B.C.Nagesh: ರಾಜ್ಯದಲ್ಲಿ ಶಾಲೆ ಆರಂಭ ಯಾವಾಗ? ಸುದ್ದಿಗೋಷ್ಠಿಯಲ್ಲಿ ಶಿಕ್ಷಣ ಸಚಿವರ ಮಾಹಿತಿ

ಇಂದು ಶಾಲೆಗಳನ್ನು ಪುನರಾರಂಭಿಸುವ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister B.C.Nagesh) ಮಾಹಿತಿ ನೀಡಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಶಿಕ್ಷಣ ಸಚಿವ ಬಿ.ಸಿ.ನಾಗೇಶ್

  • Share this:
ಕೊರೊನಾ ವೈರಸ್ ಮತ್ತು ಓಮೈಕ್ರಾನ್ (Corona Virus And Omicron) ಸಂಬಂಧ ಶಾಲೆಗಳನ್ನು (Schools) ಬಂದ್ ಮಾಡುವ ಕುರಿತು ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಗಳಿಗೆ ನೀಡಲಾಗಿದೆ. ಅಂತೆಯೇ ರಾಜ್ಯದಲ್ಲಿ ತಾಲೂಕುವಾರು ಶಾಲೆಗಳನ್ನು ಬಂದ್ ಮಾಡಲಾಗಿದೆ. ಇತ್ತ ಬೆಂಗಳೂರಿನಲ್ಲಿ (Bengaluru School) ಜನವರಿ 31 ರವರೆಗೆ 1 ರಿಂದ 9ನೇ ತರಗತಿಗಳನ್ನು ಬಂದ್ ಮಾಡಿ, ಆನ್ ಲೈನ್ ಕ್ಲಾಸ್ (Online Class) ಗೆ ಉತ್ತೇಜನ ನೀಡಲಾಗಿದೆ. ಇಂದು ಶಾಲೆಗಳನ್ನು ಪುನರಾರಂಭಿಸುವ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ (Education Minister B.C.Nagesh) ಮಾಹಿತಿ ನೀಡಿದರು.

ಮೂರು ಡಿಜಿಟ್ ಇದ್ದ ಪಾಸಿಟಿವ್ ಪ್ರಕರಣಗಳ ಸಂಖ್ಯೆ ನಾಲ್ಕು ಡಿಜಿಟ್ ಆಗಿದೆ. ಇಲ್ಲಿಯವರೆಗೂ ಮಕ್ಕಳ ಮೇಲೆ ‌ಗಂಭೀರ ಪರಿಣಾಮ ಬೀರಿಲ್ಲ. ಅನೇಕ ‌ಶಾಲೆಗಳಲ್ಲಿ ಪೂರ್ಣ ಪರೀಕ್ಷೆ ಮಾಡಿಸಲಾಗಿದೆ. ಮಕ್ಕಳಲ್ಲಿ ಕಲಿಯಬೇಕು ಎನ್ನುವ ಆಸಕ್ತಿ ಇದೆ. ನಾಳೆ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಮಹಾನಗರಗಳಲ್ಲೂ ಶಾಲೆ ಆರಂಭಿಸಲಾಗುವುದು ಎಂದು ಸಚಿವರು ಹೇಳಿದರು.

ಶಾಲೆಗಳಲ್ಲಿ ಶೇ.80ರಷ್ಟು ಪಠ್ಯ ಪೂರ್ಣ

ತಾಂತ್ರಿಕ ಸಭೆ ಅನುಮತಿ ನೀಡಿದರೆ ಶಾಲೆ ಆರಂಭ ಮಾಡಲಾಗುವುದು. ಈವರೆಗೂ ಕೋವಿಡ್ ಮಕ್ಕಳ ಮೇಲೆ ಬೇರೆ ರೀತಿಯ ಪರಿಣಾಮ ಬೀರಿಲ್ಲ.  ತಾಂತ್ರಿಕ ಸಲಹಾ ಸಮಿತಿ ಮುಂದೆ ಕೂಡ ನಾವು ಶಾಲೆಗಳ ಸ್ಥಿತಿಗತಿ ಬಗ್ಗೆ ವಿವರ ನೀಡುತ್ತೇವೆ. ಈಗಾಗಲೇ ಶಾಲೆಗಳಲ್ಲಿ ಶೇ.80ರಷ್ಟು ಪಠ್ಯವನ್ನು ಪೂರ್ಣಗೊಳಸಲಾಗಿದೆ.

ಇದನ್ನೂ ಓದಿ:  Nalapad​ ಮೇಲೆ ಹತ್ಯೆ ಪ್ರಯತ್ನ ಆರೋಪ, ಅದೆಲ್ಲಾ ಸುಳ್ಳು, ಅಲ್ಲೇನೂ ನಡೆದೇ ಇಲ್ಲ ಎಂದ ಬಳ್ಳಾರಿ ಕಾಂಗ್ರೆಸ್ ಯುವ​ ಅಧ್ಯಕ್ಷ ಸಿದ್ದು

ಶಾಲೆ ಆರಂಭದ ಸುಳಿವು ನೀಡಿದ ಸಚಿವರು!

ಮಕ್ಕಳ ಪಾಸಿಟಿವಿಟಿ ರೇಟ್ ಕೂಡ ವಿಶ್ಲೇಷನೆ ಮಾಡಲಾಗಿದೆ. 0 ರಿಂದ 5 ವರ್ಷದ ಮಕ್ಕಳಲ್ಲಿ ಪಾಸಿಟಿವಿಟಿ ಇದೆ. ಆದರೆ ಎಸ್ಎಸ್ಎಲ್ ಸಿ ಮತ್ತು ಪಿಯುಸಿ ಮಕ್ಕಳಿಗೆ ಸಮಸ್ಯೆ ಕಾಣಿಸಿಕೊಂಡಿಲ್ಲ. ನಾವು ಶೈಕ್ಷಣಿಕ ದೃಷ್ಟಿಯಿಂದ ನೋಡಿದರೆ ಶಾಲೆಗಳನ್ನು ತೆರೆಯಬಹುದು ಎಂದು ಹೇಳುವ ಶಾಲೆ ಆರಂಭದ ಸುಳಿವು ನೀಡಿದರು.

ಸಿಎಂ ಹತ್ತಿರ ಎಲ್ಲ ತರದ ಮಾಹಿತಿ ಇರತ್ತೆ, ವೀಕೆಂಡ್ ಕರ್ಫ್ಯೂ ಬೇಕೋ ಬೇಡವೋ ಅವರೇ ನಿರ್ಧರಿಸುತ್ತಾರೆ. 1 ರಿಂದ 10 ನೇ ತರಗತಿಯಲ್ಲಿ ನಿನ್ನೆ 1,250 ಮಕ್ಕಳಿಗೆ ಕೊರೊನಾ ಸೋಂಕು ತಗುಲಿದ್ದು, ಸದ್ಯ 6,752 ಸಕ್ರಿಯ ಪ್ರಕರಣಗಳಿವೆ. ಬುಧವಾರ ಪಿಯುಸಿಯ 166 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದ್ದು, 892 ಸಕ್ರಿಯ ಪ್ರಕರಣಗಳಿವೆ.

48 ಸಾವಿರ ಶಾಲೆಗಳ ಪೈಕಿ ಇದುವರೆಗೂ 146 ಶಾಲೆಗಳು ಕ್ಲೋಸ್ ಆಗಿವೆ. ಹಾವೇರಿ, ಗುಲಬರ್ಗಾ, ರಾಯಚೂರು, ಬೀದರ್, ಮಧುಗಿರಿ ಜಿಲ್ಲೆಗಳಲ್ಲಿ ಒಂದೇ ಒಂದು ಶಾಲೆ ಕ್ಲೋಸ್ ಆಗಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:  Bengaluru Airport: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ!

ಯಾವ ಜಿಲ್ಲೆಯಲ್ಲಿ ಎಷ್ಟು ಶಾಲೆಗಳು ಬಂದ್ ಆಗಿವೆ?

ಕೋಲಾರ 2, ತುಮಕೂರು 32, ಚಿತ್ರದುರ್ಗ 6, ಶಿರಸಿ 2, ಚಾಮರಾಜನಗರ 2, ಕೊಡಗು 2, ಬಾಗಲಕೋಟ 1, ಚಿಕ್ಕಮಗಳೂರು 7,  , ಕೊಪ್ಪಳ 2, ಮಂಡ್ಯ 13, ಬೆಳಗಾವಿ 2,  ಚಿಕ್ಕೋಡಿ 3, ಬಿಜಾಪುರ 3, ಗದಗ 1, ಬೆಂಗಳೂರು ಗ್ರಾಮಾಂತರ 14, ಉಡುಪಿ 8, , ರಾಮನಗರ 4,  ಚಿಕ್ಕಬಳ್ಳಾಪುರ 11

ಯಾವ ಮಕ್ಕಳಲ್ಲಿ ಎಷ್ಟಿದೆ ಪಾಸಿಟಿವಿಟಿ ರೇಟ್?

>> 0-5 ವರ್ಷದ ಮಕ್ಕಳು 1.87% ಮಕ್ಕಳಿಗೆ ಪಾಸಿಟಿವ್ ರೇಟ್

>> 6-15 ವರ್ಷದ ಮಕ್ಕಳು 1.30% ಪಾಸಿಟಿವ್ ರೇಟ್

>> 16-20 ವರ್ಷದ ಮಕ್ಕಳು 1.9% ಪಾಸಿಟಿವ್ ರೇಟ್

ನಾಳೆಯ ಸಭೆಯಲ್ಲಿ ಎಲ್ಲವೂ ನಿರ್ಧಾರ ಅಂದ್ರು ಆರ್.ಅಶೋಕ್

ಕಂದಾಯ ಸಚಿವ ಆರ್ ಅಶೋಕ್ ಮಾತನಾಡಿ. ನಾಳೆ 1 ಗಂಟೆಗೆ ಕೋವಿಡ್ ಹೊಸ ಗೈಡ್ ಲೈನ್ ಸಂಬಂಧಿಸಿದಂತೆ ಸಿಎಂ ಸಭೆ ಕರೆದಿದ್ದಾರೆ. ಕೋವಿಡ್ ನಿರ್ವಹಣೆ ಸಮಿತಿ ಸದಸ್ಯರು ಸಚಿವರು ಸಭೆಯಲ್ಲಿ ಇರಲಿದ್ದಾರೆ.  ಇದುವರೆಗೆ ಮೂರು ಪಕ್ಷಗಳ ನಾಯಕರು ಅವರ ವೈಯಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ಕೆಲವರು ನಿರ್ಬಂಧ ತೆಗಿಬೇಕು ಅಂದಿದ್ದಾರೆ.  ಕೇಂದ್ರ ಸರ್ಕಾರ ಕೂಡ ವಿದೇಶಿ ವಿಮಾನಯಾನ ಓಡಾಟ ರದ್ದು ಮಾಡಿದೆ.  ಸಂಘ ಸಂಸ್ಥೆಗಳ ಹೇಳಿಕೆಗಳನ್ನು ಕೂಡ ನಾವು ಗಮನಿಸಿದ್ದೇವೆ. ತಜ್ಞರ ವರದಿ ಕೂಡ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡ್ತೇವೆ ಎಂದು ಹೇಳಿದರು.
Published by:Mahmadrafik K
First published: