ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರು ಉಚಿತ ಬಸ್ ಪಾಸ್ ಪಡೆಯುವುದು ಹೇಗೆ?

ವನಿತಾ ಸಂಗಾತಿ ಯೋಜನೆ (Vanita Sangati yojana) ಅಡಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರಿಗೆ (Women Garments Workers) ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಇದು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ನೀಡೋದಾಗಿ ಹೇಳಿದ್ದರು.  

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ನಗರದ (BMTC) ಗಾರ್ಮೆಂಟ್ಸ್  ನ ಮಹಿಳಾ ನೌಕರರಿಗೆ ಬಂಪರ್ ಗಿಫ್ಟ್ ನೀಡಿದೆ. ಬಿಎಂಟಿಸಿಯಿಂದ ನಗರದ 3 ಲಕ್ಷ ಮಹಿಳಾ ಗಾರ್ಮೆಂಟ್ಸ್ ಉದ್ಯೋಗಿಗಳಿಗೆ ಉಚಿತ ಬಸ್ ಪಾಸ್ (Free BusPass) ನೀಡಲಾಗುತ್ತಿದೆ.  ವನಿತಾ ಸಂಗಾತಿ ಯೋಜನೆ (Vanita Sangati yojana) ಅಡಿಯಲ್ಲಿ ಗಾರ್ಮೆಂಟ್ಸ್ ಕಾರ್ಮಿಕರಿಗೆ (Women Garments Workers) ಪಾಸ್ ವಿತರಣೆ ಮಾಡಲು ಬಿಎಂಟಿಸಿ ಮುಂದಾಗಿದೆ. ಇದು ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಉಚಿತ ಬಸ್ ಪಾಸ್ ನೀಡೋದಾಗಿ ಹೇಳಿದ್ದರು.  ಅಂದು ಬಜೆಟ್ (Budget) ಮಂಡಿಸಿದ್ದ ಯಡಿಯೂರಪ್ಪನವರು ವನಿತಾ ಸಂಗಾತಿ ಹೆಸರಿನಲ್ಲಿ ಬಸ್ ಪಾಸ್ (Bus Pass) ನೀಡುವುದಾಗಿ ಘೋಷಣೆ ಮಾಡಿದ್ದರು.

ಈ ಮೂಲಕ ಮಹಿಳಾ ಕಾರ್ಮಿಕರ ಬದುಕಿಗೆ ನೆರವಾಗಲು ಹೊರಟಿರುವ ಸರ್ಕಾರ ಮತ್ತು ಬಿಎಂಟಿಸಿ ಮುಂದಾಗಿದೆ. ಕಾರ್ಮಿಕ ಸಂಘಟನೆಗಳು ಸರ್ಕಾರದ ಆದೇಶವನ್ನು ಸ್ವಾಗತಿಸಿದ್ದಾರೆ.

ಇದನ್ನೂ ಓದಿ:  6 ವರ್ಷಗಳಲ್ಲಿ  40 ಅಡಿ ಎತ್ತರದ ಬೆಟ್ಟವನ್ನೇ ನುಂಗಿದ ರಾಜಕೀಯ ಪ್ರಭಾವಿಗಳು!

ಮಹಿಳಾ ಗಾರ್ಮೆಂಟ್ಸ್ ಕಾರ್ಮಿಕರು ಪಾಸ್ ಪಡೆಯುವುದು ಹೇಗೆ.!?

* ಗಾರ್ಮೆಂಟ್ಸ್ ಮಾಲೀಕರು ಮಹಿಳಾ ಉದ್ಯೋಗಿಗಳ ದೃಢೀಕರಣ ಪತ್ರ & ಗುರುತಿನ ಚೀಟಿ ಸಂಗ್ರಹಿಸುವುದು

*  ಉದ್ಯೋಗಿಗಳ ಪ್ರಮಾಣಪತ್ರದ ಜೊತೆಗೆ ಭಾವಚಿತ್ರ ಸಂಗ್ರಹಿಸುವುದು

* ಸಂಗ್ರಹಿಸಿದ ಎಲ್ಲಾ ದಾಖಲೆಯನ್ನು ಗಾರ್ಮೆಂಟ್ಸ್ ಮಾಲೀಕರೇ ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿಯ ಈ-ಮೇಲ್ ಗೆ ಕಳುಹಿಸುವುದು

* ಇದೇ ವೇಳೆ ಗಾರ್ಮೆಂಟ್ಸ್ ಮಾಲೀಕರು ತಮ್ಮ ಪಾಲಿನ 40% ಪಾಸ್ ಮೊತ್ತ ಆರ್‌ಟಿಜಿಎಸ್ ಪಾವತಿ ಮಾಡಬೇಕು

* ಹೀಗೆ ಬಂದ ಅರ್ಜಿಗಳನ್ನು ಪರಿಶೀಲಿಸಿ ಅರ್ಹರ ವಿವರಗಳು ಮಂಡಳಿ BMTCಗೆ ರವಾನೆ

* ಮಂಡಳಿಯಿಂದ ಪಟ್ಟಿಗನುಸಾರವಾಗಿ BMTC ಪಾಸ್ ವಿತರಣೆ ಮಾಡಲಿದೆ

* ಮೆಜೆಸ್ಟಿಕ್ ಬಸ್ ನಿಲ್ದಾಣದ ಪಾಸ್ ಕೌಂಟರ್ ಗಳಿಂದ ಫಲಾನುಭವಿಗಳು ಪಾಸ್ ಪಡೆದುಕೊಳ್ಳಬಹುದು

* BMTC ಸಾಮಾನ್ಯ ಬಸ್ ಗಳಿಗೆ ಮಾತ್ರ ಪಾಸ್ ಅನ್ವಯವಾಗಲಿದೆ, ವೋಲ್ವೋಗೆ ಅವಕಾಶ ಇರುವುದಿಲ್ಲ

ಬೆಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ 750ಕ್ಕೂ ಹೆಚ್ಚು ಗಾರ್ಮೆಂಟ್ಸ್ ಗಳಿವೆ. ಈ ಗಾರ್ಮೆಂಟ್ಸ್ ಗಳಲ್ಲಿ ಶೇಕಡಾ 80% ರಷ್ಟು ಮಹಿಳೆಯರು ಕೆಲಸ ಮಾಡುತ್ತಾರೆ. ಈ ಎಲ್ಲಾ ಮಹಿಳಾ ಉದ್ಯೋಗಿಗಳಿಗೆ ಅನುಕೂಲವಾಗಲು ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದೆ. ಪಾಸಿನ ಹಣವನ್ನ ಸರ್ಕಾರ 40% ಗಾರ್ಮೆಂಟ್ಸ್ ಮಾಲೀಕರು 40% ಬಿಎಂಟಿಸಿ 20% ಭರಿಸಲಿದೆ.

ಇದನ್ನೂ ಓದಿ:  New Year ಸಂಭ್ರಮಾಚರಣೆಯನ್ನ ನುಂಗಿದ ಓಮಿಕ್ರಾನ್; ಡಿ.30 - ಜ.2 ರವರೆಗೆ ಯಾವುದಕ್ಕೆಲ್ಲಾ ನಿರ್ಬಂಧ?

ವೋಲ್ವೋ ಬಸ್ ಪ್ರಯಾಣ ದರ ಇಳಿಕೆ

ಬಿಎಂಟಿಸಿ (BMTC) ಪಾಲಿಗೆ ಸದ್ಯ ಬಿಳಿಯಾನೆಯಂತಾಗಿರುವ ವೋಲ್ವೋಗಳು (Volvo) ಇತಿಹಾಸದ ಪುಟ ಸೇರುವ ಸನಿಹಕ್ಕೆ ಬಂದು ನಿಂತಿವೆ. ಇನ್ನೇನು ಎಲ್ಲಾ ವೋಲ್ವೋ ಬಸ್ ಗಳನ್ನ ಗುಜರಿಗೆ (Scrap) ಹಾಕ್ಬೇಕು ಅನ್ನೋ ಸ್ಟೇಜ್ ನಲ್ಲಿವೆ. ಹೀಗಿರುವಾಗಲೇ ವೋಲ್ವೋಗೆ ಹೊಸ ಕಾಯಕಲ್ಪ ನೀಡಿ ಜನರಿಗೆ ನ್ಯೂ ಇಯರ್ ಗಿಫ್ಟ್ ಅನ್ನು ನೀಡಿದೆ.

ಜನರನ್ನು ಆಕರ್ಷಿಸುವ ನಿಟ್ಟಿನಲ್ಲಿ BMTC ಇಂದ ದರ ಕಡಿತ ಮಾಡಿ ಮಹತ್ವದ ಆದೇಶ ಹೊರ ಬಿದ್ದಿದೆ. BMTCಯ ವಜ್ರ AC ಬಸ್ ದರ ಕಡಿತಗೊಳಿಸಿ ಬೆಂಗಳೂರು ಸಾರಿಗೆ ಸಂಸ್ಥೆ ಅಧಿಕೃತ ಆದೇಶಮಾಡಿದೆ. 34% ರಷ್ಟು ದರ BMTC ಕಡಿತಗೊಳಿಸಿದೆ. ಜನರನ್ನು ಆಕರ್ಷಿಸಲು AC ಬಸ್ನ ಟಿಕೆಟ್ ರೇಟ್ ಕಡಿಮೆ ಮಾಡಿದೆ ಬಿಎಂಟಿಸಿ. ದಿನದ ಪಾಸಿನ ಮೊತ್ತ 120 ರೂ. ಇಂದ 100ಕ್ಕೆ ಇಳಿಕೆಯಾಗಿದೆ. ಮಾಸಿಕ ಪಾಸ್ ದರವನ್ನು 2000 ರೂ. ಇಂದ 1500ಕ್ಕೆ BMTC ಇಳಿಸಿದೆ.

ಸದ್ಯ ನಗರದ 9 ಮಾರ್ಗಗಳಲ್ಲಿ 83 ಬಿಎಂಟಿಸಿ ವೋಲ್ವೋ ಬಸ್ ಸೇವೆ ನೀಡುತ್ತಿದೆ. ಜನರಿಗೆ ಮತ್ತಷ್ಟು ಪೂರಕವಾಗಿ ಸೇವೆ ಒದಗಿಸಲು 12 ಮಾರ್ಗದಲ್ಲಿ 90 ಬಸ್ ಗಳಿಂದ ಸೇವೆ ನೀಡಲು ನಿರ್ಧಾರಮಾಡಿದೆ. ಈ ಮೂಲಕ ಒಟ್ಟಾರೆ 21 ಮಾರ್ಗದಲ್ಲಿ 173 ಬಸ್ ಗಳ ಸೇವೆ ಒದಗಿಸಲು BMTC ಮುಂದಾಗಿದೆ. ಅಂದಹಾಗೆ ದರ ಕಡಿತ ಜಾರಿ ಹಾಗೂ ಹೊಸ ರೂಟ್ಗಳಲ್ಲಿ ಬಸ್ಗಳು ಡಿಸೆಂಬರ್ 17 ರಿಂದ ಕಾರ್ಯರೂಪಕ್ಕೆ ಬರುವಂತೆ ಸುತ್ತೋಲೆ ಹೊರಡಿಸಲಾಗಿದೆ.
Published by:Mahmadrafik K
First published: