ಭೀಕರ ಅಪಘಾತ: ಎಲೆಕ್ಟ್ರಾನಿಕ್​ ಸಿಟಿ ಫ್ಲೈವರ್​ನಿಂದ ಬಿದ್ದು ಯುವಕ-ಯುವತಿ ಸಾವು

ಓವರ್​ ಟೇಕ್​ ಮಾಡವ ರಭಸದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತವಾದ ರಭಸಕ್ಕೆ ಯುವತಿ ಯುವಕನ ಜೊತೆ ಬ್ಯಾರಿಕೇಡ್​ ಕೂಡ ಫ್ಲೈ ಓವರ್​​ನಿಂದ ಕೆಳಗೆ ಬಿದ್ದಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
    ಬೆಂಗಳೂರು (ಸೆ. 14): ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್​  (electronic city Accident)ನಲ್ಲಿ ಬೈಕ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿವಿಸಿದೆ. ಈ ಅಪಘಾತದ ರಭಸಕ್ಕೆ ಬೈಕ್​ನಲ್ಲಿದ್ದ ಯುವಕ ಮತ್ತು ಯುವತಿ ಫ್ಲೈ ಓವರ್​  ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಓವರ್​ ಟೇಕ್​ ಮಾಡವ ರಭಸದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತವಾದ ರಭಸಕ್ಕೆ ಯುವತಿ ಯುವಕನ ಜೊತೆ ಬ್ಯಾರಿಕೇಡ್​ ಕೂಡ ಫ್ಲೈ ಓವರ್​​ನಿಂದ ಕೆಳಗೆ ಬಿದ್ದಿದೆ. ಮೇಲಿಂದ ಇಬ್ಬರು ಕೆಳಗೆ ಬಿದ್ದಿರುವ ಹಿನ್ನಲೆ ಮೃತದೇಹಗಳು ಛಿದ್ರಗೊಂಡಿದೆ. ಘಟನಾ ಸ್ಥಳಕ್ಕೆ ಪರಪ್ಪನ ಅಗ್ರಹಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

    ಘಟನೆಯಲ್ಲಿ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು, ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.  ಕಾರಿನಲ್ಲಿ ಬಂದವರಿಂದ ಈ ಅಪಘಾತ ಸಂಭವಿಸಿದೆ. ಸದ್ಯ ಕಾರು ಯಾರದ್ದು, ಸಾವನ್ನಪ್ಪಿದರು ಯಾರು ಎನ್ನುವುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
    Published by:Seema R
    First published: