Crime News: ಮಾವನ ಮಗಳ ಹೃದಯ ಕದ್ದವ, ಪಕ್ಕದ ಮನೆ ಚಿನ್ನವನ್ನೂ ಕದ್ದಿದ್ದ! ಅರೆಸ್ಟ್ ಆಗಿದ್ದು ಹೇಗೆ 'ಚೋರ' ಚಿತ್ತ ಚೋರ?
ಪರಿಚಯಸ್ಥರ ಮನೆಯಲ್ಲೇ ಆರೋಪಿ ಮನೆಯ ಬೀರುವಿನಲ್ಲಿದ್ದ ಚಿನ್ನದ ಚೈನ್, ಕಿವಿಯೋಲೆ, ಉಂಗುರ ಸೇರಿದಂತೆ 106 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಪ್ರೀತಿಸಿದ ಹುಡುಗಿಗಾಗಿ ಹಾಗೂ ಮೋಜಿನ ಜೀವನ ನಡೆಸಲು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು: ಆತ ಮಾವನ ಮಗಳನ್ನು ಪ್ರೀತಿಸುತ್ತಾ (Love) ಇದ್ದ. ಆಕೆಯ ಹೃದಯ (heart) ಕದ್ದಿದ್ದ. ಅಷ್ಟೇ ಆಗಿದ್ರೆ ಪರವಾಗಿ ಇರಲಿಲ್ಲ, ಆಕೆಯನ್ನೇ ಮದುವೆಯಾಗಿ (Marriage) ಸುಖವಾಗಿ ಇರಬಹುದಿತ್ತು. ಆದ್ರೆ ಆತ ಅದನ್ನ ಮಾಡಿಲ್ಲ. ಪ್ರೀತಿಸಿದ ಹುಡುಗಿಯನ್ನು ಹೇಗೆ ಖುಷಿಯಾಗಿ ಇರಿಸುವುದು ಅಂತ ಯೋಚಿಸಿದ. ಆಕೆಯನ್ನು ರಾಣಿ (Queen) ಹಾಗೆ ನೋಡಿಕೊಳ್ಳಬೇಕು ಅಂತ ಮಾಡಬಾರದ ಕೆಲಸಕ್ಕೆ ಕೈ ಹಾಕಿದ. ನಾನು ಏನೂ ಮಾಡೇ ಇಲ್ಲ ಎನ್ನುವಂತೆ ಇದ್ದ. ಇದೀಗ ಆತನನ್ನು ಪೊಲೀಸರು (police) ಅರೆಸ್ಟ್ (Arrest) ಮಾಡಿದ್ದಾರೆ. ಮದುವೆ ಆಗಿ ಮಾವನ ಮನೆಗೆ ಹೋಗಬೇಕಿದ್ದವ, ಈಗ ಜೈಲು (Jail) ಸೇರಿದ್ದಾನೆ.
ಮಾವನ ಮಗಳಿಗಾಗಿ ಕಳ್ಳತನ ಮಾಡಿದ್ದ ಆರೋಪಿ
ಬೆಂಗಳೂರಿನ ಕೆ.ಪಿ. ಅಗ್ರಹಾರ ಠಾಣೆ ಪೊಲೀಸರು ಅದೇ ಪೊಲೀಸ್ ಠಾಣೆ ವ್ಯಾಪ್ತಿಯ ನವೀನ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ತಾನು ಪ್ರೀತಿಸಿದ ಮಾವನ ಮಗಳಿಗಾಗಿ ಖರ್ಚು ಮಾಡಲು ಹಾಗೂ ಶೋಕಿ ಜೀವನ ನಡೆಸಲು ಪರಿಚಯಸ್ಥರ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ್ದ ನವೀನ್ ಕುಮಾರ್.
ಪರಿಚಯಸ್ಥರ ಮನೆಯಲ್ಲೇ ಕಳ್ಳತನ
ಆರೋಪಿ ನವೀನ್ ಕುಮಾರ್ ಜಯನಗರರ ಕೆಫೆಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಈತನ ಪಕ್ಕದ ಮನೆಯಲ್ಲಿ ಶಿವಶಂಕರಯ್ಯ ಹಾಗೂ ಅವರ ಪತ್ನಿ ವಾಸವಿದ್ದು, ಎರಡೂ ಮನೆಯವರು ಪರಿಚಯಸ್ಥರಾಗಿದ್ದರು. ಮಾರ್ಚ್ 28 ರಂದು ಶಿವಶಂಕರಯ್ಯ ಮನೆಯಲ್ಲಿ ಯಾರು ಇಲ್ಲದಿರುವಾಗ ಮನೆಯಲ್ಲಿದ್ದ 109 ಗ್ರಾಂ ಚಿನ್ನಾಭರಣ ಕದ್ದಿದ್ದಾನೆ. ಈತ ಕದ್ದಿರುವುದು ಮನೆಯವರಿಗೂ ಗೊತ್ತಾಗಿರಲಿಲ್ಲ. ಇತ್ತೀಚೆಗೆ ಯುಗಾದಿ ಹಬ್ಬ ಹಿನ್ನೆಲೆ ಒಡವೆ ಹಾಕಿಕೊಳ್ಳಲು ನೋಡಿದಾಗ ಕಾಣೆಯಾಗಿರುವುದು ಗೊತ್ತಾಗಿದೆ.
ಒಮ್ಮೆ ಶಿವಶಂಕರಯ್ಯ ಪತ್ನಿ ನವೀನ್ ಕುಮಾರ್ ಮನೆಗೆ ಬಂದಿದ್ದಾರೆ. ನವೀನ್ ಕುಮಾರ್ ತಾಯಿ ಜೊತೆಗೆ ಮಾತನಾಡ್ತಿದ್ದ ಶಿವಶಂಕರಯ್ಯ ಪತ್ನಿ, ಈ ವೇಳೆ ಮನೆಗೆ ಬೀಗ ಹಾಕಿ ಬರೋದನ್ನ ಮರೆತಿದ್ದೇನೆ, ಮನೆಯಲ್ಲಿ ಯಾರು ಇಲ್ಲ ಅಂತ ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡ ನವೀನ್ ಕುಮಾರ್ ಶಿವಶಂಕರಯ್ಯ ಮನೆಗೆ ಓಡಿ ಹೋಗಿದ್ದಾನ. ಮನೆಯ ಬೀರುವಿನಲ್ಲಿದ್ದ ಚಿನ್ನದ ಚೈನ್, ಕಿವಿಯೋಲೆ, ಉಂಗುರ ಸೇರಿದಂತೆ 106 ಗ್ರಾಂ ಚಿನ್ನಾಭರಣ ಕದ್ದು ಪರಾರಿಯಾಗಿದ್ದ.
ನವೀನ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದ
ನವೀನ್ ಆಗಾಗ ಮನೆಗೆ ಬರುತ್ತಿದ್ದ ಹಿನ್ನೆಲೆಯಲ್ಲಿ ಶಂಕೆ ವ್ಯಕ್ತಪಡಿಸಿ ನವೀನ್ ವಿರುದ್ಧ ದೂರು ನೀಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಇನ್ಸ್ಪೆಕ್ಟರ್ ಸದಾನಂದ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರೀತಿಸಿದ ಹುಡುಗಿಗಾಗಿ ಹಾಗೂ ಮೋಜಿನ ಜೀವನ ನಡೆಸಲು ಕಳ್ಳತನ ಮಾಡಿರುವುದಾಗಿ ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿ ದೂರು ಕೊಟ್ಟಿದ್ದಕ್ಕೆ ಪತಿ ಆತ್ಮಹತ್ಯೆ
ಮತ್ತೊಂದು ಪ್ರಕರಣದ್ಲಲಿ ತನ್ನ ವಿರುದ್ಧ ಪತ್ನಿ ದೂರು ನೀಡಿದ್ದರಿಂದ ನೊಂದ ಪತಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. 45 ವರ್ಷದ ಸೈಯ್ಯದ್ ಇರ್ಫಾನ್ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪತಿ ಕಿರುಕುಳ ನೀಡುತ್ತಿದ್ದಾನೆ ಎಂದು ಇರ್ಫಾನ್ ಪತ್ನಿ ಯಾಸಿನ್ ತಾಜ್ ಪೋಲಿಸ್ ಠಾಣೆಗೆ ದೂರು ನೀಡಿದ್ದರು. ಇದರಿಂದ ಬಂಧನ ಭೀತಿಯಿಂದ ಹೆದರಿದ ಸೈಯ್ಯದ್ ಇರ್ಫಾನ್, ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.