ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (Yelahanka MLA S.R.Vishwanath) ಕೊಲೆಗೆ (Murder) ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್ನ ಗೋಪಾಲಕೃಷ್ಣ (Congress leader Gopalkrishna) ಸಂಚು ರೂಪಿಸಿದ್ದ ವಿಡಿಯೋ ಬಹಿರಂಗವಾಗಿದ್ದು ಭಾರೀ ಸದ್ದು ಮಾಡುತ್ತಿದೆ. ಹತ್ಯೆಗೆ ಸಂಚು ಹಿನ್ನೆಲೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಇಂದು ರಾಜಾನುಕುಂಟೆ ಪೊಲೀಸ್ ಠಾಣೆಗೆ (Rajanukunte Police Station) ಗೋಪಾಲಕೃಷ್ಣ ಹಾಗೂ ಇತರರ ವಿರುದ್ಧ ದೂರು ನೀಡಿದರು. ಕೊಲೆಸಂಚು, ಮಾನಹಾನಿ ಅಡಿಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ಕುಳ್ಳ ದೇವರಾಜ್ ಹೆಸರು ಸಹ ಉಲ್ಲೇಖಿಸಲಾಗಿದೆ. ಜನಸೇವೆ ಮಾಡೋದು ಸಹಿಸಲಾಗದೆ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ದೂರಿನಲ್ಲಿ ಶಾಸಕರು ಆರೋಪಿಸಿದ್ದಾರೆ. ಕಡಬಗೆರೆ ಸೀನ ಕೊಲೆ ಸಂಚು ಕೇಸ್ ನಲ್ಲಿಯೂ ನನ್ನನ್ನು ಸಿಲುಕಿಸೋ ಕೆಲಸ ಮಾಡಿದ್ರು. ಪ್ರತಿನಿತ್ಯ ತೋಟಕ್ಕೆ ಒಂಟಿಯಾಗಿ ವಾಕಿಂಗ್ ಹೋಗ್ತೀನಿ. ಈ ವೇಳೆ ನನ್ನನ್ನು ಮುಗಿಸಬೇಕು ಅಂತ ಸ್ಕೆಚ್ ಹಾಕಿದ್ದಾರೆ ಅಂತ ದೂರಿನಲ್ಲಿ ಬರೆದಿದ್ದಾರೆ.
ಗೋಪಾಲಕೃಷ್ಣ ನನಗೆ ಎದುರಾಳಿಯೇ ಅಲ್ಲ
ಪೊಲೀಸ್ ಸ್ಟೇಷನ್ಗೆ ದೂರು ನೀಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಬಗ್ಗೆ ಗೃಹ ಸಚಿವರಿಗೂ ದೂರು ಕೊಡಲಾಗಿದೆ. ಮುಖ್ಯಮಂತ್ರಿಗಳ ಜೊತೆಯೂ ಚರ್ಚೆ ಮಾಡಿದ್ದೇನೆ. ಈ ಘಟನೆ ಸರಿಯಿಲ್ಲ ಎಂದು ಅವರಿಗೆ ಹೇಳಿದ್ದೇನೆ. ಕೇವಲ ಇದು ಒಂದು ದಿನದ್ದು ಅಲ್ಲ, ಹಲವು ದಿನಗಳಿಂದ ನಡೆದಿರುವ ಸ್ಕೆಚ್ ಹಾಕಿದ್ದಾರೆ ಎಂದರು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಶಾಸಕರು ನನಗೆ ಹಲವರು ಕರೆ ಮಾಡಿ ಧೈರ್ಯ ಹೇಳ್ತಿದ್ದಾರೆ. ಈಗಾಗಲೇ ಎಸ್ಪಿ, ಗೃಹಸಚಿವರಿಗೆ ದೂರು ಕೊಟ್ಟಿದ್ದೇನೆ. ಇದರ ಬಗ್ಗೆ ಸತ್ಯಾಸತ್ಯತೆ ಹೊರಗೆ ಬರಬೇಕು. ಗೋಪಾಲಕೃಷ್ಣ ನನಗೆ ಎದುರಾಳಿಯೇ ಅಲ್ಲ, ಆದರೂ ನನ್ನ ಮೇಲೆ ಯಾಕೆ ಕೊಲೆಗೆ ಸ್ಕೆಚ್ ಹಾಕಿದ್ದಾನೆ ಗೊತ್ತಿಲ್ಲ. ಇಂತಹ ದ್ವೇಷದ ರಾಜಕಾರಣವನ್ನು ನಾನು ನನ್ನ ಜೀವನದಲ್ಲೇ ಮಾಡಿಲ್ಲ ಎಂದರು.
![]()
ದೂರಿನ ಪ್ರತಿ
ಕೇಳಿದ್ದರೆ ಕ್ಷೇತ್ರ ಬಿಟ್ಟು ಕೊಡುತ್ತಿದ್ದೆ
ಬೇಕಿದ್ರೆ ಕ್ಷೇತ್ರ ಬಿಟ್ಬಿಡು, ನಾನು ಗೆದ್ಕೊತ್ತೀನಿ ಅಂದರೂ ಕ್ಷೇತ್ರ ಬಿಡಲು ನಾನು ಸಿದ್ದನಿದ್ದೇನೆ. ನಾನು ಯಾವತ್ತಿಗೂ ಸಾವಿಗೆ ಹೆದರುವನಲ್ಲ ಎಂದರು. ಕುಳ್ಳ ದೇವರಾಜ್ ನನಗೆ ಗೊತ್ತು, ಆದರೆ ನನ್ನ ಪಕ್ಷದವನಲ್ಲ, ಅವನ ಸಂಪರ್ಕವೂ ನನಗಿಲ್ಲ. ನಿನ್ನೆ ಸಂಜೆ 7:30ಕ್ಕೆ ಒಂದು ಗ್ರೀನ್ ಕವರ್ ನಮ್ಮ ಮನೆಗೆ ಕಳುಹಿಸಿದರು. ಅದರಲ್ಲಿ ಕುಳ್ಳ ದೇವರಾಜ್ ಕ್ಷಮಾಪಣಾ ಪತ್ರ ಕಳುಹಿಸಿದ್ದ. ಅದರಿಂದಲೇ ನನಗೆ ಈ ವಿಷಯ ಗೊತ್ತಾಗಿದೆ ಎಂದು ತಿಳಿಸಿದ್ರು.
ಇದನ್ನೂ ಓದಿ: Vijayanagara: ತಂದೆ- ತಾಯಿಯನ್ನು ನೋಡಿಕೊಳ್ಳದೇ ಬೀದಿಗೆ ತಳ್ಳಿದ ಹೆತ್ತ ಮಕ್ಕಳು!
ಕೊಲೆಗೆ ಯತ್ನ ಮಾಡಿಲ್ಲ
ಈ ಹಿಂದೆ ವೀಡಿಯೋ ಸಿಕ್ಕಿದ್ರೆ , ಆಗಲೇ ನಾನು ದೂರು ಕೊಡ್ತಿದ್ದೆ. ಕಡಬಗೆರೆ ಸೀನ ಹತ್ಯೆ ಪ್ರಕರಣದಲ್ಲಿ ಈಗಾಗಲೇ ತನಿಖೆ ಮಾಡಿ, ಪೊಲೀಸರು ಸಿ ರಿಪೋರ್ಟ್ ಕೊಟ್ಟಿದ್ದಾರೆ. ವೀಡಿಯೋ ಏನು ಎಡಿಟ್ ಮಾಡಿಲ್ಲ, ಮೂರು ವರೆ ಗಂಟೆ ವೀಡಿಯೋ ಇದೆ, ಅದನ್ನು ಕೊಡ್ತೇನೆ ಪೂರ್ತಿ ಬೇಕಿದ್ರೆ ನೋಡಿ. ಕೊಲೆಗೆ ಯತ್ನ ಮಾಡಿಲ್ಲ, ಆದರೆ ಕೊಲೆ ಬಗ್ಗೆ ಮಾತಾಡಿದ್ದಾರಲ್ಲ. ನನಗೇನು ಸೆಕ್ಯುರಿಟಿ ಬೇಕು ಎಂದು ಕೇಳಿಲ್ಲ. ನನಗೆ ಯಾವುದೇ ರೀತಿಯ ಆತಂಕ ಇಲ್ಲ ಎಂದರು.
ಅವರ ಶಾಸಕರನ್ನೇ ರಕ್ಷಣೆ ಮಾಡಿಲ್ಲ, ಇನ್ನು ನನ್ನ ಮಾಡುತ್ತಾರಾ?
ಎಲ್ಲ ರೌಡಿಗಳು ಎಸ್ಆರ್ ವಿಶ್ವನಾಥ್ ಜೊತೆಗೆ ಇದ್ದಾರೆ. ಎಲ್ಲ ರೌಡಿಗಳು ಜತೆಗಿರುವ ಲಿಸ್ಟ್ ಕೊಡುತ್ತೇನೆ ಅಂತ ಎಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೇಳಿಕೆಗೆ ಶಾಸಕ ಎಸ್.ಆರ್.ವಿಶ್ವನಾಥ್ ವ್ಯಂಗ್ಯವಾಗಿ ಉತ್ತರಿಸಿದರು. ಡಿಕೆ ಅಣ್ಣನೇ ನನ್ನ ಸ್ನೇಹಿತ ಅಲ್ವಾ, ಡಿಕೆ ಸಮರ್ಥನೆ ಮಾಡ್ತಾರೆ. ಅವರು ಅಖಂಡ ಶ್ರೀನಿವಾಸ್ ಮೂರ್ತಿನೇ ರಕ್ಷಣೆ ಮಾಡಿಲ್ಲ, ಇನ್ನೂ ನನ್ನ ರಕ್ಷಣೆ ಮಾಡ್ತಾರಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದರು. ನಿಜವಾಗಿಯೂ ಇದು ಅವ್ರಿಗೆ ತರವಲ್ಲ, ಅವರು ಗೋಪಾಲಕೃಷ್ಣ ಬಿಟ್ಟು, ನನ್ನ ಬಗ್ಗೆ ಮಾತಾಡಬೇಕು ಎಂದರು. ಇನ್ನು ಆರೋಪಿ ಕುಳ್ಳ ದೇವರಾಜ್ ಜೊತೆ ನನಗೆ ಯಾವುದೇ ವ್ಯವಹಾರ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ