Bengaluru: ಬೆಳ್ಳಂಬೆಳಗ್ಗೆ ಮನೆ ಬಾಗಿಲು ತೆರೆದ ಮಹಿಳೆ ಎದುರಿಗೆ 1 ತಿಂಗಳ ಗಂಡು ಮಗು ! ಯಾರೋ ಬಿಟ್ಟು ಹೋದ ಮಗು ನೋಡಿ ಶಾಕ್ !

ಬಾಗಿಲಿನ ಗಂಟೆಯ ಶಬ್ದದಿಂದ ಆಕೆ ಎಚ್ಚರಗೊಂಡರು. ತನ್ನ ಗಂಡ ಬಂದಿರಬಹುದು ಎಂದು ಭಾವಿಸಿ ಬೇಗನೆ ಎದ್ದು ಆತುರದಿಂದ ಬಾಗಿಲು ತೆರೆದಾಗ, ಆಕೆಯ ಆಶ್ಚರ್ಯಕ್ಕೆ, ಪತಿಯ ಯಾವುದೇ ಸುಳಿವೂ ಇರಲಿಲ್ಲ. ಬದಲಿಗೆ ಅಲ್ಲೊಂದು ಮುದ್ದಾದ ಗಂಡು ಮಗು ಮಲಗಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:

ಬೆಂಗಳೂರು: ಪಶ್ಚಿಮ ಬೆಂಗಳೂರಿನ ಮಲ್ಲತಹಳ್ಳಿಯ ನ್ಯೂ ಎನ್‌ಜಿಇಎಫ್ ಲೇಔಟ್‌ನಲ್ಲಿ ವಾಸಿಸುತ್ತಿರುವ ಮುಕ್ತಾ ಬಾಯಿ ಜುಲೈ 8 ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಖಾಸಗಿ ಕಾಲೇಜಿನಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿರುವ 63 ವರ್ಷದ ಪತಿ ಭೀಮರಾವ್ ನೈಟ್‌ ಶಿಫ್ಟ್ ಮುಗಿಸಿ ಮರಳಿದ್ದಾಳರೆಂದು ಭಾವಿಸಿ ತನ್ನ ಮನೆಯ ಬಾಗಿಲು ತೆರೆದಾಗ ಅಲ್ಲಿ ತನ್ನ ಗಂಡನ ಬದಲು ಒಂದು ಮಗುವನ್ನು ಕಂಡು ಅಚ್ಚರಿಗೊಂಡರು. ಮುಕ್ತಾ ಬಾಯಿ ಹೇಳಿಕೆಯ ಪ್ರಕಾರ, ಬಾಗಿಲಿನ ಗಂಟೆಯ ಶಬ್ದದಿಂದ ಆಕೆ ಎಚ್ಚರಗೊಂಡರು. ತನ್ನ ಗಂಡ ಬಂದಿರಬಹುದು ಎಂದು ಭಾವಿಸಿ ಬೇಗನೆ ಎದ್ದು ಆತುರದಿಂದ ಬಾಗಿಲು ತೆರೆದಾಗ, ಆಕೆಯ ಆಶ್ಚರ್ಯಕ್ಕೆ, ಪತಿಯ ಯಾವುದೇ ಸುಳಿವೂ ಇರಲಿಲ್ಲ. ಡೋರ್‌ಬೆಲ್ ಅನ್ನು ಯಾರು ಹೊಡೆದರು ಎಂದು ಪರೀಕ್ಷಿಸಲು ಸುತ್ತಮುತ್ತ ಹುಡುಕಿದಾಗ ಒಂದು ಮಗು ಬಾಗಿಲಲ್ಲಿ ಮಲಗಿರುವುದನ್ನು ಕಂಡು ಆಶ್ಚರ್ಯಗೊಂಡ ಮುಕ್ತಾ ಬಾಯಿ ಮನೆಯಲ್ಲಿದ್ದ ತನ್ನ ಮಗನಿಗೆ ವಿಷಯ ತಿಳಿಸಿದರು. ನಂತರ ಇಬ್ಬರು ಸೇರಿ ಮಗುವನ್ನು ಬಿಟ್ಟುಹೋದ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಸುತ್ತಮುತ್ತ ಹುಡುಕಿದರು, ಅವರಿಗೆ ಯಾವುದೇ ವ್ಯಕ್ತಿಗಳ ಸುಲಿವೂ ಸಿಗಲಿಲ್ಲ. ನಂತರ ಮುಕ್ತಾ ಬಾಯಿ ತನ್ನ ಗಂಡನಿಗೆ ಕರೆ ಮಾಡಿ ಏನಾಯಿತು ಎಂದು ತಿಳಿಸಿದರು. ಹಾಗೂ ತಮ್ಮ ಮನೆಯ ಮಾಲೀಕರಿಗೂ ವಿಷಯವನ್ನು ತಿಳಿಸಿದರು. ಈ ವಿಷಯ ಶೀಘ್ರದಲ್ಲೇ ಪೊಲೀಸರಿಗೆ ತಲುಪಿತು.


ಜ್ಞಾನಭಾರತಿ ಪೊಲೀಸ್ ಠಾಣೆಯ ಗಸ್ತು ಅಧಿಕಾರಿಗಳು ಮನೆಗೆ ಬಂದು ಭೀಮರಾವ್ ಅವರ ಮಗ ಮತ್ತು ಇತರರನ್ನು ಪ್ರಶ್ನಿಸಿದರು. ಆದರೆ ಅದು ಯಾರ ಮಗು ಮತ್ತು ಅದು ಹೇಗೆ ಅಲ್ಲಿಗೆ ಬಂದಿತು ಎಂಬುದು ಯಾರಿಗೂ ತಿಳಿದಿರಲಿಲ್ಲ ಎಂದು ಪೊಲೀಸ್ ವರದಿಯ ಮೂಲಕ ತಿಳಿದುಬಂದಿದೆ. "ನಮ್ಮ ಮನೆಗೆ ಎರಡು ಬಾಗಿಲುಗಳಿವೆ - ಒಂದು ಮರದ ಮತ್ತು ಇನ್ನೊಂದು ಗ್ರಿಲ್‌ನಿಂದ ಮಾಡಲ್ಪಟ್ಟಿದೆ. ಮಗುವನ್ನು ಬಿಟ್ಟು ಹೋದವರು ಎರಡು ಬಾಗಿಲುಗಳನ್ನು ಗಮನಿಸಿರಬೇಕು ಮತ್ತು ಮುಂದಿನ ಬಾಗಿಲು ತೆರೆಯಲು ಸಮಯ ಬೇಕಾಗುತ್ತದೆ ಅದನ್ನು ಗಮನಿಸಿ ನಮ್ಮ ಮನೆಯ ಮುಂದೆ ಬಿಡಲು ನಿರ್ಧರಿಸಿರಬಹುದು" ಎಂದು ಭೀಮರಾವ್ ತಿಳಿಸಿದ್ದಾರೆ.


ಇದನ್ನೂ ಓದಿ: Saif - Kareena: ಸೈಫ್ - ಕರೀನಾ ಎರಡನೇ ಮಗನ ಹೆಸರಿನ ಅರ್ಥವೇನು? ಭವಿಷ್ಯದಲ್ಲಿ ಕುಟುಂಬದಿಂದ ದೂರವಾಗ್ತಾನೆ ಎಂದಿದ್ದಾರೆ ಜ್ಯೋತಿಷಿಗಳು !

ಪೊಲೀಸ್ ಅಧಿಕಾರಿಯೊಬ್ಬರು ಮಗುವಿಗೆ ಕನಿಷ್ಠ ಒಂದು ತಿಂಗಳಾಗಿರಬಹುದು. ಬಹುಶಃ ಮದುವೆಗೂ ಮುನ್ನ ಸಂಬಂಧದಿಂದ ಹುಟ್ಟಿರುವ ಮಗು ಆಗಿರಬಹುದು ಎಂದು ಹೇಳಿದರು. ಪೊಲೀಸರು ಲಾಕ್ಡೌನ್ ಸಮಯದಲ್ಲಿ ಎಲ್ಲಾ ಸ್ಥಳಗಳಲ್ಲಿ ವ್ಯಾಪಕವಾಗಿ ಕಟ್ಟೆಚ್ಚರ ವಹಿಸಿದ್ದ ಕಾರಣ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದ ನಂತರ ತಾಯಿ ಮತ್ತು ಆಕೆಯ ಕುಟುಂಬದವರು ಮಗುವನ್ನು ಬಿಟ್ಟುಹೋಗಿದ್ದಾರೆ ಎಂದು ಪೊಲೀಸರು ಊಹಿಸಿದ್ದಾರೆ.


ಕಳೆದ ಮೂರು ವಾರಗಳಲ್ಲಿ ನಡೆದ 2ನೆಯ ಘಟನೆ ಇದು. ಜೂನ್ 23 ರಂದು ಬೆಂಗಳೂರಿನ ಪೂರ್ವದಲ್ಲಿರುವ ಎಚ್‌ಆರ್‌ಬಿಆರ್ ಲೇಔಟ್‌ನಲ್ಲಿರುವ ತೋಪಿನಲ್ಲಿ ಅಸಹಜ ದೇಹ ಹೊಂದಿರುವ ಗಂಡು ಮಗು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದರು.
ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: