹ್ಮದ್​ (Zameer khan) ಎಂಟ್ರಿ ಕೊಟ್ಟಿದ್ದಾರೆ. ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ (HD Kumaraswamy) ವಿರುದ್ಧ ಸರಣಿ ಟ್ವೀಟ್​ ಮೂಲಕ ಕುಟುಕಿದ್ದಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಒಬ್ಬ ಡೀಲ್ ಮಾಸ್ಟರ್. ದಿನದ 16 ಗಂಟೆ ಅವರ ಜೊತೆಗಿದ್ದವನು ನಾನು. ಅವರು ಲಾಭ ಇಲ್ಲದೆ ಏನೂ ಮಾಡುವುದಿಲ್ಲ. ಈಗ ಹಾನಗಲ್, ಸಿಂದಗಿಯಲ್ಲಿ ಬಿಜೆಪಿಗೆ ನೆರವಾಗುವ ಉದ್ದೇಶದಿಂದಲೇ ಮುಸ್ಲಿಂ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು. ಇದೂ ಕೂಡ ಒಂದು ಡೀಲ್ ಎಂದು ಆರೋಪಿಸಿದ್ದಾರೆ.

ಇಬ್ರಾಹಿಂ ರಾಜೀನಾಮೆ ನೀಡಲಿ ನೋಡೋಣ

ಸಿ.ಎಂ.ಇಬ್ರಾಹಿಂ ಅವರು ಈಗಲೂ ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯ. ಮೊನ್ನೆ ಮೊನ್ನೆಯವರೆಗೆ ಅವರು ಸಿದ್ದರಾಮಯ್ಯ ಅವರನ್ನು ಹೊಗಳುತ್ತಾ ದೇವೇಗೌಡ ಮತ್ತು ಕುಮಾರಸ್ವಾಮಿ ಅವರನ್ನು ಬೈಯ್ಯುತ್ತಿದ್ದರು. ಈಗ ಪೂರ್ತಿ ಉಲ್ಟಾ ಹೊಡೆದಿದ್ದಾರೆ. ಆತ್ಮಾಭಿಮಾನ ಇದ್ದರೆ ಇಬ್ರಾಹಿಂ ಮೊದಲು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಲಿ ಎಂದು ಸವಾಲೆಸೆದರು 2004 ರಲ್ಲಿ  ಸಿ.ಎಂ ಇಬ್ರಾಹಿಂ ಅವರು ತನ್ನನ್ನು ರಾಜ್ಯಸಭಾ ಸದಸ್ಯನಾಗಿ ಮಾಡುವಂತೆ ದೇವೇಗೌಡರನ್ನು ಬೇಡಿಕೊಂಡಿದ್ದರು. ಯಾಕೆ ಅವರನ್ನು ರಾಜ್ಯಸಭೆಗೆ ಕಳಿಸಿಲ್ಲ? ಅವರ ಅವಕಾಶಕ್ಕೆ ಅಡ್ಡಗಾಲು ಹಾಕಿದವರು ಯಾರು? ಕಾಂಗ್ರೆಸ್ ಪಕ್ಷವೇ? ಸಿದ್ದರಾಮಯ್ಯನವರಾ? ಇಲ್ಲವೇ ಕುಮಾರಸ್ವಾಮಿ ಅವರಾ ಎಂದು ಟ್ವೀಟ್​​ನಲ್ಲೇ ತಿವಿದಿದ್ದಾರೆ.

ಸಿದ್ದರಾಮಯ್ಯ ಇನ್ನೇನು ಮಾಡಬೇಕಾಗಿತ್ತು

2013ರ ವಿಧಾನಸಭಾ ಚುನಾವಣೆಯಲ್ಲಿ ಸಿ.ಎಂ.ಇಬ್ರಾಹಿಂ ಅವರಿಗೆ ಭದ್ರಾವತಿಯಲ್ಲಿ ಗೆಲ್ಲುವ ಅವಕಾಶವೇ ಇರಲಿಲ್ಲ. ಹಾಗಿದ್ದರೂ ಅವರ ಒತ್ತಡಕ್ಕೆ ಮಣಿದು ಸಿದ್ದರಾಮಯ್ಯ ಅವರು ಭದ್ರಾವತಿ ಕ್ಷೇತ್ರದ ಟಿಕೆಟ್ ನೀಡಿದರು. ಅಲ್ಲಿ ಸೋತು ಮೂರನೇ ಸ್ಥಾನಕ್ಕೆ ಹೋಗಿದ್ದರು. ಸೋತು ಹೋಗಿದ್ದ ಇಬ್ರಾಹಿಂ ಅವರನ್ನು  ಸಿದ್ದರಾಮಯ್ಯ ಅವರು ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದರು. ಜೊತೆಯಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷರನ್ನಾಗಿ ನೇಮಿಸಿದರು. ಇಬ್ರಾಹಿಂ ಅವರಿಗೆ ಪಕ್ಷ ಮತ್ತು ಸಿದ್ದರಾಮಯ್ಯ ಇನ್ನೇನು ಮಾಡಬೇಕಾಗಿತ್ತು ಎಂದು ಕಿಡಿ ಕಾರಿದರು.

ಆಗ ನನ್ನನ್ನು ಮಂತ್ರಿ ಕೂಡ ಮಾಡಲಿಲ್ಲ

ಜೆಡಿಎಸ್ ಪಕ್ಷದ ಹೆಚ್ಚಿನ ಶಾಸಕರು ಹಾಸನ, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಸೇರಿದವರು. ಮುಸ್ಲಿಮರ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಇಷ್ಟೊಂದು ಕಾಳಜಿ ತೋರಿಸುವ ಕುಮಾರದ್ವಾಮಿ ಅವರು ಆ ಜಿಲ್ಲೆಗಳ ಯಾವುದಾದರೂ ಒಂದೆರಡು ಕ್ಷೇತ್ರಗಳಲ್ಲಿ ಮುಸ್ಲಿಮರಿಗೆ ಯಾಕೆ ಟಿಕೆಟ್ ನೀಡಿ ಗೆಲ್ಲಿಸಬಾರದು?  ನಾನು ಮುಖ್ಯಮಂತ್ರಿಯಾದರೆ ಬಿ.ಎಂ. ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಮಾಡಿ, ಗೃಹ ಖಾತೆ ನೀಡುತ್ತೇನೆ ಎಂದು ಎಚ್​ಡಿಕೆ 2018ರಲ್ಲಿ ಪ್ರಚಾರ ಭಾಷಣದಲ್ಲಿ ಭರವಸೆ ನೀಡಿದ್ದರು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಫಾರೂಕ್ ಅವರನ್ನು ಉಪಮುಖ್ಯಮಂತ್ರಿ ಬಿಡಿ ಕೊನೆಗೆ ಮಂತ್ರಿಯೂ ಮಾಡಲಿಲ್ಲ. ಬಳಸಿಕೊಂಡು ಬಿಸಾಡಿ ಬಿಟ್ಟರು ಎಂದು ಆರೋಪಿಸಿದರು.

ಇದನ್ನೂ ಓದಿ: BSY & ಅವರ ಪುತ್ರನನ್ನ ಜೈಲಿಗೆ ಕಳುಹಿಸ್ತೀವಿ ಎಂದು ಹೆದರಿಸಿ ಬಿಜೆಪಿ ರಾಜೀನಾಮೆ ಪಡೆದಿದೆ: Siddaramaiah ಆರೋಪ

ಇದೇನಾ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ?

ನಮ್ಮ ನಾಯಕರಾದ ಅವರು ಮುಖ್ಯಮಂತ್ರಿಯಾದಾಗ ಅಲ್ಪಸಂಖ್ಯಾತರ ಇಲಾಖೆಯ ಬಜೆಟ್ ಕೇವಲ 280 ಕೋಟಿ ಇತ್ತು. ಸಿದ್ದರಾಮಯ್ಯನವರು ಅದನ್ನು 3150 ಕೋಟಿಗೆ ಹೆಚ್ಚಿಸಿದ್ದರು. ಸಮ್ಮಿಶ್ರ ಸರ್ಕಾರದಲ್ಲಿ ಕುಮಾರಸ್ವಾಮಿ ಈ ಬಜೆಟ್ ಅನುದಾನವನ್ನು 1800 ಕೋಟಿಗೆ ಇಳಿಸಿದ್ದರು. ಇದೇನಾ ಅಲ್ಪಸಂಖ್ಯಾತರ ಬಗೆಗಿನ ಕಾಳಜಿ?  ಇಕ್ಬಾಲ್ ಸರಡಗಿ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರಲ್ಲ ಕುಮಾರಸ್ವಾಮಿ.  ಆ ವಿಧಾನಪರಿಷತ್ ಚುನಾವಣೆಯಲ್ಲಿ ಭೈರತಿ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿದ್ದರು. ಜೆಡಿಎಸ್ ಪಕ್ಷದಲ್ಲಿ ಆಗ ಏಳೆಂಟು ಹೆಚ್ಚುವರಿ ಮತಗಳಿದ್ದವು. ಅದನ್ನು ಭೈರತಿ ಸುರೇಶ್ ಅವರಿಗೆ ಮಾರಾಟ ಮಾಡಿದ್ದು ಯಾರೆಂದು ನೆನಪಿದೆಯಾ? ಎಂದು ಟ್ವೀಟ್​ ಮಾಡಿದ್ದಾರೆ.
Published by:Kavya V
First published: