IAS Officers Transfer: ಗೌರವ್ ಗುಪ್ತಾ ವರ್ಗಾವಣೆ; BBMP ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ನೇಮಕ

ಸರ್ಕಾರ 16 ಐಎಎಸ್​ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.  ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಅವರನ್ನ ವರ್ಗಾವಣೆ ಮಾಡಲಾಗಿದ್ದು, ಓರ್ವ ಐಎಎಸ್ ಅಧಿಕಾರಿಗೆ ಹೆಚ್ಚುವರಿ ಹೊಣೆಗಾರಿಕೆಗೆ ನೀಡಿದೆ.

ಗೌರವ್​ ಗುಪ್ತಾ

ಗೌರವ್​ ಗುಪ್ತಾ

  • Share this:
ಬೆಂಗಳೂರು (ಮೇ 05): ಬಿಬಿಎಂಪಿಯಲ್ಲಿ 40 ಪರ್ಸೆಂಟ್​ ಕಮಿಷನ್​ ದಂಧೆ ವಿಚಾರ ಭಾರೀ ಸುದ್ದಿಯಾಗಿತ್ತು ಇದರ ಬೆನ್ನಲ್ಲೇ ರಾಜ್ಯದಲ್ಲಿ ಪಿಎಸ್​ಐ ನೇಮಕಾತಿ ಹಗರಣದ ವಿಚಾರ ಕೂಡ ಭಾರೀ ಸದ್ದು ಮಾಡಿತ್ತು. ಈ ಮಧ್ಯೆ ಸರ್ಕಾರ 16 ಐಎಎಸ್​ ಅಧಿಕಾರಿಗಳ ವರ್ಗಾವಣೆ (Transfer) ಮಾಡಿ ಆದೇಶ ಹೊರಡಿಸಿದೆ.  ಬಿಬಿಎಂಪಿ (BBMP) ಮುಖ್ಯ ಆಯುಕ್ತ ಗೌರವ ಗುಪ್ತ (Gaurav Gupta) ಅವರನ್ನ ವರ್ಗಾವಣೆ ಮಾಡಲಾಗಿದ್ದು, ಓರ್ವ ಐಎಎಸ್ ಅಧಿಕಾರಿಗೆ (IAS Officer) ಹೆಚ್ಚುವರಿ ಹೊಣೆಗಾರಿಕೆಗೆ ನೀಡಿದೆ. ದೆಹಲಿ ಕರ್ನಾಟಕ ಭವನದ ಉಪಸ್ಥಾನೀಯ ಆಯುಕ್ತರಾಗಿ ಖುಷ್ಬೂ ಚೌಧರಿ ನೇಮಕಗೊಂಡಿದ್ದಾರೆ.

16 ಐಎಎಸ್​ ಅಧಿಕಾರಿಗಳ ವರ್ಗಾವಣೆ

ಕೆಪಿಎಸ್​ಸಿ ಕಾರ್ಯದರ್ಶಿಯಾಗಿ ಕ್ಯಾ.‌ಡಾ.ರಾಜೇಂದ್ರ, ಕೆಆರ್​ಐಡಿಎಲ್ ಎಂಡಿ ಆಗಿ ಎಂ.ಜಿ.ಹಿರೇಮಠ, ಬೆಳಗಾವಿ ಜಿಲ್ಲಾಧಿಕಾರಿಯಾಗಿ ಆಗಿ ನಿತೇಶ್ ಪಾಟೀಲ್​, ಧಾರವಾಡ ಜಿಲ್ಲಾಧಿಕಾರಿಯಾಗಿ ಗುರುದತ್ತ ಹೆಗ್ಡೆ ವರ್ಗಾವಣೆಯಾಗಿದ್ದಾರೆ.

ಕೆಎಸ್​ಆರ್​ಟಿಸಿ ನಿರ್ದೇಶಕರಾಗಿ ಡಾ. ನವೀನ್ ಭಟ್, ಬಾಗಲಕೋಟೆ ಜಿಲ್ಲಾಧಿಕಾರಿ ಭೂ ಬಾಲನ್ ಟಿ., ಇಡಿಸಿಎಸ್ ನಿರ್ದೇಶಕರಾಗಿ ಡಾ.ದಿನೇಶ್ ಸಸಿ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಎಂಡಿ ಭರತ್ ಎಸ್, ಕೆಯುಐಡಿಎಫ್​ಸಿ ಎಂಡಿಯಾಗಿ ಶಿಲ್ಪಾ ಎಂ, ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಪ್ರಸನ್ನ ಹೆಚ್, ಕಲಬುರಗಿ ಜಿ.ಪಂ. ಸಿಇಒ ಆಗಿ ಡಾ.ಗಿರೀಶ್ ದಿಲೀಪ್ ಬಾಡೋಲೆ ಅವರನ್ನು ವರ್ಗಾವಣೆ ಮಾಡಲಾಗಿದೆ.

ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್​ ನೇಮಕ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ವರ್ಗಾವಣೆ
ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರನ್ನು ವರ್ಗಾವಣೆ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದ್ದು, ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್​ರನ್ನು ನೇಮಕ ಮಾಡಿದೆ.

ಇದನ್ನೂ ಓದಿ: Gadaga: ನಗರಸಭೆಯ ಸಾಮಾನ್ಯ ಸಭೆಗೆ ನುಗ್ಗಿ ಆಟೋ ಡ್ರೈವರ್​ಗಳ ಆಕ್ರೋಶ, ರಸ್ತೆ ದುರಸ್ತಿಗೆ ಪಟ್ಟು

ಒಂದು ತಿಂಗಳೊಳಗೆ ಮತ್ತೆ ವರ್ಗಾವಣೆ

ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಎಸಿಎಸ್ ಆಗಿ ಗೌರವ್ ಗುಪ್ತಾ ವರ್ಗಾವಣೆ ಹೊಂದಿದ್ದಾರೆ. ಜೊತೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿ ಟಿಕೆ ಅನಿಲ್ ಕುಮಾರ್​ಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. 2022 ಏಪ್ರಿಲ್ 18ರಂದು ಕರ್ನಾಟಕ ಸರ್ಕಾರ 16 ಐಎಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿತ್ತು. ಇದೀಗ ಒಂದು ತಿಂಗಳೊಳಗೆ ಮತ್ತೆ ವರ್ಗಾವಣೆ ಮಾಡಿದೆ.

ಬಿಬಿಎಂಪಿಯಲ್ಲಿ 40 ಪರ್ಸೆಂಟ್​ ಕಮಿಷನ್​

ಬಿಬಿಎಂಪಿ ಭ್ರಷ್ಟಾಚಾರ ಕೂಪ ಎಂಬುದು ಜಗಜ್ಜಾಹೀರಾಗಿರುವ ವಿಚಾರವಾಗಿದೆ. ರಾಜ್ಯದಾದ್ಯಂತ ಸರ್ಕಾರದ ವಿರುದ್ದವೇ 40 ಪರ್ಸೆಂಟ್ ಆರೋಪಗಳು ಕೇಳಿಬರುತ್ತವೆ. ಇನ್ನು ಬೆಂಗಳೂರಿಗರ ಪಾಲಿಗೆೆ ಪ್ರಮುಖ ಕೇಂದ್ರ ಅಂದರೆ ಅದುವೇ ಬಿಬಿಎಂಪಿ. ಬಿಬಿಎಂಪಿಯ ಕಂಟ್ರಾಕ್ಟರ್ ಗಳು ಸಹ ಬಿಲ್ ಪಾವತಿಗೆ 40 ಪರ್ಸೆಂಟ್ ಕೇಳುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿತ್ತು.

ಗುತ್ತಿಗೆದಾರರು ತಮ್ಮ ಬಿಲ್ ಹಣವನ್ನು ಪಡೆಯಲು ಹರಸಾಹಸವನ್ನೇ ಪಡಬೇಕಾಗಿದೆ. ಬಾಕಿ ಬಿಲ್ ಪಾವತಿಗಾಗಿ ರಾಜ್ಯ ಸರ್ಕಾರ 1000 ಕೋಟಿ ಹಣವನ್ನು ಬಿಡುಗಡೆ ಮಾಡಿದೆ. ಆದರೆ ಬಿಬಿಎಂಪಿಯ ಅಧಿಕಾರಿಗಳು ಮಾತ್ರ ದೇವರು ವರವನ್ನು ಕೊಟ್ಟರು ಪೂಜಾರಿ ವರ ಕೊಡಲಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ಪರ್ಸೇಂಟೇಜ್ ಕೊಡಬೇಕು..?

ಕಾಮಗಾರಿಯ ಅನುದಾನವನ್ನು ಪಡೆಯಲು ಶೇ 15

ವಿಧಾನಸೌಧದಲ್ಲಿ ವಿವಿಧ ಕಡೆ ಕಡತ ವಿಲೇವಾರಿಗೆೆ ಶೇ 5

ನಗರಾಭಿವೃದ್ದಿ ಇಲಾಖೆ ವಿವಿಧ ಭಾಗಗಳಿಗೆ ಶೇ 5

ಟೆಂಡರ್ ಪರಿಶೀಲನಾ ಸಮಿತಿಗೆ ಸಂಬಂಧಿಸಿದಂತೆ ಶೇ 5

ಬಿಲ್ ಪಾವತಿ ಅನುಮೊದನೆ , ವಿವಿಧ ಪಂತಗಳಲ್ಲಿ ಶೇ 10

ಇದನ್ನು ಓದಿ: ಸಚಿವ ಅಶ್ವತ್ಥ್ ನಾರಾಯಣ ಪರ ಸಿಎಂ ಬ್ಯಾಟಿಂಗ್, ಕಾಂಗ್ರೆಸ್ ವಿರುದ್ಧ ಬಸವರಾಜ ಬೊಮ್ಮಾಯಿ ಕಿಡಿ

ಹೀಗೆ ಗುತ್ತಿಗೆದಾರ ತಾನೂ ಮಾಡಿರುವ ಕಾಮಗಾರಿಯ ಬಿಲ್ ಮೊತ್ತವನ್ನು ಪಡೆಯಲು ವಿವಿಧ ಹಂತಗಳಲ್ಲಿ ಶಕ್ತಿಸೌಧದಿಂದ ಬಿಬಿಎಂಪಿ ಕಿರಿಯ ಅಧಿಕಾರಿಯ ವರೆಗೂ ಹಣವನ್ನು ಪಾವತಿ ಮಾಡಬೇಕಿದೆ. ಈ ಶೇ 40 ಹಣವನ್ನು ಕೊಟ್ಟರಷ್ಟೇ ಬಿಲ್ ಪಾವತಿಯಾದರೆ ಮಾತ್ರವೇ ಹಣ ಬಿಡುಗಡೆಯಾಗುತ್ತದೆೆ ಎಂದು ಗುತ್ತಿಗೆದಾರರು ಆರೋಪಿಸುತ್ತಿದ್ದಾರೆ.
Published by:Pavana HS
First published: