• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಯಾರಿವನು ಹ್ಯಾಕರ್ ಶ್ರೀಕಿ? Bitcoin ದಂಧೆ ಮಾಸ್ಟರ್​​ಮೈಂಡ್​​ Hacker Sriki ಇತಿಹಾಸ ಹೇಳಿದ್ರೆ ದಂಗಾಗಿ ಹೋಗ್ತೀರ!

ಯಾರಿವನು ಹ್ಯಾಕರ್ ಶ್ರೀಕಿ? Bitcoin ದಂಧೆ ಮಾಸ್ಟರ್​​ಮೈಂಡ್​​ Hacker Sriki ಇತಿಹಾಸ ಹೇಳಿದ್ರೆ ದಂಗಾಗಿ ಹೋಗ್ತೀರ!

ಹ್ಯಾಕರ್ ಶ್ರೀಕಿ

ಹ್ಯಾಕರ್ ಶ್ರೀಕಿ

story of hacker sriki: 4ನೇ ತರಗತಿಯಲ್ಲಿ ಇರುವಾಗಲೇ ಶ್ರೀಕಿ ಹ್ಯಾಕರ್​ಗಳ ಗುಂಪಿನ ಸದಸ್ಯನಾಗಿದ್ದ. ಬಾಲ್ಯದಲ್ಲೇ ಈತನ ಅಂತರ್ಜಾಲ ಕಳ್ಳಾಟ ಶುರುವಾಗಿದೆ. ದೇಶ ವಿದೇಶಗಳನ್ನ ಸುತ್ತಿದ್ದ ಶ್ರೀಕಿ 2015ರಲ್ಲಿ ಭಾರತಕ್ಕೆ ಮರಳಿರುತ್ತಾರೆ. ಭಾರತಕ್ಕೆ ಬರುವ ಮುಂಚೆ ನೆದರ್‌ ಲ್ಯಾಂಡ್ಸ್ ನಲ್ಲಿ ನೆಲೆಸಿದ್ದ.

ಮುಂದೆ ಓದಿ ...
  • Share this:

ಬೆಂಗಳೂರು: ಸದ್ಯ ರಾಜ್ಯ ರಾಜಕಾರಣದಲ್ಲಿ (karnataka politics) ಜೋರಾಗಿ ಕೇಳಿ ಬರುತ್ತಿರುವ ಪದ (Bitcoin ) ಬಿಟ್​​ಕಾಯಿನ್​ ಬಿಟ್​ಕಾಯಿನ್​ ಬಿಟ್​ಕಾಯಿನ್​. ರಾಜಕಾರಣಿಗಳ ಮಧ್ಯೆ ಮಧ್ಯೆ ಆರೋಪ ಪ್ರತ್ಯಾರೋಪಗಳಿಗೆ ಎಡೆ ಮಾಡಿಕೊಟ್ಟಿರುವ ಬಿಟ್​​ಕಾಯಿನ್​ ದಂಧೆ ದಿನೇ ದಿನೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಬಿಟ್​ಕಾಯಿನ್​​ ದಂಧೆ ಜೊತೆ ಕೇಳಿ ಬರುತ್ತಿರುವ ಹೆಸರೇ ಹ್ಯಾಕರ್​ ಶ್ರೀಕಿ (​Hacker Sriki)ಅಲಿಯಾಸ್​ ಶ್ರೀಕೃಷ್ಣ. ಮೊನ್ನೆಯಷ್ಟೇ ಹೋಟೆಲ್​​ನಲ್ಲಿ ಜಗಳ ಮಾಡಿಕೊಂಡು ಅರೆಸ್ಟ್​​ ಆಗಿದ್ದ ಶ್ರೀಕಿ ನಿನ್ನೆ ರಿಲೀಸ್​ ಆಗಿದ್ದಾನೆ. ಮಾಧ್ಯಮಗಳ ಮುಂದೆ ನಂಗೇನು ಗೊತ್ತಿಲ್ಲ, ನಾನೇನು ಮಾಡಿಲ್ಲ ಎಂದು ಹುಸಿನಗೆಯಲ್ಲಿ ಹೇಳಿದ್ದಾನೆ. ಕಾಣುವಷ್ಟು ಸುಲಭವಲ್ಲಿ ಈ ಇಂಟರ್​ ನ್ಯಾಷನಲ್​ ಹ್ಯಾಕರ್ (International Hacker)​. ಈತನ ಹಿನ್ನೆಲೆ ಕೇಳಿದ್ರೆ ಎಂಥವರೂ ದಂಗಾಗಿ ಹೋಗುತ್ತಾರೆ.


4ನೇ ತರಗತಿಯಲ್ಲೇ ಹ್ಯಾಕಿಂಗ್​​ನಲ್ಲಿ ಆಸಕ್ತಿ


ಕನ್ನಡದ ಹುಡುಗ ಶ್ರೀಕಿ ಬಾಲ್ಯದಲ್ಲೇ ಬುದ್ಧಿವಂತ, ಆದರೆ ಈತನ ಬುದ್ಧಿವಂತಿಕೆ ಖರ್ಚಾಗಿದ್ದೆಲ್ಲಾ ಕಾನೂನು ಬಾಹಿರ ಕೆಲಸಗಳಿಗೇನೆ. 4ನೇ ತರಗತಿಯಲ್ಲಿ ಇರುವಾಗಲೇ ಶ್ರೀಕಿ ಹ್ಯಾಕರ್​ಗಳ ಗುಂಪಿನ ಸದಸ್ಯನಾಗಿದ್ದ. ಬಾಲ್ಯದಲ್ಲೇ ಈತನ ಅಂತರ್ಜಾಲ ಕಳ್ಳಾಟ ಶುರುವಾಗಿದೆ. ದೇಶ ವಿದೇಶಗಳನ್ನ ಸುತ್ತಿದ್ದ ಶ್ರೀಕಿ 2015ರಲ್ಲಿ ಭಾರತಕ್ಕೆ ಮರಳಿರುತ್ತಾರೆ. ಭಾರತಕ್ಕೆ ಬರುವ ಮುಂಚೆ ನೆದರ್‌ ಲ್ಯಾಂಡ್ಸ್ ನಲ್ಲಿ ನೆಲೆಸಿದ್ದ. ಇನ್ನೂ ನೆದರ್‌ಲ್ಯಾಂಡ್ಸ್‌ನಲ್ಲಿ ಶ್ರೀಕಿ ಜೊತೆಯಲ್ಲಿ ಇದ್ದ  ಡ್ರೈವರ್ ವಾಲಿದ್ದ್  ಶ್ರೀಕಿ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿ ಹಾಕಿಕೊಂಡಿದ್ದ. ಮನೆಯಲ್ಲಿದ್ದ 2 ಲ್ಯಾಪ್ ಟಾಪ್, 2 ಫೋನ್ ಗಳು ಹಾಗೂ ಪಾಸ್‌ಪೋರ್ಟ್ ಗಳನ್ನು ಕಳ್ಳತನ ಮಾಡಿದ್ದ ಡ್ರೈವರ್ ವಾಲಿದ್ದ್.


ಹಲವು ದೇಶಗಳನ್ನು ಸುತ್ತಿರುವ ಶ್ರೀಕಿ


ಶ್ರೀಕಿ ಅಕೌಂಟ್ ನಲ್ಲಿ ಸುಮಾರು 3 ಮಿಲಿಯನ್ ಬಿಟ್ ಕಾಯಿನ್ ಕರೆನ್ಸಿಗಳು ಸಹ ಇದ್ದವು. ಶ್ರೀಕಿ ಲ್ಯಾಪ್ ಟಾಪ್ ಕಳ್ಳತನ ಆಗಿರುವುದರಿಂದ ಅಕೌಂಟ್ ನಲ್ಲಿ ಇದ್ದ ಕರೆನ್ಸಿಗಳು ಎಲ್ಲವೂ ಸ್ಟಾಕ್‌ ಆಗಿರುತ್ತದೆ. ಶ್ರೀಕೃಷ್ಣ ಮತ್ತೆ ಹಳೆಯ ಸ್ನೇಹಿತರನ್ನು ಹುಡುಕಿಕೊಂಡು ಫ್ರಾನ್ಸ್, ಜರ್ಮನಿ ಸೇರಿದಂತೆ ಇನ್ನೂ ಹಲವು ದೇಶವನ್ನು ಸುತ್ತುತ್ತಾನೆ. ಅಲ್ಲಿ ಯಾವುದೇ ರೀತಿಯ ಪ್ರಯೋಜನವಾಗದೆ 2015ಕ್ಕೆ ಭಾರತಕ್ಕೆ ಹಿಂದಿರುಗುತ್ತಾನೆ ಶ್ರೀಕೃಷ್ಣ.\


ಇದನ್ನೂ ಓದಿ: Bitcoin ಹಗರಣದ ಬಗ್ಗೆ​ ಅವರೇಕೆ ಕೇಳುತ್ತಾರೆ; ಡಿಸೆಂಬರ್​ಗೆ ಬೆಂಗಳೂರಿಗೆ ಪ್ರಧಾನಿ: ಸಿಎಂ ಬೊಮ್ಮಾಯಿ


ಬಿಟ್​​ಕಾಯಿನ್​ಗಾಗಿಯೇ ಕಫೆಯಲ್ಲಿ ನಡೆಯಿತು ಗಲಾಟೆ


2015ರಲ್ಲಿ ಭಾರತಕ್ಕೆ ಬಂದ ನಂತರ ಮನೀಶ್ ಎಂಬ ಯುವಕನ ಪರಿಚಯವಾಗುತ್ತದೆ. ಮನೀಶ್ ಮುಖಾಂತರ ಉಮರ್ ನಲ್​​ಪಾಡ್​​ ಪರಿಚಯವಾಗುತ್ತದೆ. ಮನೀಶ್ ಹಾಗೂ ಉಮರ್ ನಲ್​ಪಾಡ್​​ ಇಬ್ಬರು ಒಂದೇ ಕ್ಲಾಸ್ ನಲ್ಲಿ ವ್ಯಾಸಂಗ ಮಾಡಿರುತ್ತಾರೆ. ಮೂರು ವರ್ಷಗಳ ಕಾಲ ಶ್ರೀಕೃಷ್ಣ ,ಉಮರ್,ಮನೀಶ್ ಜೊತೆಯಲ್ಲಿ ಇರುತ್ತಾರೆ. 2018ರಲ್ಲಿ ಫರ್ಜಿ ಕೆಫೆಯಲ್ಲಿ ಗಲಾಟೆ ಆಗುವುದು ಸಹ ಇದೆ ಬಿಟ್​​ಕಾಯಿನ್​​ಗಾಗಿ. ಕೆಫೆಯಲ್ಲಿ ಗಲಾಟೆ ಆದ ನಂತರದಲ್ಲಿ ಶ್ರೀಕೃಷ್ಣಗೆ ಸುನೀಶ್ ಹೆಗಡೆ ಹಾಗೂ ಪ್ರಶೀದ್ ಶೆಟ್ಟಿ ಪರಿಚಯವಾಗುತ್ತದೆ.


ಬಾಲ್ಯ-ಓದು-ಹಿಮಾಲಯ ವಾಸ   


ಶ್ರೀಕೃಷ್ಣ 10ನೇ ತರಗತಿಯಲ್ಲಿ ಇರುವಾಗಲೇ ಸಾವಿರಾರು ಬಿಟ್​​ಕಾಯಿನ್​ಗಳನ್ನು ಹ್ಯಾಕ್ ಮಾಡಿದ್ದ. ಶ್ರೀಕೃಷ್ಣ ಶಾಲೆ ಯಲ್ಲಿ ವ್ಯಾಸಂಗ ಮಾಡುವಾಗಲೇ ಶೇನ್ ಎಂಬ ವಿದ್ಯಾರ್ಥಿ ಸಹ ಪರಿಚಯವಾಗಿದ್ದು ಇಬ್ಬರು ಜೊತೆಯಲ್ಲಿ ಕೋಡ್ ವರ್ಡ್ ಗಳನ್ನು ಕಲಿತಿದ್ದಾರೆ. ಬೆಂಗಳೂರಿನ ಜೈನ್ ಕಾಲೇಜ್ ನಲ್ಲಿ PCMC ವ್ಯಾಸಂಗ ಮಾಡಿರುತ್ತಾನೆ. ಶ್ರೀಕೃಷ್ಣ  2nd PUC ವ್ಯಾಸಂಗ ಮಾಡುತ್ತಿರುವಾಗಲೇ ಕ್ರಿಪ್ಟೋ ಕರೆನ್ಸಿ ಬಗ್ಗೆ ಕಲಿತಿದ್ದಾನೆ. ಶ್ರೀಕೃಷ್ಣ 17ನೇ ವರ್ಷಕ್ಕೆ ನನ್ನ ಫ್ರೆಂಡ್ ರಿತ್ವಿಕ್ ಜೊತೆ ಹಿಮಾಲಯಕ್ಕೆ ಸಹ ತೆರಳಿದ್ದಾನೆ. ಹಿಮಾಲಯದಲ್ಲಿರುವ ಬದ್ರಿನಾಥ್ ನಲ್ಲಿ ಸುಮಾರು ತಿಂಗಳುಗಳು ನೆಲೆಸಿದ್ದಾರೆ. ರಿತ್ವಿಕ್ ತಾಯಿಂದ ಸಿದ್ದಾಪುರ ಹಾಗೂ ತಿಲಕ್​​ನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಸಹ ದಾಖಲಾಗಿದೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು