ಬೆಂಗಳೂರು (ಜು. 6): ಮಾಜಿ ಸಿಎಂ ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಗದ್ದುಗೆ ಏರಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಅವರೇ ಸಿಎಂ ಆಗಲಿದ್ದಾರೆ. ಜೊತೆಗೆ ಅವರ ಮಗ ನಿಖಿಲ್ ಕುಮಾರಸ್ವಾಮಿಗೂ ಉತ್ತಮ ರಾಜಕೀಯ ಭವಿಷ್ಯವಿದ್ದು, ಅವರು ಶಾಸಕರಾಗಲಿದ್ದಾರೆ ಎಂದು ಚಿಕ್ಕಮಗಳೂರಿನ ಗೌರಿಗದ್ದೆಯ ಅವಧೂತ ವಿನಯ್ ಗುರೂಜಿಗಳು ತಿಳಿಸಿದ್ದಾರೆ ಎಂಬ ಸುದ್ದಿಗಳು ಕಳೆದೆರಡು ದಿನಗಳ ಹಿಂದೆ ಭಾರೀ ಸದ್ದು ಮಾಡಿತ್ತು. ಆದರೆ, ಈ ಬಗ್ಗೆ ವಿನಯ್ ಗುರೂಜಿ ಅಗಲಿ, ಎಚ್ಡಿ ಕುಮಾರಸ್ವಾಮಿ ಆಗಲಿ ತಿಳಿಸಿರಲಿಲ್ಲ. ಈ ಬಗ್ಗೆ ಇಂದು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿರುವ ಅವಧೂತ ವಿನಯ್ ಗುರೂಜಿಗಳು, ಇವೆಲ್ಲಾ ಸತ್ಯಕ್ಕೆ ದೂರವಾದ ಹೇಳಿಕೆ. ಹೆಚ್ ಡಿ ಕುಮಾರಸ್ವಾಮಿ ಅವರ ರಾಜಕೀಯ ಜೀವನದ ಬಗ್ಗೆ ತಾವು ಯಾವುದೇ ಭವಿಷ್ಯ ಹೇಳಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ.
ಸಾಮಾಜಿಕ ಸೇವೆಯಲ್ಲಿ ತೊಡಗಿ, ಲಾಕ್ ಡೌನ್ ಸಂದರ್ಭದಲ್ಲಿ ಜನ ಸಾಮಾನ್ಯರಿಗೆ ನೆರವಾಗುತ್ತಿರುವ ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಟಿ ಎ ಶರವಣ ಅವರ ಮನೆಗೆ ಜು. 2ರಂದು ವಿನಯ್ ಗುರೂಜಿಗಳು ಸೌಜನ್ಯದ ಭೇಟಿ ನೀಡಿದ್ದರು. ಈ ವೇಳೆ ಅವರ ಕುಟುಂಬದ ಕುಶಲೋಪರಿ ವಿಚಾರಿಸಿ ಆಶೀರ್ವಚನ ನೀಡಿದ್ದರು. ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿಗಳು ಕೂಡ ಆಗಮಿಸಿದರು. ಈ ಸಂದರ್ಭದಲ್ಲಿ ಅವರ ಕ್ಷೇಮ ಸಮಾಚಾರ ವಿಚಾರಿಸಲಾಯಿತು.
ಈ ಭೇಟಿಯ ಸಂದರ್ಭದಲ್ಲಿ ಯಾವುದೇ ರೀತಿಯ ಮುಂದಿನ ಭವಿಷ್ಯದ ರಾಜಕೀಯ ವಿಚಾರವನ್ನಾಗಲಿ ಅಥವಾ ಹೆಚ್ ಡಿ ಕುಮಾರಸ್ವಾಮಿ ಅವರ ಕೌಟುಂಬಿಕ ವಿಚಾರಗಳ ಬಗ್ಗೆ ಚರ್ಚೆಗಳು ನಡೆದಿಲ್ಲ ಎಂದು ಪ್ರಕಟಣೆ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ. ಅಲ್ಲದೇ, ಈ ರೀತಿಯ ಸೂಕ್ಷ್ಮ ವಿಚಾರಗಳನ್ನು, ಸತ್ಯಕ್ಕೆ ದೂರವಾದ ಮಾಹಿತಿಗೆ ಯಾರು ಕಿವಿಗೊಡದೆ ವಾಸ್ತವಕ್ಕೆ ಹತ್ತಿರವಿರದ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡಬಾರದೆಂದು ಗುರೂಜಿಗಳು ವಿನಂತಿಸಿದ್ದಾರೆ.
ಇದನ್ನು ಓದಿ: ಕೋವಿಡ್ ನಿಯಮ ಉಲ್ಲಂಘಿಸಿದರೆ ಮತ್ತೆ ಲಾಕ್ಡೌನ್; ಎಚ್ಚರಿಕೆ ನೀಡಿದ ಸರ್ಕಾರ
ಗೌರಿಗದ್ದೆಯ ವಿನಯ್ ಗುರೂಜಿ ಭವಿಷ್ಯ ನಿಜವಾಗತ್ತದೆ ಎಂಬ ಮಾತು ರಾಜಕೀಯ ವಲಯದಲ್ಲಿದೆ. ಇದೇ ಹಿನ್ನಲೆ ಪಕ್ಷಾತೀತವಾಗಿ ಎಲ್ಲಾ ರಾಜಕೀಯ ನಾಯಕರು ವಿನಯ್ ಗುರೂಜಿ ಭಕ್ತರಾಗಿದ್ದು, ಅವರ ಆಶೀರ್ವಾದ ಪಡೆಯುತ್ತಲೇ ಇರುತ್ತಾರೆ. ಇದರಿಂದಲೇ ಅವರ ಮಾತಿಗೆ ಸಾಕಷ್ಟು ಪ್ರಾಮುಖ್ಯತೆ ಇದೆ. ಇದೇ ಕಾರಣದಿಂದ ವಿನಯ್ ಗುರೂಜಿ, ಶರವಣ ಮತ್ತು ಕುಮಾರಸ್ವಾಮಿ ಭೇಟಿ ವಿಚಾರ ಸಾಕಷ್ಟು ಕುತೂಹಲ ಮೂಡಿಸಿತ್ತು. ಜೊತೆಗೆ ಅಂತೆ ಕಂತೆಯ ಸೃಷ್ಟಿಗೆ ಕಾರಣವಾಗಿತ್ತು.
ಜೆಡಿಎಸ್ ನಾಯಕ ಶರವಣ ಮನೆಯಲ್ಲಿ ವಿನಯ್ ಗುರೂಜಿ ಭೇಟಿ ವೇಳೆ ರಾಜಕೀಯ ವಿಚಾರಗಳು ಚರ್ಚೆ ನಡೆದಿದ್ದು, ಈ ವೇಳೆ ಕುಮಾರಸ್ವಾಮಿಗೆ ಸಿಎಂ ಆಗುವ ಭಾಗ್ಯ ಮತ್ತೆ ಬರಲಿದೆ ಎಂಬ ಕುರಿತು ಕೆಲವ ವರದಿ ದಾಖಲಾಗಿದ್ದವು. ಈ ಎಲ್ಲಾವು ಕೇವಲ ಊಹಾಪೋಹಾ ಸುದ್ದಿಯಾಗಿದೆ. ಇವೆಲ್ಲಾ ಸತ್ಯಕ್ಕೆ ದೂರವಾಗಿದೆ ಎಂದು ಈಗ ಅವಧೂತರ ಆಶ್ರಮದಿಂದಲೇ ತಿಳಿಸಲಾಗಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ