Vinod Raj : ಫೋಟೋ ತಿರುಚಿ ಫೇಸ್​​ಬುಕ್​​ನಲ್ಲಿ ಅವಹೇಳನ: ವಿನೋದ್ ರಾಜ್​ ಬೇಸರ

vinod rajkumar photo morphing: ನಾನು ನನ್ನ ತಾಯಿಯನ್ನು ನೋಡಿಕೊಂಡು, ಕೃಷಿ ಮಾಡಿಕೊಂಡು ನಮ್ಮ ಪಾಡಿಗೆ ನಾವಿದ್ದೇವೆ. ನಮ್ಮ ವಿರುದ್ಧ ಮಾನಹಾನಿ ಪೋಸ್ಟ್​ ಮಾಡಿರೋದಕ್ಕೆ ಬೇಸರವಾಗಿದೆ ಎಂದ ವಿನೋದ್​ ರಾಜ್​

ನಟ ವಿನೋದ್​ ರಾಜ್​

ನಟ ವಿನೋದ್​ ರಾಜ್​

  • Share this:
ಬೆಂಗಳೂರು : ಕನ್ನಡದ ಹಿರಿಯ ನಟಿ ಲೀಲಾವತಿ ಅವರು ಪುತ್ರ, ನಟ ವಿನೋದ್​ ರಾಜ್ ​​​ ತಮ್ಮ ಬಗೆಗಿನ ಅವಹೇಳನಕಾರಿ ಪೋಸ್ಟ್​​ ವಿರುದ್ಧ ಸೈಬರ್​​ ಕ್ರೈಂ ಠಾಣೆಗೆ ಭೇಟಿ ನೀಡಿದರು. ಕಳೆದ 8 ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ನಟ ವಿನೋದ್ ರಾಜ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹರಿದಾಡಿತ್ತು. ಈ ಕುರಿತು ವಿನೋದ್​ ರಾಜ್​ ಉತ್ತರ CEN ರಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿಗೆ ವಿನೋದ್​ ರಾಜ್  ಅವರನ್ನು ಕರೆಸಿದ್ದರು. ತನಿಖಾ ಹಂತದಲ್ಲಿ ಕೆಲವು ಮಾಹಿತಿಯನ್ನು ಪೊಲೀಸ್ರು ಕಲೆ ಹಾಕಿದ್ದಾರೆ. ಆ ಹಿನ್ನೆಲೆ ಹೆಚ್ಚಿನ ಮಾಹಿತಿಗೆ ಕರೆಸಿದ್ದರು.

ಠಾಣೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿನೋದ್​ ರಾಜ್  ಬೇಸರ ವ್ಯಕ್ತಪಡಿಸಿದರು. ನಾನು ಫೇಸ್​ಬುಕ್​ ಸೇರಿದಂತೆ ಯಾವುದೇ ಸಾಮಾಜಿಕ ಮಾಧ್ಯಮಗಳನ್ನು ಬಳಸೋಲ್ಲ, ಸಕ್ರಿಯವಾಗಿಯೂ ಇಲ್ಲ. ಆದರೆ ಕೆಲ ತಿಂಗಳುಗಳ ಹಿಂದೆ ನನ್ನ ಮಾನಹಾನಿ ಆಗುವಂತ ಫೋಟೋವೊಂದ ಫೇಸ್​ಬುಕ್​ನಲ್ಲಿ ಪೋಸ್ಟ್​ ಆಗಿರುವುದನ್ನು ಸ್ನೇಹಿತರು ನನ್ನ ಗಮನಕ್ಕೆ ತಂದರು. ನನಗೆ ನಿಜಕ್ಕೂ ಶಾಕ್​​ ಆಯಿತು.

ನನ್ನ ಫೋಟೋವನ್ನು ತಿರುಚಿ ಅವಹೇಳಕಾರಿಯಾಗಿ ಪೋಸ್ಟ್​​ ಮಾಡಲಾಗಿತ್ತು. ಫೋಟೋ ತಿರುಚುವಿಕೆಯಿಂದ ಮಾನ ಕಳೆಯುವ ಪ್ರಯತ್ನ ನಡೆದಿತ್ತು. ಇದರ ವಿರುದ್ಧ ದೂರು ನೀಡೋಣ ಎಂದು ಸ್ನೇಹಿತರೇ ಸಲಹೆ ನೀಡಿದರು. ಯಾರಿಗದರೂ ಈ ರೀತಿ ಮಾಡಿದರೆ ತುಂಬಾ ನೋವಾಗುತ್ತೆ. ಸುಳ್ಳು ಸುದ್ದಿ, ಸುಳ್ಳು ಆರೋಪಗಳು ಯಾರಿಗಾದರೂ ಬೇಸರ ತರಿಸುತ್ತೆ. ನಾನು ನನ್ನ ತಾಯಿಯನ್ನು ನೋಡಿಕೊಂಡು, ಕೃಷಿ ಮಾಡಿಕೊಂಡು ನಮ್ಮ ಪಾಡಿಗೆ ನಾವಿದ್ದೇವೆ. ನಮ್ಮ ವಿರುದ್ಧ ಮಾನಹಾನಿ ಪೋಸ್ಟ್​ ಯಾರು ಮಾಡಿದ್ದಾರೋ ಗೊತ್ತಿಲ್ಲ ಎಂದು ವಿನೋದ್​ ತಿಳಿಸಿದರು.

ಇದನ್ನೂ ಓದಿ: Yo Yo Honey Singh: ರ್ಯಾಪರ್​​​ ಹನಿಸಿಂಗ್ ವಿಕೃತ ಪತ್ನಿಪೀಡಕನೇ..? ಹಸಿ ಹಸಿ ಸತ್ಯ ಬಿಚ್ಚಿಟ್ಟ ಹೆಂಡತಿ..!

ಪೊಲೀಸರು ನನ್ನ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಆ ಸಂಬಂಧ ಇಂದು ಕರೆದಿದ್ದರು. ತನಿಖೆಗೆ ನಾನು ಸಹಕರಿಸಿದ್ದೇನೆ. ನೋಡೋಣ ತಪ್ಪಿತಸ್ಥರಿಗೆ ಶಿಕ್ಷಯಾಗಲಿದೆ. ಈ ರೀತಿಯ ಕೃತ್ಯಗಳು ಕಲಾವಿದರಿಗಾಗಲಿ, ಸಾಮಾನ್ಯರಿಗಾಗಲಿ ಆಗಬಾರದು. ಯುವಕರು ಕೆಟ್ಡ ಮನಸ್ಥಿತಿಯಿಂದ ಹೊರಬರಬೇಕು ಎಂದು ನಟ ವಿನೋದ್ ರಾಜ್ ಹೇಳಿದರು.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: