ಏಳು ತಿಂಗಳಲ್ಲಿ ಬೆಂಗಳೂರಿನಲ್ಲಿ ದಾಖಲಾದ ಅಪರಾಧ ಪ್ರಕರಣಗಳೆಷ್ಟು?ಪೊಲೀಸರು ಭೇದಿಸಿದೆಷ್ಟು? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ?

ವಾಹನ ಕಳ್ಳತನ‌ ಪ್ರಕರಣಗಳ ಪೈಕಿ ಕದ್ದ ವಾಹನಗಳು ಒಂದು ಘಂಟೆಯೊಳಗೆ ನಗರದಿಂದ ಹೊರ ಜಿಲ್ಲೆಗಳಿಗೆ ಖದೀಮರು ಸಾಗಿಸುತ್ತಿದ್ದಾರೆ. ‌ಕಂಡಿಷನ್ ನಲ್ಲಿರುವ ವಾಹನಗಳ ಮಾತ್ರ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ವಾಹನಗಳ ಚಾರ್ಸಿ ನಂಬರ್ ಬದಲಾವಣೆ ಮಾಡುತ್ತಿರುವುದರಿಂದ ವಾಹನ ಪತ್ತೆ ಮಾಡುವುದಕ್ಕೆ ತೊಡಕಾಗುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೆ ಅಪರಾಧ ಪ್ರಕರಣ ಹೆಚ್ಚಾದಂತೆ ಪೊಲೀಸರು ತ್ವರಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಸಫಲರಾಗುತ್ತಿದ್ದಾರೆ.‌ ಕೊಲೆ, ಸುಲಿಗೆ ಹಾಗೂ‌ ಡಕಾಯಿತಿ ಪ್ರಕರಣಗಳನ್ನ ಸುಲಭವಾಗಿ ಬೇಧಿಸುತ್ತಿರುವ ಪೊಲೀಸರಿಗೆ ವಾಹನ ಕಳವು, ಮನೆ ಕಳವು ಹಾಗೂ ವಂಚನೆ ಪ್ರಕರಣಗಳಲ್ಲಿ ಆರೋಪಿಗಳನ್ನು ಹಿಡಿಯುವುದೇ ಹೆಚ್ಚು ತಲೆನೋವಾಗಿ ಪರಿಣಮಿಸಿದೆ.

ಕೊರೊನಾ ಭೀತಿ ನಡುವೆಯೂ ಕಳೆದ ಜನವರಿಯಿಂದ  ಜುಲೈ ಅಂತ್ಯದವರೆಗೆ ಸೈಬರ್ ಅಪರಾಧ ಹೊರತುಪಡಿಸಿ 10,544 ಕೇಸ್ ವರದಿಯಾಗಿವೆ. ಈ ಪೈಕಿ 5,580 ಕೇಸ್  ಬೆಂಗಳೂರು ನಗರ ಪೊಲೀಸರು ಬೇಧಿಸಿದ್ದಾರೆ. ಹಳೆ ದ್ವೇಷ, ಹಣಕಾಸು ಹಾಗೂ ಕ್ಷುಲ್ಲಕ ಕಾರಣಗಳಿಗಾಗಿ  ನಡೆಯುವ ಬಹುತೇಕ ಕೊಲೆ‌ ಪ್ರಕರಣಗಳನ್ನು ಖಾಕಿ ಬೇಧಿಸಿದೆ.

ನಗರದಲ್ಲಿ ಕಳೆದ ಏಳು ತಿಂಗಳಲ್ಲಿ ನಗರದಲ್ಲಿ 82 ಕೊಲೆಗಳ ಪೈಕಿ 80 ಪ್ರಕರಣ ಭೇದಿಸಲಾಗಿದೆ. 22 ಡಕಾಯಿತಿ 21 ಪ್ರಕರಣದ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. 87 ಸರಗಳ್ಳತನ‌ ಪ್ರಕರಣಗಳಲ್ಲಿ 64 ಕೇಸ್ ಭೇದಿಸಿದ್ದು 23 ಕೇಸ್ ಬಾಕಿ ಉಳಿದಿದೆ.
219 ರಾಬರಿ ಕೇಸ್ ಗಳಲ್ಲಿ 162 ಕೇಸ್ ಭೇದಿಸಲಾಗಿದ್ದು 57 ಕೇಸ್ ಬಾಕಿಯಿದೆ. ಕಿಡ್ನ್ಯಾಪ್ ಹಾಗೂ ಮಿಸ್ಸಿಂಗ್ 413 ಕೇಸ್ ಗಳಲ್ಲಿ 244 ಪ್ರಕರಣ ಭೇದಿಸಲಾಗಿದ್ದು 169 ಕೇಸ್ ಬಾಕಿಯಿದೆ.

ಲೈಂಗಿಕ ಕಿರುಕುಳದ ಅಡಿ 304 ಕೇಸ್ ವರದಿಯಾದರೆ 189 ಕೇಸ್ ಪತ್ತೆಯಾಗಿದ್ದು 115 ಬಾಕಿಯಿವೆ. ಆತ್ಯಾಚಾರದಡಿ 59 ಕೇಸ್ ಗಳು ವರದಿಯಾದರೆ 53 ಪ್ರಕರಣ ಮಾತ್ರ ಭೇದಿಸಲಾಗಿದೆ. ಮಹಿಳೆ ಮೇಲೆ ಹಲ್ಲೆ ಮತ್ತು ವರದಕ್ಷಿಣೆ ಕಿರುಕುಳ ಸಂಬಂಧಿಸಿದಂತೆ 207 ಪ್ರಕರಣ ಪೈಕಿ 178 ಇತ್ಯರ್ಥವಾಗಿದ್ದು 29 ಕೇಸ್ ಬಾಕಿ ಉಳಿದಿದೆ.

ಪೊಲೀಸರಿಗೆ ಅಸಲಿಗೆ ತಲೆನೋವಾಗಿರೋದು ಕೊಲೆ ಸುಲಿಗೆ ಡಕಾಯಿತಿ ಪ್ರಕರಣಗಳಲ್ಲ. ವಾಹನ ಕಳವು, ಮನೆ ಕಳವು ಹಾಗೂ ವಂಚನೆ ಪ್ರಕರಣಗಳೇ ಖಾಕಿಗೆ ಹೆಚ್ಚು ತಲೆಬಿಸಿಯಾಗಿದೆ. ಏಳು ತಿಂಗಳು ಅಂತರದಲ್ಲಿ ಸಾಮಾನ್ಯ ಕಳವು 521 ಕೇಸ್ ಗಳ ಪೈಕಿ 147 ಪ್ರಕರಣ ಭೇದಿಸಲು ಸಾಧ್ಯವಾಗಿದ್ದು 374 ಪ್ರಕರಣ ಬಾಕಿ ಉಳಿದಿದೆ.

ಅದೇ ರೀತಿ 777 ಮನೆಗಳ್ಳತನ ಪ್ರಕರಣ ಭೇದಿಸಲಾಗಿದ್ದು 251 ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ‌. ವಾಹನ ಕಳವು ಕದ್ದ ವಾಹನಗಳು 2098 ಭೇದಿಸಿದ್ದು 1752 ಕೇಸ್ ಗಳಿಗೆ ಮುಕ್ತಿ ನೀಡಿದರೆ ಉಳಿದ 346 ಕೇಸ್ ಫೆಡಿಂಗ್ ಆಗಿದೆ. ಇನ್ನೂ 1146 ವಂಚನೆ ಪ್ರಕರಣಗಳಲ್ಲಿ 774 ಕೇಸ್ ಗಳನ್ನು ಪತ್ತೆ ಹಚ್ಚಲಾಗಿದೆ. ಬಹುತೇಕ ವಂಚನೆ‌‌ ಪ್ರಕರಣದಲ್ಲಿ ಆರೋಪಿಗಳು ರಾಜ್ಯ ಬಿಟ್ಟು ಪರಾರಿಯಾಗುತ್ತಿದ್ದಾರೆ. ಅಲ್ಲದೆ ಮೋಸ ಹೋದವರು ದೂರು ಸಲ್ಲಿಕೆ ಮಾಡೋದು ತಡ ಮಾಡುತ್ತಿರುವುದರಿಂದ ಆರೋಪಿಗಳು ಬಂಧಿಸಲು ಕಷ್ಟವಾಗುತ್ತಿದೆ.

ವಾಹನ ಕಳ್ಳತನ‌ ಪ್ರಕರಣಗಳ ಪೈಕಿ ಕದ್ದ ವಾಹನಗಳು ಒಂದು ಘಂಟೆಯೊಳಗೆ ನಗರದಿಂದ ಹೊರ ಜಿಲ್ಲೆಗಳಿಗೆ ಖದೀಮರು ಸಾಗಿಸುತ್ತಿದ್ದಾರೆ. ‌ಕಂಡಿಷನ್ ನಲ್ಲಿರುವ ವಾಹನಗಳ ಮಾತ್ರ ಹೊರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಇನ್ನೊಂದೆಡೆ ವಾಹನಗಳ ಚಾರ್ಸಿ ನಂಬರ್ ಬದಲಾವಣೆ ಮಾಡುತ್ತಿರುವುದರಿಂದ ವಾಹನ ಪತ್ತೆ ಮಾಡುವುದಕ್ಕೆ ತೊಡಕಾಗುತ್ತಿದೆ. ಕೆಲವು ಕಡೆ ಕದ್ದ ವಾಹನಗಳ ಬಿಡಿ ಭಾಗವನ್ನು ಪ್ರತ್ಯೇಕಗೊಳಿಸಿ ಮಾರಾಟ ಜಾಲ ಸಕ್ರಿಯವಾಗಿದೆ‌.

ಇದನ್ನೂ ಓದಿ: ಮಲೇಷ್ಯಾ, ಮಾಲ್ಡೀವ್ಸ್‌, ಕತಾರ್‌ಗೆ ಹೆಚ್ಚುವರಿ ವಿಮಾನಯಾನಗಳನ್ನು ಪ್ರಕಟಿಸಿದ ಏರ್ ಇಂಡಿಯಾ

ಇದೆಲ್ಲದರ‌ ನಡುವೆ ಕೊರೊನಾ ಭೀತಿಯಿಂದ ಲಾಕ್ ಡೌನ್ ನಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಭೇದಿಸಲು ಪೊಲೀಸರ ಹರಸಾಹಸ ಪಡುವಂತಾಗಿತ್ತು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by:HR Ramesh
First published: