Vinay Guruji: ಮುಂದಿನ ಸಿಎಂ ಎಚ್​ಡಿಕೆ; ಶಾಸಕರಾಗಲಿರುವ ನಿಖಿಲ್​; ವಿನಯ್​ ಗುರೂಜಿ ಭವಿಷ್ಯ

ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಅವರು ನುಡಿದಿದ್ದ ಭವಿಷ್ಯ ನಿಜವಾಗಿತ್ತು.

ಶರವಣ ಮನೆಯಲ್ಲಿ ಎಚ್​ಡಿಕೆ, ವಿನಯ್​ ಗುರೂಜಿ

ಶರವಣ ಮನೆಯಲ್ಲಿ ಎಚ್​ಡಿಕೆ, ವಿನಯ್​ ಗುರೂಜಿ

 • Share this:
  ಬೆಂಗಳೂರು (ಜು. 3):  ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ ಗೆದ್ದು, ಎಚ್​ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಗೌರಿಗದ್ದೆಯ ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ. ತಮ್ಮ  ಭಕ್ತರಾಗಿ ಜೆಡಿಎಸ್​ ನಾಯಕ, ಮಾಜಿ ಪರಿಷತ್ ಸದಸ್ಯ ಶರವಣ ಮನೆಗೆ ಶುಕ್ರವಾರ ವಿನಯ್​ ಗುರೂಜಿ ಭೇಟಿ ನೀಡಿದ್ದರು. ರಾಜ್ಯ ರಾಜಕಾರಣದ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಭೇಟಿ ನೀಡಿ ಗುರೂಜಿ ಆಶೀರ್ವಾದ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೊಮ್ಮೆ ಜೆಡಿಎಸ್ ಅಧಿಕಾರ ನಡೆಸುತ್ತದೆ. ಮುಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಎಂದು ತಿಳಿಸಿದ್ದಾರೆ. ಇಷ್ಟೇ ಅಲ್ಲದೇ, ನಿಖಿಲ್​ ಕುಮಾರಸ್ವಾಮಿ ಅವರಿಗೆ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದ್ದು, ಅವರು ಶಾಸಕರಾಗುತ್ತಾರೆ ಎಂದಿದ್ದಾರೆ.

  ಗೌರಿಗದ್ದೆಯ ವಿನಯ್​ ಗುರೂಜಿ ಭವಿಷ್ಯ ನಿಜವಾಗತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಇದೇ ಹಿನ್ನಲೆ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ವಿನಯ್​ ಗುರೂಜಿ ಭಕ್ತರಾಗಿದ್ದು, ಅವರ ಆಶೀರ್ವಾದ ಪಡೆಯುತ್ತಲೇ ಇರುತ್ತಾರೆ.

  ಚಿಕ್ಕವಯಸ್ಸಾದರೂ ಅವರು ಹೇಳುವ ಮಾತುಗಳೆಲ್ಲಾ ಸತ್ಯವಾಗಿದೆ ಎಂಬುದನ್ನು ಅನೇಕರು ಈಗಾಗಲೇ ತಿಳಿಸಿದ್ದಾರೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ದೇವೆಗೌಡ, ಡಿಕೆ ಶಿವಕುಮಾರ್​​, ಬಿಎಸ್​ ಯಡಿಯೂರಪ್ಪ ಸೇರಿದಂತೆ ಅನೇಕ ರಾಜಕೀಯ ನಾಯಕರು ಅವರ ಮಾರ್ಗದರ್ಶನ ಪಡೆಯುತ್ತಾರೆ.

  ಹಿಂದೆ ನುಡಿದ ಭವಿಷ್ಯ ನಿಜವಾಗಿತ್ತು

  2018ರಲ್ಲಿ ಕುಮಾರಸ್ವಾಮಿ ಸಿಎಂ ಆಗುತ್ತಾರೆ, ಹಾಗೂ ಜೆಡಿಎಸ್​ಗೆ 40ಕ್ಕಿಂತ ಕಡಿಮೆ ಸ್ಥಾನಗಳು ಬರುತ್ತದೆ ಕೂಡ ಈ ಹಿಂದೆ ವಿನಯ್​ ಗುರೂಜಿ ನುಡಿದಿದ್ದ ಭವಿಷ್ಯ ನಿಜವಾಗಿತ್ತು. ಇದೇ ಹಿನ್ನಲೆ ಮೈತ್ರಿ ಸರ್ಕಾರದ ರಚನೆ ಆದ ಸಂದರ್ಭದಲ್ಲಿ ಕೂಡ ವಿನಯ್​ ಗುರೂಜಿ ಅವರನ್ನು ಮನೆಗೆ ಕರೆಸಿಕೊಂಡು ದೇವೇಗೌಡ ಅವರು ಆಶೀರ್ವಾದ ಪಡೆದು ಸತ್ಕಾರಿಸಿದ್ದರು.

  ಇದನ್ನು ಓದಿ: ಮೋದಿ ಸಂಪುಟದಲ್ಲಿ ಸಚಿವ ಸ್ಥಾನಪಡೆಯಲಿದ್ದಾರಾ ಸಂಸದ ಪ್ರತಾಪ್​ ಸಿಂಹ?

  ಈಗಾಗಲೇ ಎಚ್​ಡಿಕೆ ಕೂಡ ರಾಜ್ಯದಲ್ಲಿ ಜನರು ರಾಷ್ಟ್ರೀಯ ಪಕ್ಷಗಳ ಆಡಳಿತದಿಂದ ಬೇಸತ್ತಿದ್ದಾರೆ. ದೇಶದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆ ಇದಕ್ಕೆ ಸ್ಪಷ್ಟ ಉದಾಹರಣೆ. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮಣೆ ಹಾಕಿದ್ದಾರೆ. ರಾಜ್ಯದಲ್ಲೂ ಕೂಡ ಜನರು ಪ್ರಾದೇಶಿಕ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಕಾಂಗ್ರೆಸ್​ ನಾಯಕರ ಕಿತ್ತಾಟ, ಬಿಜೆಪಿ ಭ್ರಷ್ಟಚಾರಕ್ಕೆ ಜನರು ರೋಸಿ ಹೋಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್​ ಅಧಿಕಾರಕ್ಕೆ ಬರಲಿದ್ದೇವೆ ಎಂದು ಈಗಾಗಲೇ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

  ಇನ್ನು ಮಂಡ್ಯದಲ್ಲಿ ಸೋಲನ್ನು ಅನುಭವಿಸಿದ್ದ ಜೆಡಿಎಸ್​ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ, ರಾಮನಗರದಲ್ಲಿ ಸಕ್ರಿಯರಾಗಿದ್ದು, ಅಲ್ಲಿಂದಲೇ ಮುಂದಿನ ವಿಧಾಸಭಾ ಚುನಾವಣೆ ವೇಳೆ ಕಣಕ್ಕೆ ಇಳಿಯಲಿ ವೇದಿಕೆ ಸಜ್ಜು ಮಾಡಿಕೊಳ್ಳುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜನರಿಗೆ ನೆರವಾಗುವ ಮೂಲಕ ಈಗಾಗಲೇ ಜನರಿಗೆ ಹತ್ತಿರವಾಗುವ ಪ್ರಯತ್ನ ನಡೆಸಿದ್ದಾರೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: