Nice Road: ನೈಸ್ ರಸ್ತೆಯಲ್ಲಿ ಇನ್ಮೇಲೆ ರಾತ್ರಿ ಹೊತ್ತು ದ್ವಿಚಕ್ರ ವಾಹನ ಸಂಚಾರ ಬಂದ್!

ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ ಆರ್ ರವಿಕಾಂತೇ ಗೌಡ (Dr. B.R. Ravikanthe Gowda IPS, Joint Commissioner of Police, Traffic Bengaluru City) ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರವಾಹನಗಳ ಸಂಚಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ.

ನೈಸ್ ರಸ್ತೆ

ನೈಸ್ ರಸ್ತೆ

  • Share this:
ಬೆಂಗಳೂರು ಹೊರವಲಯದ ನೈಸ್ ರಸ್ತೆ(Nice road)ನಲ್ಲಿ ಕಳ್ಳಕಾಕರು ಹಾಗೂ ದರೋಡೆಕೋರರ (gangsters) ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ಸಹ ದಾಖಲಾಗಿದೆ. ದರೋಡೆ, ಕಳ್ಳತನಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿಯೇ ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರ ವಾಹನ(Two wheelers) ಸಂಚಾರಕ್ಕೆ ನಿರ್ಬಂಧ(Restriction) ಹೇರಲಾಗಿದೆ. ಜನವರಿ 16ರಿಂದ ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ದ್ವಿಚಕ್ರ ವಾಹನಗಳು ನೈಸ್ ರಸ್ತೆಯಲ್ಲಿ ಸಂಚರಿಸುವಂತಿಲ್ಲ. ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಡಾ.ಬಿ ಆರ್ ರವಿಕಾಂತೇ ಗೌಡ (Dr. B.R. Ravikanthe Gowda IPS, Joint Commissioner of Police, Traffic Bengaluru City) ನೈಸ್ ರಸ್ತೆಯಲ್ಲಿ ರಾತ್ರಿ ವೇಳೆ ದ್ವಿಚಕ್ರವಾಹನಗಳ ಸಂಚಾರ ಬ್ಯಾನ್ ಮಾಡಿ ಆದೇಶ ಹೊರಡಿಸಿದ್ದಾರೆ.

ದ್ವಿಚಕ್ರ ವಾಹನ ಸವಾರರೇ ಟಾರ್ಗೆಟ್!

ನೈಸ್ ರಸ್ತೆಯಲ್ಲಿ ಓಡಾಡೋ ದ್ವಿಚಕ್ರ ವಾಹನಗಳನ್ನೇ ದರೋಡೆಕಾರರು ಟಾರ್ಗೆಟ್ ಮಾಡ್ತಿದ್ರು. ವಾಹನಗಳನ್ನು ಅಡ್ಡಗಟ್ಟಿ ಸುಲಿಗೆ ಮಾಡ್ತಿದ್ದರು. ಕಳ್ಳತನ ಮಾಡ್ತಿದ್ದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಸುನಿಲ್, ಹರೀಶ್ ಮತ್ತು ನವೀನ್‌ ಬಂಧಿತರು. ಬೆಂಗಳೂರಿನ ಕೋಣನಕುಂಟೆ ಪೊಲೀಸರು ಮೂವರನ್ನೂ ಅರೆಸ್ಟ್ ಮಾಡಿದ್ದಾರೆ.

ಮೂವರೂ ಅರೋಪಿಗಳು ಪ್ಲಾನ್ ಮಾಡಿದ ನಂತರ ರಸ್ತೆ ಮಧ್ಯೆ ವಾಹನ ತಡೆದು ಚಾಕುವಿನಿಂದ ಹಲ್ಲೆ ಮಾಡ್ತಿದ್ದರು. ಚಾಕುವಿನಿಂದ ಹಲ್ಲೆ ಮಾಡಿದ ಬಳಿಕ ಅರೋಪಿಗಳನ್ನು ನಗ, ನಾಣ್ಯ ದೋಚುತಿದ್ದರು. ಕಳೆದ ವಾರ ಇಂತಹುದೇ ಹಲ್ಲೆ ಮತ್ತು ಸುಲಿಗೆ ನಡೆದಿತ್ತು. ನಾಯಂಡಹಳ್ಳಿಯಲ್ಲಿ ಓರ್ವ ಅರೋಪಿ ಕ್ಯಾಂಟರ್ ಹತ್ತಿದ್ದ. ಬಳಿಕ ದಾರಿ ಮಧ್ಯೆ ಮತ್ತೆ ಮೂವರು ಅರೋಪಿಗಳು ಕ್ಯಾಟರ್ ಹತ್ತಿದ್ದರು. ಅದಾದ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಮೊಬೈಲ್ ಹಾಗೂ ಹಣ ದೋಚಿದ್ದರು.

ಇದನ್ನೂ ಓದಿ: Bengaluru Accident: ಜಲ್ಲಿ ತುಂಬಿದ್ದ ಲಾರಿ ಪಲ್ಟಿಯಾಗಿ ಭೀಕರ ಅಪಘಾತ: 6 ಮಂದಿ ಬಲಿ

ಒಂಟಿ ಮಹಿಳೆ ಅಡ್ಡಗಟ್ಟಿ ದರೋಡೆ!

ನೈಸ್ ರಸ್ತೆಯಲ್ಲಿ ದರೋಡೆಗೆ ಯತ್ನಿಸ್ತಿದ್ದ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡ್ತಿದ್ದ ಆರೋಪಿ ಶಿವಕುಮಾರ್ ಅಲಿಯಾಸ್ ದಡಿಯಾ ಶಿವಕುಮಾರ್ನನ್ನು ತಲಘಟ್ಟಪುರ ಪೊಲೀಸರು ಬಂಧಿಸಿದ್ದಾರೆ.

ರಾಬರಿ ಮಾಡಿ‌‌ದ ನಂತರ ತಮಿಳುನಾಡಿನಲ್ಲಿ ತಲೆಮರೆಸಿಕೊಳ್ತಿದ್ದ ಇಬ್ಬರು ಖದೀಮರು ಈ ಹಿಂದೆ ದರೋಡೆ ಕೇಸ್ನಲ್ಲಿ ಜೈಲು‌ ಸೇರಿದ್ದರು. ಆದರೆ, ಜೈಲಿನಿಂದ ಹೊರಬಂದ ನಂತರ ಮತ್ತೆ ತಮ್ಮ ಹಳೇ ಚಾಳಿಯನ್ನು ಮುಂದುವರಿಸಿದ್ದರು. ರಾತ್ರಿ ವೇಳೆ ದರೋಡೆಗೆ ಯತ್ನಿಸುವಾಗ ನೈಸ್ ರಸ್ತೆ ಸಿಬ್ಬಂದಿಗೆ ಶಿವಕುಮಾರ್ ರೆಡ್ ಹ್ಯಾಂಡ್ ಆಗಿ‌ ಸಿಕ್ಕಿಬಿದ್ದಿದ್ದಾನೆ. ಇನ್ನು, ಮತ್ತೊಬ್ಬ ಆರೋಪಿ ಪ್ರವೀಣ ಕೂಡಲೇ ಸ್ಥಳದಿಂದ ಕಾಲ್ಕಿತ್ತಿದ್ದು ಆತನಿಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಭೀಕರ ಸರಣಿ ಅಪಘಾತಗಳು

ನೈಸ್ ರಸ್ತೆಯಲ್ಲಿ ಭೀಕರ ಅಪಘಾತಗಳು ಸಂಭವಿಸುವುದು ಮುಂದುವರಿದಿದೆ. ಬೆಂಗಳೂರು ಹೊರವಯದಲ್ಲಿರುವ ನೈಸ್ ರಸ್ತೆಯಲ್ಲಿ ಶುಕ್ರವಾರ ರಾತ್ರಿ ಭೀಕರ ಸರಣಿ ಅಪಘಾತ ಸಂಭವಿಸಿದ್ದು, ಲಾರಿ ಡಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಮೊಹಮ್ಮದ್ ಫಾದಿಲ್(25), ಅಭಿಲಾಷ್(25) ಮತ್ತು ಶಿಲ್ಪಾ(30) ಸೇರಿ ಒಟ್ಟು ನಾಲ್ವರು ಸ್ಥಳದಲ್ಲಿಯೇ ದುರ್ಮರಣಕ್ಕೀಡಾಗಿದ್ದಾರೆ. ಕುಮಾರಸ್ವಾಮಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ನೈಸ್ ರಸ್ತೆಯಲ್ಲಿ ಹೆಚ್ಚುತ್ತಿರುವ ಕಳ್ಳತನ, ದರೋಡೆ ಹಾಗೂ ಅಕ್ರಮ ಚಟುವಟಿಕೆ ಪ್ರಕರಣಗಳಿಗೆ ಬ್ರೇಕ್ ಹಾಕಲು ಪೊಲೀಸರು ನಿರ್ಬಂಧ ಹೇರಿದ್ದಾರೆ.
Published by:Soumya KN
First published: