ಬೆಂಗಳೂರು (ಅ. 13): ನಗರದ ಜನನಿಬಿಡ ಪ್ರದೇಶವಾದ ಬಿವಿಕೆ ಅಯ್ಯಂಗಾರ್ (BVK iyengar road) ರಸ್ತೆಯ ಬೈಕ್ವೊಂದರ ಮೇಲೆ ಅನುಮಾನಸ್ಪದ ಸೂಟ್ಕೇಸ್ ಪತ್ತೆಯಾಗಿ (unknow Suitcase), ಸಾಕಷ್ಟು ಆತಂಕ ಮೂಡಿಸಿದೆ. ನಾಳೆ ಆಯುಧ ಪೂಜೆ ಹಿನ್ನಲೆ ಹಬ್ಬದ ಸಂಭ್ರಮದಲ್ಲಿದ್ದ ಸಾಮಾಗ್ರಿ ಕೊಳ್ಳಲು ಜನರು ಮುಂದಾಗಿದ್ದ ವೇಳೆ ಈ ಆತಂಕ ಎದುರಾಗಿದೆ. ಎರಡು ಅನುಮಾನಸ್ಪದ ಸೂಟ್ಕೇಸ್ಗಳು ಪತ್ತೆಯಾಗುತ್ತಿದ್ದಂತೆ ಜನರು ಆತಂಕಕ್ಕೆ ಒಳಗಾದರು. ಒಂದು ಗಂಟೆ ಕಳೆದರೂ ಈ ಸೂಟ್ಕೇಸ್ ಮಾಲೀಕರು ಪತ್ತೆಯಾಗದ ಹಿನ್ನಲೆ ಸಾಕಷ್ಟು ಅನುಮಾನ ವ್ಯಕ್ತವಾಗಿ ಸ್ಥಳೀಯರು ಸಿಟಿ ಮಾರುಕಟ್ಟೆ ಪೊಲೀಸರಿಗೆ (KR Market Polic) ಮಾಹಿತಿ ರವಾನಿಸಿದರು.
ಹಬ್ಬದ ಮೂಡ್ನಲ್ಲಿದ್ದ ಜನರಿಗೆ ಆತಂಕ
ಬಿಲ್ಡಿಂಗ್ ಮಾಲೀಕರ ಬೈಕ್ ಮೇಲೆ ಅಪರಿಚಿತರು ಸೂಟ್ಕೇಸ್ ಇರಿಸಿ ಹೋಗಿದ್ದರು. ಈ ಸೂಟ್ಕೇಸ್ ಹಲವು ಗಂಟೆಗಳ ಕಾಲ ಬೈಕ್ ಮೇಲೆ ಇದ್ದ ಕಾರಣ ಈ ಬಿಲ್ಡಿಂಗ್ ಮಾಲೀಕರು ಪೊಲೀಸರಿಗೆ ಮಾಹಿತಿ ರವಾನಿಸಿದರು. ಈ ವೇಳೆ ಸ್ಥಳಕ್ಕೆ ಬಂದ ಕೆಆರ್ ಮಾರುಕಟ್ಟೆ ಪೊಲೀಸರು ತಕ್ಷಣಕ್ಕೆ ಬಾಂಬ್ ನಿಷ್ಕ್ರಿಯ ದಳಕ್ಕೆ (Bomb squad) ಸುದ್ದಿ ಮುಟ್ಟಿಸಿದರು. ಸೂಟ್ ಕೇಸ್ ಆತಂಕ ಮೂಡಿಸಿದ ಹಿನ್ನಲೆ ಬಿವಿಕೆ ಅಯ್ಯಂಗಾರ್ ರಸ್ತೆ ಸಂಚಾರವನ್ನು ಕೂಡ ಬಂದ್ ಮಾಡಲಾಗಿತ್ತು.
ಈ ವೇಳೆ ಸ್ಥಳಕ್ಕೆ ಬಂದ ಬಾಂಬ್ ನಿಷ್ಕ್ರಿಯ ದಳದ ತಂಡ ಸೂಟ್ಕೇಸ್ ಅನ್ನು ಪರಿಶೀಲನೆ ನಡೆಸಿತು. ಬಾಂಬ್ ಇರುವ ಬಗ್ಗೆ ಜನರು ಆತಂಕ ವ್ಯಕ್ತ ಪಡಿಸಿದ ಹಿನ್ನಲೆ ಸೂಟ್ಕೇಸ್ ಅನ್ನು ಜನನಿಬಿಡ ಸ್ಥಳಕ್ಕೆ ತೆಗೆದುಕೊಂಡು ಹೋದರು. ಒಂದೇ ಸ್ಥಳದಲ್ಲಿ ಅಕ್ಕಪಕ್ಕದಲ್ಲಿ ಎರಡು ಸೂಟ್ ಕೇಸ್ ಗಳು ಪತ್ತೆಯಾದ ಹಿನ್ನಲೆ ಅವುಗಳನ್ನು ಒಂದು ಟ್ರ್ಯಾಲಿ ಬ್ಯಾಗ್ ಹೊಯ್ಸಳದಲ್ಲಿ ಹಾಕಿಕೊಂಡು ಪೊಲೀಸರು ಖಾಲಿ ಮೈದಾನಕ್ಕೆ ತೆಗೆದುಕೊಂಡು ಹೋದರು.
ಖಾಲಿ ಮೈದಾನದಲ್ಲಿ ಸೂಟ್ ಕೇಸ್ ತೆರೆದಾಗ ಒಂದರಲ್ಲಿ ಸೀರೆ ಪತ್ತೆಯಾಗಿವೆ. ಮತ್ತೊಂದು ಸೂಟ್ಕೇಸ್ನಲ್ಲಿ ಕೂಡ ಸೀರೆ, ಪಂಚೆ ಟವೆಲ್ ಪತ್ತೆ ಆಯಿತು. ಎರಡರಲ್ಲಿ ಬಟ್ಟೆಗಳು ಇದ್ದ ಹಿನ್ನಲೆ ಪೊಲೀಸರ ಆತಂಕ ದೂರವಾಯಿತು.
ಯಾರೋ ಮರೆತು ಸೂಟ್ ಕೇಸ್ನ್ನು ಅಲ್ಲಿ ಇಟ್ಟಿರಬೇಕು ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸ್ಥಳದಲ್ಲಿನ ಸಿಸಿಟಿವಿಯನ್ನು ಕೂಡ ಪರಿಶೀಲನೆ ಮಾಡಲಾಗುತ್ತಿದ್ದು, ಮಾಲೀಕರ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.