Bengaluru Airport: ಗುಪ್ತಾಂಗದೊಳಗೆ ಬರೋಬ್ಬರಿ ಅರ್ಧ ಕೆಜಿ ಚಿನ್ನ ಬಚ್ಚಿಟ್ಟಿಕೊಂಡು ಶಾಕ್ ಕೊಟ್ಟ ಮಹಿಳೆ!

ವಿದೇಶಿ ಮಹಿಳೆ ತನ್ನ ಗುದನಾಳದೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ತುಂಬಿದ ಮೂರು ಕ್ಯಾಪ್ಸುಲ್​​ಗಳನ್ನು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಳು.

ಚಿನ್ನದ ಇರುವ ಕ್ಯಾಪ್ಸುಲ್ಸ್​​

ಚಿನ್ನದ ಇರುವ ಕ್ಯಾಪ್ಸುಲ್ಸ್​​

  • Share this:
ಬೆಂಗಳೂರು: ಅಕ್ರಮವಾಗಿ ಅಂತಾರಾಷ್ಟ್ರೀಯ (Internationally) ಮಟ್ಟದಲ್ಲಿ ಡ್ರಗ್ಸ್​​, ಬಂಗಾರವನ್ನು (Drugs and Gold) ಸಾಗಾಟ ಮಾಡುವ ಜಾಲ ಆಗಾಗ ಬಯಲಾಗುತ್ತಲೇ ಇರುತ್ತೆ. ಕಳ್ಳಸಾಗಾಣೆಗಾಗಿ ತಮ್ಮ ಜೀವವನ್ನೇ ಅಪಾಯದಲ್ಲಿ ಇಡುವವರ ಸಂಖ್ಯೆ ಹೆಚ್ಚಾಗಿದೆ. ಇಂದು ಬೆಂಗಳೂರು ವಿಮಾನ ನಿಲ್ದಾಣದಲ್ಲಿ (Kempegowda International Airport Bengaluru)  ಸಿಕ್ಕಿಬಿದ್ದ ವಿದೇಶಿ ಮಹಿಳೆಯ ಉಪಾಯ ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಸೂಡಾನ್ ಮೂಲದ 38 ವರ್ಷದ ಮಹಿಳೆಯೊಬ್ಬರು ಶಾರ್ಜಾದಿಂದ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಬಂದಿಳಿದಿದ್ದರು. ಆಕೆ ಬರೋಬ್ಬರಿ 535 ಗ್ರಾಂ ತೂಕದ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಗುದನಾಳದೊಳಗೆ ಕ್ಯಾಪ್ಸುಲ್‌ ಮಾದರಿಯಲ್ಲಿ ಬಚ್ಚಿಟ್ಟಿಕೊಂಡಿದ್ದಿದ್ದು ಬಯಲಾಗಿದೆ.

ಅನುಮಾನಕ್ಕೆ ಎಡೆ ಮಾಡಿದ ಮಹಿಳೆಯ ವರ್ತನೆ

26.11 ಲಕ್ಷ ಮೌಲ್ಯದ ಚಿನ್ನದೊಂದಿಗೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಆಕೆಯನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ. ಮಂಗಳವಾರ ಸಂಜೆ ಏರ್ ಅರೇಬಿಯಾ ವಿಮಾನ ಜಿ9 498 ಮೂಲಕ ಶಾರ್ಜಾದಿಂದ ಬೆಂಗಳೂರಿಗೆ ಬಂದಿಳಿದಾಗ ಪ್ರಕರಣ ಬಯಲಾಗಿದೆ ಎಂದು ಬೆಂಗಳೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ರಾತ್ರಿ 9.30 ರ ಸುಮಾರಿಗೆ ಇಳಿದ ಪ್ರಯಾಣಿಕರು ವಿಮಾನ ನಿಲ್ದಾಣದ ಕಟ್ಟಡಕ್ಕೆ ಕಾಲಿಟ್ಟಾಗ, ಟರ್ಮಿನಲ್ ಮಹಡಿಯಲ್ಲಿ ಕರ್ತವ್ಯದಲ್ಲಿದ್ದ ಅಧಿಕಾರಿಗಳು ಅನುಮಾನಾಸ್ಪದ ರೀತಿಯಲ್ಲಿ ಕಂಡು ಬಂದ ಆಫ್ರಿಕನ್ ಮಹಿಳೆಯನ್ನು ತಡೆದರು.

ಇದನ್ನೂ ಓದಿ: 17ರ ಹುಡುಗನ ಜೊತೆ ಮೂರು ಮಕ್ಕಳ ತಾಯಿಯ ಲವ್ವಿಡವ್ವಿ.. ನಂಜನಗೂಡಲ್ಲಿ ದೊಡ್ಡ ರಾದ್ಧಾಂತ!

ತಪ್ಪೊಪ್ಪಿಕೊಂಡ ಮಹಿಳೆ

ಮಹಿಳೆ ಸುಡಾನ್ ಪಾಸ್‌ಪೋರ್ಟ್ ಹೊಂದಿರುವವಳು. ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದಾಳೆಯೇ ಎಂದು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಅವಳನ್ನು ಪ್ರಶ್ನಿಸಿದರು. ತಡವರಿಸಿದಾಗ ಆಕೆಯ ಬೆಂಗಳೂರು ಪ್ರವಾಸದ ಬಗ್ಗೆ ಅನುಮಾನ ಹೆಚ್ಚಾಗಿದೆ. ಮಹಿಳಾ ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದಾಗ ದುಬೈನಿಂದ ಬೆಂಗಳೂರಿಗೆ ಚಿನ್ನ ಕಳ್ಳಸಾಗಣೆ ಮಾಡುವಲ್ಲಿ ತೊಡಗಿರುವುದು ಕಂಡು ಬಂದಿದೆ. ಮತ್ತಷ್ಟು ವಿಚಾರಣೆ ನಡೆಸಿದಾಗ, ಮಹಿಳೆ ಅಧಿಕಾರಿಗಳ ಎದುರು ತಪ್ಪೊಪ್ಪಿಕೊಂಡಿದ್ದಾರೆ.

ಚಿನ್ನವನ್ನು ವಶಕ್ಕೆ ಪಡೆದ ಅಧಿಕಾರಿಗಳು

ತನ್ನ ಗುದನಾಳದೊಳಗೆ ಪೇಸ್ಟ್ ರೂಪದಲ್ಲಿ ಚಿನ್ನವನ್ನು ತುಂಬಿದ ಮೂರು ಕ್ಯಾಪ್ಸುಲ್​​ಗಳನ್ನು ಸಾಗಿಸುತ್ತಿರುವುದಾಗಿ ಒಪ್ಪಿಕೊಂಡಳು. ಕ್ಯಾಪ್ಸುಲ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ವಶಪಡಿಸಿಕೊಂಡ 535 ಗ್ರಾಂ ಚಿನ್ನದ ಪ್ರಸ್ತುತ ಮಾರುಕಟ್ಟೆ ಮೌಲ್ಯದಲ್ಲಿ 26.11 ಲಕ್ಷ. ಪೇಸ್ಟ್ ಅನ್ನು ಘನ ಬ್ಲಾಕ್​ಗೆ ಕರಗಿಸಿ ನಂತರ ಅದನ್ನು ತೂಕ ಮಾಡಿದರು. ಕಸ್ಟಮ್ಸ್ ಸುಂಕವನ್ನು ತಪ್ಪಿಸುವ ಈ ರೀತಿ ಮಾಡಿರೋದಾಗಿ ಮಹಿಳೆ ಬಾಯ್ಬಿಟ್ಟಿದ್ದಾರೆ. ಹೀಗಾಗಿ ಆಕೆಯ ವಿರುದ್ಧ ಚಿನ್ನದ ಕಳ್ಳಸಾಗಣೆ ಪ್ರಕರಣವನ್ನು ದಾಖಲಿಸಲಾಗಿದೆ.

ಇದನ್ನೂ ಓದಿ: Anekal: ರಾತ್ರಿ ವೇಳೆ ಜೊತೆಯಾಗಿ ಮನೆಯಿಂದ ಹೊರ ಹೋದವರು ಬೀದಿ ಹೆಣವಾದರು!

ಆಕೆ ಏಕಾಂಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಳೇ ಅಥವಾ ಬೆಂಗಳೂರಿನಲ್ಲಿ ಬಲವಾದ ಸಂಪರ್ಕ ಹೊಂದಿರುವ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲದ ಭಾಗವಾಗಿದ್ದಾಳೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಮಂಗಳೂರಲ್ಲೊಂದು ಅಮಾನವೀಯ ಘಟನೆ

ಮಂಗಳೂರು ನಗರದ ಬಂದರ್​ನಲ್ಲಿ ಮೀನುಗಾರನೊಬ್ಬನನ್ನು ಬೋಟ್ ​ ನಲ್ಲಿಯೇ ತಲೆಕೆಳಗಾಗಿಸಿ ನೇತು ಹಾಕಿ ಹಲ್ಲೆ ಮಾಡಿರುವ ಘಟನೆ ತಡ ವಾಗಿ ಬೆಳಕಿಗೆ ಬಂದಿದೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರ  ಪ್ರದೇಶದ ಸೀನು ಎಂದು ಗುರುತಿಸಲಾಗಿದೆ. ಕೇವಲ ಸಣ್ಣ ವಿಚಾರಕ್ಕೆ ಈ ರೀತಿ ಹಲ್ಲೆ ಮಾಡಿರುವುದಕ್ಕೆ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹಲ್ಲೆ ಮಾಡುವ ವಿಡಿಯೋ ಸಖತ್​ ವೈರಲ್​ ಆಗಿದೆ. ಮೀನುಗಾರಿಕಾ ಬೋಟ್​​ನಲ್ಲಿ ಮೊಬೈಲ್ ಕದ್ದ ಆರೋಪ ಹೊರಿಸಿ ಆತನಿಗೆ ಚಿತ್ರಹಿಂಸೆ ನೀಡಿದ್ದಾರೆ. ಈತನಿಂದ ಸತ್ಯ ಬಾಯಿ ಬಿಡಿಸಲು ಉಲ್ಟಾ ನೇತು ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಬೋಟ್​ನ ಹುಕ್ಸ್  ಗೆ ಸೀನು ಕಾಲು ಕಟ್ಟಿ ತಲೆಕೆಳಗಾಗಿ ನೇತು ಹಾಕಿ ಟಾರ್ಚರ್​ ನೀಡಿದ್ದರು. ಈ ಬಗ್ಗೆ ಪಾಂಡೇಶ್ವರ ಪೊಲೀಸರು ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ಒಟ್ಟು 6 ಜನರನ್ನು ಬಂಧಿಸಿದ್ದಾರೆ
Published by:Kavya V
First published: