Weekend Lockdown: ಶುಕ್ರವಾರ ಸಂಜೆ 7ರಿಂದ ಸೋಮವಾರ ಬೆ.5ರ ವರೆಗೆ ವೀಕೆಂಡ್ ಲಾಕ್: ಏನಿರುತ್ತೆ? ಏನಿರಲ್ಲ?

ಬೆಂಗಳೂರು ಅಲ್ಪ ಪ್ರಮಾಣದಲ್ಲಿ ಅನ್​​ಲಾಕ್​ ಆಗಿದ್ದರೂ ವಾರಂತ್ಯದಲ್ಲಿ ಕಠಿಣ ಲಾಕ್​ಡೌನ್​ ಇರಲಿದೆ. 2 ದಿನಗಳ ಕಾಲ ಯಾವುದಕ್ಕೆ ಅನುಮತಿ ನೀಡಲಾಗಿದೆ? ಯಾವುದಕ್ಕೆ ನಿರ್ಬಂಧವಿದೆ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು: ರಾಜ್ಯ ರಾಜಧಾನಿ ಅನ್​​​ಲಾಕ್ ಆಗಿದ್ದರೂ ಕೊರೊನಾ ಕಂಟ್ರೋಲ್ ಮಾಡಲು ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.  ಶುಕ್ರವಾರ ಸಂಜೆ ಏಳು ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಬೆಂಗಳೂರು ಸೇರಿದಂತೆ ಇಡೀ ಕರ್ನಾಟಕ ಇನ್ನೆರಡು ದಿನ ಮತ್ತೆ ಸ್ತಬ್ಧವಾಗಲಿದೆ. ಆದರೆ ಬೆಳಗ್ಗೆ‌ 6ರಿಂದ 10ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸರ್ಕಾರ ಅವಕಾಶ ಕೊಟ್ಟಿದೆ. ಈ ಎರಡು ದಿನಗಳ ವೀಕೆಂಡ್ ಕರ್ಫ್ಯೂ ವೇಳೆ ಏನಿರುತ್ತೆ..? ಏನಿರಲ್ಲ? ಎಂಬುದುವರ ಸಂಪೂರ್ಣ ಮಾಹಿತಿ ಇಲ್ಲಿದೆ. ಮನೆಯಿಂದ ಆಚೆ ತೆರಳುವ ಮುನ್ನ ಕರ್ಫ್ಯೂ ನಿಯಮಗಳ ಬಗ್ಗೆ ತಿಳಿದಿರುವುದು ಒಳಿತು.

ಹೇಗಿರಲಿದೆ ವೀಕೆಂಡ್ ಲಾಕ್ ಡೌನ್.!?

* ವೀಕೆಂಡ್ ಓಡಾಟ, ಮೋಜು ಮಸ್ತಿ ಬಂದ್
* ರಾತ್ರಿ 7 ಗಂಟೆಯಿಂದಲೇ ಕರು‌ನಾಡಿಗೆ‌ ವೀಕೆಂಡ್ ಲಾಕ್
* ಇಂದು ರಾತ್ರಿ 7 ರಿಂದ ಸೋಮವಾರ 5ರವರೆಗೆ ಅನಗತ್ಯವಾಗಿ ಯಾರೂ ಓಡಾಡುವಂತಿಲ್ಲ
* ಅನಗತ್ಯವಾಗಿ ಓಡಾಟ ನಡೆಸಿದ್ರೆ ಕಠಿಣ ಕ್ರಮ
* ವಾಹನ ತೆಗೆದುಕೊಂಡು ಅನಗತ್ಯವಾಗಿ ಹೊರಗಡೆ ಬಂದರೆ ವಾಹನ ಸೀಜ್
* ಬೆಂಗಳೂರಿನ ಎಲ್ಲಾ ಫ್ಲೈಓವರ್ ಗಳು ಬಂದ್
* ಶಾಲೆ, ಕಾಲೇಜುಗಳು ಸಂಪೂರ್ಣ ಬಂದ್, ಆನ್ ಲೈನ್ ಕ್ಲಾಸ್ ಗಳಿಗೆ ಅವಕಾಶ
* ದಿನಸಿ ಅಂಗಡಿಗಳು, ಹಣ್ಣು ತರಕಾರಿ, ಹಾಲಿನ ಡೇರಿ, ಮೀನು, ಮಾಂಸದ ಅಂಗಡಿ ಓಪನ್
* ಶಾಪಿಂಗ್ ಮಾಲ್, ಸಿನಿಮಾ ಹಾಲ್ ಗಳು, ಜಿಮ್, ಯೋಗಾ ಸೆಂಟರ್, ಸ್ವಿಮ್ಮಿಂಗ್ ಪೂಲ್, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಕಂಪ್ಲೀಟ್ ಕ್ಲೋಸ್
* ಬಾರ್, ರೆಸ್ಟೋರೆಂಟ್​ನಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲ. ಮದ್ಯ ಪಾರ್ಸೆಲ್​ಗೆ ಮಾತ್ರ ಅವಕಾಶ
* ಸಾರ್ವಜನಿಕ, ರಾಜಕೀಯ ಸೇರಿ ಎಲ್ಲಾ ಕಾರ್ಯಕ್ರಮಗಳಿಗೆ ನಿರ್ಬಂಧ
* ಸಲೂನ್, ಬ್ಯೂಟಿಪಾರ್ಲರ್ ಗಳು ಕಂಪ್ಲೀಟ್ ಬಂದ್
* ಕಟ್ಟಡ ನಿರ್ಮಾಣ ಕಾಮಗಾರಿ, ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಅನುಮತಿ
* ಬ್ಯಾಂಕ್, ಇನ್ಶೂರೆನ್ಸ್ ಸಂಸ್ಥೆ, ಮಾಧ್ಯಮಕ್ಕೆ ಅನುಮತಿ
* ಐಟಿ ಸಂಸ್ಥೆಗಳ ಅಗತ್ಯ ಸಿಬ್ಬಂದಿ ಹೊರತುಪಡಿಸಿ ಬೇರೆ ಸಿಬ್ಬಂದಿಗೆ ವರ್ಕ್ ಫ್ರಮ್ ಹೋಮ್
* ಸರ್ಕಾರಿ ಕಚೇರಿಗಳಲ್ಲಿ ಶೇ. 50ರಷ್ಟು ಸಿಬ್ಬಂದಿ ಕೆಲಸಕ್ಕೆ ಅನುಮತಿ
* ಮೆಟ್ರೋ, ಕೆಎಸ್‌ಆರ್​ಟಿಸಿ, ಬಿಎಂಟಿಸಿ ಸೇರಿ ಎಲ್ಲಾ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಬಂದ್
* ಆಟೋ, ಟ್ಯಾಕ್ಸಿ ಕಂಪ್ಲೀಟ್ ಬಂದ್
* ಇ-ಕಾಮರ್ಸ್ ವೇದಿಕೆಯಲ್ಲಿ ಡೆಲಿವರಿ ಮಾಡಲು ಅನುಮತಿ
* ದೇವಸ್ಥಾನ, ಚರ್ಚ್, ಮಸೀದಿ ಸೇರಿ ಎಲ್ಲಾ ಧಾರ್ಮಿಕ ಸ್ಥಳಗಳು ಬಂದ್
* ಅಂತಾರಾಜ್ಯ, ಜಿಲ್ಲೆಗಳ ನಡುವೆ ಸಂಚಾರಕ್ಕೆ ಬಂದ್
* ಅಂತ್ಯಕ್ರಿಯೆಗೆ ಕೇವಲ 20 ಜನರಿಗೆ ಅವಕಾಶ
* ಅಗತ್ಯ ವಸ್ತುಗಳ ಖರೀದಿ ಬೆಳಗ್ಗೆ 6 ರಿಂದ ಬೆಳಗ್ಗೆ 10 ವರಿಗೆ ಮಾತ್ರ ಅವಕಾಶ
* ಆಸ್ಪತ್ರೆ ಮೆಡಿಕಲ್ ಆ್ಯಂಬುಲೆನ್ಸ್ ಸೇವೆ ಎಂದಿನಂತೆ ಇರಲಿದೆ

ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಪೊಲೀಸರು ಕಠಿಣ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: SSLC Exam: ಜುಲೈ ಕೊನೆಯ ವಾರದಲ್ಲಿ SSLC ಪರೀಕ್ಷೆ ಫಿಕ್ಸ್: ಮಾದರಿ ಪ್ರಶ್ನೆಪತ್ರಿಕೆಯೂ ರಿಲೀಸ್

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: