ಸಿಲಿಕಾನ್‌ ಸಿಟಿಯಲ್ಲಿ ಮೊಸಳೆ ಮರಿ ಹಿಡಿದು ಮಾರಲು ಪ್ರಯತ್ನಿಸುತ್ತಿದ್ದ ಇಬ್ಬರ ಬಂಧನ

ಕೊರೋನಾ ಸಾಂಕ್ರಮಿಕ ರೋಗ ಆರಂಭವಾದಾಗಿನಿಂದ ಬೆಂಗಳೂರು ಮತ್ತು ಕರ್ನಾಟಕದ ಸುತ್ತಮುತ್ತಲಿನ ಭಾಗಗಳಲ್ಲಿ ವನ್ಯಜೀವಿ ಅಪರಾಧಗಳು ಹೆಚ್ಚುತ್ತಿವೆ

ಮೊಸಳೆ

ಮೊಸಳೆ

  • Share this:
ಕಾವೇರಿ ನದಿಯಿಂದ (River Cauvery) ಮೊಸಳೆ (Crocodile)ಮರಿಯೊಂದು ಬಲೆ ಬೀಸಿ ಹಿಡಿದು, ಅದನ್ನು ಮಾರಲು ಯತ್ನಿಸಿದ ಇಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಿರುವ ವಿಲಕ್ಷಣ ಪ್ರಕರಣವೊಂದು ನಡೆದಿದೆ. ಬಂಧಿತ ಆರೋಪಿಗಳನ್ನು ಬನ್ನೇರುಘಟ್ಟ ರಸ್ತೆ (Bannerghatta Road.) ನಿವಾಸಿಗಳಾದ ಅಬ್ದುಲ್ ಖಲೀದ್ ಮತ್ತು ಗಂಗಾಧರ ಬಿ ಎಸ್ ಎಂದು ಗುರುತಿಸಲಾಗಿದೆ. ತಮಗೆ ಸಿಕ್ಕ ಸುಳಿವನ್ನು ಆಧರಿಸಿ, ಆ ಆರೋಪಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದ ಪೊಲೀಸರಿಗೆ,(Police) ಅಲ್ಲಿ ಭಾಗಶಃ ನೀರಿನಿಂದ ತುಂಬಿದ ಸಿಲಿಂಡರ್ ಆಕೃತಿಯ ಕಂಟೇನರ್‌ನಲ್ಲಿ(Container) ಮೊಟ್ಟೆಯೊಡೆದ ಮೊಸಳೆ ಮರಿ ಇರುವುದು ಕಂಡು ಬಂತು. ಬುಧವಾರ ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಿ ಪೊಲೀಸರು ಆರೋಪಿಗಳನ್ನು(Arrested) ಬಂಧಿಸಿದರು.

ನ್ಯಾಯಾಂಗ ಬಂಧನ
ಬಂಧಿತ ಆರೋಪಿಗಳ ವಿರುದ್ಧ ದಕ್ಷಿಣ ಬೆಂಗಳೂರಿನ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯಿದೆ ಮತ್ತು ಇತರ ಕಾನೂನು ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳಾದ ಅಬ್ದುಲ್ ಖಲೀದ್ ಮತ್ತು ಗಂಗಾಧರ ಬಿ.ಎಸ್ ಎಂಬುವರನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಗುರುವಾರ ಡಿಸೆಂಬರ್ 9ರಂದು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.

ಇದನ್ನೂ ಓದಿ: Great Escape: ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಂದ ಪ್ರವಾಸಿಗನನ್ನು ಎಳೆದುಕೊಂಡ ಮೊಸಳೆ: ಮುಂದೇನಾಯ್ತು?

ಆರೋಪಿಗಳು ಹಿಡಿದು ಹಾಕಿದ್ದ ಮೊಸಳೆ ಮರಿಯನ್ನು , ಪ್ರಸ್ತುತ ಬನ್ನೇರುಘಟ್ಟ ವನ್ಯಜೀವಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಪಶುವೈದ್ಯರುಗಳು ಆ ಮೊಸಳೆ ಮರಿಯ ಆರೋಗ್ಯ ಸ್ಥಿತಿ ನಿರ್ಣಯಿಸಿದ ನಂತರ ಅದನ್ನು ಜೀವಿಸಲು ಅನುಕೂಲಕವಾದ ಆವಾಸಸ್ಥಾನಕ್ಕೆ ಬಿಡಲಾಗುವುದು ಎಂದು ತಿಳಿದು ಬಂದಿದೆ.

ಏಳು ವರ್ಷಗಳ ಜೈಲು ಶಿಕ್ಷೆ
ವನ್ಯಜೀವಿ (ರಕ್ಷಣೆ) ಕಾಯಿದೆ , 1972ರ ಅಡಿಯಲ್ಲಿ ಸಂರಕ್ಷಿತ ಪ್ರಾಣಿಗಳ ಪೈಕಿ ಮೊಸಳೆಗಳು ಶೆಡ್ಯೂಲ್ 1ರಲ್ಲಿ ಸೇರಿವೆ. ಈ ಕಾಯಿದೆಯ ಪ್ರಕಾರ, ಆರೋಪಿಗಳಿಗೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆರೋಪಿಗಳು ಈ ಮೊಸಳೆ ಮರಿಯನ್ನು ಹಿಡಿಯಲು ಕನಕಪುರದ ಶಿವನ ಸಮುದ್ರಕ್ಕೆ ಹೋಗಿದ್ದರು. ಬಳಿಕ ಅವರು ಅದನ್ನು ವಿದೇಶಿ ಸಾಕು ಪ್ರಾಣಿ ಎಂಬಂತೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು” ಎಂದು ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ವನ್ಯಜೀವಿ ಕಾರ್ಯಕರ್ತರೊಬ್ಬರು ತಿಳಿಸಿದ್ದಾರೆ.

ವನ್ಯಜೀವಿ ಅಪರಾಧ ಹೆಚ್ಚಳ
ಕೊರೋನಾ ಸಾಂಕ್ರಮಿಕ ರೋಗ ಆರಂಭವಾದಾಗಿನಿಂದ ಬೆಂಗಳೂರು ಮತ್ತು ಕರ್ನಾಟಕದ ಸುತ್ತಮುತ್ತಲಿನ ಭಾಗಗಳಲ್ಲಿ ವನ್ಯಜೀವಿ ಅಪರಾಧಗಳು ಹೆಚ್ಚುತ್ತಿವೆ. ಆದರೆ ಮೊಸಳೆಗಳಿಗೆ ಸಂಬಂಧಿಸಿದ ಅಪರಾಧಗಳು ತುಂಬಾ ಅಪರೂಪ. ನವಂಬರ್‌ನಲ್ಲಿ ಬೆಂಗಳೂರು ಪೊಲೀಸರು ಸುಮಾರು 500ಕ್ಕೂ ಹೆಚ್ಚು ಆಮೆಗಳನ್ನು ಪತ್ತೆಹಚ್ಚಿದ್ದರು. ಮತ್ತೊಂದು ಸಂರಕ್ಷಿತ ಪ್ರಬೇಧದ ಆ ಆಮೆಗಳನ್ನು ಬೆಂಗಳೂರು ನಗರದ ಅಂತಾರಾಜ್ಯ ಜನನಿಬಿಡ ಬಸ್ ನಿಲ್ದಾಣಗಳಲ್ಲಿ ಬಿಡಲಾಗಿತ್ತು.

ಮೊಸಳೆ ಮರಿ ಮಾರಾಟ
ಇದೇ ರೀತಿಯ ಪ್ರಕರಣವೊಂದು 2016ರಲ್ಲಿ ನಡೆದಿತ್ತು. ಅದರಲ್ಲಿ, ಬೆಂಗಳೂರು ಪೊಲೀಸರು ಒಂದು ಮೊಸಳೆ ಮರಿಯನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದರು.

ಇದನ್ನೂ ಓದಿ: ಜೋರಾದ ಮಳೆ, ಮನೆ ಬಾಗಿಲಿಗೇ ಬಂದ ಮೊಸಳೆ ಮರಿ.. ಮೊಸಳೆಯನ್ನು ಹೇಗೆ ಹಿಡಿದರು..ವಿಡಿಯೋ ನೋಡಿ!

ಆ ಪ್ರಕರಣದಲ್ಲಿ ಬಂಧಿತನಾಗಿದ್ದ ಆರೋಪಿ ಆಂಧ್ರ ಮೂಲದ ವ್ಯಕ್ತಿಯಾಗಿದ್ದ. ಆತನ ವಿಚಾರಣೆಯ ವೇಳೆ, ತಾನು ತನ್ನ ಊರಿನಲ್ಲಿಯೇ ಆ ಮೊಸಳೆ ಹಿಡಿದಿದ್ದು, ಅದನ್ನು ಬೆಂಗಳೂರಿಗೆ ತಂದು ಎಂ ಜಿ ರಸ್ತೆಯಲ್ಲಿರುವ ರೆಸ್ಟೋರೆಂಟ್‍ಗಳಿಗೆ ಒಳ್ಳೆಯ ಬೆಲೆ ಮಾರಲು ಪ್ರಯತ್ನದಲ್ಲಿ ಇದ್ದದ್ದಾಗಿ ಹೇಳಿಕೆ ನೀಡಿದ್ದರು.

ಕೋಗಿಲಬನ ಗ್ರಾಮದಲ್ಲಿ ಮೊಸಳೆ ಪ್ರತ್ಯಕ್ಷ

ಬೃಹತ್ ಗಾತ್ರದ ಮೊಸಳೆಯೊಂದು ಜನವಸತಿ ಪ್ರದೇಶವಾದ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕೋಗಿಲಬನ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಸುಮಾರು ಅರ್ಧಗಂಟೆಗೂ ಅಧಿಕ ಕಾಲ ಕೋಗಿಲಬನ ಗ್ರಾಮದಲ್ಲಿ ಮೊಸಳೆ ರಾಜಾರೋಷವಾಗಿ ತಿರುಗಾಡಿದ್ದು ಅದೃಷ್ಟವಶಾತ್ ಯಾರ ಮೇಲೂ ದಾಳಿ ನಡೆಸಿಲ್ಲ. ಮೊಸಳೆ ಗ್ರಾಮದಲ್ಲಿ ತಿರುಗಾಡಿದ್ದನ್ನ ಸ್ಥಳೀಯರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಮೊಸಳೆಯೊಂದು ಈ ರೀತಿ ಗ್ರಾಮಕ್ಕೆ ಆಗಮಿಸಿರುವುದು ಸ್ಥಳೀಯರಲ್ಲಿ ಅಚ್ಚರಿಗೂ ಕಾರಣವಾಗಿತ್ತು. ಗ್ರಾಮದ ಸಮೀಪಲ್ಲಿರುವ ಕಾಳಿ ನದಿಯಿಂದ ಮೊಸಳೆ ಗ್ರಾಮಕ್ಕೆ ಆಗಮಿಸಿತ್ತು. ಬಳಿಕ ಅರಣ್ಯ ಇಲಾಖೆಗೆ ಸ್ಥಳೀಯರು ಮಾಹಿತಿ ನೀಡಿದ್ದು ಸಿಬ್ಬಂದಿ ಆಗಮಿಸಿ ಮೊಸಳೆಯನ್ನ ಸುರಕ್ಷಿತವಾಗಿ ಮತ್ತೆ ನದಿಗೆ ಸೇರಿಸಿದ್ದರು.
Published by:vanithasanjevani vanithasanjevani
First published: