ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಬೆಂಗಳೂರಿಗೆ ಶಿಫ್ಟ್; ಪೈಲೆಟ್ ವರುಣ್ ಸಿಂಗ್ ಸ್ಥಿತಿ ಗಂಭೀರ!

Group Captain Varun Singh: ದೇಹದ ಬಹುತೇಕ ಭಾಗ ಸುಟ್ಟು ಹೋಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ವರುಣ್​ ಸಿಂಗ್​ ಅವರಿಗೆ ಚಿಕಿತ್ಸೆ ಮುಂದುವರೆದಿದೆ.  

ವರುಣ್ ಸಿಂಗ್ ಬೆಂಗಳೂರಿಗೆ ಶಿಫ್ಟ್

ವರುಣ್ ಸಿಂಗ್ ಬೆಂಗಳೂರಿಗೆ ಶಿಫ್ಟ್

  • Share this:
ಬೆಂಗಳೂರು: ನಿನ್ನೆ ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕನೂರಿನಲ್ಲಿ ಭಾರತೀಯ ವಾಯುಪಡೆಯ ಎಂಐ-17ವಿ5 (IAF Mi-17V5) ಹೆಲಿಕಾಪ್ಟರ್​ ಪತನಗೊಂಡು, ಸೇನಾ ಪಡೆಗಳ ಮುಖ್ಯಸ್ಥ (CDS) ಬಿಪಿನ್​ ರಾವತ್​ (Defence Staff General Bipin Rawat) ಸೇರಿದಂತೆ 13 ಮಂದಿ ಅಸುನೀಗಿದ್ದರು. ಹೆಲಿಕಾಪ್ಟರ್​ನಲ್ಲಿ ಪ್ರಯಾಣಿಸುತ್ತಿದ್ದ 14 ಮಂದಿಯಲ್ಲಿ ಗ್ರೂಪ್​ ಕ್ಯಾಪ್ಟನ್​​ ವರುಣ್​ ಸಿಂಗ್​ (Group Captain Varun Singh) ಒಬ್ಬರೇ ಬದುಕುಳಿದಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ವರುಣ್​ ಸಿಂಗ್​ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಶಿಫ್ಟ್​ ಮಾಡಲಾಗಿದೆ. ಸೂಲೂರು ಏರ್‌ಬೇಸ್‌‌‌‌ನಿಂದ ವಿಶೇಷ ಏರ್‌ ಆಂಬುಲೆನ್ಸ್ ಮೂಲಕ HAL ವಿಮಾನ ನಿಲ್ದಾಣಕ್ಕೆ ತರಲಾಯಿತು. HAL ವಿಮಾನ ನಿಲ್ದಾದಿಂದ ಕಮ್ಯಾಂಡೋ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ದೇಹದ ಬಹುತೇಕ ಭಾಗ ಸುಟ್ಟು ಹೋಗಿರುವ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರಿನ ಕಮಾಂಡೋ ಆಸ್ಪತ್ರೆಯಲ್ಲಿ ವರುಣ್​ ಸಿಂಗ್​ ಅವರಿಗೆ ಚಿಕಿತ್ಸೆ ಮುಂದುವರೆದಿದೆ.  

ಕಳೆದ ವರ್ಷ ಶೌರ್ಯ ಮೆರೆದಿದ್ದ ವರುಣ್​ ಸಿಂಗ್​

ಕಳೆದ ವರ್ಷ ತೇಜಸ್​ ಯುದ್ಧ ವಿಮಾನದಲ್ಲಿ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ ನಡುವೆಯೂ ಅವರು ಧೈರ್ಯವಾಗಿ ಎಚ್ಚರಿಕೆಯಿಂದ ಧೃತಿಗೆಡದೇ ಸುರಕ್ಷಿತಾಗಿ ವಿಮಾನವನ್ನು ಕೆಳಗಿಳಿಸಿದ್ದರು. ಅವರ ಈ ಸಾಹಸಕ್ಕೆ ಮೆಚ್ಚಿ ಕಳೆದ ಆಗಸ್ಟ್​ನಲ್ಲಿ ಅವರಿಗೆ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಲಾಗಿತ್ತು. ಜನರಲ್ ರಾವತ್ ವೆಲ್ಲಿಂಗ್ಟನ್​ ಸಂಸ್ಥೆಯಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುಲು ನಿನ್ನೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಜನರಲ್​ ರಾವತ್​ ಅವರನ್ನು ಜನರಲ್ ರಾವತ್ ಅವರನ್ನು ಸ್ವಾಗತಿಸಲು ಮತ್ತು ಅವರನ್ನು ವೆಲ್ಲಿಂಗ್ಟನ್‌ನ ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿಗೆ ಸೇನಾ ಹೆಲಿಕ್ಯಾಪ್ಟರ್​ನಲ್ಲಿ ಗ್ರೂಪ್​ ಕ್ಯಾಪ್ಟನ್​ ಸಿಂಗ್​​ ಕರೆದೊಯ್ಯಲು ಸೂಲೂರಿಗೆ ಹೋಗಿದ್ದರು.

ಇದನ್ನೂ ಓದಿ: Gen Bipin Rawat ಬಗ್ಗೆ ಮಡಿಕೇರಿಯ ಲೆಫ್ಟಿನೆಂಟ್ ಜನರಲ್ ಪ್ರಸಾದ್​ ಭಾವುಕ ಮಾತುಗಳು..!

14 ಮಂದಿಯಲ್ಲಿ 13 ಮಂದಿ ಸಾವು

ನಿನ್ನೆ ನಡೆದ ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್​ ರಾವತ್, ಅವರ ಪತ್ನಿ ಮಧುಲಿಕಾ ರಾವತ್​ ಸೇರಿದಂತೆ 13 ಮಂದಿ ಮೃತಪಟ್ಟಿದ್ದಾರೆ. ಬ್ರಿಗೇಡಿಯರ್ ಎಲ್ಎಸ್ ಲಿಡ್ಡರ್, ಲೆಫ್ಟಿನೆಂಟ್ ಕರ್ನಲ್ ಎಚ್ ಸಿಂಗ್, ವಿಂಗ್ ಕಮಾಂಡರ್ PS ಚೌಹಾಣ್, ಲೆಫ್ಟಿನೆಂಟ್ ಕಮಾಂಡರ್ ಹರ್ಜಿಂದರ್ ಸಿಂಗ್, ಜೂನಿಯರ್ ಕಮಿಷನ್ಡ್ ಆಫೀಸರ್ ದಾಸ್, ಜೂನಿಯರ್ ಕಮಿಷನ್ಡ್ ಆಫೀಸರ್ ಪ್ರದೀಪ್ ಎ, ಹಾವ್ ಸತ್ಪಾಲ್, ಲ್ಯಾನ್ಸ್ ನಾಯಕ್ ಗುರುಸೇವಕ್ ಸಿಂಗ್, ಲ್ಯಾನ್ಸ್ ನಾಯಕ್ ಜಿತೇಂದರ್, ಲ್ಯಾನ್ಸ್ ನಾಯಕ್ ವಿವೇಕ್, ಲ್ಯಾನ್ಸ್ ನಾಯಕ್ ಎಸ್ ತೇಜ ಮೃತಪಟ್ಟಿದ್ದಾರೆ.

ಇನ್ನು 7 ದಿನಗಳಲ್ಲಿ ಮುಖ್ಯಸ್ಥರ ನೇಮಕ 

ನಿಧನದ ನಂತರ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಪ್ರಮುಖ ಹುದ್ದೆ ಈಗ ಖಾಲಿಯಾಗಿದ್ದು, ಇವರ ಸ್ಥಾನಕ್ಕೆ ಹೊಸ ಅಧಿಕಾರಿಯನ್ನು  ನೇಮಿಸುವುದು ಕೇಂದ್ರ ಸರಕಾರಕ್ಕೆ  ತುಂಬಾನೇ ದೊಡ್ಡ ಸವಾಲಿನ ಕೆಲಸ ಎಂದರೆ ತಪ್ಪಾಗುವುದಿಲ್ಲ. ಉನ್ನತ ಮೂಲಗಳ ಪ್ರಕಾರ, ಮುಂದಿನ ಏಳರಿಂದ ಹತ್ತು ದಿನಗಳಲ್ಲಿ ಹೊಸ ಸಿಡಿಎಸ್ ಅನ್ನುನೇಮಕ ಮಾಡುವ ಬಗ್ಗೆ ಮೋದಿ ಸರ್ಕಾರವು ಯೋಚಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ. ಜನರಲ್ ಬಿಪಿನ್ ರಾವತ್ ಅವರ ನಿಧನದೊಂದಿಗೆ, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾನೆ ಅವರು ಈಗ ದೇಶದ ಅತ್ಯಂತ ಹಿರಿಯ ಮಿಲಿಟರಿ ಅಧಿಕಾರಿಯಾಗಿದ್ದಾರೆ. ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸಿ ಪಿ ಮೊಹಂತಿ ಮತ್ತು ಉತ್ತರಭಾಗದ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ವೈ ಕೆ ಜೋಶಿ ಅವರು ಶ್ರೇಣಿಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು ದಿನದಲ್ಲಿ ಸಿಡಿಎಸ್‌ ಯಾರೆಂಬುದು ಗೊತ್ತಲಿದೆ.
Published by:Kavya V
First published: