S.R.Vishwanath ಕೊಲೆಗೆ ಸ್ಕೆಚ್ ಪ್ರಕರಣಕ್ಕೆ ಟ್ವಿಸ್ಟ್; NEWS18 ಎದುರು ಹೊಸ ಕಥೆ ಬಿಚ್ಚಿಟ್ಟ ಗೋಪಾಲಕೃಷ್ಣ

ವಿಡಿಯೋದಲ್ಲಿ ಕೆಲವೊಂದು ಫೇಕ್ ಇದೆ. ಎಂಟು ಎಕರೆ ಜಾಗದ ವಿಚಾರವಾಗಿ ಕುಳ್ಳ ದೇವರಾಜ್  ಬಂದಿದ್ದ. ಆಗ ವಿಡಿಯೋ ಮಾಡಿರಬಹುದು. ಕುಳ್ಳ ದೇವರಾಜ್ ವಿಡಿಯೋವನ್ನು ಎಡಿಟ್ ಮಾಡಿದ್ದಾನೆ. ನಮಗೆ ಕೆಲವರ ಮೇಲೆ ಅನುಮಾನ ಇದೆ.

ನ್ಯೂಸ್​​ 18ಗೆ ಗೋಪಾಲಕೃಷ್ಣ ಹೇಳಿಕೆ

ನ್ಯೂಸ್​​ 18ಗೆ ಗೋಪಾಲಕೃಷ್ಣ ಹೇಳಿಕೆ

  • Share this:
ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ (Yelahanka MLA S.R.Vishwanath) ಕೊಲೆಗೆ (Murder) ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್​​ನ ಗೋಪಾಲಕೃಷ್ಣ (Congress leader Gopalkrishna) ಸಂಚು ರೂಪಿಸಿದ್ದಾರೆ ಎನ್ನಲಾದ ವಿಡಿಯೋ ಭಾರೀ ಸದ್ದು ಮಾಡುತ್ತಿದೆ. ಹತ್ಯೆಗೆ ಸಂಚು ಆರೋಪ ಹಿನ್ನೆಲೆಯಲ್ಲಿ ಶಾಸಕ ಎಸ್.ಆರ್.ವಿಶ್ವನಾಥ್ ಇಂದು ರಾಜಾನುಕುಂಟೆ ಪೊಲೀಸ್ ಠಾಣೆಗೆ (Rajanukunte Police Station) ದೂರು ನೀಡಿದರು. ಈ ಹಿನ್ನೆಲೆ ಮಾಧ್ಯಮಗಳ ಎದುರು ಬಂದ ಕಾಂಗ್ರೆಸ್​ ಮುಖಂಡ ಗೋಪಾಲಕೃಷ್ಣ ತಮ್ಮ ಮೇಲಿನ ಆರೋಪಗಳನ್ನು ಅಲ್ಲಗಳೆದರು. ಇದೆಲ್ಲಾ ಸುಳ್ಳು, ವಿಶ್ವನಾಥ್ ಹಾಗೂ ನಂಗೆ ಯಾವುದೇ ದ್ವೇಷ ಇಲ್ಲ. ನಾನು ಯಾವುದೇ ಕಾರಣಕ್ಕೂ ಕೊಲೆ ಯತ್ನ ಮಾಡಿಲ್ಲ. ನಾನು ಹಿಂದುಳಿದ ವರ್ಗಕ್ಕೆ ಸೇರಿದವನು. ಚುನಾವಣಾ ಸಂದರ್ಭದಲ್ಲಿ ಮಾತ್ರ ಸ್ವರ್ಧಿ. ಆ ವಿಡಿಯೋದಲ್ಲಿ ಇರೋದು ನಾನೇ ಇರಬಹುದು. ಆದರೆ ಹತ್ಯೆಗೆ ಸಂಚು ರೂಪಿಸಿಲ್ಲ ಎಂದು ಆರೋಪಗಳನ್ನು ಅಲ್ಲಗಳೆದರು.

ಕುಳ್ಳ ದೇವರಾಜ್ ವಿಡಿಯೋವನ್ನು ಎಡಿಟ್ ಮಾಡಿದ್ದಾನೆ

ವಿಡಿಯೋದಲ್ಲಿ ಕೆಲವೊಂದು ಫೇಕ್ ಇದೆ. ಎಂಟು ಎಕರೆ ಜಾಗದ ವಿಚಾರವಾಗಿ ಕುಳ್ಳ ದೇವರಾಜ್  ಬಂದಿದ್ದ. ಆಗ ವಿಡಿಯೋ ಮಾಡಿರಬಹುದು. ಕುಳ್ಳ ದೇವರಾಜ್ ವಿಡಿಯೋವನ್ನು ಎಡಿಟ್ ಮಾಡಿದ್ದಾನೆ. ನಮಗೆ ಕೆಲವರ ಮೇಲೆ ಅನುಮಾನ ಇದೆ. ನನಗೆ ರೌಡಿಗಳ ಜೊತೆಗೆ ಸಂಪರ್ಕ ಇಲ್ಲ. ಇಡೀ ಕಾಂಗ್ರೆಸ್ ಪಕ್ಷ ‌ನಮ್ಮ ಜೊತೆಗೆ ಇದೆ. ಕುಳ್ಳ ದೇವರಾಜ್ ಯಾರ ಜೊತೆಗೆ ಸಂಪರ್ಕದಲ್ಲಿದ್ದಾನೆ ಅನ್ನೋದು ಗೊತ್ತಾಗುತ್ತದೆ. ಸರ್ಕಾರಕ್ಕೆ ಪತ್ರ ಬರೀತಿನಿ. ಒಂದೇ ಏಟಿಗೆ ಹೊಡಿಬೇಕು ಅನ್ನೋ ವಿಚಾರವಾಗಿ ಇಷ್ಟೆಲ್ಲಾ ನಕಲಿ ಮಾಡಿದ್ದಾರೆ. ನಂಗೆ ಜೀವಬೆದರಿಕೆ ಇದೆ, ತೇಜೋವಧೆ ಮಾಡಲಾಗಿದೆ. ವಿಡಿಯೋದಲ್ಲಿ‌ ಕೆಲವನ್ನು ಎಡಿಟ್ ಮಾಡಲಾಗಿದೆ. ಕುಳ್ಳ ದೇವರಾಜ್ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕ್ತಿನಿ ಎಂದರು.

ವಿಡಿಯೋದಲ್ಲಿ ದುಡ್ಡು ವಿಚಾರ ಮಾತ್ರ ಸತ್ಯ

ಶಾಸಕ ಎಸ್​.ಆರ್​​.ವಿಶ್ವನಾಥ್​​ಗೆ ಸಾಕಷ್ಟು ರೌಡಿಗಳ ಪರಿಚಯವಿದೆ. ಆರು ತಿಂಗಳ ಹಿಂದೆ ವಿಶ್ವನಾಥ್ ಜೊತೆಗೆ ಸೇರ್ಕೊಂಡು ಈ ರೀತಿ ಮಾಡಿದ್ದಾನೆ. 2013 ರಿಂದ ದೇವರಾಜ್ ನನ್ನ ಜೊತೆಗೆ ಇದ್ದ. ಯಲಹಂಕದಲ್ಲಿ ನಂಗೆ ವಿಶ್ವನಾಥ್ ಗೆ ಯಾವುದೇ ಲಿಟಿಗೇಷನ್ ಇಲ್ಲ. ಸಿಸಿಬಿ ಪೊಲೀಸರಿಗೆ ಸೂಕ್ತ ಮಾಹಿತಿ ನೀಡಿದ್ದಾನೆ. ಹಾಗಾಗಿ ಅವರೇ ಬಿಟ್ಟು ಕಳಸಿದ್ದಾರೆ. ವಿಡಿಯೋದಲ್ಲಿ ದುಡ್ಡು ವಿಚಾರ ಮಾತ್ರ ಸತ್ಯ, ಬೇರೆ ಎಲ್ಲಾ ಫೇಕು ಎಂದು ಸ್ಪಷ್ಟನೆ ನೀಡಿದರು. ನನಗೆ ಜೀವಭಯ ಇದೆ, ಪೊಲೀಸ್ ರಕ್ಷಣೆ ಕೇಳುತ್ತೇನೆ.  ಕಡಬಗೆರೆ ಸೀನ ಮೇಲೆ ಹತ್ಯಾಯತ್ನ ಪ್ರಕರಣ ನನಗೆ ಅನುಮಾನ ಇದೆ. ಸಿಬಿಐ ತನಿಖೆ ನಡೆದರೆ ಸತ್ಯ ಬಯಲಿಗೆ ಬರಲಿದೆ ಎಂದರು. ಜೊತೆಗೆ ಶಾಸಕ ವಿಶ್ವನಾಥ್ ಜೊತೆ ಕುಳ್ಳ ದೇವರಾಜ್ ಇರೋ ಫೋಟೋ ದಾಖಲೆ ಬಿಡುಗಡೆ ಮಾಡಿದರು.

ಇದನ್ನೂ ಓದಿ: S.R.Vishwanath ಹತ್ಯೆಗೆ ಸ್ಕೆಚ್: ವಿಡಿಯೋ ಬಹಿರಂಗ ಬೆನ್ನಲ್ಲೇ ಠಾಣೆಗೆ ದೂರು ನೀಡಿ, ಡಿಕೆಶಿ ವಿರುದ್ಧ ಕಿಡಿಕಾರಿದ ಶಾಸಕ

ಒಟ್ಟಾರೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಡಿಜಿ ಐಜಿಪಿ ಪ್ರವೀಣ್ ಸೂದ್ , ಈ ಬಗ್ಗೆ ರಾಜಾನುಕುಂಟೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆಯನ್ನ ಮಾಡ್ತಾರೆ, ಈ ಸಮಯದಲ್ಲಿ ನಾನು ಏನು ಹೇಳಲಿಕ್ಕೆ ಆಗುವುದಿಲ್ಲ. ದೂರಿನಂತೆ ಸದ್ಯ ತನಿಖೆ‌ ನಡೆಯಲಿದೆ ಎಂದರು.

ಯಾರು ಈ ಕುಳ್ಳ ದೇವರಾಜ್?

ಶಾಸಕರ ಕೊಲೆ ಸ್ಕೆಚ್ ಕೇಸ್​​ನಲ್ಲಿ ಕೇಳಿ ಬರ್ತಿರೋ ಕುಳ್ಳ ದೇವರಾಜ್ , ಯಲಹಂಕ ಉಪನಗರದ ಅಟ್ಟೂರು ಸಮೀಪದ ಚಿತ್ರಾ ಲೇಔಟ್ ನಿವಾಸಿ. ಯಲಹಂಕ‌ ಸುತ್ತಮುತ್ತ ರಿಯಲ್ ಎಸ್ಟೇಟ್ ನಲ್ಲಿ ಫುಲ್ ಹೆಸರು ಮಾಡಿದ್ದ. ಯಾವುದೇ ಪ್ರಾಪರ್ಟಿ ವಿಚಾರ ಇದ್ರೂ ಇದೇ ಕುಳ್ಳ ದೇವರಾಜ್ ಬಳಿ ಬರ್ತಾ ಇತ್ತು. ರಾಜಕಾರಣಿಗಳು ಹಾಗೂ ಪೊಲೀಸರ ಜೊತೆಗೂ ಉತ್ತಮ ಸಂಬಂಧ ಈತನಿಗಿದೆ. ಸುಮಾರು ವರ್ಷ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ದೇವರಾಜ್ ವಿರುದ್ದ ಭೂ ಮಾಫಿಯಾದಲ್ಲಿ ಸಾಕಷ್ಟು ಆರೋಪಗಳು ಕೇಳಿ ಬಂದಿತ್ತು. ಈತನ ವಿರುದ್ಧ ನಗರ ಪೊಲೀಸ್ ಆಯುಕ್ತರಿಗೂ ಈ ಹಿಂದೆ ಹಲವರು ದೂರು ನೀಡಿದ್ದರು. ಕೆಲ ಉದ್ಯಮಿಗಳು  ಭೂ ಮಾಫಿಯಾ, ಬೆದರಿಕೆ ಹಿನ್ನಲೆ ದೂರು ನೀಡಿದ್ದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಪೊಲೀಸರು ಹಾಗೂ ರಾಜಕಾರಣಿಗಳ ಜೊತೆಯೂ ಉತ್ತಮ ಒಟನಾಟ ಇತ್ತು ಎನ್ನಲಾಗುತ್ತಿದೆ.
Published by:Kavya V
First published: