• Home
 • »
 • News
 • »
 • state
 • »
 • ಬೆಂಗಳೂರಿನಲ್ಲಿ ಆರಂಭವಾಗಿರುವ ಈ ಹೊಸ ಹೋಟೆಲ್​ಗಳಿಗೆ ನೀವು ಹೋಗಲೇಬೇಕು, ರುಚಿ ಅಷ್ಟು ಚೆನ್ನಾಗಿದೆ

ಬೆಂಗಳೂರಿನಲ್ಲಿ ಆರಂಭವಾಗಿರುವ ಈ ಹೊಸ ಹೋಟೆಲ್​ಗಳಿಗೆ ನೀವು ಹೋಗಲೇಬೇಕು, ರುಚಿ ಅಷ್ಟು ಚೆನ್ನಾಗಿದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Best and Hottest restaurants in Bangalore: ಕಳೆದ ಹಲವು ತಿಂಗಳುಗಳಿಂದ ಆತಿಥ್ಯ ಉದ್ಯಮದಲ್ಲಿ ಭಾರಿ ಸಂಕಷ್ಟಗಳ ಹೊರತಾಗಿಯೂ, ಅಸಾಧಾರಣವಾದ ಹೊಸ ರೆಸ್ಟೋರೆಂಟ್‌ಗಳು ಬೆಂಗಳೂರಿನಾದ್ಯಂತ ತೆರೆದಿವೆ

 • Share this:

  ಕೊರೊನಾ ವೈರಸ್‌, ಲಾಕ್‌ಡೌನ್‌, ಸಾಮಾಜಿಕ ಅಂತರ ಅಂತ ಕಳೆದ ಒಂದು - ಒಂದೂವರೆ ವರ್ಷಗಳಿಂದ ಜನ ಹೋಟೆಲ್‌ಗೆ ಹೋಗೋದೇ ಕಡಿಮೆಯಾಗಿದೆ. ಈಗ ಕೊರೊನಾ ಕೇಸ್‌ಗಳು ಕಡಿಮೆಯಾಗಿರುವ ಹಿನ್ನೆಲೆ ಕುಟುಂಬ ಸಮೇತ ಅಥವಾ ಗೆಳೆಯರೊಂದಿಗೆ ಮತ್ತೆ ಹೊರಗೆ ಊಟ ಮಾಡುವುದನ್ನು ಬಯಸುತ್ತಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಆರಂಭವಾಗಿರುವ ಹೊಸ ಹೋಟೆಲ್‌ಗಳಲ್ಲಿ ರುಚಿ ಹೇಗಿರುತ್ತದೆಂದು ನೋಡಲು ಇಷ್ಟ ಪಡುತ್ತಾರೆ. ಇನ್ನು, ಕಳೆದ ಹಲವು ತಿಂಗಳುಗಳಿಂದ ಆತಿಥ್ಯ ಉದ್ಯಮದಲ್ಲಿ ಭಾರಿ ಸಂಕಷ್ಟಗಳ ಹೊರತಾಗಿಯೂ, ಅಸಾಧಾರಣವಾದ ಹೊಸ ರೆಸ್ಟೋರೆಂಟ್‌ಗಳು ಬೆಂಗಳೂರಿನಾದ್ಯಂತ ತೆರೆದಿವೆ. ಇವುಗಳಲ್ಲಿ ಆಕರ್ಷಕವಾದ ಪಿಜ್ಜೇರಿಯಾ ಸಹ ಸೇರಿದೆ. ನೀವೂ ಸಹ ಒಂದು ವರ್ಷದ ಬಳಿಕ ಬೆಂಗಳೂರಿನ ಯಾವುದಾದರೊಂದು ಹೊಸ, ಹಾಟೆಸ್ಟ್‌ ರೆಸ್ಟೋರೆಂಟ್‌ಗೆ ಹೋಗ್ಬೇಕು ಅಂದರೆ 8 ಹೊಸ ತಾಣಗಳು ಇಲ್ಲಿವೆ ನೋಡಿ..


  1.Farmlore (ಫಾರ್ಮ್‌ಲೋರ್‌):
  ಬಾಗಲೂರಿನ ಸಾತನೂರು ಹಳ್ಳಿಯಲ್ಲಿರುವ 37-ಎಕರೆ ಜಮೀನಿನಲ್ಲಿರುವ ಈ ರೆಸ್ಟೋರೆಂಟ್‌ನಲ್ಲಿ ಲೋಕವೋರ್‌ ಅಂದರೆ ಸ್ಥಳೀಯವಾಗಿ ಬೆಳೆಯುವ ಆಹಾರವು ಪರಿಣತಿ ಪಡೆದಿದೆ.


  ಜಾನ್ಸನ್ ಎಬೆನೆಜರ್, ಮೈಥ್ರೇಯಿ ಅಯ್ಯರ್‌ ಮತ್ತು ಅವಿನಾಶ್ ವಿಶಾಲ್ ಎಂಬ ಮೂರು ಬಾಣಸಿಗರು 10-ಕೋರ್ಸ್ ರುಚಿಯ ಮೆನು ಸಂಪೂರ್ಣವಾಗಿ ಸುಗ್ಗಿಯ-ಚಾಲಿತವಾಗಿದ್ದು ಮತ್ತು ಬಹುತೇಕ ಪ್ರತಿದಿನ ಬದಲಾಗುತ್ತದೆ.


  ಬೆಣ್ಣೆ ಮತ್ತು ಐಸ್ ಕ್ರೀಮ್‌ಗಳನ್ನು ಸ್ಥಳೀಯ ಹಳ್ಳಿಕಾರ್ ಹಸುಗಳಿಂದ ಹಾಲನ್ನು ಬಳಸಿ ತಯಾರಿಸಲಾಗುತ್ತದೆ, ಮತ್ತು ಸಂಪೂರ್ಣ ಆಹಾರವನ್ನು ಬೃಹತ್ ಮರದ ಒಲೆಯಲ್ಲಿ ಅಥವಾ ಪಿಟ್-ಸ್ಟೌವ್‌ನಲ್ಲಿ ಬೇಯಿಸಲಾಗುತ್ತದೆ.


  ಟಾರ್ಟ್ ಮತ್ತು ಕೊಂಬುಚಾ ಎಂಬ ಪಾನೀಯ ಊಟದ ಆರಂಭವನ್ನು ಸೂಚಿಸಿದರೆ, ಮಲಬಾರ್ ಆಯಿಸ್ಟರ್ಸ್‌, ಬನ್ನೂರ್‌ ಬನ್‌ ಬ್ರೋಥ್‌, ಹುರುಳಿ ಕಾಳು ಮತ್ತು ಮಾಪಿಳ್ಳೈ ಸಾಂಬಾ ಹಾಗೂ ಮಾವಿನ ಚೀಸ್ ಅನ್ನು ಈ ರುಚಿಕರವಾದ ಆಹಾರದಲ್ಲಿ ನೀಡಲಾಗುತ್ತದೆ.
  ಅಂದ ಹಾಗೆ, ಈ ಊಟದ ಬೆಲೆ ಎಷ್ಟು ಅಂತೀರಾ..? ಪ್ರತಿ ವ್ಯಕ್ತಿಗೆ 5,000 ರೂ. ಇನ್ನು, ಹೋಟೆಲ್‌ನ ವಿಳಾಸ: ಸರ್ವೇ ನಂಬರ್ 67, ಸಾತನೂರು ಗ್ರಾಮ, ಉತ್ತರಹಳ್ಳಿ ಹೋಬಳಿ, ಬೆಂಗಳೂರು. ನೀವು ಮೊದಲೇ ಬುಕ್‌ ಮಾಡುವುದಾದರೆ,+91 98845 79214ನಂಬರ್‌ಗೆ ಕರೆ ಮಾಡಿ ಟೇಬಲ್‌ ಬುಕ್‌ ಮಾಡಬಹುದಾಗಿದೆ.


  K-OS GameBar (ಕೆ-ಓಎಸ್‌ ಗೇಮ್‌ಬಾರ್‌):
  ಊಟದ ಜತೆಗೆ ಡಾರ್ಟಿಂಗ್‌ ಇದ್ದರೆ ಇಷ್ಟವಾಗುತ್ತದಾ..? ಹಾಗಿದ್ದರೆ, ಬೆಂಗಳೂರಿನ ಕೋರಮಂಗಲದಲ್ಲಿರುವ ಈ ಗೇಮ್‌ ಬಾರ್‌10 ಡಾರ್ಟ್ ಲೇನ್‌ಗಳನ್ನು ಹೊಂದಿದೆ. ಹೆಚ್ಚುವರಿಯಾಗಿ, ಹೊರಾಂಗಣ ವಿಭಾಗದಲ್ಲಿ ಪಾರ್ಟಿ ಗೇಮ್‌ಗಳ ಸಂಗ್ರಹವಿದೆ. ಫ್ರೈಸ್‌, ನ್ಯಾಚೋಸ್‌, ಸಟಾಯ್ಸ್‌ ಹಾಗೂ ಸ್ಲೈಡರ್‌ಗಳು ಇರುತ್ತವೆ. ಪಿಜ್ಜಾ, ಕ್ರೀಮಿ ಪಾಸ್ತಾ ಸಹ ಲಭ್ಯವಿದೆ. ಚೀಸ್‌ಕೇಕ್‌ ಹಾಗೂ ಮೌಸೆಸ್‌ ಕೂಡ ಇವೆ.


  ಬೆಲೆ: 1,800 ರೂ. ನಿಂದ ಆರಂಭ (ಆಟಗಳು ಮತ್ತು ಆಹಾರ ಒಳಗೊಂಡಿದೆ). ಈ ಹೋಟೆಲ್‌ ಕೋರಮಂಗಲದ 80 ಅಡಿ ರಸ್ತೆಯಲ್ಲಿದೆ. ಫೆನ್ನಿಸ್‌ /ಸ್ಟಾರ್‌ಬಕ್ಸ್‌ ಕಟ್ಟಡದಲ್ಲೇ ಇದೆ. ಟೇಬಲ್‌ ಬುಕ್‌ ಮಾಡಲು+91 99721 04540ಗೆ ಕರೆ ಮಾಡಿ.


  3. The Old Madras Baking Company (ದಿ ಓಲ್ಡ್‌ ಮದ್ರಾಸ್‌ ಬೇಕಿಂಗ್‌ ಕಂಪನಿ):
  ಈ ಜಾಗ ಚಿಕ್ಕದಾಗಿದ್ದರೂ, ಮೆನು ಚಿಕ್ಕದಾಗೇನೂ ಇಲ್ಲ. ಈ ಜಾಗಕ್ಕೆ ಕಾಲಿಡುತ್ತಿದ್ದಂತೆ ಆಗತಾನೇ ಬೇಕ್‌ ಮಾಡಿದಬ್ರೆಡ್‌ನ ವಿಶಿಷ್ಟ ಪರಿಮಳವು ನಿಮ್ಮ ಮೂಗಿಗೆ ಬಡಿಯುತ್ತದೆ.


  ಹೊಸದಾಗಿ ಬೇಯಿಸಿದ ಬೆಚ್ಚಗಿನ ಬ್ರೆಡ್‌ನ ವಿಶಿಷ್ಟ ಪರಿಮಳವು ನಿಮ್ಮನ್ನು ತಟ್ಟುತ್ತದೆ. ಬ್ರೆಡ್‌ ಜತೆಗೆ, ಬ್ರಿಯೊಚೆಸ್, ಬಟ್ಟರಿ ಕ್ರೊಸೆಂಟ್ಸ್ ಮತ್ತು ಬೆಚ್ಚಗಿನ ಡ್ಯಾನಿಶ್ ಪೇಸ್ಟ್ರಿಗಳು ಕೂಡ ಮೆನುವಿನಲ್ಲಿದೆ. ಸ್ಯಾಂಡ್‌ವಿಚ್‌ಗಳು ಕೂಡ ಲಭ್ಯವಿದೆ. ಮೆನುವಿನ ಪ್ರಮುಖ ಅಂಶವೆಂದರೆ ಕೋಕೋನಟ್‌ ಬನ್‌, ಕೋಕೋನಟ್‌ ಶೇವಿಂಗ್ಸ್‌ಗಳಿಂದ ತುಂಬಿದೆ. ಇಬ್ಬರಿಗೆ 300-400 ರೂ. ಬೆಲೆ ಆಗುತ್ತದೆ. ಇನ್ನು, ಈ ಹೋಟೆಲ್‌ ಆರ್ ಕೆ ಪ್ಲಾಜಾ, ಸೈಟ್ ನಂ 5 ಎ, ಆರ್ ಎಂವಿ 2 ನೇ ಹಂತದ ಡಾಲರ್ಸ್ ಕಾಲೋನಿ, ಅಶ್ವಥ್ ನಗರ, ಹೊಸ ಬಿಇಎಲ್ ರಸ್ತೆ, ಬೆಂಗಳೂರಿನಲ್ಲಿದೆ. ಟೇಬಲ್‌ ಬುಕ್‌ ಮಾಡಲು +91 80234 12480ಗೆ ಕರೆ ಮಾಡಿ.


  4. Mahesh Lunch Home (ಮಹೇಶ್‌ ಲಂಚ್‌ ಹೋಂ):


  ದಕ್ಷಿಣ ಮುಂಬೈನ ಫೋರ್ಟ್‌ನಲ್ಲಿ ಒಂದು ಮಳಿಗೆಯೊಂದಿಗೆ ಆರಂಭವಾದ ಈ ಮಂಗಳೂರಿನ ರೆಸ್ಟೋರೆಂಟ್ ಭಾರತವಲ್ಲದೆ, ವಿದೇಶಗಳಲ್ಲೂ ರೆಸ್ಟೋರೆಂಟ್‌ಗಳ ಜಾಲವಾಗಿ ಬೆಳೆದಿದೆ. ಬೆಂಗಳೂರಿನಲ್ಲಿ ಇಂದಿರಾ ನಗರದಲ್ಲಿ ಈ ಹೋಟೆಲ್‌ ಆರಂಭವಾಗಿದೆ. ಅವರ ಎಲ್ಲಾ ರೆಸ್ಟೋರೆಂಟ್‌ಗಳಂತೆ, ಒಳಾಂಗಣಗಳು ಸಮುದ್ರ-ಮೀನು, ನೀರು, ಏಡಿ ಇತ್ಯಾದಿಗಳ ಕುರುಹುಗಳನ್ನು ಹೊಂದಿವೆ.


  ಇಲ್ಲಿ ತಿನ್ನಲು ಏಡಿ ಪ್ರಮುಖ ಆಯ್ಕೆ.ಸ್ಕ್ವಿಡ್ ಗೀ ರೋಸ್ಟ್‌, ಮಂಗಳೂರಿನ ಸುಕ್ಕಾ, ಕೋರಿ ರೊಟ್ಟಿ, ಪುಲಿಮುಂಚಿ ಮತ್ತು ಎವರ್‌ಗ್ರೀನ್‌ ಮಂಗಳೂರಿನ ಗಸ್ಸಿ ಅಥವಾ ಗ್ರೇವಿ, ನೀರ್ ದೋಸೆಯೊಂದಿಗೆ ನೀವು ಪ್ರಯತ್ನಿಸಬಹುದಾದ ಇತರ ಖಾದ್ಯಗಳು. ಬೆಲೆ: 2,000 ರೂ.
  ವಿಳಾಸ: 2011, 1 ನೇ ಮಹಡಿ, ಎಚ್‌ಎಎಲ್ 2 ನೇ ಹಂತ, ಇಂದಿರಾನಗರ, ಬೆಂಗಳೂರು
  ಬುಕ್ಕಿಂಗ್‌ಗಾಗಿ+91 74063 11101ಗೆ ಕರೆ ಮಾಡಿ.


  5. Brik Oven (ಬ್ರಿಕ್‌ ಓವನ್):
  ಇಲ್ಲಿನ ನಿಯಾಪೊಲಿಟನ್ ಪಿಜ್ಜಾವನ್ನು 24 ರಿಂದ 48 ಗಂಟೆಗಳ ಕಾಲ ಹುದುಗಿಸಿದ ಹುಳಿಯಿಂದ ತಯಾರಿಸಲಾಗುತ್ತದೆ. ನಂತರ ಇದನ್ನು ವುಡ್‌ ಫೈಯರ್ಡ್‌ ಓವನ್‌ನಲ್ಲಿ ಬೇಯಿಸಲಾಗುತ್ತದೆ ಮತ್ತು ಪ್ರತಿದಿನ ಬೆಳಗ್ಗೆ ಮಾಡುವ ತಾಜಾ ಮೊಝರೆಲ್ಲೊ ಚೀಸ್‌ನೊಂದಿಗೆ ಟಾಪಿಂಗ್‌ ಮಾಡಲಾಗುತ್ತದೆ. ಶ್ರೂಮ್ಸ್ ಪಿಜ್ಜಾ ಸಹ ಇಲ್ಲಿನ ಫೇವರಿಟ್‌.
  ಈ ರೆಸ್ಟೋರೆಂಟ್‌ನಲ್ಲಿ ಇಬ್ಬರಿಗೆ ಬೆಲೆ 950 ರೂ. ವಿಳಾಸ: ನೆಲ ಮಹಡಿ, ಸಂತೋಷ್ ಟವರ್, ವೈಟ್‌ಫೀಲ್ಡ್, ಬೆಂಗಳೂರು. ಬುಕ್ಕಿಂಗ್‌ಗಾಗಿ +91 80481 45609ಗೆ ಕರೆ ಮಾಡಿ.


  6. Biryani By Kilo (ಬಿರಿಯಾನಿ ಬೈ ಕಿಲೋ):
  ದಮ್- ಕುಕ್‌ ಮಾಡಿದ ಬಿರಿಯಾನಿ ತಿನ್ನಬೇಕೆನಿಸಿದರೆ ಕೋರಮಂಗಲದಲ್ಲಿರುವ ಈ ಔಟ್ಲೆಟ್‌ಗೆ ಹೋಗಬಹುದು. ಹೈದರಾಬಾದಿ ಬಿರಿಯಾನಿ, ಲಕ್ನೋ ಅಥವಾ ಕೋಲ್ಕತಾ ಬಿರಿಯಾನಿ ತಿನ್ನಬೇಕು ಎಂದರೂ ಇಲ್ಲಿಗೆ ಹೋಗಬಹುದು.


  ಸಸ್ಯಾಹಾರಿಗಳಿಗೆ ಕಥಲ್ (ಹಲಸಿನ ಹಣ್ಣು) ಬಿರಿಯಾನಿ ಇಲ್ಲಿನ ಫೇವರಿಟ್‌. ಎಲ್ಲಾ ಬಿರಿಯಾನಿಗಳನ್ನು ದಮ್‌ ಶೈಲಿಯಲ್ಲಿ ಮಾಡಲಾಗುತ್ತದೆ. ಯೋಗರ್ಟ್‌,ಗೋಡಂಬಿ ಪೇಸ್ಟ್ ಮತ್ತು ಹೊಸದಾಗಿ ರುಬ್ಬಿದ ಮಸಾಲೆಗಳೊಂದಿಗೆ ಮಾಡಿದ ಕುರ್ಮವನ್ನು ಮಿಸ್‌ ಮಾಡಬೇಡಿ. ಇಬ್ಬರಿಗೆ 700 ರೂ. ವೆಚ್ಚವಾಗುತ್ತದೆ. ವಿಳಾಸ: 1 ನೇ ಮಹಡಿ, 6 ನೇ ಕ್ರಾಸ್, ಕೋರಮಂಗಲ ಕ್ಲಬ್ ರಸ್ತೆ, 6 ನೇ ಬ್ಲಾಕ್, ಬೆಂಗಳೂರು. ಬುಕ್ಕಿಂಗ್‌ಗಾಗಿ+91 95552 12212ಗೆ ಕರೆ ಮಾಡಿ.


  7. Chowman (ಚೌಮನ್):
  ಕೋಲ್ಕತ್ತಾದ ಚೀನಾದ ಆಹಾರ ರೆಸ್ಟೋರೆಂಟ್‌ಗಳ ಈ ಜನಪ್ರಿಯ ಹೋಟೆಲ್‌ ಚೈನ್‌ ಬೆಂಗಳೂರಿನ ಕಲ್ಯಾಣ ನಗರದಲ್ಲಿ ಡೈನ್-ಇನ್ ಔಟ್ಲೆಟ್ ಆಗಿದೆ. ಕುಂಗ್ ಪಾವೊ ಚಿಕನ್, ರೋಸ್ಟೆಡ್‌ ಚಿಲ್ಲಿ ಪೋರ್ಕ್‌, ಸೀಸೇಮ್‌ ಪ್ರಾನ್‌ ಬಾಲ್ಸ್‌ ಹಾಗೂ ಸ್ಪೈಸಿ ಆರೆಂಜ್‌ ಚಿಕನ್ ಮುಂತಾದ ಮೆನುವನ್ನೂ ಹೊಂದಿದೆ. ಇಬ್ಬರಿಗೆ 1,200ರೂ. ವೆಚ್ಚವಾಗುತ್ತದೆ. ವಿಳಾಸ: 404 no -4 GM BBMP ಪೂರ್ವ, HRBR ಲೇಔಟ್ 2 ನೇ ಬ್ಲಾಕ್, ಕಲ್ಯಾಣ್ ನಗರ. ಈ ರೆಸ್ಟೋರೆಂಟ್‌ ಬುಕ್ಕಿಂಗ್‌ಗಾಗಿ+91 80415 21019ಗೆ ಕರೆ ಮಾಡಿ


  8)Geist Brewing Taproom (ಜೀಸ್ಟ್‌ ಬ್ರೀವಿಂಗ್‌ ಟ್ಯಾಪ್‌ರೂಮ್):
  ಬೆಂಗಳೂರಿಗರಿಗೆ ಹೆಚ್ಚು ಟ್ಯಾಪ್ ರೂಂಗಳು ಬೇಕೇ? ಅದೂ ಓರಿಯನ್‌ ಮಾಲ್‌ ಲೇಕ್‌ ಬಳಿಯ ರೆಸ್ಟೋರೆಂಟ್ ಮತ್ತು ಬಾರ್ ಬೈಟ್‌ಗಳ ಉತ್ತಮ ಆಯ್ಕೆ ಇದ್ದರೆ ಇನ್ನೂ ಚೆನ್ನಾಗಿರುತ್ತದಲ್ಲವೇ.. ಫ್ರೆಶ್‌ ಆಗಿ ತಯಾರಿಸಿದ ಬಿಯರ್‌ ಜತೆಗೆ ಪುಳಿಯೋಗರೆಕಾರ್ನ್ ಗ್ರಿಟ್ಸ್ ಮತ್ತು ಮಾವಿನ ಮೀನ್ ಮೊಯಿಲಿ ಉತ್ತಮವಾದ ಸೈಡ್‌ ಡಿಶ್‌ ಆಗಿದೆ. ಸನ್‌ರೂಫ್‌ ಮತ್ತು ಸಾಕಷ್ಟು ಗ್ರೀನ್‌ಗಳನ್ನು ಹೊಂದಿರುವ ತಂಗಾಳಿಯ ಸೆಟ್ಟಿಂಗ್ ಅನ್ನು ಉದ್ದೇಶಪೂರ್ವಕವಾಗಿ ಬೆಂಗಳೂರಿನ ಹವಾಮಾನ ಮತ್ತು ಕರಕುಶಲ ಬಿಯರ್ ಸಂಸ್ಕೃತಿ ಎಂಬ 2 ಉತ್ತಮ ಗುಣಲಕ್ಷಣಗಳಿಗಾಗಿ ವಿನ್ಯಾಸಗೊಳಿಸಲಾಗಿದೆ: ಇಬ್ಬರಿಗೆ ಅಂದಾಜು 2,000 ರೂ. ವೆಚ್ಚವಾಗುತ್ತದೆ. ವಿಳಾಸ: ಓರಿಯನ್ ಮಾಲ್, ರಾಜಾಜಿನಗರ, ಬೆಂಗಳೂರು
  ಇನ್ನು, ಈ ರೆಸ್ಟೋರೆಂಟ್‌ನಲ್ಲಿ ಟೇಬಲ್‌ ಬುಕ್‌ ಮಾಡಲು +91 88677 07102 ಗೆ ಕರೆ ಮಾಡಿ.

  Published by:Sharath Sharma Kalagaru
  First published: