ಓದಿದ್ದು Engineering, ಮಾಡಿದ್ದು ಬ್ಯಾಂಕ್ Robbery: ಪೇಪರ್ ನಲ್ಲಿ ಬಂದ ಸುದ್ದಿ ನೋಡಿ ಪ್ಲಾನ್; ಅರೆಸ್ಟ್ ಆದ್ಮೇಲೆ ಹೇಳಿದ್ದು ಪಾಪರ್ ಕಥೆ!

ಕೃತ್ಯದ ನಂತರ ಬ್ಯಾಂಕ್ ಬಳಿಯೇ ಆಟೋ ಹತ್ತಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ಐದಾರು ಕಿಲೋಮೀಟರ್ ಬ್ಯಾಂಕ್ ಸಮೀಪವೇ ಸುತ್ತಾಡಿದ್ದಾನೆ. ನಂತರ ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ ಅನಂತಪುರಂ ಸುತ್ತಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾನೆ.

ಬಂಧಿತ ಆರೋಪಿ ಧೀರಜ್

ಬಂಧಿತ ಆರೋಪಿ ಧೀರಜ್

  • Share this:
ಆನ್ ಲೈನ್ ಟ್ರೇಡಿಂಗ್ (Online Trading)ನಲ್ಲಿ ಹಣ ಮಾಡಲು ಲಕ್ಷ ಲಕ್ಷ ಹಣ ಕಳೆದುಕೊಂಡು, ಬ್ಯಾಂಕ್ ದರೋಡೆ (Bank Robbery) ಮಾಡಿದ್ದ ಯುವಕನನ್ನು ಪೊಲೀಸರು (Bengaluru Police) ಬಂಧಿಸಿದ್ದಾರೆ.  ಜನವರಿ 14ರಂದು ಬೆಂಗಳೂರಿನ ಮಡಿವಾಳ ಠಾಣಾ ವ್ಯಾಪ್ತಿಯಲ್ಲಿರುವ SBI ಶಾಖೆಗೆ ನುಗ್ಗಿದ ಯುವಕ ಚಾಕು ತೋರಿಸಿ ಹಣ ಮತ್ತು ಚಿನ್ನಾಭರಣದ ಜೊತೆ ಪರಾರಿಯಾಗಿದ್ದನು. ಸದ್ಯ ದರೋಡೆಕೋರ ಯುವಕನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಮಾಕ್ಷಿಪಾಳ್ಯ ಮೂಲದ 28 ವರ್ಷದ ಧೀರಜ್ ಬಂಧಿತ ಆರೋಪಿ. ಈತ ಸುಮಾರು 30 ಲಕ್ಷಕ್ಕೂ ಅಧಿಕ ಹಣ ಸಾಲ (Loan) ಮಾಡಿಕೊಂಡಿರುವ ವಿಷಯ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿ ಇಂಜಿನಿಯರ್ ಪದವಿ ಪಡೆದುಕೊಂಡು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದನು. ಆದ್ರೆ ಬೇಗ ಹೆಚ್ಚು ಹಣ ಗಳಿಸುವ ಆಸೆಯಿಂದ ಆನ್ ಲೈನ್ ಟ್ರೇಡಿಂಗ್ ನಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೆ ಒಳಗಾಗಿದ್ದನು. ವಿವಿಧ ಮೊಬೈಲ್ ಆಪ್ ಗಳಲ್ಲಿಯೂ ಸಾಲ ಪಡೆದುಕೊಂಡಿದ್ದನು. ಸಾಲ ನೀಡಿದವರ ಕಿರುಕುಳ ಹೆಚ್ಚಾದ ಹಿನ್ನೆಲೆ ಬ್ಯಾಂಕ್ ದರೋಡೆ ಮಾಡಲು ಹೊಂಚು ಹಾಕಿದ್ದನು.

ಪೇಪರ್ ನಲ್ಲಿ ಸುದ್ದಿ ನೋಡಿ ಪ್ಲಾನ್ ಮಾಡಿದ್ದ!

ಬ್ಯಾಂಕ್ ಗಳಲ್ಲಿ ಲೋನ್ ಪಡೆದು ಯುಎಸ್ ಎ ಮೂಲದ ಒಎಲ್ ವೈಎಂಪಿ ಎಂಬ ಆನ್‌ಲೈನ್ ಟ್ರೇಡಿಂಗ್ ನಲ್ಲಿ ಧೀರಜ್ ಹಣ ‌ಹೂಡಿಕೆ ಮಾಡಿದ್ದನು. ಮೂವತೈದು ಲಕ್ಷ ಹಣ ಸಾಲ ಮಾಡಿ ಹೂಡಿಕೆ ಮಾಡಿ ವಂಚನೆಗೊಳಗಾಗಿದ್ದನು. ಸಾಲಗಾರರ ಕಾಟ ತಾಳಲಾರದೆ ಪೇಪರ್ ನಲ್ಲಿ ಬಂದಿದ್ದ ಬ್ಯಾಂಕ್ ರಾಬರಿ ಸುದ್ದಿ ನೋಡಿ ತಾನೂ ದರೋಡೆಗೆ ಪ್ಲಾನ್ ಮಾಡಿದ್ದನು.

ಇದನ್ನೂ ಓದಿ:  Cost Of Living: ಜಗತ್ತಿನಲ್ಲಿ ಜೀವನ ನಡೆಸೋದು ದುಬಾರಿ ಆಗ್ತಿರೋದೇಕೆ? ಇಲ್ಲಿವೆ 5 ಕಾರಣಗಳು

ಗೂಗಲ್ ನಲ್ಲಿ ಮತ್ತು ಯೂಟ್ಯೂಬ್ ನಲ್ಲಿ ಒಬ್ಬನೇ ಬ್ಯಾಂಕ್ ರಾಬರಿ ಮಾಡುವುದನ್ನ ಸರ್ಚ್ ಮಾಡಿದ್ದನು. ಇಡೀ ಬೆಂಗಳೂರು ಸೆಕ್ಯೂರಿಟಿ ಇಲ್ಲದ ಬ್ಯಾಂಕ್ ಗಳನ್ನ ಸರ್ಚ್ ಮಾಡಿದ್ದನು. ಬಳಿಕ ಬಿಟಿಎಂ ಲೇಔಟ್ ನಲ್ಲಿ ಸೆಕ್ಯೂರಿಟಿ ಇಲ್ಲದ್ದನ್ನ ಗಮನಿಸಿ ಮೂರು ದಿನ ಹೊಂಚು ಹಾಕಿದ್ದನು.

3.75 ಲಕ್ಷ ನಗದು. 1.8 ಕೆಜಿ ಚಿನ್ನಾಭರಣ

ಜನವರಿ 14 ರಂದು ಬ್ಯಾಂಕ್ ಇದ್ದ ಬಿಲ್ಡಿಂಗ್ ಮೆಲೇಯೇ ಇದ್ದನು. ಸಂಜೆ ಬ್ಯಾಂಕ್ ನಲ್ಲಿ ಇಬ್ಬರೇ ಸಿಬ್ಬಂದಿ ಇರೋ ವಿಚಾರವನ್ನು ಸಹ ತಿಳಿದುಕೊಂಡಿದ್ದನು. ಸಂಜೆ ಆಗುತ್ತಿದ್ದಂತೆ  ಬ್ಯಾಂಕ್ ಒಳಗೆ ಎಂಟ್ರಿ ಕೊಟ್ಟ ಧೀರಜ್, ಮ್ಯಾನೇಜರ್ ಮತ್ತು ಮಹಿಳಾ ಸಿಬ್ಬಂದಿಯನ್ನ ಚಾಕು ತೋರಿಸಿ ಬೆದರಿಸಿದ್ದನು. 3.75 ಲಕ್ಷ ರೂ. ಹಣ ಮತ್ತು 1.8 ಕೆಜಿ ಚಿನ್ನಾಭರಣ ಸುಲಿಗೆ ಮಾಡಿದ್ದನು.  ಹೊರ ಬಂದರೆ ಹತ್ತು  ಯುವಕರಿದ್ದು ಕೊಲೆ ಮಾಡುವ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದನು.

ಪೊಲೀಸರ ದಾರಿ ತಪ್ಪಿಸಲು ಅಲ್ಲೇ ಸುತ್ತಾಡಿದ್ದ!

ಕೃತ್ಯದ ನಂತರ ಬ್ಯಾಂಕ್ ಬಳಿಯೇ ಆಟೋ ಹತ್ತಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ಐದಾರು ಕಿಲೋಮೀಟರ್ ಬ್ಯಾಂಕ್ ಸಮೀಪವೇ ಸುತ್ತಾಡಿದ್ದಾನೆ. ನಂತರ ಚಿಕ್ಕಮಗಳೂರು, ಬಳ್ಳಾರಿ, ಶಿವಮೊಗ್ಗ ಅನಂತಪುರಂ ಸುತ್ತಾಡಿ ಮತ್ತೆ ಬೆಂಗಳೂರಿಗೆ ವಾಪಸ್ ಆಗಿದ್ದಾನೆ. ಈ ನಡುವೆ ಕೆಲವರಿಗೆ ಸಾಲದ ಹಣ ಹಿಂದಿರುಗಿಸಿದ್ದಾನೆ. ಮತ್ತೋರ್ವನಿಗೆ ಸಾಲ ಹಿಂದಿರುಗಿಸಲು ಬಂದಾಗ ಖಾಕಿ ಬಲೆಗೆ ಬಿದ್ದಿದ್ದಾನೆ.

ಇದನ್ನೂ ಓದಿ:  Hubli: ಮಕ್ಕಳ Loveಗೆ ಪೋಷಕರೇ ವಿಲನ್; ರಕ್ಷಣೆ ಕೊಡುವಂತೆ ಪೊಲೀಸರ ಮೊರೆ

ಪೊಲೀಸರ ಮುಂದೆ ಹೇಳಿದ್ದ ಪಾಪರ್ ಆದ ಕಥೆ

ಹಣ ಮಾಡುವ ದೃಷ್ಟಿಯಿಂದ ಆನ್ ಲೈನ್ ವ್ಯವಹಾರಕ್ಕೆ ಹಣ ಹಾಕಿ ಕೈ ಸುಟ್ಟುಕೊಂಡಿದ್ದೆ. ಮಾಡಿಕೊಂಡ ಸಾಲ ಹಿಂದಿರುಗಿಸುವ ಒತ್ತಡ ಹೆಚ್ಚಾದಾಗ ಬ್ಯಾಂಕ್ ದರೋಡೆಗೆ ಮುಂದಾದೆ ಎಂದು ಧೀರಜ್ ಪೊಲೀಸರ ಮುಂದೆ ಹೇಳಿರುವ ಮಾಹಿತಿ ಲಭ್ಯವಾಗಿದೆ.
Published by:Mahmadrafik K
First published: