ಅತ್ತೆ ಪ್ರಾಣ ತೆಗೆದ ಸೊಸೆ: ಹಣ ಕೊಡುವುದಾಗಿ ಕರೆದು ವೃದ್ಧೆಯನ್ನು ಕೊಲೆ ಮಾಡಿಸಿದ ಪಾಪಿ!

ಹಣ ಪಡೆಯಲು ಬಂದಾಗ ಅತ್ತೆ-ಸೊಸೆ ನಡುವೆ ಜಗಳವಾಗಿದೆ. ಈ ವೇಳೆ ಅತ್ತೆತನ್ನ ಸೊಸೆ ಸ್ನೇಹಿತನಾಗಿದ್ದ ಬಿಎಂಟಿಸಿ ಕಂಡಕ್ಟರ್ ಬಾಲಚಂದ್ರ ಎಂಬಾತ ಹಣ ಕೊಡಿಸುತ್ತೇನೆ ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದನಂತೆ. ಈ ವೇಳೆ ತನ್ನ ಮನೆಯಲ್ಲಿ ವೃದ್ದೆ ಮೇಲೆ ಹಲ್ಲೆ ನಡೆಸಿದ್ದು, ಅಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ.

ಕೊಲೆಯಾದ ಅತ್ತೆ

ಕೊಲೆಯಾದ ಅತ್ತೆ

  • Share this:
ಬೆಂಗಳೂರು:  ಆ ವೃದ್ದೆಗೆ  ಇಬ್ಬರು ಮಕ್ಕಳಿದ್ದರೂ ಇಳಿವಯಸ್ಸಿನಲ್ಲಿ  ಜೀವನ ಸಾಗಿಸೋದು ಕಷ್ಟವಾಗಿತ್ತು. ಹಿರಿ ಸೊಸೆ ಬಳಿ ಜೀವನಾಂಶ ಕೇಳಲು ಹೋದ ಆ ವೃದ್ದೆ ಬಳಿಕ ರೈಲು ಹಳಿ ಮೇಲೆ ಅನಾಥ ಶವವಾಗಿ ಪತ್ತೆಯಾಗಿದ್ದಾಳೆ. ವೃದ್ಧ ಮಹಿಳೆಯ ಹೆಸರು ನಿಂಗಮ್ಮ. 70 ವರ್ಷ ವಯಸ್ಸಿನ ಈಕೆ ಮಂಡ್ಯದ ತೂಬಿನಕೆರೆ ನಿವಾಸಿ. ನಿಂಗಮ್ಮಗೆ ಇಬ್ಬರು ಗಂಡು ಮಕ್ಕಳಿದ್ದು, ಒಬ್ಬ ಮಗ ಮಂಡ್ಯದಲ್ಲಿ ವಾಸವಿದ್ರೆ, ಹಿರಿ ಮಗ ತುಮಕೂರಿನಲ್ಲಿ ವಾಸವಿದ್ದ. ಅದ್ರೆ ಕೆಲ ವರ್ಷದ ಹಿಂದೆ ಹಿರಿ ಮಗ ಸಾವನ್ನಪ್ಪಿದ್ದು ಸೊಸೆ ಅಲ್ಲಿಯೇ ವಾಸವಾಗಿದ್ದಳು. ಮಗ ಮೃತಪಟ್ಟ ಬಳಿಕ ತನ್ನ ಜೀವನಾಂಶಕ್ಕೆ ಹಣ ಬೇಕು ಅಂತ ಹಿರಿ ಸೊಸೆ ಬಳಿ ಹೋಗಿದ್ದ ನಿಂಗಮ್ಮ ರೈಲು ಹಳಿ ಮೇಲೆ ಅನಾಥ ಶವವಾಗಿ ಪತ್ತೆಯಾಗಿದ್ದಾಳೆ.

ಜುಲೈ 19 ರಂದು ಸೊಸೆ ಲತಾ ಬಳಿ ಹಣ ಪಡೆಯಲು ಬಂದಾಗ ಅತ್ತೆ-ಸೊಸೆ ನಡುವೆ ಜಗಳವಾಗಿದೆ. ಈ ವೇಳೆ ಅತ್ತೆತನ್ನ ಸೊಸೆ ಸ್ನೇಹಿತನಾಗಿದ್ದ ಬಿಎಂಟಿಸಿ ಕಂಡಕ್ಟರ್ ಬಾಲಚಂದ್ರ ಎಂಬಾತ ಹಣ ಕೊಡಿಸುತ್ತೇನೆ ಎಂದು ತನ್ನ ಮನೆಗೆ ಕರೆದುಕೊಂಡು ಹೋಗಿದ್ದನಂತೆ. ಈ ವೇಳೆ ತನ್ನ ಮನೆಯಲ್ಲಿ ವೃದ್ದೆ ಮೇಲೆ ಹಲ್ಲೆ ನಡೆಸಿದ್ದು, ಅಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಬಳಿಕ ನಿಂಗಮ್ಮಳಮ್ಮ ತುಮಕೂರಿನ ಹೀರೆಹಳ್ಳಿ ರೈಲು ಹಳಿ ಮೇಲೆ ಮಲಗಿಸಿ ಆರೋಪಿ ಎಸ್ಕೇಪ್ ಆಗಿದ್ದಾನೆ. ಪುನಃ ರೈಲು ಹಳಿ ಬಳಿಗೆ ಬಂದ ಆರೋಪಿ ಬಾಲಚಂದ್ರ ನಿಂಗಮ್ಮ ಮೃತಪಟ್ಟಿರುವುದನ್ನ ಕಂಡು ಶವದ ಗುರುತು ಸಿಗಬಾರದು ಅಂತ ರುಂಡವನ್ನ ತೆಗೆದು ಕವರ್ ನಲ್ಲಿ ಪ್ಯಾಕ್ ಮಾಡಿ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಯಲ್ಲಿ ಎಸೆದು ಹೋಗಿದ್ದನಂತೆ.

ಗ್ರಾನೈಟ್ ತುಂಬಿದ ಲಾರಿ ಇಳಕಲ್ ತಲುಪಿದ್ದು ಅಲ್ಲಿ ಅನ್ ಲೋಡ್ ಮಾಡುವಾಗ ರುಂಡ ಪತ್ತೆಯಾಗಿದ್ದು, ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಪರಿಶೀಲನೆ ನಡೆಸಿ ಲಾರಿಯನ್ನ ಸೀಜ್ ಮಾಡಿ ಕೊಲೆ ಪ್ರಕರಣ ದಾಖಲು ಮಾಡಿದ್ದಾರೆ. ಈ ವೇಳೆಗೆ ನಿಂಗಮ್ಮನ ಮಗ ಸತೀಶ್ ತನ್ನ ತಾಯಿ ತುಮಕೂರಿಗೆ ಹೋಗಿದ್ದು ಇನ್ನೂ ವಾಪಸ್ ಬರದ ಬಗ್ಗೆ ತುಮಕೂರು ಠಾಣೆಯಲ್ಲಿ ಕೇಸ್ ದಾಖಲು ಮಾಡಿದ್ದಾರೆ. ಪೊಲೀಸರ ತನಿಖೆ ವೇಳೆ ರೈಲು ಹಳಿ ಮೇಲೆ ಸಿಕ್ಕ ಮುಂಡ ಪರಿಶೀಲನೆ ನಡೆಸಿದಾಗ ಅದು ಸತೀಶ್ ತಾಯಿಯ ಮೃತದೇಹ ಎಂದು ಗೊತ್ತಾಗಿದೆ. ಇದೇ ವೇಳೆ ಇಳಕಲ್ ನಲ್ಲಿ ರುಂಡ ಪತ್ತೆಯಾದ ಬಗ್ಗೆ ಪೊಲೀಸರು ಮಾಹಿತಿ ಪಡೆದು ಪರಿಶೀಲಿಸಿದಾಗ ಅದು ನಿಂಗಮ್ಮನ ರುಂಡ ಎಂಬುದು ಖಚಿತವಾಗಿದೆ‌.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಅಪ್ರಾಪ್ತೆ ಅತ್ಯಾಚಾರ-ಕೊಲೆ: 10 ಮಂದಿ ಪೊಲೀಸರ ತಂಡದಿಂದ ತನಿಖೆ

ಬಳಿಕ ಬೆಂಗಳೂರು ಗ್ರಾಮಾಂತರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಮೊಬೈಲ್ ಲೋಕೇಷನ್ ಮತ್ತು ಸಿಸಿಟಿವಿಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಬಾಲಚಂದ್ರ ಎಂಬಾತನ ಚಲನವಲನ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು ಆತನನ್ನ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರೈಲ್ವೆ ಪೊಲೀಸರು ಬಾಲಚಂದ್ರನ ಬಂಧಿಸಿದ್ದು ಕುಮ್ಮಕ್ಕು ಕೊಟ್ಟ ಲತಾಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅದೇನೇ ಇರಲಿ  ಸೊಸೆ ಬಳಿ ಜೀವನಾಂಶ ಕೇಳಿದ ತಪ್ಪಿಗೆ ಅತ್ತೆ ಅನಾಥ ಶವವಾಗಿದ್ದು ದುರ್ದೈವವೇ ಸರಿ. ಸದ್ಯ ಈ ಬಗ್ಗೆ ರೈಲ್ವೆ ಪೊಲೀಸ್ ಠಾಣೆ ಸೇರಿ ಮೂರು ಠಾಣೆಗಳಲ್ಲಿ ಕೇಸ್ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಅತ್ತೆ ಕೊಲೆಗೆ ಕಾರಣಳಾದ ಸೊಸೆ ಪತ್ತೆಗೆ ಖಾಕಿ ಪಡೆ ಎಲ್ಲೆಡೆ ಶೋಧ ನಡೆಸಿದ್ದಾರೆ.
Published by:Kavya V
First published: