Viral Video: ಬೆಂಗಳೂರಲ್ಲಿ ಚಿಂದಿ ಆಯುವ ಮಹಿಳೆಯ ಇಂಗ್ಲೀಷ್ ಕೇಳಿ ದಂಗಾದ ನೆಟ್ಟಿಗರು!

ವಿಡಿಯೋದಲ್ಲಿನ ಚಿಂದಿ ಆಯುವ ಮಹಿಳೆಯ ಹೆಸರು ಸಿಸಿಲಿಯಾ ಮಾರ್ಗರೇಟ್ ಲಾರೆನ್ಸ್ ಎಂದು ತಿಳಿದು ಬಂದಿದೆ. ಆಕೆ ಈ ಹಿಂದೆ ಆರು ವರ್ಷಗಳ ಕಾಲ ಜಪಾನ್‍ನಲ್ಲಿ ವಾಸವಾಗಿದ್ದರು ಎಂದು ಕೂಡ ಹೇಳಲಾಗುತ್ತಿದೆ.

ಚಿಂದಿ ಆಯುವ ಮಹಿಳೆ

ಚಿಂದಿ ಆಯುವ ಮಹಿಳೆ

  • Share this:

    ಬೆಂಗಳೂರಿನಲ್ಲಿ ಚಿಂದಿ ಆಯುವ ಮಹಿಳೆಯೊಬ್ಬರು ಸ್ಫುಟವಾಗಿ ಮತ್ತು ನಿರ್ಗಳವಾಗಿ ಇಂಗ್ಲೀಷ್ ಮಾತನಾಡುವ ವಿಡಿಯೋವೊಂದು ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರು ಅಚ್ಚರಿಗೊಂಡಿದ್ದಾರೆ. ಸಚಿನಾ ಹೆಗ್ಗಾರ್ ಎಂಬ ಇನ್‍ಸ್ಟಾಗ್ರಾಂ ಬಳಕೆದಾರರು ತಮ್ಮ ಖಾತೆಯಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿನ ಚಿಂದಿ ಆಯುವ ಮಹಿಳೆಯ ಹೆಸರು ಸಿಸಿಲಿಯಾ ಮಾರ್ಗರೇಟ್ ಲಾರೆನ್ಸ್ ಎಂದು ತಿಳಿದು ಬಂದಿದೆ. ಆಕೆ ಈ ಹಿಂದೆ ಆರು ವರ್ಷಗಳ ಕಾಲ ಜಪಾನ್‍ನಲ್ಲಿ ವಾಸವಾಗಿದ್ದರು ಎಂದು ಕೂಡ ಹೇಳಲಾಗುತ್ತಿದೆ.


    ಬೆಂಗಳೂರಿನ ಸದಾಶಿವ ನಗರದಲ್ಲಿ ಚಿಂದಿ ಆಯುತ್ತಿದ್ದಾಗ, ಸಚಿನಾ ಆ ಮಹಿಳೆಯನ್ನು ಮಾತನಾಡಿಸಿದರು. ಮಾತಿನ ನಡುವೆ ಆಕೆ ಹಾಡಲು ಆರಂಭಿಸಿದಾಗ, ಆಕೆಯ ಹಾಡಿನ ಶೈಲಿ ಕಂಡು ಸಚಿನಾ ಆಶ್ಚರ್ಯ ಚಕಿತರಾದರು. “ ಕಥೆಗಳು ನಿಮ್ಮ ಸುತ್ತಲೇ ಇರುತ್ತವೆ. ನೀವೊಮ್ಮೆ ನಿಂತು ಸುತ್ತಲೂ ಕಣ್ಣಾಡಿಸಬೇಕು ಅಷ್ಟೆ. ಕೆಲವು ಸುಂದರ ಮತ್ತು ಕೆಲವು ದುಃಖಕಾರಕ. ಆದರೆ ಹೇ, ಕೆಲವು ಹೂಗಳಿಲ್ಲದ ಬದುಕೆಂತದ್ದು. . . .ಈ ಅದ್ಭುತ ಚೈತನ್ಯಶಾಲಿ ಮಹಿಳೆಯೊಂದಿಗೆ ಸಂಪರ್ಕದಲ್ಲಿರ ಬಯಸುತ್ತೇನೆ. . . ನಿಮ್ಮಲ್ಲಿ ಯಾರಾದರೂ ಅವರನ್ನು ನೋಡಿದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ” ಎಂದು ಸಚಿನಾ ಬರೆದುಕೊಂಡಿದ್ದಾರೆ.






    ಇನ್ನೊಂದು ವಿಡಿಯೋದಲ್ಲಿ “ಆಕೆಯೊಬ್ಬ ಅಭಿನೇತ್ರಿ” ಎಂದು ಬರೆದುಕೊಂಡಿದ್ದಾರೆ ಸಚಿನಾ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸೆಸಿಲಿಯಾರ ಹಾಡು , ಇಂಗ್ಲೀಷ್ ಮತ್ತು ಮಾತಿನ ಶೈಲಿ ನೋಡಿ ದಂಗಾಗಿದ್ದಾರೆ. “ಇದು ಅತ್ಯಂತ ಸ್ಪೂರ್ತಿದಾಯಕ. . . ಆಕೆ ಒಬ್ಬಂಟಿಯಲ್ಲ. . . ತಾನು ಒಬ್ಬಂಟಿ ಅಲ್ಲ ಎಂದು ಆಕೆ ಹೇಳಿದ ರೀತಿ ನನಗಿಷ್ಟವಾಯಿತು. . . ದೇವರು ಆಕೆಗೆ ಮತ್ತು ನಿಮಗೆ ಒಳ್ಳೆಯದು ಮಾಡಲಿ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯೆ ನೀಡಿದ್ದಾರೆ.


    ಇನ್ನೊಬ್ಬರು “ಈ ವಿಡಿಯೋ ನೋಡಿದ ನಂತರ ನಾನು ಹೊಸ ಪಾಠ ಕಲಿತೆ. . .ಯಾರನ್ನು ಬಾಹ್ಯ ರೂಪದಿಂದ ಅಳೆಯಬಾರದು, ಪ್ರತಿಯೊಬ್ಬರಿಗೂ ಒಂದು ಗತ ಜೀವನವಿರುತ್ತದೆ ಮತ್ತು ಅವರು ಬದುಕಿನಲ್ಲಿ ಏನಾದರೂ ನಡೆಯುತ್ತಿರುತ್ತದೆ” ಬರೆದಿದ್ದಾರೆ. ಸಿಸಿಲಿಯಾ ಪ್ರತೀ ಭಾನುವಾರ ತಪ್ಪದೆ ಬೆಂಗಳೂರಿನ ಹೋಲಿ ಗೋಸ್ಟ್ ಚರ್ಚ್‍ನಲ್ಲಿ ಕಾಣ ಸಿಗುತ್ತಾರೆ ಎಂದು ಕೆಲವು ಬಳಕೆದಾರರು ತಿಳಿಸಿದ್ದಾರೆ.






    ಇನ್‍ಸ್ಟಾಗ್ರಾಮ್‍ನಲ್ಲಿ 'ceciliaed_always' ಎಂಬ ಪುಟವೂ ಇದೆ, ಬೆಂಗಳೂರಿನಲ್ಲಿ ವಿವಿಧ ಕಥೆಗಳನ್ನು ಹೊಂದಿರುವ ಜನರ ಪೋಸ್ಟ್‌ಗಳಿವೆ. ಆ ಪುಟದಲ್ಲಿ ಇತ್ತೀಚಿಗಿನ ಪೋಸ್ಟ್‌ನಲ್ಲಿ ನೇರಳೆ ಸೀಕ್ವಿನ್ ಉಡುಪು ಧರಿಸಿರುವ ಮಹಿಳೆಯ ಫೋಟೋ ಇದ್ದು, “ ‘ಜೀವನ ನಿಮಗೆ ಟೊಮೇಟೋಗಳನ್ನು ನೀಡಿದಾಗ ಅದರಿಂದ ಒಳ್ಳೆಯ ಖಾರ ರಸಮ್ ಮಾಡಿ, ಬಳಿಕ ನಿಮ್ಮ ತುಟಿಗಳನ್ನು ನೆಕ್ಕಲು ಮರೆಯದಿರಿ’ ಸಿಸಿಲಿಯಾಳ ಮಾತುಗಳು” ಎಂದು ಬರೆಯಲಾಗಿದೆ.

    First published: