ಆನಂದ್ ಸಿಂಗ್ ಅಸಮಾಧಾನ ಶಮನ? ಕೊಠಡಿಗೆ ಪ್ರವಾಸೋದ್ಯಮ & ಪರಿಸರ ಖಾತೆಯ ಬೋರ್ಡ್ ಅಳವಡಿಕೆ

Minister Anand Singh : ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯ ಬೋರ್ಡ್​​ನ ಸಿಬ್ಬಂದಿ ಅವರ ಕೊಠಡಿ ಎದುರು ಅಳವಡಿಸಿದ್ದಾರೆ. ಇಷ್ಟು ದಿನ ಕೊಠಡಿಗೆ ನಾಮಫಲಕ ಅಳವಡಿಸಿರಲಿಲ್ಲ. ಇಂದು ಅಳವಡಿಸಿರುವುದರಿಂದ ಆನಂದ್​ ಸಿಂಗ್​ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯನ್ನೇ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಆನಂದ್ ಸಿಂಗ್

ಆನಂದ್ ಸಿಂಗ್

  • Share this:
ಬೆಂಗಳೂರು: ಖಾತೆ ವಿಚಾರವಾಗಿ ಕ್ಯಾತೆ ತೆಗೆದು ರಾಜೀನಾಮೆಗೆ ಮುಂದಾಗಿದ್ದ ಸಚಿವ ಆನಂದ್​ ಸಿಂಗ್​ ಅಸಮಾಧಾನ ಶಮನವಾಗಿದೆ ಎನ್ನಲಾಗುತ್ತಿದೆ. ಹೈಕಮಾಂಡ್ ಸಂದೇಶದಿಂದ ಸೈಲೆಂಟ್ ಆದ್ರಾ ಆನಂದ್​ ಸಿಂಗ್​ ಎಂಬ ಅನುಮಾನು ಕಾಡುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ವಿಕಾಸಸೌಧದಲ್ಲಿ ಸಚಿವ ಆನಂದ್ ಸಿಂಗ್ ಕೊಠಡಿಗೆ ನಾಮಫಲಕ ಅಳವಡಿಸಲಾಗಿದೆ. ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯ ಬೋರ್ಡ್​​ನ ಸಿಬ್ಬಂದಿ ಅವರ ಕೊಠಡಿ ಎದುರು ಅಳವಡಿಸಿದ್ದಾರೆ. ಇಷ್ಟು ದಿನ ಕೊಠಡಿಗೆ ನಾಮಫಲಕ ಅಳವಡಿಸಿರಲಿಲ್ಲ. ಇಂದು ಅಳವಡಿಸಿರುವುದರಿಂದ ಆನಂದ್​ ಸಿಂಗ್​ ಪ್ರವಾಸೋದ್ಯಮ ಹಾಗೂ ಪರಿಸರ ಖಾತೆಯನ್ನೇ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಖಾತೆ ಬದಲಾವಣೆಯೂ ಇಲ್ಲ, ರಾಜೀನಾಮೆಯೂ ಇಲ್ಲ. ಬಿಜೆಪಿ ಹೈಕಮಾಂಡ್​ ಸಂದೇಶದಿಂದ ಆನಂದ್​ ಸಿಂಗ್​ ಸುಮ್ಮನಾಗಿದ್ದಾರೆ ಎನ್ನಲಾಗುತ್ತಿದೆ.

ಇಂಧನ ಇಲ್ಲವೇ ಅರಣ್ಯ ಖಾತೆಗೆ ಬೇಡಿಕೆ ಇಟ್ಟಿದ್ದ ಆನಂದ್​ ಸಿಂಗ್​ ಈಗ ಇರುವ ಖಾತೆಯಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಸೂಚನೆ ಮೇರೆಗೆ ನಾಮಫಲಕ ಅಳವಡಿಸಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೊಟ್ಟಿರುವ ಖಾತೆಯಲ್ಲಿ ಮುಂದುವರೆಯಲು ನಿರ್ಧಾರ ಮಾಡಿದ್ರಿಂದ ಕೊಠಡಿ ಪ್ರವೇಶಿಸಲು ಆನಂದ್​ ಸಿಂಗ್​ ಮುಂದಾಗಿದ್ದಾರೆ. ವಿಕಾಸಸೌಧದ ನೆಲ ಮಹಡಿಯಲ್ಲಿರುವ ಕೊಠಡಿಗೆ ಸದ್ಯದಲ್ಲೇ ಸಚಿವ ಆನಂದ್ ಸಿಂಗ್ ಅಧಿಕೃತವಾಗಿ ಪ್ರವೇಶಿಸಿ ಸಚಿವಾಲಯದ ಜವಾಬ್ದಾರಿಯನ್ನು ಹೊರಲಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಎಂಪಿ ಕುಮಾರಸ್ವಾಮಿ ಏಕಾಂಗಿ ಪ್ರತಿಭಟನೆಗೆ ಮಣಿದ ಸರ್ಕಾರ; ಮೂಡಿಗೆರೆ ಸೇರಿ 22 ತಾಲೂಕು ನೆರೆ ಪಟ್ಟಿಗೆ

ಪ್ರವಾಸೋದ್ಯಮ ಹಾಗೂ ಪರಿಸರ ಖಾತೆ ನೀಡಿದ್ದಕ್ಕೆ ಬಂಡಾಯವೆದ್ದಿದ್ದ ಆನಂದ್​ ಸಿಂಗ್​ ರಾಜೀನಾಮೆ ನೀಡುವುದಾಗಿ ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು. ಬಂಡಾಯ ಶಮನಕ್ಕೆ ಮುಂದಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ ಕರೆ ಮಾಡಿ ಆನಂದ್ ಸಿಂಗ್​ ಜೊತೆ ಮಾತನಾಡಿದ್ದರು. ನಂತರ ಮಾಜಿ ಸಿಎಂ ಬಿಎಸ್​ ಯಡಿಯೂರಪ್ಪ ಕೂಡ ಕರೆಸಿಕೊಂಡು ಸಮಾಧಾನ ಮಾಡಿದ್ದರು. ಆಗ ಅಪ್ಪಾಜಿ ಕಳೆದ ಬಾರಿ 2 ಸಲ ಖಾತೆ ಬದಲಾಗಿತ್ತು , ನಿಮಗಾಗಿ ನಾನು ಸುಮ್ಮನಿದ್ದೆ. ಈಗ ಕ್ಷೇತ್ರದ ಜನ ಒತ್ತಾಯಿಸುತ್ತಿದ್ದಾರೆ. ಇಂಧನ ಇಲ್ಲವೇ ಅರಣ್ಯ ಖಾತೆ ಬೇಕು ಎಂದು ಬಿಎಸ್​ವೈ ಬಳಿ ಆನಂದ್​ ಸಿಂಗ್​ ಮನವಿ ಮಾಡಿಕೊಂಡಿದ್ದರು. ಈಗ ಕೊಟ್ಟಿದ್ದನ್ನು ಮಾಡಿಕೊಂಡು ಹೋಗಪ್ಪ. ಮುಂದೆ ಒಳ್ಳೆಯ ರಾಜಕೀಯ ಭವಿಷ್ಯ ಇದೆ ಎಂದು ಬಿಎಸ್​ವೈ ಸಮಾಧಾನ ಮಾಡಿ ಕಳುಹಿಸಿದ್ದರು.

ನಂತರದ ದಿನಗಳಲ್ಲೂ ಮುನಿಸಿಕೊಂಡೇ ಇದ್ದ ಆನಂದ್​ ಸಿಂಗ್​ಗೆ ಬಿಜೆಪಿ ಹೈಕಮಾಂಡ್​ನಿಂದಲೇ ಸಂದೇಶ ಬಂದಿದೆ ಎನ್ನಲಾಗುತ್ತಿದೆ. ಸದ್ಯ ಕೊಟ್ಟ ಖಾತೆಯಲ್ಲಿ ಮುಂದುವರೆಯುಂತೆ ಹೈಕಮಾಂಡ್​ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಆನಂದ್​ ಸಿಂಗ್ ಸೈಲೆಂಟ್​ ಆಗಿದ್ದಾರೆ. ಕೊಟ್ಟಿರುವ ಖಾತೆ ನಿಭಾಯಿಸಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Kavya V
First published: