Bengaluru: ಆಕಸ್ಮಿಕವಾಗಿ ಅಜ್ಜಿಯನ್ನು ಕೊಂದ ಮೊಮ್ಮಗಳು: ಬಾಣಂತಿಯರಿಗೆ ಕಾಡುವ ಖಿನ್ನತೆ ಇಷ್ಟು ಭಯಾನಕವೇ?

Bengaluru Crime News: ಮೂರೂವರೆ ತಿಂಗಳ ಮಗು ಇತ್ತೀಚೆಗೆ ಮೃತಪಟ್ಟಿತ್ತು. ಅಂದಿನಿಂದ ಮಮತಾ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ಮೂರು ತಿಂಗಳ ಮಗುವನ್ನು ಕಳೆದುಕೊಂಡಿದ್ದ ಮಹಿಳೆ ಆತ್ಮಹತ್ಯೆಗೂ (Suicide) ಮುನ್ನ ಆಕಸ್ಮಿಕವಾಗಿ ತನ್ನ ಅಜ್ಜಿಯನ್ನು (Grandma) ಕೊಂದಿರುವ (Murder) ಭಯಾನಕ ಘಟನೆ ನಗರದ ಮಾರುತಿನಗರದಲ್ಲಿ ನಡೆದಿದೆ. ಕೊಟ್ಟಿಗೆಪಾಳ್ಯ ನಿವಾಸಿ 24 ವರ್ಷದ ಮಮತಾ ಎಂಬುವರು ತಮ್ಮ ತಾಯಿಯ ತಾಯಿ 70 ವರ್ಷದ ಅಜ್ಜಿ ಜಯಮ್ಮ ಎಂಬುವರನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಜ್ಞಾನಭಾರತಿ ಸಮೀಪದ ಮಾರುತಿನಗರದ ಅವರ ಮನೆಯಲ್ಲಿ ಅಜ್ಜಿ, ಮೊಮ್ಮಗಳ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು. ಆಕಸ್ಮಿಕವಾಗಿ ಅಜ್ಜಿಯನ್ನು ಕೊಂದಿರಬಹುದು ಎಂದು ಶಂಕಿಸಿದ್ದಾರೆ. ಮಮತಾ ಫೋನ್ ಕರೆಗಳಿಗೆ ಉತ್ತರಿಸದ ಕಾರಣ ಅವರ ಪತಿ ಮಂಜುನಾಥ್ ಅವರು ಮನೆಗೆ ಬಂದು ನೋಡಿದಾಗ ಘಟನೆ ಬಯಲಾಗಿದೆ. ಮಮತಾ ಅವರು ಸೋಮವಾರ ನಡೆಯಲಿದ್ದ ಮದುವೆಯಲ್ಲಿ ಪಾಲ್ಗೊಳ್ಳಲು ಮಂಡ್ಯದಲ್ಲಿರುವ ತಮ್ಮ ಪೋಷಕರ ಮನೆಗೆ ತೆರಳಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಬೆಂಗಳೂರಿಗೆ ಮರಳಿದ್ದರು.

ಇದನ್ನೂ ಓದಿ: Murder: ಗಂಡನನ್ನೇ ತುಂಡು ತುಂಡಾಗಿ ಕತ್ತರಿಸಿದ ಪತ್ನಿ! ಪೀಸ್ ಎಸೆದು ಬಂದಿದ್ದು ಆಕೆಯ ಪ್ರಿಯಕರ!

ಮದುವೆಗೆ ಹೋಗಿದ್ದಾಕೆ ವಾಪಸ್​ ..

ಮಮತಾ ಕೊನೆಯದಾಗಿ ತನ್ನ ಸಹೋದರ ಚೇತನ್‌ ಬಳಿ ಫೋನ್ ಮೂಲಕ ಮಾತನಾಡಿದ್ದಾರೆ. ನಂತರ ಯಾವುದೇ ಫೋನ್ ಕರೆಗೆ ಉತ್ತರಿಸಲಿಲ್ಲ. ಇದರಿಂದ ಚೇತನ್ ಮತ್ತು ಆಕೆಯ ತಾಯಿ ಮಂಜುಳಾ ಆತಂಕಗೊಂಡರು. ಮನೆಯಲ್ಲಿ ಅಜ್ಜಿ ಜಯಮ್ಮ ಜೊತೆ ಇರುವ ಮಮತಾರನ್ನು ಹೋಗಿ ನೋಡುವಂತೆ ಸೋದರ ಚೇತನ್ ಮನೆಯ ಅಕ್ಕಪಕ್ಕದವರಿಗೆ ಕರೆ ಮಾಡಿದರು. ಅಲ್ಲದೆ ಮಮತಾ ಪತಿ ಮಂಜುನಾಥ್ ಗೂ ಮನೆಗೆ ಹೋಗುವಂತೆ ಹೇಳಿದರು. ಮಂಜುನಾಥ್ ಮನೆಗೆ ಬಂದಾಗ, ಒಳಗಿನಿಂದ ಬೀಗ ಹಾಕಿರುವುದನ್ನು ಕಂಡು ಬಂದಿದೆ.  ಆದರೆ ಬೆಲ್​ ಮಾಡಿದರೂ ಒಳಗಿನಿಂದ ಯಾರೂ ಉತ್ತರಿಸಲಿಲ್ಲ. ಅನುಮಾಗೊಂಡು ಬಾಗಿಲು ಒಡೆದು ನೋಡಿದಾಗ ಭಯಾನಕ ದೃಶ್ಯ ಕಂಡು ಬಂದಿದೆ.

ಮನೆಯಲ್ಲಿ ಇಬ್ಬರ ಶವ ಪತ್ತೆ..!

ಮಲಗುವ ಕೋಣೆಯಲ್ಲಿ ಮಮತಾ ನೇಣು ಹಾಕಿಕೊಂಡಿದ್ದರೆ, ರಕ್ತದ ಕಲೆಗಳೊಂದಿಗೆ ಜಯಮ್ಮ ನೆಲದ ಮೇಲೆ ಶವವಾಗಿ ಬಿದ್ದಿದ್ದರು. ಕೂಡಲೇ ಪೊಲೀಸರಿಂದ ಮಾಹಿತಿ ನೀಡಲಾಯಿತು. ಜಯಮ್ಮ ಅವರ ಮುಖ ಮತ್ತು ತಲೆಯ ಮೇಲೆ ಮೊಂಡಾದ ವಸ್ತುವಿನಿಂದ ಹೊಡೆದಿದ್ದು, ಅಪಾರ ರಕ್ತಸ್ರಾವ ಸಾವನ್ನಪ್ಪಿದ್ದಾರೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಮೊಮ್ಮಗಳು ಮಮತಾ, ಅಜ್ಜಿಯನ್ನು ಕೊಲ್ಲಲು ಯಾವುದೇ ಕಾರಣವಿಲ್ಲ. ಆತ್ಮಹತ್ಯೆಗೆ ಮುಂದಾಗಿದ್ದ ಮೊಮ್ಮಗಳನ್ನು ತಡೆಯಲು ಬಂದಾಗ ಘಟನೆ ನಡೆದಿರಬಹುದು. ಆಕಸ್ಮಿಕವಾಗಿ ಅಜ್ಜಿಯನ್ನು ಕೊಂದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Mother Murder: ತಾಯಿಯ ಕಪಾಳಕ್ಕೆ ಹೊಡೆದು ಕೊಂದ ಪಾಪಿ ಪುತ್ರ! ಕಾರಣ ಕೇಳಿದ್ರೆ ನೀವು ಶಾಕ್ ಆಗ್ತೀರಿ

ಆಕಸ್ಮಿಕವಾಗಿ ಕೊಂದಿರುವ ಶಂಕೆ

ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ವೃದ್ಧೆಯನ್ನು ಮೊಂಡಾದ ವಸ್ತುವಿನಿಂದ ಹೊಡೆದು ಸಾಯಿಸಿದ್ದಾರೆ ಎಂದು ವರದಿ ನೀಡಿದ್ದಾರೆ. ಅಜ್ಜಿ, ಮೊಮ್ಮಗಳು ಯಾವುದೋ ವಿಷಯಕ್ಕೆ ಜಗಳವಾಡಿದ್ದಾರೆ. ಮಮತಾ ವೃದ್ಧೆಗೆ ಕೋಪದಲ್ಲಿ ಹೊಡೆದಿರಬಹುದು ಎಂದು ಪೊಲೀಸರು ಈಗ ಊಹಿಸಿದ್ದಾರೆ. ಜಯಮ್ಮ ತೀವ್ರವಾಗಿ ರಕ್ತಸ್ರಾವವಾಗುವುದನ್ನು ನೋಡಿ ಗಾಬರಿಗೊಂಡ ಮಮತಾ ಆಕೆಯನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಜಯಮ್ಮ ಉಸಿರಾಡುತ್ತಿಲ್ಲ ಎಂದು ಗೊತ್ತಾಗುತ್ತಿದಂತೆ ಗಾಬರಿಗೊಂಡ ಮಮತಾ ಅವರು ಹತಾಶೆಯಿಂದ ನೇಣು ಬಿಗಿದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಖಿನ್ನತೆಗೊಳಗಾಗಿದ್ದ ಬಾಣಂತಿ

ಅಪರಾಧ ನಡೆದ ಸ್ಥಳವನ್ನು ಪರಿಶೀಲಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಮತಾಗೆ ಅಜ್ಜಿಯನ್ನು ಕೊಲ್ಲುವ ಉದ್ದೇಶ ಇದ್ದಂತೆ ಕಾಣುತ್ತಿಲ್ಲ ಎಂದರು. ಮಮತಾ ಮತ್ತು ಮಂಜುನಾಥ್ ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರು. ಅವರು ಮೂರೂವರೆ ತಿಂಗಳ ಮಗು ಇತ್ತೀಚೆಗೆ ಮೃತಪಟ್ಟಿತ್ತು. ಅಂದಿನಿಂದ ಮಮತಾ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದೆ. ಜ್ಞಾನಭಾರತಿ ಪೊಲೀಸರು ಕೊಲೆ ಮತ್ತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Published by:Kavya V
First published: