• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Death from Rain: ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!

Death from Rain: ಬೆಂಗಳೂರಲ್ಲಿ ಮಳೆಗೆ ಇಬ್ಬರು ಬಲಿ; ರಾತ್ರಿಯಿಡೀ ಪೈಪ್‌ನಲ್ಲೇ ಇತ್ತು ಕಾರ್ಮಿಕರ ಮೃತದೇಹ!

ಭಾರೀ ಮಳೆಯ ಸಂಗ್ರಹ ಚಿತ್ರ

ಭಾರೀ ಮಳೆಯ ಸಂಗ್ರಹ ಚಿತ್ರ

ಉಲ್ಲಾಳ ಉಪನಗರದ ಉಪಕಾರ್ ಲೇಔಟ್ ಬಳಿ ಕಾವೇರಿ ನೀರಿನ 5 ಹಂತದ ಪೈಪ್ ಲೈನ್ ಕಾಮಗಾರಿಯಲ್ಲಿ ತೊಡಗಿದ್ದ ಮೂವರು ಕಾರ್ಮಿಕರು. ಈ ವೇಳೆ ಏಕಾಏಕಿ ಮಳೆ ನೀರು ತುಂಬಿಕೊಂಡಿದ್ದೆ. ಓರ್ವ ಕಾರ್ಮಿಕ ಹೇಗೋ ಅಲ್ಲಿಂದ ಪಾರಾಗಿ ಹೊರಕ್ಕೆ ಬಂದಿದ್ದಾನೆ.

  • Share this:

ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ (Bengaluru) ಮಳೆ (Rain) ಅಬ್ಬರ ಮುಂದುವರೆದಿದೆ. ನಿನ್ನೆ ಮಧ್ಯಾಹ್ನದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಇಬ್ಬರು ಕಾರ್ಮಿಕರು (Labor) ಮೃತಪಟ್ಟಿದ್ದಾರೆ. ಉಲ್ಲಾಳ (Ullala) ಉಪನಗರದ ಉಪಕಾರ್ ಲೇಔಟ್‌ನಲ್ಲಿ (Upakar Layout) ಪೈಪ್‌ ಲೈನ್ (Pipeline) ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಪೈಪ್‌ ಲೈನ್ ಕಾಮಗಾರಿ ಸ್ಥಳದಲ್ಲಿ ಮಳೆ ನೀರು ತುಂಬಿಕೊಂಡು ಇಬ್ಬರು ಕಾರ್ಮಿಕರು ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೂವರು ಕಾರ್ಮಿಕರು ಕೆಲಸ ಮಾಡುತ್ತಾ ಇದ್ದರು. ಅದೃಷ್ಟವಶಾತ್ ಓರ್ವ ಅಲ್ಲಿಂದ ಪಾರಾಗಿದ್ದರೆ, ಇಬ್ಬರು ಮೃತಪಟ್ಟಿದ್ದಾರೆ.


ಮಳೆ ನೀರಲ್ಲಿ ಮುಳುಗಿ ಇಬ್ಬರು ಕಾರ್ಮಿಕರು ಸಾವು


ಉಲ್ಲಾಳ ಉಪನಗರದ ಉಪಕಾರ್ ಲೇಔಟ್ ಬಳಿ ಕಾವೇರಿ ನೀರಿನ 5ನೇ ಹಂತದ ಪೈಪ್ ಲೈನ್ ಕಾಮಗಾರಿಯಲ್ಲಿ ನಡೆಯುತ್ತಿತ್ತು. ಈ ವೇಳೆ ಮೂವರು ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆಗ ಏಕಾಏಕಿ ಮಳೆ ನೀರು ತುಂಬಿಕೊಂಡಿದೆ. ಓರ್ವ ಕಾರ್ಮಿಕ ಹೇಗೋ ಅಲ್ಲಿಂದ ಪಾರಾಗಿ ಹೊರಕ್ಕೆ ಬಂದಿದ್ದಾನೆ. ಆದರೆ ಇಬ್ಬರು ಅಲ್ಲಿಂದ ಹೊರಕ್ಕೆ ಬರಲಾಗದೇ, ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಮೃತರನ್ನು ಬಿಹಾರ ಮೂಲದ ದೇವ್ ಭರತ್ ಹಾಗೂ ಉತ್ತರ ಪ್ರದೇಶದ ಅಂಕಿತ್ ಕುಮಾರ್ ಅಂತ ಗುರುತಿಸಲಾಗಿದೆ.


ರಾತ್ರಿಯಿಡೀ ಪೈಪ್‌ ಲೈನ್‌ನಲ್ಲೇ ಇತ್ತು ಮೃತದೇಹ


ಕಾವೇರಿ ಐದನೇ ಹಂತದ ಕಾಮಗಾರಿಗಾಗಿ ಬೃಹತ್ ಪೈಪ್‌ ಒಳಗೆ ಮೂವರು ಕಾರ್ಮಿಕರು ಇಳಿದಿದ್ದರು. ಮಳೆ ಬರ್ತಿದ್ದಂತೆ ಕಾಮಗಾರಿಗೆ ಅಳವಡಿಕೆ ಮಾಡಿದ್ದ ಪೈಪ್ ಒಳಗೆ ನೀರು ತುಂಬಿಕೊಂಡಿದೆ. ಹೀಗಾಗಿ ಕಾಮಗಾರಿಗೆ ಅಗೆಯಲಾಗಿದ್ದ ಹೊಂಡಕ್ಕೂ ನೀರು ತುಂಬಿದೆ. ಮೂವರ ಪೈಕಿ ಓರ್ವ ನೀರು ತುಂಬುತ್ತಿದ್ದಂತೆ ಹೊರಕ್ಕೆ ಬಂದು ಬಚಾವ್ ಆಗಿದ್ದಾನೆ. ಆದರೆ ನೀರಿನ ರಭಸಕ್ಕೆ ಇಬ್ಬರು ಕಾರ್ಮಿಕರು ಪೈಪ್ ಒಳಗೆಯೇ ಹಲವು ದೂರ ಕೊಚ್ಚಿ ಹೋಗಿದ್ದಾರೆ. ಉಸಿರು ಕಟ್ಟಿ ಇಬ್ಬರು ಸತ್ತಿದ್ದು, ರಾತ್ರಿಯಿಡೀ ಮೃತ ದೇಹ ಅದೇ ಪೈಪ್ ಲೈನ್‌ನಲ್ಲೇ ಇತ್ತು.


ಇದನ್ನೂ ಓದಿ: Heavy Rain: ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ತತ್ತರಿಸಿದ ಬೆಂಗಳೂರು! ಜನಜೀವನ ಸಂಪೂರ್ಣ ಅಸ್ತವ್ಯಸ್ತ


ಗುತ್ತಿಗೆದಾರನನ್ನು ವಶಕ್ಕೆ ಪಡೆದ ಪೊಲೀಸರು


ಇನ್ನು ಇಬ್ಬರು ಕಾರ್ಮಿಕರ ಸಾವಿಗೆ ಸಂಬಂಧಿಸಿದಂತೆ ಇಬ್ಬರು ಗುತ್ತಿಗೆದಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಇದೀಗ ವಿಚಾರಣೆ ಮುಂದುವರೆಸಿದ್ದಾರೆ.
ನಿನ್ನೆಯಿಂದಲೇ ಭಾರೀ ಮಳೆ


ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಮಧ್ಯಾಹ್ನದಿಂದಲೇ ಶುರುವಾದ ಮಳೆ ಬಿಟ್ಟೂ ಬಿಡದಂತೆ ಸುರಿದಿದೆ. ನಿನ್ನೆ ರಾತ್ರಿ 9:45 ರ ವೇಳೆಗೆ ಒಟ್ಡಾರೆ ಬೆಂಗಳೂರಲ್ಲಿ 95 mm ಮಳೆ ಸುರಿದಿದೆ. ನಗರದ ಹಲವು ಏರಿಯಾದಲ್ಲಿ 100 mm ಗಿಂತ ಹೆಚ್ಚು ಮಳೆಯಾಗಿದೆ. ಕೇವಲ ಒಂದು ಗಂಟೆಯಲ್ಲಿ 100 mm ಹೆಚ್ಚು ಮಳೆ ಸುರಿದು ದಾಖಲೆ ನಿರ್ಮಿಸಿದೆ. ಗುಡುಗು ಸಹಿತ ಭಾರೀ ಮಳೆಗೆ ಸಿಲಿಕಾನ್ ಸಿಟಿ ತತ್ತರಿಸಿದೆ.


ಇದನ್ನೂ ಓದಿ: Bengaluru Rain: ಮಹಾಮಳೆಗೆ ಮುಳುಗಿದ ಮಹಾನಗರಿ! ಬೆಂಗಳೂರಿನ ಮಳೆ ಅವಾಂತರದ ಚಿತ್ರಗಳು ಇಲ್ಲಿವೆ


ಎಲ್ಲೆಲ್ಲಿ ಎಷ್ಟೆಷ್ಟು ಮಳೆ?


ವಿದ್ಯಾಪೀಠ 113 mm ಮಳೆ, ಸಂಪಂಗಿರಾಮನಗರ 100.3 mm ಮಳೆ, ನಾಗಪುರ 100 mm ಮಳೆ, ಅಗ್ರಹಾರ ದಾಸರಹಳ್ಳಿ 97.5 mm ಮಳೆ, ಹಂಪಿ ನಗರ 93.5 mm ಮಳೆ, ರಾಜಮಹಲ್ ಗುಟ್ಟಹಳ್ಳಿ 95 mm ಮಳೆ, ದಯಾನಂದ ನಗರ 82 mm ಮಳೆ, ಹೊರಮಾವು 12.5 ಸೆ.ಮೀ ಮಳೆ,ಸಂಪಂಗಿರಾಮನಗರ 11.85 ಸೆ.ಮೀ ಮಳೆ,ಕೆ.ನಾರಾಯಣಪುರ 11.75 ಸೆ.ಮೀ, ವಿದ್ಯಾಪೀಠ 11.05 ಸೆ.ಮೀ ಮಳೆ, ಅಗ್ರಹಾರ ದಾಸರಹಳ್ಳಿ 10.2 ಸೆ.ಮೀ ಮಳೆಯಾಗಿರೋ ಬಗ್ಗೆ ವರದಿಯಾಗಿದೆ.

Published by:Annappa Achari
First published: