Women Suicide: ಕೈಯಲ್ಲಿ ಹಣವಿಲ್ಲ, ಮಗನ ಹುಟ್ಟುಹಬ್ಬ ಆಚರಿಸಲು ಆಗ್ತಿಲ್ಲ ಎಂದು ಮಹಿಳೆ ಆತ್ಮಹತ್ಯೆ

ತೇಜಸ್ವಿನಿ ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಒತ್ತಡದಲ್ಲಿದ್ದರು ವ್ಯಾಪಾರದ ನಷ್ಟ ಅವರನ್ನು ಕುಗ್ಗಿಸಿದೆ. ಆದರೆ, ಮಗನ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗದಿರುವುದು ಆಕೆಯ ಸಾವಿಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಮೇ 10): ಕೈಯಲ್ಲಿ ಹಣವಿಲ್ಲ, ಮಗನ ಬರ್ತ ಡೇ (Birthday) ಕೂಡ ಮಾಡಲು ಆಗ್ತಿಲ್ಲ ಎಂದು ಮಹಿಳೆಯೊಬ್ಬರು (Women) ನೇಣಿಗೆ ಶರಣಾಗಿರೋ ಘಟನೆ ಬೆಂಗಳೂರಿನ ಬೆಳ್ಳೂರಿನಲ್ಲಿ ನಡೆದಿದೆ. 35 ವರ್ಷದ ತೇಜಸ್ವಿನಿ (Tejaswini) ಮೃತ ಮಹಿಳೆಯಾಗಿದ್ದಾರೆ. ಮೈಸೂರಿನಲ್ಲಿ ಪತಿ ಶ್ರೀಕಾಂತ್ ನಡೆಸುತ್ತಿದ್ದ ವ್ಯಾಪಾರದಲ್ಲಿ ನಷ್ಟ ಉಂಟಾದ ಹಿನ್ನೆಲೆ ಮನೆಯ ಆರ್ಥಿಕ ಪರಿಸ್ಥಿತಿ (Economic Situation) ಕೂಡ ಕಂಗೆಟ್ಟಿತ್ತು. ಹೀಗಾಗಿ ತೇಜಸ್ವಿನಿ ಕೂಡ ತುಂಬಾ ನೊಂದು ಹೋಗಿದ್ರು. ಶ್ರೀಕಾಂತ್ (Srikant) ಹಾಗೂ ತೇಜಸ್ವಿ ದಂಪತಿಗೆ 2 ವರ್ಷದ ಧನುಷ್ ಮತ್ತು 4 ವರ್ಷದ ದೀಕ್ಷಾ ಎಂಬ ಇಬ್ಬರು ಮಕ್ಕಳಿದ್ದಾರೆ. ಹಣವಿಲ್ಲದೆ ತನ್ನ ಚಿಕ್ಕ ಮಗ ಧನುಷ್​ ಹುಟ್ಟುಹಬ್ಬ ಆಚರಿಸಲು ಸಾಧ್ಯವಾಗ್ತಿಲ್ಲ ಎಂದು ನೊಂದಿದ್ದ ತೇಜಸ್ವಿನಿ, ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಮಗನ ಹುಟ್ಟು ಹಬ್ಬ ಆಚರಿಸಲಾಗದೆ ಆತ್ಮಹತ್ಯೆ

ಪೊಲೀಸರ ವರದಿ ಪ್ರಕಾರ, ಆಕೆ ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಒತ್ತಡದಲ್ಲಿದ್ದಳು. ವ್ಯಾಪಾರದ ನಷ್ಟ ಅವರನ್ನು ಕುಗ್ಗಿಸಿದೆ. ಆದರೆ, ಮಗನ ಹುಟ್ಟುಹಬ್ಬವನ್ನು ಆಚರಿಸಲು ಸಾಧ್ಯವಾಗದಿರುವುದು ಆಕೆಯ ಸಾವಿಗೆ ಕಾರಣವಾಗಿತ್ತು. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಹೇಳಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವ್ಯಾಪಾರ ನಷ್ಟಕ್ಕೆ ನೊಂದ ಕುಟುಂಬ

ತೇಜಸ್ವಿನಿ ಶುಕ್ರವಾರ ಮೇ 6 ರಂದು ತನ್ನ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ಸೀರೆಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಸಂಜೆ 5.30 ರ ಸುಮಾರಿಗೆ ಘಟನೆ ನಡೆದಿದ್ದು, ಮನೆಯವರು ತೇಜಸ್ವಿನಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು ಆದರೆ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಶ್ರೀಕಾಂತ ಎಂಬಾತನನ್ನು ಮದುವೆಯಾಗಿರುವುದಾಗಿ ಆಕೆಯ ಸಹೋದರ ಅಜಯ್ ಕುಮಾರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Ashwath Narayana: 'ಅದೊಂದು ಜೈಲು ಹಕ್ಕಿ ಸ್ವಾಮಿ; ಈಗ ಬೇಲ್ ಮೇಲೆ ಆಚೆ ಇದೆ, ಡಿಕೆಶಿ ಪರ್ಮನೆಂಟ್ ಜಾಗ ತಿಹಾರ್ ಸೆಲ್'

ಕೆಟ್ಟ ಆರ್ಥಿಕ ಪರಿಸ್ಥಿತಿ ಬಗ್ಗೆ ಬೇಸರ

ಇದರ ಹೊರತಾಗಿಯೂ ಮಗನ ಹುಟ್ಟುಹಬ್ಬವನ್ನು ಆಚರಿಸಲು ಬಯಸಿದ್ದ ತೇಜಸ್ವಿನಿ ಅವರು ತಮ್ಮ ಪತಿಯೊಂದಿಗೆ ಈ ಬಗ್ಗೆ ಮಾತಾಡಿದ್ದರಂತೆ. ಮೈಸೂರಿನಲ್ಲಿರುವ ಶ್ರೀಕಾಂತ, ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ತಾನು ಹಿಂದಿರುಗುವವರೆಗೆ ಕಾಯುವಂತೆ ಆಕೆಯನ್ನು ಕೇಳಿಕೊಂಡಿದ್ದಾನೆ. ಆದ್ರೆ ಪರಿಸ್ಥಿತಿಯಿಂದ ನೊಂದ ತೇಜಸ್ವಿನಿ ಸಹೋದರಿ ಸೀರೆಯಿಂದ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ ಎಂದು ಮೃತನ ಸಹೋದರ ಅಜಯ್ ಕುಮಾರ್ ಹೇಳಿದ್ದಾರೆ.

ಆಸ್ತಿಗಾಗಿ ತಂಗಿ ಕೊಲೆಗೆ ಯತ್ನಿಸಿದ ಅಣ್ಣ

ಚಿಕ್ಕಮಗಳೂರು: ಸಹೋದರರ ನಡುವೆ ಜಮೀನಿನ ವಿಚಾರವಾಗಿ ಉಂಟಾದ ಕಲಹ ತಾರಕಕ್ಕೇರಿದ ಪರಿಣಾಮ, ಕತ್ತಿಯಿಂದ ಬಾಲಕಿಯ ಕೈಯನ್ನು ಕಡಿದು ಕೊಲೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ದೇವನಗುಲ್ ಗ್ರಾಮದ ರಮೇಶ್ ಹಾಗೂ ಜಯಂತ್ ಸಹೋದರರ ನಡುವೆ ಜಮೀನಿಗಾಗಿ ಕಲಹ ಉಂಟಾಗಿದ್ದ ವೇಳೆ ಈ ಘಟನೆ ನಡೆದಿದೆ. ಮೊನ್ನೆ ರಾತ್ರಿ ವೇಳೆ ಜಯಂತ್, ಅವರ ಹೆಂಡತಿ ಹಾಗೂ ಮಗ ಜ್ಞಾನದೇವ್ ಮೂವರು ಸೇರಿ ಜಾಗದ ವಿಚಾರವಾಗಿ ಮತ್ತೆ ಗಲಾಟೆ ಮಾಡಿದ್ದಾರೆ. ಮಾತು ತಾರಕಕ್ಕೇರಿದ ವೇಳೆ ಜಯಂತ್​ ಮಗ ಜ್ಞಾನದೇವ್ ರಮೇಶನ ಮಗಳ ಮೇಲೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿ: Karnataka Politics: ಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳ್ಕೊಂಡಿದ್ದಾರೆ- ಸಿ.ಟಿ ರವಿ

ಕತ್ತಿಯಿಂದ ಹಲ್ಲೆಗೈದ ಪಾಪಿ

ಹಲ್ಲೆಗೊಳಗಾದ ಬಾಲಕಿಯು ಕತ್ತಿಯಿಂದ ಹಲ್ಲೆಗೈದು ತನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆಂದು ಆರೋಪಿಸಿ ಮೂಡಿಗೆರೆಯ ಬಣಕಲ್ ಪೊಲೀಸ್ ಠಾಣೆಯಲ್ಲಿ ಜಯಂತ್, ಅವರ ಪತ್ನಿ ಹಾಗೂ ಪುತ್ರ ಜ್ಞಾನದೇವ್ ಮೇಲೆ ದೂರು ನೀಡಿದ್ದಾಳೆ. ಕೂಡಲೇ ಪೊಲೀಸರು ಜಯಂತ್ ಗೌಡನನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ವಿಚಾರಣೆ ಆರಂಭವಾಗಿದ್ದು, ಇನ್ನಿಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಅವರ ಬಂಧನ ಹಾಗೂ ವಿಚಾರಣೆಯ ನಂತರ ಹೆಚ್ಚಿನ ಮಾಹಿತಿಗಳು ಲಭ್ಯವಾಗಲಿದೆ. ಹಲ್ಲೆಗೊಳಗಾದ ಬಾಲಕಿ ಮೂಡಿಗೆರೆ ತಾಲೂಕು ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾಳೆ.
Published by:Pavana HS
First published: