Vijay Sethupathi: ಬೆಂಗಳೂರನಲ್ಲಿ ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆ ಯತ್ನ: ಅಪ್ಪು ಸಮಾಧಿಗೆ ಭೇಟಿ ನೀಡಲು ಬರುತ್ತಿದ್ದ ವೇಳೆ ಅಟ್ಯಾಕ್​!

Vijay Sethupathi: ವ್ಯಕ್ತಿಯೊಬ್ಬ ತಮಿಳು ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆ ಮಾಡಲು ಯತ್ನಿಸುವ  ದೃಶ್ಯ ಮೊಬೈಲ್​ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ಇದು ಎಲ್ಲೆಡೆ ಸಖತ್​ ವೈರಲ್ ಆಗುತ್ತಿದೆ. 

ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆಗೆ ಯತ್ನ

ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆಗೆ ಯತ್ನ

  • Share this:
ಕನ್ನಡ ಚಿತ್ರರಂಗ ಕಂಡ ಸರಳತೆಯ ಸಾಮ್ರಾಟ್​ ನಮ್ಮ ಪುನೀತ್​ ರಾಜ್​ಕುಮಾರ್(Puneeth Rajkumar), ಅವರು ನಮ್ಮನೆಲ್ಲ ಅಗಲಿ ಇಂದಿಗೆ 7ನೇ ದಿನ. ಅವರಿಲ್ಲ ಅನ್ನುವುದನ್ನು ಯಾರಿಂದಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು(Appu) ಅವರ ಅಗಲಿಕೆಯ  ಸುದ್ದಿಯನ್ನು ಕೇಳಿ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ. ತೆಲುಗು(Telugu), ತಮಿಳು(Tamil) ಚಿತ್ರರಂಗದ ನಟ, ನಟಿಯರು ಅಪ್ಪು ಜೊತೆ ಕಳೆದ ಕ್ಷಣಗಳನ್ನು ನೆನೆದು ಸಾಮಾಜಿಕ ಜಾಲತಾಣ(Social Media)ದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ಕೆಲವು ಹೆಸರಾಂತ ನಟರು ಅಪ್ಪು ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಮಾಧಾನ ಮಾಡುವ ಕೆಲಸವನ್ನು ಮಾಡಿದ್ದಾರೆ. ತೆಲುಗ ನಟ ಅಕ್ಕಿನೇನಿ ನಾಗಾರ್ಜುನ(Akkineni Nagarjuna), ಶಿವಕಾರ್ತಿಕೇಯನ್(Shiva Karthikeyan)​, ಚಿರಂಜೀವಿ(Chiranjeevi) ಪುತ್ರ ರಾಮ್​ ಚರಣ್(Ram Charan)​ ಕೂಡ ಅಪ್ಪು ಮನೆಗೆ ಭೇಟಿ ನೀಡಿ ಸಾಂತ್ವನ ಹೇಳುತ್ತಿದ್ದಾರೆ. ಅಪ್ಪು ಸಮಾಧಿಗೆ ಭೇಟಿ ಕೊಟ್ಟು, ಪೂಜೆ ಸಲ್ಲಿಸಿದ್ದಾರೆ. ಇದರ ಮಧ್ಯೆ ವಿಜಯ್​ ಸೇತುಪತಿ(Vijay Sethupathi) ಕೂಡ ಅಪ್ಪು ಸಮಾಧಿಗೆ ಭೇಟಿ ನೀಡಲು ಬರುವ ಸಂದರ್ಭದಲ್ಲಿ ಅವರ ಮೇಲೆ ದಾಳಿ(Attack) ಯತ್ನ ನಡೆದಿದೆ. ವ್ಯಕ್ತಿಯೊಬ್ಬ ತಮಿಳು ನಟ ವಿಜಯ್​ ಸೇತುಪತಿ ಮೇಲೆ ಹಲ್ಲೆ ಮಾಡಲು ಯತ್ನಿಸುವ  ದೃಶ್ಯ ಮೊಬೈಲ್​ ಕ್ಯಾಮರಾವೊಂದರಲ್ಲಿ ಸೆರೆಯಾಗಿದೆ. ಇದು ಎಲ್ಲೆಡೆ ಸಖತ್​ ವೈರಲ್ ಆಗುತ್ತಿದೆ. 

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೇತುಪತಿ ಮೇಲೆ ಹಲ್ಲೆ ಯತ್ನ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರಿಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಅಪ್ಪು ಮನೆಗೆ ಭೇಟಿ ನೀಡಲು ತಮಿಳು ಚಿತ್ರರಂಗದ ವಿಜಯ್​ ಸೇತುಪತಿ ಚೆನ್ನೈನಿಂದ ಬೆಂಗಳೂರಿಗೆ ಬರುತ್ತಿದ್ದರು. ವಿಮಾನದಲ್ಲಿ ಬರುವಾಗ ವಿಜಯ್​ ಸೇತುಪತಿ ಪಿಎ ಹಾಗೂ ಸಹಪ್ರಯಾಣಿಕನ ನಡುವೆ ಕಿರಿಕ್​ ಆಗಿದೆ. ವಿಮಾನದಲ್ಲೇ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ಜಗಳವನ್ನು ಸ್ವತಃ ವಿಜಯ್​ ಸೇತುಪತಿ ಬಿಡಿಸಿದ್ದರು. ಸಹ ಪ್ರಯಾಣಿಕನನ್ನು ಸಮಾಧಾನ ಪಡಿಸಿದ್ದರು. ಬಳಿಕ ಸುಮ್ಮನಾಗಿದ್ದ ಸಹಪ್ರಯಾಣಿಕ, ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಮತ್ತೆ ಕಿರಿಕ್​ ಮಾಡಿದ್ದಾರೆ. ಕಂಠ ಪೂರ್ತಿ ಕುಡಿದು ನಶೆಯಲ್ಲಿದ್ದ ಸಹಪ್ರಯಾಣಿಕ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಜಯ್​ ಸೇತುಪತಿ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ.

ಇದನ್ನು ಓದಿ : ಗರ್ಭಿಣಿ ಜಪಾನಿ ಮಹಿಳೆಯನ್ನು ಅಕ್ಕರೆಯಿಂದ ಮಾತನಾಡಿಸಿದ್ದ ಅಪ್ಪು, ಮಗನಿಗೆ ಅಣ್ಣಾವ್ರ ಚಿತ್ರದ ಹೆಸರಿಟ್ಟ ಮಹಿಳೆ!



ದೂರು ಕೊಟ್ಟು ಹಿಂಪಡೆದ ವಿಜಯ್​ ಸೇತುಪತಿ

ವಿಜಯ್ ಸೇತುಪತಿ ಮತ್ತು ಅವರ ಪಿಎ ಮೇಲೆ ಹಿಂದಿನಿಂದ ಬಂದು ಸಹ ಪ್ರಯಾಣಿಕ ಹಲ್ಲೆಗೆ ಯತ್ನಿಸಿದ್ದಾನೆ. ಆ ನಂತರ ಪೊಲೀಸ್​ ಠಾಣೆಗೆ ನಟ ಮತ್ತು ಪ್ರಯಾಣಿಕರು ತೆರಳಿದ್ದರು. ಏರ್​​ಪೋರ್ಟ್​​​​ ಪೊಲೀಸರು ಕೇಸ್ ದಾಖಲು ಮಾಡದೆ, ಅಪಾಲಜಿ ಬರೆಸಿಕೊಂಡು, ರಾಜಿ ಮಾಡಿ ಕಳುಹಿಸಿದ್ದಾರೆ. ಕುಡಿದು ಹಲ್ಲೆಗೆ ಯತ್ನಿಸಿರೋದರ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಪ್ರಕರಣ ವಿತ್ ಡ್ರಾ ಮಾಡಿಕೊಳ್ಳಲಾಗಿದೆ. ಅಷ್ಟು ಸೆಕ್ಯೂರಿಟಿ ಇದ್ದರು ಒಬ್ಬ ನಟನ ಮೇಲೆ ಈ ರೀತಿ ಹಲ್ಲೆ ಮಾಡುವುದು ಸರಿಯಲ್ಲ ಎಂದು ವಿಜಯ್​ ಸೇತುಪತಿ ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಇದನ್ನುಓದಿ : ಜಿಯೋ ಜೊತೆ ಸೇರಿ ಸಿನಿಮಾ ಮಾಡಲು ಹೊರಟಿದ್ದ ಅಪ್ಪು: ವಿಧಿಯಾಟದ ಮುಂದೆ ಕನಸು ಕಮರಿಹೋಯ್ತು!
ಅಪ್ಪು ಸಮಾಧಿಗೆ ತೆರಳಿ ಸೇತುಪತಿ ನಮನ


ತಮಿಳಿನಲ್ಲಿ ನಡೆಯುತ್ತಿರುವ ಮಾಸ್ಟರ್ ಶೆಫ್ ಕಾರ್ಯಕ್ರಮನ್ನು ನಟ ವಿಜಯ್ ಸೇತುಪತಿ ನಿರೂಪಿಸುತ್ತಿದ್ದಾರೆ. ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಇದರ ನಿರೂಪಣೆಗೆ ಅವರು ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿತ್ತು. ಆದರೆ, ಅವರು ಪುನೀತ್​ ಸಮಾಧಿಗೆ ನಮನ ಸಲ್ಲಿಸಲು ಬಂದಿದ್ದರು. ನಿನ್ನೆ ರಾತ್ರಿ ಅಪ್ಪು ಸಮಾಧಿಗೆ ವಿಜಯ್​ ಸೇತುಪತಿ ತೆರಳಿ ನಮನ ಸಲ್ಲಿಸಿದ್ದಾರೆ. ‘ಅಪ್ಪು ನಮ್ಮನ್ನು ಬಿಟ್ಟು ಹೋಗಿರುವುದು ನನಗೆ ನಂಬಲು ಆಗುತ್ತಿಲ್ಲ. ಇನ್ನು ಕುಟುಂಬದವರಿಗೆ ಎಷ್ಟು ನೋವು ಆಗಿರಬೇಡ. ಆ ದೇವರು ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಕೊಡಲಿ’ ಎಂದು ಸೇತುಪತಿ ಹೇಳಿದ್ದಾರೆ.
Published by:Vasudeva M
First published: