ದುಬೈ ಪ್ರವಾಸದ ಪ್ಯಾಕೇಜ್​​ನಲ್ಲಿ ಹೇಳಿದ್ದ ಸ್ಥಳಗಳನ್ನು ತೋರಿಸದ Travel Agency: ದಂಪತಿಗಳಿಗೆ ಕೊನೆಗೂ ಸಿಕ್ತು ನ್ಯಾಯ

ಟ್ರಾವೆಲ್ ಏಜೆನ್ಸಿ ಕಂಪನಿ ಮೊದಲು ಹೇಳಿದ ಯಾವುದೇ ಸ್ಥಳಗಳಿಗೆ ಕರೆದೊಯ್ಯದಿಲ್ಲ. 5 ದಿನಗಳ ಪ್ರವಾಸವನ್ನು ಮೂರು ದಿನಗಳಿಗೆ ಮೊಟಕುಗೊಳಿಸಿ ವಾಪಸ್ ಕರೆ ತಂದಿದ್ದರು. ಹೇಳಿದ ಸ್ಥಳಗಳಿಗೆ ಕರೆದೊಯ್ಯದ ಟ್ರಾವೆಲ್ ಏಜೆನ್ಸಿ ವಿರುದ್ಧ ದಂಪತಿಗಳು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು.

ದುಬೈ

ದುಬೈ

  • Share this:
ಬೆಂಗಳೂರು: ದುಬೈನಲ್ಲಿರುವ (Dubai) ಬುರ್ಜ್ ಖಲೀಫಾದ (Burj Khalifa) ಮೇಲಿನ ಮಹಡಿ, ಫೆರಾರಿ ವರ್ಲ್ಡ್ ಥೀಮ್ ಪಾರ್ಕ್ ಮತ್ತು ಬಾರ್ಬೆಕ್ಯುನೊಂದಿಗೆ ಡೆಸರ್ಟ್ ಸಫಾರಿಗೆ ಕರೆದೊಯ್ಯುವುದಾಗಿ ದುಬೈ ಟೂರ್ ಪ್ಯಾಕೇಜ್‌ನಲ್ಲಿ ಹೇಳಲಾಗಿತ್ತು. ಈ ಎಲ್ಲಾ ಸ್ಥಳಗಳಿಗೆ ಭೇಟಿ ನೀಡುವ ಆಸೆಯಿಂದ ಬೆಂಗಳೂರಿನ ಎರಡು ಜೋಡಿಗಳು (Bengaluru couples) ತಲಾ 59,000 ರೂ.ಗಳನ್ನು ಪಾವತಿಸಿ ಪ್ರವಾಸಕ್ಕೆ (Dubai tour package ) ಹೊರಟರು. ಆದರೆ ಟ್ರಾವೆಲ್​ ಏಜೆನ್ಸಿ ಕಂಪನಿ ಮೊದಲು ಹೇಳಿದ ಯಾವುದೇ ಸ್ಥಳಗಳಿಗೆ ಕರೆದೊಯ್ಯದಿಲ್ಲ. 5 ದಿನಗಳ ಪ್ರವಾಸವನ್ನು ಮೂರು ದಿನಗಳಿಗೆ ಮೊಟಕುಗೊಳಿಸಿ ವಾಪಸ್​ ಕರೆ ತಂದಿದ್ದರು. ಹೇಳಿದ ಸ್ಥಳಗಳಿಗೆ ಕರೆದೊಯ್ಯದ ಟ್ರಾವೆಲ್​ ಏಜೆನ್ಸಿ ವಿರುದ್ಧ ದಂಪತಿಗಳು ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್​​ ದಂಪತಿಗಳಿಗೆ ಪರಿಹಾರವಾಗಿ ತಲಾ 15,000 ರೂ. ಹಾಗೂ ಕೋರ್ಟ್​​ ವೆಚ್ಚಕ್ಕಾಗಿ 5,000 ರೂ. ನೀಡುವಂತೆ ಟ್ರಾವೆಲ್​ ಏಜೆನ್ಸಿಗೆ ಸೂಚಿಸಿದೆ. ಆ ಮೂಲಕ ದಂಪತಿಗಳು ಗೆಲುವಿನ ನಗೆ ಬೀರಿದ್ದಾರೆ.

ಬೆಂಗಳೂರಿನ ದಂಪತಿಗಳಿಗೆ ದೋಖಾ  

ಗುಟ್ಟಹಳ್ಳಿಯ ಗಿರೀಶ್ ಕೋಣಸಾಲಿ, ಅವರ ಪತ್ನಿ ರಶ್ಮಿ ಹಾಗೂ ಮಲ್ಲೇಶ್ವರಂನ ಯೋಗೇಶ್ ಅವರ ಪತ್ನಿ ತುಳಸಿ   ಅಕ್ಟೋಬರ್ 2019 ರಲ್ಲಿ ದುಬೈಗೆ ಪ್ರವಾಸಕ್ಕೆ ಹೋಗಲು ನಿರ್ಧರಿಸಿದ್ದರು. ಟ್ರಾವ್‌ಬಾಂಡ್ ಟೂರ್ ಏಜೆನ್ಸಿಯಲ್ಲಿ ಪ್ರವಾಸಕ್ಕಾಗಿ ಬುಕ್ ಮಾಡಿದ್ದರು. ಡೆಸರ್ಟ್ ಸಫಾರಿ ಜೊತೆಗೆ ಬುರ್ಜ್ ಖಲೀಫಾ, ದುಬೈ ಮಾಲ್ ಮತ್ತು ಫೆರಾರಿ ವರ್ಲ್ಡ್ ಥೀಮ್ ಪಾರ್ಕ್‌ಗೆ ಭೇಟಿ ನೀಡುವುದು ಸೇರಿದಂತೆ ಗಲ್ಫ್‌ನಲ್ಲಿ ನಾಲ್ಕು ರಾತ್ರಿ ಮತ್ತು ಐದು ದಿನಗಳನ್ನು ಒಳಗೊಂಡ ಟ್ರಿಪ್​ ಕೈಗೊಂಡಿದ್ದರು.

ಇದನ್ನೂ ಓದಿ: Coffee Shops:ಬೆಂಗಳೂರಿನಲ್ಲಿ ಬೆಸ್ಟ್ ಕಾಫಿ ಸಿಗುವ ಟಾಪ್ 6 ಸ್ಥಳಗಳ ಲಿಸ್ಟ್ ಇಲ್ಲಿದೆ

ಕೊನೆ ಘಳಿಗೆಯಲ್ಲಿ ಬದಲಾವಣೆ

ಟ್ರಾವ್‌ಬಾಂಡ್ ಅವರು ಪ್ರತಿ ವ್ಯಕ್ತಿಗೆ 53,000 ರೂಪಾಯಿಗಳನ್ನು ಪಾವತಿಸಬೇಕೆಂದು ಕೇಳಿದ್ದು. ನಂತರ ಈ ಮೊತ್ತವನ್ನು 59,000 ರೂಪಾಯಿಗಳಿಗೆ ಹೆಚ್ಚಿಸಲಾಯಿತು. ದಂಪತಿಗಳು ಟಿಕೆಟ್, ವೀಸಾ, ವಸತಿ ಮತ್ತು ದೃಶ್ಯವೀಕ್ಷಣೆಯ ವೆಚ್ಚಗಳಿಗಾಗಿ ಮೊತ್ತವನ್ನು ಪಾವತಿಸಿದ್ದಾರೆ. ಆದರೆ ಟ್ರಿಪ್​ ಬಗ್ಗೆ ಪದೇ ಪದೇ ಪ್ರಶ್ನಿಸಿದ ಹೊರತಾಗಿಯೂ ಪ್ರಯಾಣದ ವಿವರವನ್ನು ಅವರೊಂದಿಗೆ ಸಂಸ್ಥೆ ಹಂಚಿಕೊಂಡಿಲ್ಲ. ಅಂತಿಮವಾಗಿ, ಜನವರಿ 18, 2020 ರಂದು ದುಬೈಗೆ ಪ್ರಯಾಣಿಸುವ ಕೆಲವೇ ಗಂಟೆಗಳ ಮೊದಲು, ಟ್ರಾವ್‌ಬಾಂಡ್ ಕಾರ್ಯನಿರ್ವಾಹಕರು ಗಿರೀಶ್, ರಶ್ಮಿ, ಯೋಗೇಶ್ ಮತ್ತು ತುಳಸಿ ಅವರೊಂದಿಗೆ ಪ್ರವಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೇಳಿದ್ದು 5 ದಿನ, ಆದರೆ 3 ದಿನಕ್ಕೆ ವಾಪಸ್​

5 ದಿನಗಳ ಪ್ರವಾಸವನ್ನು ಮೂರು ದಿನಗಳಿಗೆ ಮೊಟಕುಗೊಳಿಸಲಾಗಿದೆ. ಬುರ್ಜ್ ಖಲೀಫಾ ಮತ್ತು ಫೆರಾರಿ ವರ್ಲ್ಡ್ ಪ್ರವಾಸದಲ್ಲಿಲ್ಲ ಎಂದು ತಿಳಿದು ದಂಪತಿಗಳಿಗೆ ಬೇಸರವಾಗಿದೆ. ಕೊನೆಯ ಕ್ಷಣದಲ್ಲಿ  ಬೇರೆ ಏನು ಮಾಡಲು ಸಾಧ್ಯವಾಗದೆ ಬೆಂಗಳೂರಿಂದ ಗಲ್ಫ್‌ಗೆ ಹಾರಿದ್ದಾರೆ. 2.4 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಶೆಲ್ ಮಾಡಿದರೂ ತಮ್ಮ ಜೇಬಿನಿಂದ ಪ್ರವಾಸದ ಖರ್ಚುಗಳಿಗೆ ಪಾವತಿಸಲು ಒತ್ತಾಯಿಸಲಾಗಿದೆ. ಬೆಂಗಳೂರಿಗೆ ಮರಳಿದ ದಂಪತಿಗಳು ದೆಹಲಿಯ ಟ್ರಾವ್‌ಬಾಂಡ್ ಟೂರ್ ಏಜೆನ್ಸಿಯ ಜನರಲ್ ಮ್ಯಾನೇಜರ್ ಮತ್ತು ಬೆಂಗಳೂರಿನ ಚರ್ಚ್ ಸ್ಟ್ರೀಟ್‌ನಲ್ಲಿರುವ ಅದರ ಶಾಖೆಯ ವ್ಯವಸ್ಥಾಪಕರ ವಿರುದ್ಧ ಬೆಂಗಳೂರು ಗ್ರಾಮಾಂತರ ಮತ್ತು ನಗರ 1 ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿದರು.

ಇದನ್ನೂ ಓದಿ: ದುಬಾರೆಯಲ್ಲಿ River Rafting ಮಾಡಬೇಕು ಎಂದುಕೊಂಡಿರುವವರು ಓದಲೇಬೇಕಾದ ಸುದ್ದಿ ಇದು

ಟ್ರಾವೆಲ್ ಏಜೆನ್ಸಿಗೆ ಛೀಮಾರಿ

ಟ್ರಾವೆಲ್ ಏಜೆನ್ಸಿ ಪರ ವಕೀಲರು ದೂರು ಸುಳ್ಳು ಮತ್ತು ಪ್ರತಿಷ್ಠಿತ ಸಂಸ್ಥೆಯಿಂದ ಲಾಭವನ್ನು ಗಳಿಸುವ ಪ್ರಯತ್ನ ಇದು ಎಂದು ಪ್ರತಿಪಾದಿಸಿದರು. ದಂಪತಿಗಳಿಗೆ ಗಲ್ಫ್ ಪ್ರವಾಸದ ಬಗ್ಗೆ ಯಾವುದೇ ಸುಳ್ಳು ಆಶ್ವಾಸನೆಗಳನ್ನು ನೀಡಲಾಗಿಲ್ಲ.  ಬುರ್ಜ್ ಖಲೀಫಾ ಮತ್ತು ಫೆರಾರಿ ವರ್ಲ್ಡ್‌ನಂತಹ ಆಕರ್ಷಣೆಗಳನ್ನು ಅವರು ಹೇಳಿಕೊಂಡಂತೆ ಪ್ರವಾಸದಲ್ಲಿ ಎಂದಿಗೂ ಸೇರಿಸಿರಲಿಲ್ಲ ಎಂದು ವಕೀಲರು ಹೇಳಿದರು. ಆದಾಗ್ಯೂ, ಗ್ರಾಹಕ ನ್ಯಾಯಾಲಯದ ನ್ಯಾಯಾಧೀಶರು, ಪ್ರಪಂಚದ ಅತಿ ಎತ್ತರದ ಕಟ್ಟಡ ಮತ್ತು ಫೆರಾರಿ ವರ್ಲ್ಡ್ ಥೀಮ್ ಪಾರ್ಕ್ ಅನ್ನು ಪ್ರವಾಸದ ಆಕರ್ಷಣೆಗಳಲ್ಲಿ ಸೇರಿಸಲಾಗಿದೆ ಎಂದು ಸ್ಪಷ್ಟವಾಗಿ ತೋರಿಸಿದೆ ಎಂದು ಗಮನಿಸಿದರು. ಸುಳ್ಳು ಹೇಳಿಕೆಗಳನ್ನು ನೀಡಿ ಗರ್ಭಿಣಿ ಮಹಿಳೆ ಸೇರಿದಂತೆ ಪ್ರಯಾಣಿಕರಿಗೆ ಕಠಿಣ ಸಮಯವನ್ನು ನೀಡಿದ್ದಕ್ಕಾಗಿ ಟ್ರಾವೆಲ್ ಏಜೆನ್ಸಿಗೆ ವೇದಿಕೆ ಛೀಮಾರಿ ಹಾಕಿದೆ.

ತಮ್ಮ ತೀರ್ಪಿನಲ್ಲಿ, ಟ್ರಾವ್‌ಬಾಂಡ್‌ನ ಜನರಲ್ ಮ್ಯಾನೇಜರ್ ಮತ್ತು ಅದರ ಬೆಂಗಳೂರು ಕಚೇರಿಯ ಶಾಖಾ ವ್ಯವಸ್ಥಾಪಕರು ದೂರುದಾರರಿಗೆ ತಲಾ 15,000 ರೂಪಾಯಿಗಳ ಪರಿಹಾರವನ್ನು ನೀಡಬೇಕು ಎಂದು ತೀರ್ಪು ನೀಡಿದರು.
Published by:Kavya V
First published: