ಬೆಂಗಳೂರು: ಅವರಿಬ್ಬರು ಒಡಹುಟ್ಟಿದ ಅಣ್ಣ-ತಮ್ಮ, ಪುಟ್ಟದಾಗಿದ್ರೂ ಚೊಕ್ಕದಾಗಿದ್ದ ಬ್ಯುಸಿನೆಸ್ ಲಾಕ್ ಡೌನ್ ವೇಳೆ ಕೈಕೊಟ್ಟಿತ್ತು. ಇತ್ತ ಸಾಲಗಾರರು ಬೆನ್ನಿಗೆ ಬೀಳ್ತಿದ್ದಂತೆ ಸೋದರರಿಬ್ಬರು ಅಡ್ಡದಾರಿ ಹಿಡಿದಿದ್ದರು. ಹೀಗಿರುವಾಗ ಕೊನೆಗೆ ಬಾಡಿಗೆ ಮನೆ ಕೊಟ್ಟ ಓನರ್ ಪತ್ನಿಯ ಕೈಕಾಲು ಕಟ್ಟಿ ದರೋಡೆ ಮಾಡಿದ್ದಾರೆ. ಜೂನ್ 26ರಂದು ಸುಭಾಷ್ ಚಂದ್ರ ಹಾಗೂ ಜಯಶ್ರೀ ಅನ್ನೋ ದಂಪತಿ ಮನೆಯಲ್ಲಿ ದರೋಡೆ ನಡೆದಿತ್ತು. ಸುಭಾಷ್ ಚಂದ್ರ ಪೀಣ್ಯದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ರೆ, ಪತ್ನಿ ಜಯಶ್ರೀ ಹೌಸ್ ವೈಫ್. ಮಕ್ಕಳು ವಿದೇಶದಲ್ಲಿ ಸೆಟಲ್ ಆಗಿದ್ದರು. ಹೀಗೆ ವೆಲ್ ಸೆಟಲ್ಡ್ ಆಗಿದ್ದ ಫ್ಯಾಮಿಲಿಯಲ್ಲಿ ಶ್ರೀಮಂತಿಕೆ ಅನ್ನೋದು ಸಹಜವಾಗಿಯೇ ಇತ್ತು..ಇವರ ಶ್ರೀಮಂತಿಕೆ ಮೇಲೆ ವಕ್ರದೃಷ್ಠಿ ಬೀರಿದ್ದ ಮನೆ ಬಾಡಿಗೆಗಿದ್ದ ಅರವಿಂದ್ ಹಾಗೂ ಆತನ ಸಹೋದರ ಅವಿನಾಶ್.
ಜೂನ್ 26ರಂದು ಓನರ್ ಪತ್ನಿ ಜಯಶ್ರೀ ಒಬ್ಬರೇ ಮನೆಯಲ್ಲಿದ್ದನ್ನು ಗಮನಿಸಿ ಇಬ್ಬರೂ ಮನೆಗೆ ನುಗ್ಗಿದ್ರು. ಬಳಿಕ ಜಯಶ್ರೀ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ಕೆಜಿ ಗಟ್ಟಲೆ ಬೆಳ್ಳಿ ಆಭರಣ ದೋಚಿ ಎಸ್ಕೇಪ್ ಆಗಿದ್ದರು. ಆರೋಪಿ ಅರವಿಂದ್ ಬಟ್ಟೆ ಬಿಸಿನೆಸ್ ಮಾಡುತ್ತಿದ್ದ. ಪದೇ ಪದೇ ಲಾಕ್ ಡೌನ್ ಆಗ್ತಿರೊ ಕಾರಣಕ್ಕೆ ಬಿಸಿನೆಸ್ ಕೈಕೊಟ್ಟಿತ್ತು. ಎಷ್ಟರ ಮಟ್ಟಿಗೆ ಲಾಸ್ ಆಗಿತ್ತು ಅಂದ್ರೆ ಲೋನ್ ಕಂತು ಹಾಗೂ ಮನೆ ಬಾಡಿಗೆ ಕಟ್ಟಲಾಗದ ಸ್ಥಿತಿ ತಲುಪಿದ್ದ ಅರವಿಂದ್. ಜೊತೆಗೆ ಸಾಲಗಾರರ ಕಾಟವೂ ಒಟ್ಟೊಟ್ಟಿಗೆ ಶುರುವಾಗಿತ್ತು.
ಇದನ್ನೂ ಓದಿ: ಅನ್ಯ ಜಾತಿ ಯುವತಿ ಪ್ರೀತಿಸಿ ಮದುವೆ- ಮೂರೇ ತಿಂಗಳಲ್ಲಿ ಹತ್ಯೆ ಮಾಡಿ ಜೈಲು ಸೇರಿದ ಪತಿ
ಇದೇ ಟೈಂನಲ್ಲಿ ಮನೆ ಮಾಲೀಕ ಶುಭಾಷ್ ಚಂದ್ರ ಅವರ ಮಗನ ಮದುವೆ ಫಿಕ್ಸ್ ಆಗಿತ್ತು. ಮದುವೆ ಅಂದ್ರೆ ಚಿನ್ನ, ಬೆಳ್ಳಿ, ಹಣದ ಓಡಾಟ ಹೆಚ್ಚಿರತ್ತೆ. ಅದರಲ್ಲೂ ಈ ಸುಭಾಷ್ ಚಂದ್ರರ ವೆಲ್ ಸೆಟಲ್ಡ್ ಫ್ಯಾಮಿಲಿಲಿ ಅದು ಸ್ಬಲ್ಪ ಜಾಸ್ತಿನೇ ಇತ್ತು. ಇದನ್ನ ಅರಿತಿ ಅರವಿಂದ್ ತನ್ನ ಸಹೋದರ ಅವಿನಾಶ್ ಜೊತೆ ಮಾತನಾಡಿ ಮನೆ ಓನರ್ ಮನೆಯಲ್ಲಿಯೇ ದರೋಡೆ ನಡೆಸೋಕೆ ಸ್ಕೆಚ್ ಹಾಕಿ ಸಕ್ಸಸ್ ಆಗಿದ್ದರು. ಈಗ ಪರಪ್ಪನ ಅಗ್ರಹಾರ ಜೈಲಲ್ಲಿ ಮುದ್ದೆ ಮುರಿಯುತ್ತಿದ್ದಾರೆ.
ಇನ್ನು ಅರವಿಂದ್ ಗೆ ಮದುವೆಯಾಗಿದ್ದು, ಸಾಕಷ್ಟು ಶೋಕಿ ಮಾಡ್ತಿದ್ದ ಎನ್ನಲಾಗಿದೆ. ಜೊತೆಗೆ ಐಷಾರಾಮಿ ಬದುಕಿಗೆ ಮಾರುಹೋಗಿ ಹಣಕಾಸಿನ ಸಮಸ್ಯೆಗೆ ಸಿಲುಕಿದ್ದ. ಈ ನಡುವೆ ಬಟ್ಟೆ ಅಂಗಡಿ ಬ್ಯುಸಿನಸ್ ಸಹ ನೆಲಕಚ್ಚಿದ್ದು, ಸಾಲಗಾರರು ಮನೆ ಬಳಿ ಬರಲು ಶುರುಮಾಡಿದ್ದರು. ಇದ್ರಿಂದ ಹೇಗಾದ್ರು ಬಚಾವಾಗಬೇಕು ಎಂದು ಉಪಾಯ ಮಾಡಿದ್ದ ಅರವಿಂದ್ ಈಗ ಅಪಾಯಕ್ಕೆ ಸಿಲುಕಿದ್ದಾನೆ. ಅರವಿಂದ್ ಹಾಗೂ ಸಹೋದರ ಬಂಧನದಿಂದ ಕುಟುಂಬಸ್ಥರಿಗೂ ಶಾಕ್ ಆಗಿದೆ. ಕಳ್ಳತನ ಮಾಡಿದ್ದ ಎಲ್ಲಾ ವಸ್ತುಗಳನ್ನ ಪೊಲೀಸರು ಸೀಜ್ ಮಾಡಿದ್ದು, ಮನೆಯವರಿ ನೀಡಿದ್ದಾರೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ನಿಮ್ಮ ಜಿಲ್ಲೆಯಿಂದ (ಬೆಂಗಳೂರು ನಗರ)
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ