ಏನಿದು Bitcoin ಹಗರಣ? ವಿಪಕ್ಷಗಳು ಮುಗಿಬಿದ್ದಿರುವುದು ರಾಜ್ಯ BJP ಸರ್ಕಾರಕ್ಕೆ ಸಂಕಷ್ಟ ತಂದೊಡ್ಡುತ್ತದೆಯೇ?

ಜಾಮೀನಿನ ಮೇಲೆ ಹೊರಬಂದಿರುವ ಶ್ರೀಕಿ, ಸೈಬರ್ ವಂಚನೆ, ಡಾರ್ಕ್ ನೆಟ್ ಮೂಲಕ ಮಾದಕವಸ್ತು ಮಾರಾಟ, ಕ್ರಿಪ್ಟೋಕರೆನ್ಸಿ ಕಳ್ಳತನ ಮತ್ತು ಕರ್ನಾಟಕ ಸರಕಾರದ ಇ-ಆಡಳಿತ ಪೋರ್ಟಲ್‌ನಿಂದ ಹಣವನ್ನು ಕದಿಯುವ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾನೆ.

ಸಿಎಂ ಬಸವರಾಜ ಬೊಮ್ಮಾಯಿ

ಸಿಎಂ ಬಸವರಾಜ ಬೊಮ್ಮಾಯಿ

 • Share this:
  ಕುಖ್ಯಾತ ಹ್ಯಾಕರ್ (high-profile hacker) ಜೊತೆಗೆ ಬಿಟ್‌ಕಾಯಿನ್ (bitcoin scam) ಮತ್ತು ಅಪರಾಧ ಕ್ರಿಯೆಗಳೊಂದಿಗೆ ತಳುಕು ಹಾಕಿಕೊಂಡ ಒಂದು ವರ್ಷದಷ್ಟು ಹಳೆಯ ಪ್ರಕರಣವೊಂದು ಇದೀಗ ಸಂಭವನೀಯ ರಾಜಕೀಯ ಪರಿಣಾಮಗಳೊಂದಿಗೆ ಸಮ್ಮಿಲನಗೊಂಡು ಕರ್ನಾಟಕದಲ್ಲಿ ಮತ್ತೆ ಜೀವಂತಿಕೆಯನ್ನು ಪಡೆದುಕೊಂಡಿದೆ. 2020 ರಲ್ಲಿ ಡ್ರಗ್ಸ್ ಪ್ರಕರಣದ (drugs case) ತನಿಖೆಯ ಸಂದರ್ಭದಲ್ಲಿ ಬೆಂಗಳೂರು ಸೈಬರ್ ಕ್ರೈಂ ಪೊಲೀಸರನ್ನು (bangalore cyber crime police) ಮುಗ್ಗರಿಸಿದ್ದ ಬಿಟ್ ಕಾಯಿನ್ ಹಗರಣವನ್ನು ಇದೀಗ ರಾಜ್ಯ ಸರ್ಕಾರವು ಪ್ರಕರಣದ ವಿವಿಧ ಅಂಶಗಳನ್ನು ನಿರ್ದಿಷ್ಟ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸುವುದರೊಂದಿಗೆ ಇದೀಗ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದ ಬಿಜೆಪಿ ಸರಕಾರದ ಮೇಲೆ ಪುನಃ ಆಪಾದನೆಗಳು ಕೇಳಿಬಂದಿದೆ. ಈ ಸಂಬಂಧಿತವಾಗಿ ಸಿಬಿಐ ಅನ್ನೂ ಸಂಪರ್ಕಿಸಲಾಗಿದ್ದು ತಂಡವು ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕಾಗಿದೆ.

  ಸರ್ಕಾರದ ಮೇಲೆ ಮುಗಿಬಿದ್ದ ವಿಪಕ್ಷಗಳು 

  ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವವನು ಶ್ರೀಕೃಷ್ಣ ರಮೇಶ್ ಆಲಿಯಾಸ್ ಶ್ರೀಕಿ 25 ರ ಹರೆಯದ ಶ್ರೀಕಿಯನ್ನು ಜಾರಿ ನಿರ್ದೇಶನಾಲಯ (ED), ಕ್ರಿಮಿನಲ್ ಇನ್ವೆಸ್ಟಿಗೇಷನ್ ಡಿಪಾರ್ಟ್‌ಮೆಂಡ್ (CID) ನ ಸೈಬರ್ ಅಪರಾಧ ವಿಭಾಗ ಮತ್ತು ಕೇಂದ್ರ ಅಪರಾಧ ವಿಭಾಗ (CCB) ಹೀಗೆ ಮೂರು ವಿಭಿನ್ನ ತನಿಖಾ ತಂಡಗಳು ವಿಚಾರಣೆಗೆ ಒಳಪಡಿಸಿವೆ. ಜಾಮೀನಿನ ಮೇಲೆ ಹೊರಬಂದಿರುವ ಶ್ರೀಕಿ, ಸೈಬರ್ ವಂಚನೆ, ಡಾರ್ಕ್ ನೆಟ್ ಮೂಲಕ ಮಾದಕವಸ್ತು ಮಾರಾಟ, ಕ್ರಿಪ್ಟೋಕರೆನ್ಸಿ ಕಳ್ಳತನ ಮತ್ತು ಕರ್ನಾಟಕ ಸರಕಾರದ ಇ-ಆಡಳಿತ ಪೋರ್ಟಲ್‌ನಿಂದ ಹಣವನ್ನು ಕದಿಯುವ ಹಲವಾರು ಆರೋಪಗಳನ್ನು ಎದುರಿಸುತ್ತಿದ್ದಾನೆ. ಈ ಹಿನ್ನಲೆಯಲ್ಲಿ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಟ್‌ಕಾಯಿನ್ ಹಗರಣವನ್ನು ಪುನಃ ಕೆದಕಿದ್ದು, ಬಿಜೆಪಿ ಸರ್ಕಾರವು "ಮರೆಮಾಚುತ್ತಿದೆ" ಎಂದು ಆರೋಪಿಸಿದ್ದಾರೆ. ಸಿದ್ದರಾಮಯ್ಯನವರು ಮಾಡಿರುವ ಆರೋಪವನ್ನು ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ನಿರಾಕರಿಸಿದ್ದಾರೆ.

  ಬಿಟ್‌ಕಾಯಿನ್ ಹಗರಣ ಯಾವುದಕ್ಕೆ ಸಂಬಂಧಿಸಿದೆ?

  ನವೆಂಬರ್ 2020 ರಲ್ಲಿ, ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಶ್ರೀಕೃಷ್ಣ ಮತ್ತು ಅವರ ಸಹಚರರನ್ನು ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿಸಿದರು. ಶ್ರೀಕಿ ಅವರು ಡಾರ್ಕ್‌ನೆಟ್ ಮೂಲಕ ಬಿಟ್‌ಕಾಯಿನ್‌ಗಳನ್ನು ಬಳಸಿಕೊಂಡು ಡ್ರಗ್‌ಗಳನ್ನು ಸಂಗ್ರಹಿಸಿದ್ದಾರೆ ಮತ್ತು ಅದನ್ನು ತಮ್ಮ ಹೈ ಪ್ರೊಫೈಲ್ ಕ್ಲೈಂಟ್‌ಗಳಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಇನ್ನಷ್ಟು ತನಿಖೆ ನಡೆಸಿದಾಗ ಶ್ರೀಕೃಷ್ಣ ಅವರು ransomware ದಾಳಿ, ಬಿಟ್‌ಕಾಯಿನ್ ವಿನಿಮಯಕ್ಕೆ ಹ್ಯಾಕ್ ಮಾಡುವುದು, ಕ್ರಿಪ್ಟೋಕರೆನ್ಸಿ ಲೂಟಿ, ಮನಿ ಲಾಂಡರಿಂಗ್ ಮತ್ತು ಸೈಬರ್ ವಂಚನೆಗಳಂತಹ ಸೈಬರ್ ಅಪರಾಧಗಳಲ್ಲಿ ತೊಡಗಿಸಿಕೊಂಡಿರುವ ಹ್ಯಾಕರ್ ಕೂಡ ಎಂಬ ಆಘಾತಕಾರಿ ಅಂಶ ಬಹಿರಂಗಗೊಂಡಿದೆ. 2019 ರಲ್ಲಿ ಆತ ಕರ್ನಾಟಕ ಸರಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್‌ನ ಹ್ಯಾಕಿಂಗ್‌ನಲ್ಲಿ ಭಾಗಿಯಾಗಿದ್ದರು ಎಂಬುದು ದೊಡ್ಡ ಪ್ರಕರಣವಾಗಿ ಹೊರಬಿದ್ದಿದೆ.

  ಸರ್ಕಾರದ ವೆಬ್​​ಸೈಟಿಗೇ ಕನ್ನ..! 

  ಆಪಾದಿತ ಹ್ಯಾಕಿಂಗ್ ಅನ್ನು ಮೊದಲು ಜುಲೈ 2019 ರಲ್ಲಿ ಹಣಕಾಸು ಸಲಹೆಗಾರ ಎಸ್.ಕೆ. ಶೈಲಜಾ. ಅರ್ನೆಸ್ಟ್ ಮನಿ ಡೆಪಾಸಿಟ್ಸ್ (ಇಎಂಡಿ) ಮರುಪಾವತಿಯನ್ನು ಪರಿಶೀಲಿಸುವಾಗ, 7.37 ಕೋಟಿ ಅನಧಿಕೃತ ನಿಧಿ ವರ್ಗಾವಣೆಯ ಸಮಯದಲ್ಲಿ ಕಂಡುಕೊಂಡರು ಹಾಗೂ ಈ ಸಂಬಧಿತವಾಗಿ ಸಿಐಡಿಗೆ ದೂರು ಸಲ್ಲಿಸಲಾಯಿತು. ಹಣ ವಂಚನೆ ತನಿಖೆಯ ಸಮಯದಲ್ಲಿ, ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬ ಹ್ಯಾಕರ್ ಕರ್ನಾಟಕ ಸರಕಾರದ ಇ-ಆಡಳಿತ ಕೇಂದ್ರದ ಪೋರ್ಟಲ್ ಅನ್ನು ಹ್ಯಾಕ್ ಮಾಡಿದ್ದಾನೆ ಮತ್ತು 10.5 ಕೋಟಿ ರೂಪಾಯಿ ಮತ್ತು 1.05 ಕೋಟಿ ರೂಪಾಯಿಗಳ ಹಣವನ್ನು ಬ್ಯಾಂಕ್ NGO, M/s. ಉದಯ್ ಗ್ರಾಮ ವಿಕಾಸ ಸಂಸ್ಥೆ, ನಾಗ್‌ಪುರ ಮತ್ತು ಮಾಲೀಕತ್ವ, M/s. ನಿಮ್ಮಿ ಎಂಟರ್‌ಪ್ರೈಸಸ್, ಬುಲಂದ್‌ಶಹರ್, ಉತ್ತರ ಪ್ರದೇಶ ಹೀಗೆ ವಿವರ ಇರುವ ಬ್ಯಾಂಕ್ ಖಾತೆಗಳಿಗೆ ಕ್ರಮವಾಗಿ ನಿರ್ದೇಶಿಸಲಾಗಿದೆ ಎಂದು ಎಂದು ಇಡಿ (ED) ತನ್ನ ಹೇಳಿಕೆಯಲ್ಲಿ ತಿಳಿಸಿದೆ.

  ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆಯೇ? 

  ಶ್ರೀಕೃಷ್ಣ ಸೇರಿದಂತೆ ನಡೆದ ಬಿಟ್‌ಕಾಯಿನ್ ಹಗರಣಗಳಲ್ಲಿ ಸುಮಾರು 1,000 ಕೋಟಿ ರೂಪಾಯಿಗಳ ವಹಿವಾಟು ನಡೆದಿರಬಹುದು ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಈ ಸಂಬಂಧಿತವಾಗಿ ಹಲವಾರು ರಾಜಕೀಯ ನಾಯಕರುಗಳತ್ತ ಬೆರಳು ತೋರಿಸಲಾಗುತ್ತಿದ್ದು ಪ್ರಕರಣಗಳನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಇನ್ನು ಪ್ರಧಾನಿ ಕಾರ್ಯಾಲಯವು ಪ್ರಕರಣದ ವಿವರಗಳನ್ನು ಕೇಳಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.

  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಹಾಗೂ ತಮ್ಮ ಸರಕಾರದ ವಿರುದ್ಧ ಮಾಡಿರುವ ಆಕ್ಷೇಪಗಳ ಕುರಿತು ಮಾತನಾಡಿದ್ದಾರೆ. ಪ್ರಧಾನಿ ಕಾರ್ಯಾಲಯವು ಶ್ರೀಕೃಷ್ಣ ಒಳಗೊಂಡಿರುವ ಪ್ರಕರಣಗಳ ಕುರಿತ ವರದಿಯನ್ನು ಕೇಳಿದೆಯೇ ಎಂಬ ಪ್ರಶ್ನೆಗೆ ಮುಖ್ಯಮಂತ್ರಿ ಉತ್ತರಿಸಲಿಲ್ಲ ಬದಲಿಗೆ ಅವರ ಗೃಹ ಸಚಿವರಾಗಿದ್ದಾಗ ಘೋಷಿಸಿದ 'ಡ್ರಗ್ಸ್ ವಿರುದ್ಧ ಯುದ್ಧ' ಅಭಿಯಾನದಲ್ಲಿ ಅವರನ್ನು ಗುರಿಯಾಗಿಸಲಾಗಿದೆ ಎಂದು ತಿಳಿಸಲಿದ್ದಾರೆ.

  ಇದನ್ನೂ ಓದಿ: Firecrackers Shop: BBMP ವ್ಯಾಪ್ತಿಯಲ್ಲಿ ಪಟಾಕಿ ಮಳಿಗೆ ತೆರೆಯಲು ಅರ್ಜಿ ಆಹ್ವಾನ; ಸಂಪೂರ್ಣ ಮಾಹಿತಿ ಇಲ್ಲಿದೆ

  ಸಾವಿರಾರು ಕೋಟಿ ಅಕ್ರಮ ವಹಿವಾಟು ನಡೆದಿದೆ ಎಂದು ಗುಟ್ಟಾಗಿ ಆರೋಪಗಳು ದಾಖಲಾಗುತ್ತಿವೆ. ಇದಕ್ಕೆ ಸಾಕ್ಷಿ ಇದೆಯೇ? ದಾರವಿಲ್ಲದೆ ಗಾಳಿಪಟ ಹಾರಿಸಬಾರದು. ಭಾಗಿಯಾಗಿರುವ ಯಾರನ್ನೂ ನಾವು ಈ ಪ್ರಕರಣದಲ್ಲಿ ಬಿಡುವುದಿಲ್ಲ. ಆರೋಪ ಮಾಡುವವರು ಈ ವಹಿವಾಟು ಮತ್ತು ಯಾರ ನಡುವೆ ನಡೆದಿದೆ ಎಂಬುದಕ್ಕೆ ಪುರಾವೆಗಳನ್ನು ಒದಗಿಸಲಿ ಎಂದು ಮುಖ್ಯಮಂತ್ರಿಗಳು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 2020 ರಲ್ಲಿ ಶ್ರೀಕೃಷ್ಣ ಅವರನ್ನು ಬಂಧಿಸಿದಾಗ ಬೊಮ್ಮಾಯಿ ಅವರು ಗೃಹಸಚಿವರಾಗಿದ್ದರು ಹೀಗಾಗಿ ಅವರನ್ನು ತೀವ್ರ ಟೀಕೆಗೆ ಗುರಿಪಡಿಸಲಾಗುತ್ತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

  ಶ್ರೀಕೃಷ್ಣ ಆಲಿಯಾಸ್ ಶ್ರೀಕಿ ಯಾರು?

  ಹೆಚ್ಚಿನ ಸೈಬರ್ ಕ್ರೈಮ್ ಹಾಗೂ ಮಾದಕ ದ್ರವ್ಯ ಚಟುವಟಿಕೆಗಳ ಪ್ರಕರಣಗಳಲ್ಲಿ 2015 ರಲ್ಲಿ ಶ್ರೀಕೃಷ್ಣ ಪೊಲೀಸ್‌ ರಾಡಾರ್‌ನಲ್ಲಿ ಕಾಣಿಸಿಕೊಂಡನು. 2015 ರಲ್ಲಿ ಬ್ಯಾಂಕ್ ಖಾತೆ ಹ್ಯಾಕಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ಬಂಧಿಸಲಾಯಿತು ಮತ್ತು ತ್ವರಿತವಾಗಿ ಜಾಮೀನು ನೀಡಲಾಯಿತು. ಪ್ರಕರಣವು ಆತನಿಗೆ ಪರವಾಗಿ ಮಾರ್ಪಾಡಾದ ನಂತರ ಹೆಚ್ಚಿನ ಮೇಲ್ವಿಚಾರಣೆಯನ್ನು ಮಾಡಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಹಣ ಸಂಪಾದನೆ ಹಾಗೂ ಮಾದಕ ದ್ರವ್ಯ ವಸ್ತುಗಳ ಮಾರಾಟ ಈತನ ಲಕ್ಷ್ಯವಿದೆ. ಸೈಬರ್ ಅಪರಾಧದಲ್ಲಿ ಈತನಿಗಿರುವ ಚಾಣಾಕ್ಷತನವನ್ನು ನೋಡಿ ಪ್ರಭಾವಿ ವ್ಯಕ್ತಿಗಳ ಮೂಲಕ ಈತನನ್ನು ನೇಮಿಸಿಕೊಳ್ಳಲಾಗಿದೆ. ದುರಾದೃಷ್ಟವಶಾತ್ ಈ ವ್ಯಕ್ತಿಗಳಿಗೆ ತಿಳಿಯದೆಯೇ ಆತ ಪ್ರತಿ ವಿನಿಮಯ ಹಾಗೂ ಸಂವಹನದ ವಿವರವಾದ ಡಿಜಿಟಲ್ ಟ್ರ್ಯಾಕ್ ಅನ್ನು ಆತ ರಚಿಸಿರುವುದರಿಂದ ಈತ ಎಲ್ಲಿಯಾದರೂ ಸಿಕ್ಕಿಬಿದ್ದರೆ ಸೆರೆವಾಸಕ್ಕೆ ಒಳಪಟ್ಟರೆ ಈತನೊಂದಿಗೆ ಆ ಪ್ರಭಾವಿ ವ್ಯಕ್ತಿಗಳು ಕಾನೂನಿನ ಕೈಗೆ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಸೈಬರ್ ಕ್ರೈಮ್ ಪ್ರಕರಣದಲ್ಲಿ ಶ್ರೀಕೃಷ್ಣನನ್ನು ವಿಚಾರಣೆ ನಡೆಸಿದ ಅಧಿಕಾರಿಯೊಬ್ಬರು ದಿ ಪ್ರಿಂಟ್ ಸುದ್ದಿಮಾಧ್ಯಮಕ್ಕೆ ತಿಳಿಸಿದ್ದಾರೆ.
  Published by:Kavya V
  First published: