2ನೇ ಡೋಸ್ ಪಡೆಯುವುದು ತಡವಾದರೆ ಆರೋಗ್ಯದಲ್ಲಿ ಏರುಪೇರು ಆಗುತ್ತಾ? ಲಸಿಕೆ ಕೊರತೆಯಿಂದ ಆತಂಕ!

ಸರಿಯಾಗಿ ಲಸಿಕೆ ಪೂರೈಕೆ ಆಗದ ಕಾರಣ ಎರಡನೇ ಡೋಸ್ ತಡ ಆಗ್ತಿದೆ. ತಡವಾಗ್ತಿರುವ ಹಿನ್ನೆಲೆ ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದು ವ್ಯರ್ಥವಾಗುತ್ತೇನೋ ಎಂಬ ಚಿಂತೆ ಕಾಡುತ್ತಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
 ಬೆಂಗಳೂರು: ರಾಜ್ಯಾದ್ಯಂತ ಲಸಿಕಾ ಆಭಿಯಾನ ಆಗುತ್ತಿದ್ದರೂ ಎಲ್ಲಿ‌ ನೋಡಿದ್ರೂ ಲಿಸಿಕೆ ಕೊರತೆ ಇದೆ. ಫಸ್ಟ್ ಡೋಸ್ ಅಷ್ಟೇ ಅಲ್ಲ ಸೆಂಕೆಂಡ್ ಡೋಸ್ ತಗೊಳ್ಳುವರಿಗೂ‌ ವ್ಯಾಕ್ಸಿನ್ ಸಿಕ್ತಿಲ್ಲ. ಹೀಗಾಗಿ ಎರಡನೇ ಡೋಸ್ ತೆಗೆದುಕೊಳ್ಳೋದು ತಡವಾದರೆ ಸಮಸ್ಯೆ ಆಗುತ್ತೆನೋ ಎಂಬ ಆತಂಕ ಸಾವಿರಾರು ಜನರಲ್ಲಿ ಮನೆ ಮಾಡಿದೆ. ಜನರಿಗೆ ಲಸಿಕೆ ವಿಚಾರದಲ್ಲಿ ಒಂದಲ್ಲ ಎರಡಲ್ಲ ನೂರಾರು ಗೊಂದಲಗಳಿವೆ. ಲಸಿಕೆ ಹಾಕಬೇಕೋ. ಬೇಡವೋ..? ಯಾವ ವ್ಯಾಕ್ಸಿನ್ ಸೂಕ್ತ..? ಲಸಿಕೆ ಹಾಕಿದ ಬಳಿಕ ಮದ್ಯ ಕುಡಿಯಬಹುದ ಇಲ್ಲವೋ? ಹೀಗೆ ನೂರೆಂಟು ಪ್ರಶ್ನೆಗಳು ಜನರಿಗಿದೆ.

ಈಗ ವ್ಯಾಕ್ಸಿನ್ ಬರದ ನಡುವೆ ಜನರಿಗೆ ಮತ್ತೊಂದು ಪ್ರಶ್ನೆಗೆ ಉತ್ತರ ಸಿಗದೇ ಟೆನ್ಷನ್ ಹೆಚ್ಚಾಗಿದೆ. ಎಲ್ಲಿ ಹೋದರು ಲಿಸಿಕೆ ಸಿಕ್ತಿಲ್ಲ. ವಿದ್ಯಾರ್ಥಿಗಳಿಗೆ ಮಾತ್ರ ಕೊಡ್ತಾ ಇದ್ದಿವಿ. ಅದೂ ಸರಿಯಾಗಿ ಸಿಕ್ತಿಲ್ಲ ಅಂತ ಲಸಿಕಾ ಸಿಬ್ಬಂದಿ ಹೇಳುತ್ತಿದ್ದಾರೆ. ಹೀಗಾಗಿ ಅನೇಕ ಕಡೆ ಎರಡನೇ ಡೋಸ್ ವ್ಯಾಕ್ಸಿನ್ ‌ನಿಗದಿತ ದಿ‌ನ ಬಂದರೂ ನೀಡಲು ಸಾಧ್ಯವಾಗ್ತಿಲ್ಲ ಸರ್ಕಾರಕ್ಕೆ. ಕೋವ್ಯಾಕ್ಸಿನ್ ಪಡೆದುಕೊಂಡವರು 28 ದಿನ, ಕೋವಿಶೀಲ್ಡ್ ತೆಗೆದುಕೊಂಡವರು 84 ದಿನಗಳ ಬಳಿಕ ಎರಡನೇ ಡೋಸ್ ತೆಗೆದುಕೊಳ್ಳುಬೇಕು. ಆದ್ರೆ ಸರಿಯಾಗಿ ಲಸಿಕೆ ಪೂರೈಕೆ ಆಗದ ಕಾರಣ ಎರಡನೇ ಡೋಸ್ ತಡ ಆಗ್ತಿದೆ. ತಡವಾಗ್ತಿರುವ ಹಿನ್ನೆಲೆ ಮೊದಲ ಡೋಸ್ ಲಸಿಕೆ ತೆಗೆದುಕೊಂಡಿದ್ದು ವ್ಯರ್ಥವಾಗುತ್ತೇನೋ ಎಂಬ ಚಿಂತೆ ಕಾಡುತ್ತಿದೆ.

ಇದನ್ನೂ ಓದಿ: Explained: ಯಾರು 2ನೇ ಡೋಸ್ ಪಡೆಯಬಾರದು? ವ್ಯಾಕ್ಸಿನ್ ಕುರಿತ ಎಲ್ಲಾ ಪ್ರಶ್ನೆಗಳಿಗೂ ವೈದ್ಯರ ಉತ್ತರ ಇಲ್ಲಿದೆ

ವ್ಯಾಕ್ಸಿನ್ ಎರಡನೇ ಡೋಸ್ ತೆಗೆದುಕೊಳ್ಳಲು ಲೇಟ್ ಆಗುತ್ತಿದ್ದು ಟೆನ್ಷನ್ ಮಾಡಿಕೊಂಡಿರೋರಿಗೆ ತಜ್ಞರು ಗುಡ್ ನ್ಯೂಸ್ ನೀಡಿದ್ದಾರೆ. ಏನಂದ್ರೆ ತಡವಾದ ವ್ಯಾಕ್ಸಿನ್ ಡೋಸ್ ಬಗ್ಗೆ ಸಾಕಷ್ಟು ಸಂಶೋಧನೆಗಳು ಅಗಿದೆ. ಹೀಗಾಗಿ ಕೋವಿಶೀಲ್ಡ್  ಎರಡನೇ ಡೋಸ್  ವ್ಯಾಕ್ಸಿನ್ 84 ದಿನಗಳ ನಂತರ ಇನ್ನು ಕೆಲ ದಿನಗಳ ಬಳಿಕ ತಗೆದುಕೊಂಡರೇ ಮತ್ತಷ್ಟು ಆ್ಯಂಟಿಬಾಡಿ ಹೆಚ್ಚಾಗಲು  ಸಾಧ್ಯವಾಗುತ್ತದೆ. ಕೋವ್ಯಾಕ್ಸಿನ್ ವಿಚಾರದಲ್ಲೂ ಅಷ್ಟೇ. ಲೇಟ್ ಆದ್ರೂ ಕೂಡ ಎರಡನೇ ಡೋಸ್ ಮತ್ತಷ್ಟು ಆ್ಯಂಟಿ ಬಾಡಿಗಳನ್ನು ಬೂಸ್ಟ್ ಮಾಡುತ್ತೆ. ಹೀಗಾಗಿ ಎರಡನೇ ಡೋಸ್  ವ್ಯಾಕ್ಸಿನ್ ಲೇಟ್ ಆಯ್ತು ಅಂತ ಟೆನ್ಷನ್ ಬಿಡಿ ಅಂತ ಕಿದ್ವಾಯಿ ನಿರ್ದೇಶಕ ಡಾ. ಸಿ ರಾಮಚಂದ್ರ ಅಭಿಪ್ರಾಯಪಟ್ಟಿದ್ದಾರೆ.

ಒಟ್ಟಾರೆಯಾಗಿ ಎರಡನೇ ಡೋಸ್ ಲೇಟ್ ಆಯ್ತು ಅಂತ ಭಯಪಡುವ ಅಗತ್ಯವಿಲ್ಲ. ಎಲ್ಲರೂ ಮೊದಲ ಡೋಸ್  ವ್ಯಾಕ್ಸಿನ್  ತೆಗೆದುಕೊಳ್ಳಿ.  ಆನಂತರ ಲೇಟ್ ಆದ್ರೂ ರೋಗ ನಿರೋಧಕ ಶಕ್ತಿ ಹೆಚ್ಚಿರುತ್ತೆ. ಹೀಗಾಗಿ ‌ಲಸಿಕೆಯ ಎರಡನೇ ಡೋಸ್  ಲೇಟ್ ಆಯ್ತು ಅಂತ ಆತಂಕ ಬೀಳುವ ಅಗತ್ಯವಿಲ್ಲ. ಆದರೆ ಲಸಿಕೆ ತೆಗೆದುಕೊಂಡಿದ್ದೇನೆ ಎಂದು ಹುಂಬ ಧೈರ್ಯ ಮಾತ್ರ ತೋರದಿರಿ. ಕೊರೋನಾ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಿದರೆ ಒಳಿತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: