ಬೆಂಗಳೂರು: ಇಬ್ಬರು ಮಾಜಿ ಮುಖ್ಯಮಂತ್ರಿಗಳ ನಡುವೆ ವಾಕ್ಸಮರ ಮುಂದುವರೆದಿದೆ. ಇಂದೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ(hd kumaraswamy) ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah )ಪರಸ್ಪರ ವಾಗ್ಬಾಣದಿಂದ ತಿವಿದಿದ್ದಾರೆ. ನನ್ನ ಬಗ್ಗೆ ಮತ್ತು ಜೆಡಿಎಸ್(JDS) ಬಗ್ಗೆ ಮಾತನಾಡಬೇಡಿ ಎಂಬ ಕುಮಾರಸ್ವಾಮಿ ಹೇಳಿಕೆಗೆ ಸಿದ್ದರಾಮಯ್ಯ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಇಂತಹ ಎಚ್ಚರಿಕೆ ಬಹಳ ನೋಡಿದ್ದೇನೆ. ನಾನು ಕುಮಾರಸ್ವಾಮಿ ಹೇಳಿಕೆಗೆ ರಿಯಾಕ್ಟ್ ಮಾಡಬಾರದು ಎಂದುಕೊಂಡಿದ್ದೇನೆ ಎನ್ನುವ ಮೂಲಕ ಕೋಪ ಹೊರ ಹಾಕಿದರು.
ಮಣ್ಣಿನ ಮಕ್ಕಳು ಮೋಸ ಮಾಡಿಲ್ಲ
ಇದಕ್ಕೂ ಮುನ್ನ ಮಾತನಾಡಿದ್ದ ಎಚ್ಡಿಕೆ, ಕರ್ನಾಟಕದ 'ಸಿದ್ದಹಸ್ತರು' ಹೇಳ್ತಾರೆ ಖಜಾನೆ ಖಾಲಿಯಾಗಿದೆ ಮಣ್ಣಿನ ಮಕ್ಕಳು ಮೋಸ ಮಾಡಿದ್ರು ಅಂತ. ಸಿದ್ದರಾಮಯ್ಯ ನವರಿಗೆ ಕೇಳ್ತೀನಿ, ನಿಮ್ಮ ಕಾಲದಲ್ಲಿ ಎತ್ತಿನಹೊಳೆ ಗುದ್ದಲಿ ಪೂಜೆ ಮಾಡಿದ್ರಲ್ಲ ಏನಾಯ್ತು ಈಗ. ನನಗೆ ಸಿಕ್ಕಿದ್ದು ಟೆಂಪರರಿ ಅಧಿಕಾರ. ಸಿದ್ದರಾಮಯ್ಯ ಖಜಾನೆ ಭರ್ತಿ ಮಾಡಿಹೋಗಿದ್ದಕ್ಕೆ ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಮನೆ ಕೊಡೋದಕ್ಕಾಗಿಲ್ಲ. ಕುಮಾರಸ್ವಾಮಿ ಸಿಎಂ ಆದ್ರೆ ನಮಗೇನು ಲಾಭ ಎಂದು ಸಿದ್ದರಾಮಯ್ಯ ಹಾಗೂ ರಮೇಶ್ ಕುಮಾರ್ ಪ್ರಶ್ನಿಸಿದ್ದರು ಎಂದು ಹೇಳಿದರು.
ವೋಟ್ಬ್ಯಾಂಕ್ಗಾಗಿ ಮುಸ್ಲಿಮರಿಗೆ ಆದ್ಯತೆ
ಸಿಂದಗಿ ಉಪಚುನಾವಣೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ನವರು, ಮುಸ್ಲಿಂ ಅಭ್ಯರ್ಥಿ ಹಾಕಿ ಕಾಂಗ್ರೆಸ್ ಸೋಲಿಸುವ ಕೆಲಸ ಮಾಡ್ತಿದ್ದಾರೆ. ಬಸವಕಲ್ಯಾಣದಲ್ಲಿ ಅದನ್ನೇ ಮಾಡಿದ್ರು ಎಂದು ಬಿಜೆಪಿ ವಿರುದ್ಧ ಆರೋಪಿಸಿದರು. ಮುಸ್ಲಿಂರ ಬಗ್ಗೆ ಕಾಳಜಿ ಇದ್ರೆ ಸಂಪುಟದಲ್ಲಿ ಯಾಕೆ ಯಾರಿಗೂ ಅವಕಾಶ ಕೊಟ್ಟಿರಲಿಲ್ಲ.ಮಂಡ್ಯ, ಮೈಸೂರಿನಲ್ಲಿ ಅಲ್ಪಸಂಖ್ಯಾತರಿಗೆ ಯಾಕೆ ಟಿಕೆಟ್ ಕೊಡಲ್ಲ. ಬಿಜೆಪಿಗೆ ಅನುಕೂಲ ಮಾಡಲಿಕ್ಕೆ ಉತ್ತರ ಕರ್ನಾಟಕ ಭಾಗದಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕ್ತಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಅಶೋಕ್ ಮನಗೊಳಿಗೆ ಟಿಕೆಟ್ ಫೈನಲ್
ಸಿಂದಗಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಅಶೋಕ್ ಮನಗೂಳಿ ಅಭ್ಯರ್ಥಿ, ಹೈಕಮಾಂಡ್ ಈಗಾಗಲೆ ಅನೌನ್ಸ್ ಮಾಡಿದೆ. ಸಿಂಧಗಿ ಅಶೋಕ್ ಮನಗೂಳಿ ಫೈನಲ್ ಆಗಿದ್ದಾರೆ ಎಂದು ಸಿದ್ದರಾಮಯ್ಯ ತಿಳಿಸಿದರು. ಅಕ್ಟೋಬರ್ 7ರಂದು ಹಾನಗಲ್ನಲ್ಲಿ, ಅ.8ರಂದು ಸಿಂದಗಿಯಲ್ಲಿ ಕಾಂಗ್ರೆಸ್ ನಾಮಿನೇಷನ್ ಫೈಲ್ ಮಾಡಲಿದೆ. ನಾನು ಎರಡು ಕಡೆ ಹೋಗ್ತಾ ಇದ್ದೀನಿ ಎಂದರು.
ಇದನ್ನೂ ಓದಿ: Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ
ಹಾನಗಲ್ ಟಿಕೆಟ್ ಅಂತಿಮ ಆಗಿಲ್ಲ
ಹಾನಗಲ್ ಉಪಚುನಾವಣೆ ಬಗ್ಗೆ ಹಾವೇರಿ ಜಿಲ್ಲೆಯ ಮುಖಂಡರ ಜತೆ ಚರ್ಚೆ ಮಾಡಿದ್ದೇವೆ. ಮನೋಹರ್ ತಹಶಿಲ್ದಾರ್ ಮತ್ತು ಶ್ರೀನಿವಾಸ ಮಾನೆ ಇಬ್ಬರು ಆಕಾಂಕ್ಷಿಗಳು ಇದ್ರು. ಇಬ್ಬರ ನಡುವೆ ಸ್ಪರ್ಧೆ ಇ, ಎಲ್ಲರ ಅಭಿಪ್ರಾಯ ಕೇಳಿದ್ದೇವೆ. ನಾವು ಯಾರಿಗೆ ಟಿಕೆಟ್ ಕೊಟ್ರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಹೇಳಿದ್ದೇವೆ. ಇಬ್ಬರು ಇದಕ್ಕೆ ಒಪ್ಪಿಕೊಂಡಿದ್ದಾರೆ. ಎರಡು ಮೂರು ದಿನಗಳಲ್ಲಿ ಹೈಕಮಾಂಡ್ ಅಂತಿಮ ಮಾಡುತ್ತೆ ಎಂದು ತಿಳಿಸಿದರು.
ದಲಿತ ಸಿಎಂ ಅಸ್ತ್ರದ ಬಗ್ಗೆ ಮಾತಾಡಲ್ಲ
ಇನ್ನು ಮಾಜಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ದಲಿತ ಸಿಎಂ ಅಸ್ತ್ರ ಹೇಳಿಕೆ ಬಗ್ಗೆ ನಾನು ಏನು ಮಾತನಾಡಲ್ಲ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ಅದಕ್ಕೆ ಬದ್ಧ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ