HOME » NEWS » State » BENGALURU URBAN USING RIP WORD IS AGAINST HINDUISM TRUTH BEYOND VIRAL POST KVD

ಯಾರಾದರು ಸತ್ತಾಗ RIP ಎಂದು ಬರೆಯುವುದು ಹಿಂದೂ ವಿರೋಧಿಯೇ? ವೈರಲ್ ಪೋಸ್ಟ್ ಅಸಲಿಯತ್ತೇನು?

RIP ಎಂದು ಬರೆಯುವುದು ಹಿಂದೂ ಧರ್ಮದ ವಿರುದ್ಧ ಎಂಬ ಹೊಸ ವಾದವೊಂದು ಹುಟ್ಟಿಕೊಂಡಿದೆ. ಹಿಂದೂ ಧರ್ಮದವರು RIP ಎಂದು ಬರೆಯಬೇಡಿ ಎಂದು ವಿವರಿಸಿರುವ ಫೇಸ್​ಬುಕ್​ ಪೋಸ್ಟ್​​ ವೈರಲ್​​ ಆಗಿದೆ.

Kavya V | news18-kannada
Updated:June 16, 2021, 3:09 PM IST
ಯಾರಾದರು ಸತ್ತಾಗ RIP ಎಂದು ಬರೆಯುವುದು ಹಿಂದೂ ವಿರೋಧಿಯೇ? ವೈರಲ್ ಪೋಸ್ಟ್ ಅಸಲಿಯತ್ತೇನು?
ಪ್ರಾತಿನಿಧಿಕ ಚಿತ್ರ
  • Share this:
ಕೊರೊನಾ ಬಳಿಕ ಸಾವುಗಳ ಸಂಖ್ಯೆ ಹೆಚ್ಚಾಗಿವೆ. ಇನ್ನು ತಿಳಿದವರು ತೀರಿಕೊಂಡಾಗ, ಖ್ಯಾತನಾಮರು ನಿಧನರಾದಾಗ ಸೋಷಿಯಲ್​ ಮೀಡಿಯಾದಲ್ಲಿ ಸಂತಾಪ ಸೂಚಿಸುವುದು ಕಳೆದ ಕೆಲ ವರ್ಷಗಳಿಂದ ವಾಡಿಕೆಯಾಗಿದೆ. ಟ್ವಿಟ್ಟರ್​​ನಿಂದ ಹಿಡಿದು ವಾಟ್ಸ್​​ಪ್​ ಸ್ಟೇಟಸ್​ಗಳಲ್ಲಿ ಮೃತರಿಗೆ RIP ಎಂದು ಬರೆದು ಸಂತಾಪ ಸೂಚಿಸಲಾಗುತ್ತೆ. ರಿಪ್​​ (RIP) ಎಂದರೆ Rest In Peace. ಮೃತರ ಆತ್ಮಕ್ಕೆ ಶಾಂತಿ ಕೋರುವುದು ಎಂಬುವುದು ಸಾಮಾನ್ಯ ಅರ್ಥ. ಆದರೆ RIP ಎಂದು ಬರೆಯುವುದು ಹಿಂದೂ ಧರ್ಮದ ವಿರುದ್ಧ ಎಂಬ ಹೊಸ ವಾದವೊಂದು ಹುಟ್ಟಿಕೊಂಡಿದೆ. ಹಿಂದೂ ಧರ್ಮದವರು RIP ಎಂದು ಬರೆಯಬೇಡಿ ಎಂದು ವಿವರಿಸಿರುವ ಫೇಸ್​ಬುಕ್​ ಪೋಸ್ಟ್​​ ವೈರಲ್​​ ಆಗಿದೆ.

ಫೇಸ್​ಬುಕ್​ ಬರಹ ಪ್ರಕಾರ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ವ್ಯಕ್ತಿಯ ನಿಧನ ವಾರ್ತೆಯನ್ನು ಕೇಳಿದ ಕೂಡಲೇ ಹೇಳುವ ಮಾತು RIP. ಈ ಪದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಪದದ ಹೊಂದಿನ ನಿಜವಾದ ಅರ್ಥವನ್ನು ತಿಳಿಯದೇ ನಾವು ಈ ಪದವನ್ನು ನಿರಂತರವಾಗಿ ಬಳಸುತ್ತಿದ್ದೇವೆ.

ಕ್ರೈಸ್ತ ಧರ್ಮದ ಪ್ರಕಾರ ”ಜಡ್ಜ್ ಮೆಂಟ್ ಡೇ” ಬಂದಾಗಲೇ ಆತ ನಿಜವಾಗಿ ಮರಣ ಹೊಂದುತ್ತಾನೆ. ಅಲ್ಲಿಯವರೆಗೆ ತನ್ನ ಶರೀರವನ್ನು ಕಾಯ್ದುಕೊಂಡು ವಿಶ್ರಾಂತಿ ತೆಗೆದುಕೊಂಡಿರು (Rest In Peace) ಎಂದು ಪ್ರಾರ್ಥಿಸಲಾಗುತ್ತದೆ. ಆದ್ದರಿಂದಲೇ ಅವರ ಶರೀರವನ್ನು ಸುಡುವುದಿಲ್ಲ. ಬದಲಾಗಿ ಶವಪೆಟ್ಟಿಗೆಯಲ್ಲಿಟ್ಟು ಹೂತಿಡುತ್ತಾರೆ. ಮುಂದೊಂದು ದಿನ ಭೂಕಂಪ, ಪ್ರಳಯ ಇತ್ಯಾದಿ ಸಂಭವಿಸಿದಾಗ ಆ ಶರೀರ ಮತ್ತೆ ಮೇಲೆ ಬಂದು ಮೃತ ದೇಹಕ್ಕೆ ಜೀವ ಬರಬಹುದು ಎಂಬ ನಂಬಿಕೆ ಅವರಲ್ಲಿದೆ.

ಆದರೆ ಹಿಂದೂ ಧರ್ಮಶಾಸ್ತ್ರದ ಪ್ರಕಾರ ಶರೀರ ನಶ್ವರ. ಆತ್ಮ ಮಾತ್ರ ಅಮರ. ಶರೀರದ ಒಳಗಿರುವ ಆತ್ಮ ಬೇರೆ ಶರೀರವನ್ನು ಪ್ರವೇಶಿಸುತ್ತದೆ. ಇಲ್ಲವೇ ಜೀವನ ಮರಣ ಎಂಬ ಕಾಲಚಕ್ರದಲ್ಲಿ ಸೇರಿಕೊಂಡು ಮೋಕ್ಷ ಪಡೆಯುತ್ತದೆ. ಆದ್ದರಿಂದಲೇ ಹಿಂದೂ ಸಂಪ್ರದಾಯದ ಪ್ರಕಾರ ಶರೀರವನ್ನು ಅಗ್ನಿಯಲ್ಲಿ ಸುಟ್ಟು ಪಂಚಭೂತಗಳಲ್ಲಿ ಲೀನ ಮಾಡಲಾಗುತ್ತದೆ.

ಆದ್ದರಿಂದ ಆತ್ಮಕ್ಕೆ ವಿಶ್ರಾಂತಿ ಎಂಬುವುದೇ ಇಲ್ಲವಾದ್ದರಿಂದ Rest in peace ಎಂದು ಬಳಕೆ ಮಾಡುವುದು ಅರ್ಥಹೀನವಾಗುತ್ತದೆ. ಪ್ರತಿಯೊಬ್ಬ ಹಿಂದೂವೂ ಮೋಕ್ಷಕ್ಕೋಸ್ಕರ ಪ್ರಾರ್ಥನೆ ಮಾಡುತ್ತಾನೆ. ಪ್ರತಿ ಹಿಂದೂವಿನ ಅಂತಿಮ ಗುರಿ ಮೋಕ್ಷವೇ ಆಗಿರುತ್ತದೆ. RIP ಎಂಬ ಪದವನ್ನು ಬಳಕೆ ಮಾಡುವ ಬದಲು ಸದ್ಗತಿ, ಓಂ ಶಾಂತಿ, ಶ್ರದ್ದಾಂಜಲಿಯಂತಹ ಮುಂತಾದ ಪದಗಳನ್ನು ಬಳಸಬಹುದು. ನಮ್ಮ ಸಂಸ್ಕೃತಿಯನ್ನು ಉಳಿಸ, ಬೆಳೆಸಿ. ಪಾಶ್ಚಾತ್ಯ RIP ಶಬ್ದವನ್ನು ಶೋಕವನ್ನು ವ್ಯಕ್ತಪಡಿಸಲು ಬಳಸದಿರಿ ಎಂದು ಕರ್ನಾಟಕ ಹಿಂದೂ ಹೆಸರಿನ ಫೇಸ್​​ ಖಾತೆಯಲ್ಲಿ ಬರೆಯಲಾಗಿದೆ.



ಸಾಮಾಜಿಕ ಜಾಲತಾಣದ ಈ ಬರಹ RIP ಪದ ಬಳಕೆ ಕುರಿತು ಹೊಸ ಚರ್ಚೆಯನ್ನು ಹುಟ್ಟು ಹಾಕಿದೆ. ಪಾಶ್ವಿಮಾತ್ಯ ಸಂಸ್ಕೃತಿಯನ್ನು ಹಿಂಬಾಲಿಸುದಕ್ಕಿಂತ ನಮ್ಮ ಪ್ರಾದೇಶಿಕ ಭಾಷೆಯಲ್ಲಿ ಮೃತರಿಗೆ ಸಂತಾಪ ಕೋರುವುದು ಉತ್ತಮ ಎಂಬ ವಾದವೂ ಕೇಳಿ ಬಂದಿದೆ. ಹಿಂದೂ ಧರ್ಮವನ್ನು ಕಟ್ಟುನಿಟ್ಟಿನಿಂದ ಪಾಲಿಸುವವರ ವಾದವೇನೇ ಇರಲಿ. RIP ಎಂಬ ಪದವನ್ನು ಬಳಸಬಾರದು ಎಂಬ ನಿಯಮ ಎಲ್ಲಿಯೂ ಇಲ್ಲ. ಹೀಗಾಗಿ RIP ಪದ ಬಳಕೆ ಅವರವರ ವಿವೇಚನೆಗೆ ಬಿಟ್ಟಿದ್ದು.
Published by: Kavya V
First published: June 16, 2021, 3:09 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories