HOME » NEWS » State » BENGALURU URBAN WOMEN TORTURE KIDS OVER EXTRA MARITAL AFFAIR KVD

ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ತಿಳಿಸಿದ ಮಕ್ಕಳು: ರೊಚ್ಚಿಗೆದ್ದವಳು ಮಕ್ಕಳಿಗೆ ತೋರಿಸಿದಳು ನರಕ!

ಸ್ವಲ್ಪವೂ ಕರುಣೆ ಇಲ್ಲದೆ ಪ್ರಿಯಕರನ ಜೊತೆ ಸೇರಿ ಇಬ್ಬರು ಹೆಣ್ಣು ಮಕ್ಕಳನ್ನು ಮನಬಂದಂತಗೆ ಥಳಿಸಿದ್ದಾಳೆ. ತಾಯಿ, ಪ್ರಿಯಕರ ಇಬ್ಬರು ಮಕ್ಕಳನ್ನು ಕಚ್ಚಿ, ಬೆಂಕಿಯಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ.

Kavya V | news18-kannada
Updated:June 10, 2021, 6:23 PM IST
ತಾಯಿಯ ಅಕ್ರಮ ಸಂಬಂಧದ ಬಗ್ಗೆ ತಂದೆಗೆ ತಿಳಿಸಿದ ಮಕ್ಕಳು: ರೊಚ್ಚಿಗೆದ್ದವಳು ಮಕ್ಕಳಿಗೆ ತೋರಿಸಿದಳು ನರಕ!
ಆರೋಪಿ ಹೇಮಂತ್​
  • Share this:
ಬೆಂಗಳೂರು: ಪ್ರಪಂಚದಲ್ಲಿ ಹೆತ್ತವಳಿಗೆ ಉನ್ನತ ಸ್ಥಾನವಿದೆ, ತಾಯಿಯನ್ನು ದೇವರೆಂದು ಕಾಣುವ ಸಂಸ್ಕೃತಿ ನಮ್ಮದು. ಆದರೆ ಇಲ್ಲೊಬ್ಬಳು ಮಹಿಳೆ ಮಾತೃ ಸ್ಥಾನಕ್ಕೆ ಧಕ್ಕೆ ಬರುವಂತ ಕೆಲಸ ಮಾಡಿದ್ದಾಳೆ. ತಾನು ಹೆತ್ತ ಮಕ್ಕಳ ಮೇಲೆಯೇ ಕೊಂಚವೂ ಕರುಣೆ ಇಲ್ಲದೆ ವಿಕೃತಿ ಮೆರೆದಿದ್ದಾಳೆ. ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪುಟ್ಟ ಕಂದಮ್ಮಗಳಿಗೆ ನರಕ ತೋರಿಸಿದ್ದಾಳೆ. ಪ್ರಿಯಕರನ ಮೇಲಿನ ಮೋಹಕ್ಕೆ ಬಿದ್ದವಳು ಪುಟ್ಟ ಮಕ್ಕಳನ್ನು ಹಿಂಸಿಸಿದ್ದಾಳೆ. ಕ್ರೂರಿ ತಾಯಿ ಹಾಗೂ ಆಕೆಯ ಪ್ರಿಯಕರ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ.

ರಾಜರಾಜೇಶ್ವರಿ ನಗರ ಠಾಣಾ ವ್ಯಾಪ್ತಿಯ ಜಯಮ್ಮ (25) ಎಂಬಾಕೆ ಮಕ್ಕಳನ್ನು ಹಿಂಸಿಸಿರುವ ಘಟನೆ ಬಯಲಾಗಿದೆ. ಜಯಮ್ಮನ ಪತಿ ಯಾವುದೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಗಂಡ ಇಲ್ಲದ ವೇಳೆ ಜಯಮ್ಮ ಪರಪುರುಷನ ಸಹವಾಸಕ್ಕೆ ಬಿದ್ದಿದ್ದಾಳೆ. ಇಬ್ಬರು ಪುಟ್ಟ ಹೆಣ್ಣು ಮಕ್ಕಳನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ಅಮ್ಮನ ವರ್ತನೆಯಿಂದ ಇಬ್ಬರು ಹೆಣ್ಣು ಮಕ್ಕಳು ನೊಂದಿದ್ದರು. ತಂದೆ ಜೈಲಿನಿಂದ ಕರೆ ಮಾಡಿದಾಗ ಅಮ್ಮನ ವರ್ತನೆ ಬಗ್ಗೆ ಹೇಳಿದ್ದಾರೆ.

ಮನೆಗೆ ಒಬ್ಬ ಅಂಕಲ್ ಬಂದು ಹೋಗುತ್ತಾರೆ ಎಂದು ತಂದೆಯ ಬಳಿ ಮಕ್ಕಳು ಹೇಳಿದ್ದಾರೆ. ಇದರಿಂದ ಕೋಪಗೊಂಡ ಗಂಡ ಫೋನ್​ನಲ್ಲೇ ಹೆಂಡತಿಗೆ ವಾರ್ನಿಂಗ್​ ಕೊಟ್ಟಿದ್ದಾನೆ. ಎಲ್ಲವನ್ನೂ ನಿಲ್ಲಿಸು ಎಂದು ಹೆಂಡತಿಗೆ ಎಚ್ಚರಿಸಿದ್ದಾನೆ. ಇದರಿಂದ ಕುಪಿತಗೊಂಡ ಜಯಮ್ಮ ಮಕ್ಕಳ ಮೇಲೆ ಉರಿದು ಬಿದ್ದಿದ್ದಾಳೆ. ತನ್ನ ಪ್ರಿಯಕರನ ವಿಷಯ ತಂದೆಗೆ ತಿಳಿಸಿದ್ದಕ್ಕೆ ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾಳೆ.

ಇದನ್ನೂ ಓದಿ: ರೋಹಿಣಿ ಸಿಂಧೂರಿ ವಿಚಾರವಾಗಿ ವ್ಯಂಗ್ಯ: ಸಿದ್ದರಾಮಯ್ಯಗಾರು ಎಂದು ತೆಲುಗಿನಲ್ಲಿ ಚೇಡಿಸಿದ ಪ್ರತಾಪ್ ಸಿಂಹ!

ಸ್ವಲ್ಪವೂ ಕರುಣೆ ಇಲ್ಲದೆ ಪ್ರಿಯಕರನ ಜೊತೆ ಸೇರಿ ಇಬ್ಬರು ಹೆಣ್ಣು ಮಕ್ಕಳನ್ನು ಮನಬಂದಂತಗೆ ಥಳಿಸಿದ್ದಾಳೆ. ತಾಯಿ, ಪ್ರಿಯಕರ ಇಬ್ಬರು ಮಕ್ಕಳನ್ನು ಕಚ್ಚಿ, ಬೆಂಕಿಯಿಂದ ಸುಟ್ಟು ವಿಕೃತಿ ಮೆರೆದಿದ್ದಾರೆ. ಜಯಮ್ಮ ಹಾಗೂ ಆಕೆ ಪ್ರಿಯಕರ ಹೇಮಂತ್(27)​ ಅಮಾನವೀಯ ಕೃತ್ಯ ಬಯಲಾಗುತ್ತಿದ್ದಂತೆ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಆಸ್ಪತ್ರೆಯೊಂದರಲ್ಲಿ ಹೌಸ್​ಕೀಪಿಂಗ್​ ಕೆಲಸ ಮಾಡುತ್ತಿದ್ದ ಜಯಮ್ಮ ಈಗ ಕಂಬಿ ಎಣಿಸುತ್ತಿದ್ದಾಳೆ. ತಂದೆ-ತಾಯಿ ಇಬ್ಬರೂ ಜೈಲು ಪಾಲಾಗಿದ್ದು, ಇಬ್ಬರು ಹೆಣ್ಣು ಮಕ್ಕಳ ಬೇರೆಯವರ ಆಸರೆಯಲ್ಲಿ ಬದುಕುವ ದುಸ್ಥಿತಿ ನಿರ್ಮಾಣವಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 10, 2021, 6:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories