Bengaluru Mallನಲ್ಲಿ ಬೆಂಕಿ.. ರಸ್ತೆ ಕಾಣದಷ್ಟು ದಟ್ಟ ಹೊಗೆ: ಮತ್ತೊಂದೆಡೆ ಸಿಲಿಂಡರ್ ಸ್ಫೋಟ!

ಕೋಣನಕುಂಟೆ ಕ್ರಾಸ್ ಬಳಿ ನಿರ್ಮಾಣ ಹಂತದ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಣನಕುಂಟೆ ಕ್ರಾಸ್ ಮೆಟ್ರೋ ಸ್ಟೇಷನ್ ಬಳಿ ಘಟನೆ ನಡೆದಿದೆ. ಬಹು ಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು, ದಟ್ಟವಾದ ಹೊಗೆಯಿಂದ ರಸ್ತೆಯೂ ಕಾಣದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆ ಕಾಣದಷ್ಟು ಹೊಗೆ

ರಸ್ತೆ ಕಾಣದಷ್ಟು ಹೊಗೆ

  • Share this:
ಬೆಂಗಳೂರು: ಕೊರೊನಾ, ಓಮಿಕ್ರಾನ್​ (Corona Omicron) ನಿಯಂತ್ರಕ್ಕೆ ರಾಜ್ಯ ಸರ್ಕಾರ ತಂದಿರುವ ವೀಕೆಂಡ್​ ಕರ್ಫ್ಯೂ (Weekend Curfew) ಶುಕ್ರವಾರ ರಾತ್ರಿಯಿಂದ ಜಾರಿಯಲ್ಲಿದೆ. ಮೊದಲ ವೀಕೆಂಡ್​​ ಸಿಲಿಕಾನ್​​ ಸಿಟಿ ಬಹುತೇಕ ಸ್ತಬ್ಧವಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಅಗ್ನಿ ಅವಘಡದ (Fire Accident) ಶಾಕ್​ ಎದುರಾಗಿದೆ. ಇಂದು ಮಧ್ಯಾಹ್ನದ ಸಮಯದಲ್ಲಿ ನಗರ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಮೂಡಲುಪಾಳ್ಯದ ಪಂಚಶೀಲ ನಗರದಲ್ಲಿ ಸಿಲಿಂಡರ್ ಸ್ಪೋಟಗೊಂಡಿದೆ. ರೀಫಿಲಿಂಗ್ ಮಾಡ್ತಿದ್ದ ವೇಳೆ ಸ್ಫೋಟ ಸಂಭವಿಸಿರುವ ಅನುಮಾನ ವ್ಯಕ್ತವಾಗಿದೆ. ಎರಡು ಸಿಲಿಂಡರ್ ಗಳು ಸ್ಫೋಟಗೊಂಡಿದ್ದು, ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಪೋಟದ ರಭಸಕ್ಕೆ ಸಾಕು ನಾಯಿ ಮೃತಪಟ್ಟಿದೆ. ಸದ್ಯ ಗೋವಿಂದರಾಜನಗರ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಅಕ್ರಮವಾಗಿ ಸಿಲಿಂಡರ್ ಗಳ ದಾಸ್ತಾನು

ಎರಡು ಅಗ್ನಿಶಾಮಕ ವಾಹನ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಮನೆಯಲ್ಲಿ 20ಕ್ಕೂ ಹೆಚ್ಚು ಸಿಲಿಂಡರ್ ಗಳ ಶೇಖರಣೆ ಮಾಡಿಟ್ಟದ ಆರೋಪ ಕೇಳಿ ಬಂದಿದೆ. ಅಕ್ರಮವಾಗಿ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ದಾಸ್ತಾನು ಮಾಡಿದ್ದೇ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಬೆಟ್ಟಯ್ಯ ಅಲಿಯಾಸ್ ಗ್ಯಾಸ್ ಬೆಟ್ಟಯ್ಯ ಎಂಬುವರ ಮನೆಯಲ್ಲಿ ಅಕ್ರಮವಾಗಿ ಸಿಲಿಂಡರ್​ಗಳನ್ನು ದಾಸ್ತಾನು ಮಾಡಿರುವುದು ಕಂಡು ಬಂದಿದೆ. ಭರತ್ ಗ್ಯಾಸ್ ಏಜೆನ್ಸಿಯಿಂದ ಸಿಲಿಂಡರ್​ಗಳನ್ನು ತಂದು ಬ್ಲಾಕ್ ಅಲ್ಲಿ ಮಾರಾಟ ಮಾಡುತ್ತಿದ್ದರಂತೆ. ಐದು ಕೆಜಿ, 15 ಕೆಜಿಯಂತೆ ಗ್ಯಾಸ್  ಸಿಲಿಂಡರ್ ಮಾರಾಟದ ಆರೋಪ ಕೇಳಿ ಬಂದಿದೆ.

ಸಿಲಿಂಡರ್​ ಬ್ಲಾಸ್ಟ್​


ದೂರು ಕೊಟ್ಟರೂ ಕ್ಯಾರೇ ಎಂದಿರಲಿಲ್ಲ

ಬೆಟ್ಟಯ್ಯನ ಜೊತೆಗೆ ಮಗ ವಿನಯ್, ಕುಮಾರ್ ಎಂಬ ಕೆಲಸಗಾರನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಸ್ಟೋರ್ ಅಂತ ಅಂಗಡಿ ಇಟ್ಟುಕೊಂಡಿದ್ದು, ಮನೆಯಲ್ಲಿ ಹೆಚ್ಚು ಸಿಲಿಂಡರ್ ಶೇಖರಣೆ‌ ಮಾಡಲಾಗಿತ್ತು. ಘಟನೆ ಬೆನ್ನಲ್ಲೇ ಬೆಟ್ಟಯ್ಯ ನಾಪತ್ತೆಯಾಗಿದ್ದಾರೆ. ಈ ಹಿಂದೆ ಸಹ ಅಕ್ರಮ ಸಿಲಿಂಡರ್​ ದಾಸ್ತಾನು ಸಂಬಂಧ ಸ್ಥಳೀಯರು ಬೆಟ್ಟಯ್ಯ ವಿರುದ್ಧ ದೂರು ನೀಡಿದ್ದರು. ಪೊಲೀಸರು ಬಂದು ವಾರ್ನಿಂಗ್ ನೀಡಿದ್ರು ಕೇರ್ ಮಾಡದೆ ಸಿಲಿಂಡರ್ ರೀಫೀಲಿಂಗ್ ಮಾಡ್ತಿದ್ದ. ಈ ತಂದೆ-ಮಗ ಸೇರಿದಂತೆ ಕೆಲಸಗಾರ ಮೂವರು ಗಾಯಗೊಂಡಿದ್ದಾರೆ. ಅಕ್ಕಪಕ್ಕದ ಮನೆಗಳಿಗೂ ತೊಂದರೆಯಾಗುವ ಸಾಧ್ಯತೆಗಳು ದಟ್ಟವಾಗಿತ್ತು. ಆದರೆ ಆಗ್ನಿಶಾಮಕ ದಳ ಕಾರ್ಯಾಚರಣೆಯಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದೆ.

ತಂದೆ ಬೆಟ್ಟಯ್ಯ, ಮಗ ವಿನಯ್​


ಕೋಣನಕುಂಟೆಯಲ್ಲೂ ಅಗ್ನಿ ಅವಘಡ

ಇನ್ನು ಇದೇ ಸಮಯಕ್ಕೆ ನಗರದ ಮತ್ತೊಂದು ಕಡೆಯೂ ಅಗ್ನಿ ಅವಘಡ ಸಂಭವಿಸಿದೆ. ಕೋಣನಕುಂಟೆ ಕ್ರಾಸ್ ಬಳಿ ನಿರ್ಮಾಣ ಹಂತದ ಕಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೋಣನಕುಂಟೆ ಕ್ರಾಸ್ ಮೆಟ್ರೋ ಸ್ಟೇಷನ್ ಬಳಿ ಘಟನೆ ನಡೆದಿದೆ. ಬಹು ಮಹಡಿ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು, ದಟ್ಟವಾದ ಹೊಗೆಯಿಂದ ರಸ್ತೆಯೂ ಕಾಣದಂಥ ಪರಿಸ್ಥಿತಿ ನಿರ್ಮಾಣವಾಗಿದೆ.

ದಟ್ಟ ಹೊಗೆ


ಸ್ಥಳಕ್ಕೆ ಕೋಣನಕುಂಟೆ ಪೊಲೀಸ್ರು ಹಾಗೂ ಎರಡು ಅಗ್ನಿಶಾಮಕ ವಾಹನ ದೌಡಾಯಿಸಿದೆ. ಖಾಸಗಿ ಕಂಪನಿ ಗ್ರೂಪ್ ಗೆ ಸೇರಿದ ನಿರ್ಮಾಣ ಹಂತದ ಕಟ್ಟಡ ಘಟನೆ ನಡೆದಿದೆ. ಥರ್ಮೋಕೋಲ್ ಸಂಗ್ರಹಿಸಿಡಲಾಗಿತ್ತು ಎಂಬ ಮಾಹಿತಿ ಇದೆ. ಇದ್ರಿಂದಾಗಿಯೇ ದಟ್ಟ ಹೊಗೆ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ರಸ್ತೆಯೇ ಕಾಣದಷ್ಟು ಹೊಗೆ


ಶಾರ್ಟ್​​ ಸರ್ಕ್ಯೂಟ್​ ನಿಂದ ಬೆಂಕಿ

ಕಟ್ಟಡದ ಒಂದು ಕೊಠಡಿಯಲ್ಲಿ ಸ್ಟೋರ್ ರೂಂ ತರ ಮಾಡಲಾಗಿತ್ತು, ಇದರಲ್ಲಿ ಸ್ಟೈರೊ ಫೋಮ್ (ಥರ್ಮಾ ಕೋಲ್)ಇಡಲಾಗಿತ್ತು. ಇದಕ್ಕೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದೆ. ಸ್ಟೈರೊ ಫೋಮ್ ಇದ್ದ ಕಾರಣ ಹೊಗೆ ದಟ್ಟವಾಗಿ ಆವರಿಸಿದೆ. ನಂತ್ರ ಬೆಂಕಿಯನ್ನು ಕಂಟ್ರೋಲ್ ಮಾಡಲಾಗಿದೆ. ಸದ್ಯ ಗೋಡನ್ ಗೆ ಎಂಟ್ರಿ ಕೊಟ್ಟು ಪರಿಶೀಲನೆ ನಡೆಸಲಾಗುತ್ತಿದೆ. ಬೆಂಕಿಯನ್ನು ಸಂಪೂರ್ಣವಾಗಿ ಕಂಟ್ರೋಲ್​ ಗೆ ತರಲಾಗಿದೆ ಎಂದು ಡಿಸಿಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.
Published by:Kavya V
First published: