ನಾವು ಪಾಕಿಸ್ತಾನದ ಮುಸ್ಲಿಮರಲ್ಲ, ಭಾರತದ ಮುಸ್ಲಿಮರು: Zameer Ahmed Khan

ಶಾಂತಿಯುತವಾಗಿರುವುದನ್ನು ಗಮನಿಸಿದ ಬಿಜೆಪಿ ಮುಖಂಡರು ಇಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಗಲಭೆಯನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಚಂದ್ರುವಿನ ಕೊಲೆ(Chandru Murder Case)ಯನ್ನು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 

ಜಮೀರ್ ಅಹ್ಮದ್ ಖಾನ್

ಜಮೀರ್ ಅಹ್ಮದ್ ಖಾನ್

  • Share this:
ನಾವು ಪಾಕಿಸ್ತಾನ(Pakistan)ದ ಮುಸ್ಲಿಮರಲ್ಲ, ನಾವು ಭಾರತೀಯ ಮುಸ್ಲಿಮ(Indian Muslims)ರು. ಶಾಂತಿ ಸಹಬಾಳ್ವೆ ನಮ್ಮ ಮೊದಲ ಆದ್ಯತೆ ಎಂದು ಚಾಮರಾಜಪೇಟೆ ಶಾಸಕ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ (Former Minister Zameer Ahmed Khan) ತಿಳಿಸಿದ್ದಾರೆ.  ಬೆಂಗಳೂರಿನಲ್ಲಿ ಮಾತನಾಡಿದ ಅವರು. ನಾವು ಗೌರವದಿಂದ ಇಲ್ಲಿ ಬಾಳುತ್ತಿದ್ದೇವೆ ಮುಂದೆಯೂ ಗೌರವಯುತವಾಗಿ ಇರುತ್ತೇವೆ ಪಾಕಿಸ್ತಾನದಿಂದ ಬಂದವರಲ್ಲ ನಾವು ಭಾರತೀಯ ಮುಸ್ಮಿಮರು ಎಂದು ಅವರು ತಿಳಿಸಿದ್ದಾರೆ. ಸಾವಿನ ಮನೆಯಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅದು ತಪ್ಪು ಈ ಹಿಂದಿನಿಂದಲೂ ಚಾಮರಾಜಪೇಟೆ(Chamrajapete)ಯಲ್ಲಿ ನಾನು ಶಾಸಕ(MLA)ನಾಗಿರುವುದಕ್ಕಿಂತ  ಮುಂಚೆ ಒಂದಲ್ಲ ಒಂದು ರೀತಿಯಲ್ಲಿ ಗಲಭೆಗಳು. ಕೋಮು ಸಂಘರ್ಷಗಳು ನಡೆಯುತ್ತಿತ್ತು.  ಆದರೆ ಈಗ ನಾನು ಶಾಸಕನಾದ ಮೇಲೆ ಒಂದೇ ಒಂದು ಗಲಭೆಗಳು ಇಲ್ಲಿ ನಡೆದಿಲ್ಲ ಎಂದು ತಿಳಿಸಿದರು.

ಶಾಂತಿಯುತವಾಗಿರುವುದನ್ನು ಗಮನಿಸಿದ ಬಿಜೆಪಿ ಮುಖಂಡರು ಇಲ್ಲಿ ಯಾವುದಾದರೂ ಒಂದು ರೀತಿಯಲ್ಲಿ ಗಲಭೆಯನ್ನು ಸೃಷ್ಟಿಸಬೇಕೆಂಬ ಉದ್ದೇಶದಿಂದ ಚಂದ್ರುವಿನ ಕೊಲೆ(Chandru Murder Case)ಯನ್ನು ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ ಯಾವುದೇ ಕಾರಣಕ್ಕೂ ಇದನ್ನು ಮಾಡಲು ನಾವು ಬಿಡುವುದಿಲ್ಲ ಎಂದು ತಿಳಿಸಿದ ಶಾಸಕರು. ಮುಂಬರುವ ದಿನಗಳಲ್ಲಿ ಚಾಮರಾಜಪೇಟೆ ಇನ್ನಷ್ಟು ಶಾಂತಿಯ ನೆಲೆವೀಡು ಆಗಲಿದೆ ಎಂದು ತಿಳಿಸಿದರು.

ಬಿಜೆಪಿ ಅವರಿಂದ ದಾರಿ ತಪ್ಪಿಸುವ ಕೆಲಸ

ಚಂದ್ರು ಸಾವಿನ ನಂತರ ತನಿಖೆ ನಡೆಸಿದಂತಹ ನಗರ ಪೊಲೀಸ್ ಆಯುಕ್ತರು ಇದೊಂದು ಕೊಲೆ. ಒಂದು ರೋಲ್ ವಿಚಾರಕ್ಕೆ ನಡೆದಂತಹ ಕೊಲೆ ಎಂದು ಕಮಿಷನರ್ ತಿಳಿಸಿದ್ದಾರೆ. ಆದರೆ ಬಿಜೆಪಿಯವರು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ:  ಮಾಂಸಹಾರ ಸೇವನೆ, JNU ವಿವಿಯಲ್ಲಿ ಘರ್ಷಣೆ: ABVP ವಿದ್ಯಾರ್ಥಿಗಳ ವಿರುದ್ಧ FIR ದಾಖಲು

ಬಿಜೆಪಿಯವರ ಈ ತಂತ್ರಕ್ಕೆ ಯಾರು ಮತದಾರರು ನಮ್ಮ ಕ್ಷೇತ್ರದವರು ಮಣಿಯಬಾರದು ಶಾಂತಿ ಸಹಬಾಳ್ವೆಯಿಂದ ನಾವು ಇರಬೇಕು  ಎಂದು ಕರೆ ನೀಡಿದರು. ಎಲ್ಲರೂ ಒಂದೇ ಇಲ್ಲಿ  ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ತಿಳಿಸಿದರು.

ಸಮಾನತಾ ದಿನದ ಕಾರ್ಯಕ್ರಮದಲ್ಲಿ ಡಿಕೆಶಿ ಭಾಷಣ

ಸಮಾನತಾ ದಿನದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕೆಲ ಸ್ವಾಮೀಜಿಗಳ ಬಗ್ಗೆ ಬೇಸರ ಹೊರ ಹಾಕಿದರು. ನಮ್ಮ ನಮ್ಮ ಧರ್ಮಗಳನ್ನು ನಾವು ಕಾಪಾಡಿ, ಉಳಿಸ್ಕೋಬೇಕು. ನಾವು ಧರ್ಮ ಬಿಟ್ರೂ, ನಮ್ಮನ್ನು ಧರ್ಮ‌ ಬಿಡಲ್ಲ. ಹುಟ್ಟಿದಾಗ ಇದೇ ಧರ್ಮದಲ್ಲಿ ಹುಟ್ಬೇಕು ಅಂತ ಯಾರೂ ಅರ್ಜಿ ಹಾಕ್ಕೊಂಡಿರಲ್ಲ. ಯಾವ ಧರ್ಮದಲ್ಲಿ ಹುಟ್ಟಿರ್ತೀವೋ ಆ ಧರ್ಮದ ಆಚರಣೆ ಮಾಡ್ತೀವಿ ಎಂದರು.

ನಾವು ಧರ್ಮ ಬಿಟ್ರೂ ಸತ್ತಾಗ ನಮ್ಮನ್ನು ಹೂಳಬೇಕೋ, ಸುಡಬೇಕೋ ಅಂತ ನಮ್ಮ ಧರ್ಮವೇ ನಿರ್ಧರಿಸುತ್ತದೆ. ಸದ್ಯದ ಪ್ರಕ್ಷುಬ್ಧ ಸಂದರ್ಭ ಬಗ್ಗೆ ಭಾಷಣದಲ್ಲಿ ಡಿಕೆಶಿ ಬೇಸರ ಹೊರ ಹಾಕಿದರು.

ಶಾಂತಿಯಿಂದ ಬದುಕುವ ವಾತಾವರಣ ನಿರ್ಮಾಣ ಆಗಬೇಕು

ಇವತ್ತು ರಾಜ್ಯದಲ್ಲಿ ಅಶಾಂತಿ ಇದೆ, ಇದು ಒಳ್ಳೆಯದಲ್ಲ.  ಸಮಾನತಾ ದಿನ ಅಂತೀರಿ, ಯಾರಿಗೆ ಸಮಾನತೆ ಇದೆ. ಯಾವುದೇ ಧರ್ಮೀಯನಿರಲಿ ಶಾಂತಿಯಿಂದ ಬದುಕುವ ವಾತಾವರಣದ ಬೇಕು. ಅಂತಹ ವಾತಾವರಣ ಸೃಷ್ಟಿಯಾಗಲು ಸ್ವಾಮೀಜಿಗಳು ಆಶೀರ್ವಾದ ಮಾಡಬೇಕು ಎಂದು ಕೇಳಿ ಕೊಂಡರು.

ಮುರುಘಾ ಮಠದ ಶ್ರೀಗಳ ಹೊಗಳಿ ಉಳಿದ ಸ್ವಾಮೀಜಿಗಳ ಮೇಲೆ ಬೇಸರ ವ್ಯಕ್ತಪಡಿಸಿದರು.  ಶರಣರ ಪಾದ ಸ್ಪರ್ಶ ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ. ಕಾವೇರಿ ಮೇಕೆದಾಟು ಪಾದಯಾತ್ರೆ ಮಾಡುವಾಗ, ಎಷ್ಡೋ ಸ್ವಾಮೀಜಿಗಳು ಪಾದಯಾತ್ರೆಗೆ ಬರೋಕೆ ಹೆದರಿದರು. ಸರ್ಕಾರಕ್ಕೆ ಗಢ ಗಢ ಎಂದು ನಡುಗಿಬಿಟ್ರು. ಆದರೆ ಮುರುಗಮಠದ ಶ್ರೀ ಗಳು ಒಂದು ಡಜನ್ ಸ್ವಾಮೀಜಿ ಗಳನ್ನು ಕರೆದುಕೊಂಡು ಬಂದು, ನನ್ನ ಬೆನ್ನು ತಟ್ಟಿ, ಹೋರಾಟಕ್ಕೆ ಆಶೀರ್ವಾದ ಮಾಡಿದ್ರು

ಇದನ್ನೂ ಓದಿ:  Dharwad: ಕಲ್ಲಂಗಡಿ ಹಣ್ಣಿನಂಗಡಿ ಧ್ವಂಸ ಪ್ರಕರಣ: ಶ್ರೀರಾಮ ಸೇನೆಯ ನಾಲ್ವರು ಕಾರ್ಯಕರ್ತರ ಬಂಧನ

ಶರಣಾಗಿದ್ದೇನೆ ಎಂದು ಕೈ ಮುಗಿದ ಡಿಕೆಶಿ

ಇದನ್ನು ನನ್ನ ಜೀವನ ಇರೋವರೆಗೂ ಇದನ್ನು ಮರೆಯೋಕೆ ಸಾಧ್ಯ ಇಲ್ಲ ಎಂದು ಕೈ ಮುಗಿದು  ಶರಣಾಗಿದ್ದೇನೆ, ಶರಣಾಗಿದ್ಸೇನೆ, ಶರಣಾಗಿದ್ಸೇನೆ ಎಂದು ಹೇಳಿದರು. ಕಷ್ಟ ಕಾಲದಲ್ಲಿ ಧೈರ್ಯ, ಸ್ಪೂರ್ತಿ, ಆಶೀರ್ವಾದ ಮಾಡ್ತಾರೋ ಅದೇ ನಮಗೆ ಮುಖ್ಯ ಎಂದು ತಿಳಿಸಿದರು.
Published by:Mahmadrafik K
First published: