HOME » NEWS » State » BENGALURU URBAN TOMORROW CM WILL ANNOUNCE KARNATAKA SECOND LEVEL UNLOCK KVD

Karnataka Unlock: ನಾಳೆ ಸಂಜೆ 2ನೇ ಹಂತದ ಅನ್ ಲಾಕ್ ಬಗ್ಗೆ ಸಿಎಂ ತೀರ್ಮಾನ: ಯಾವುದಕ್ಕೆಲ್ಲಾ ವಿನಾಯಿತಿ?

ಬಿಜೆಪಿ ಮುಖಂಡ ಹೆಚ್ ವಿಶ್ವನಾಥ್ ಹೇಳಿಕೆ ಬಗ್ಗೆ ಮಾತಾಡಲ್ಲ. ಅವರ ಆರೋಪ ಆಧಾರ ರಹಿತವಾಗಿದೆ. ಅವರ ವಿರುದ್ದ ಶಿಸ್ತು ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

Kavya V | news18-kannada
Updated:June 18, 2021, 3:28 PM IST
Karnataka Unlock: ನಾಳೆ ಸಂಜೆ 2ನೇ ಹಂತದ ಅನ್ ಲಾಕ್ ಬಗ್ಗೆ ಸಿಎಂ ತೀರ್ಮಾನ: ಯಾವುದಕ್ಕೆಲ್ಲಾ ವಿನಾಯಿತಿ?
ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ತಗ್ಗುತ್ತಿದ್ದು, ಹಂತ ಹಂತವಾಗಿ ಅನ್​​ಲಾಕ್​​ ಮಾಡಲಾಗುತ್ತಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಮಾತನಾಡಿದ ಸಿಎಂ ಬಿ.ಎಸ್​.ಯಡಿಯೂರಪ್ಪ, ನಾಳೆ ಸಂಜೆ ಎರಡನೇ ಹಂತದ ಅನ್ ಲಾಕ್ ಬಗ್ಗೆ ತೀರ್ಮಾನ ಮಾಡುತ್ತೇವೆ. ಯಾವುದಕ್ಕೆಲ್ಲಾ ವಿನಾಯಿತಿ ಕೊಡಬೇಕು ಎಂಬುದರ ಬಗ್ಗೆ ನಿರ್ಧಾರ ಮಾಡುತ್ತೇವೆ. ಕೊರೊನಾ ಮೂರನೇ ಅಲೆ ಬರುವ ಸಾಧ್ಯತೆ ಇದೆ. ಹೀಗಾಗಿ ಇದರ ನಡುವೆ ಯಾವುದಕ್ಕೆ ವಿನಾಯಿತಿ ಕೊಡಬಹುದು ಎಂದು ನಾಳೆ ನಿರ್ಧಾರ ಮಾಡ್ತೇವೆ ಎಂದು ತಿಳಿಸಿದರು.

ಇನ್ನು ಬಿಜೆಪಿ ಮುಖಂಡ ಹೆಚ್ ವಿಶ್ವನಾಥ್ ಹೇಳಿಕೆ ಬಗ್ಗೆ ಮಾತಾಡಲ್ಲ. ಅವರ ಆರೋಪ ಆಧಾರ ರಹಿತವಾಗಿದೆ. ಅವರ ವಿರುದ್ದ ಶಿಸ್ತು ಕ್ರಮದ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಇನ್ನು ಮುಂಗಾರು ಪ್ರಾರಂಭ ಆಗಿದೆ, ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ. ರೈತರು ಬಿತ್ತನೆ ಬೀಜದಲ್ಲಿ ತೊಡಗಿದ್ದಾರೆ. ಹೀಗಾಗಿ ಬಿತ್ತನೆ ಬೀಜಕ್ಕೆ ತೊಂದರೆ ಆಗದ ರೀತಿ ಕ್ರಮ ಕೈಹೊಳ್ಳಲಾಗಿದೆ. ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸುವ ಬಗ್ಗೆ ಚರ್ಚೆ ನಡೆಸಿದ್ದೇವೆ.

ನಾಳೆ ಮಹಾರಾಷ್ಟ್ರ ನೀರಾವರಿ ಸಚಿವರು ರಾಜ್ಯಕ್ಕೆ ಬರುತ್ತಿದ್ದಾರೆ. ಅವರ ಜೊತೆ ಎಲ್ಲಾ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಪ್ರವಾಹದ ಜಿಲ್ಲೆಗಳ ಡಿಸಿಗಳ ಜೊತೆ ನಾಳೆ ವೀಡಿಯೋ ಕಾನ್ಪೆರೆನ್ಸ್ ಮಾಡ್ತೇನೆ. ಈಗ ತಾನೇ ಬೆಳಗಾವಿ ಡಿಸಿ ಜೊತೆ ಡಿಸಿ ಜೊತೆ ಚರ್ಚೆ ಮಾಡಿದ್ದೇನೆ ಎಂದು ತಿಳಿಸಿದರು. ಇನ್ನು ರಾಜಕೀಯ ಗೊಂದಲವೇ ಇಲ್ಲ, ಯಾರೋ ಒಂದಿಬ್ಬರ ಹೇಳಿಕೆಯಿಂದ ತಪ್ಪು ಗ್ರಹಿಕೆ ಆಗುತ್ತಿದೆ. ಯಾವುದೇ ಗೊಂದಲ ಇಲ್ಲ, ನಾವು ಅಭಿವೃದ್ಧಿ ಕಡೆ ಗಮನ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಇಂದು ಬೆಳಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ, ಬಿಜೆಪಿ ಎಂಎಲ್​ಸಿ ಎಚ್​.ವಿಶ್ವನಾಥ್​​ ಅವರು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದ ಅವರು ಯಡಿಯೂರಪ್ಪಕ್ಕೆ ವಯಸ್ಸಾಗಿದೆ. ವಯಸ್ಸಾದವರಿಂದ ಆಡಳಿತ ವೇಗವಾಗಿ ನಡೆಯಲ್ಲ ಎಂಬ ಹೇಳಿಕೆ ಬಿಎಸ್​​ವೈ ಆಪ್ತರನ್ನು ಕೆರಳಿಸಿದೆ.

ಇದನ್ನೂ ಓದಿ: Karnataka Politics: ಯಡ್ಯೂರಪ್ಪನಿಗೆ ವಯಸ್ಸಾಗಿದೆ...ಸಿಎಂ ಆಗಿ ಆಡಳಿತ ನಡೆಸೋಕ್ಕಾಗಲ್ಲ, ಮಕ್ಕಳಿಂದ ಮತ್ತೆ ಜೈಲಿಗೆ ಹೋಗ್ತಾರೆ: ಮಾಜಿ ಸಚಿವ ಎಚ್ ವಿಶ್ವನಾಥ್

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಕೋವಿಡ್​​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: Kavya V
First published: June 18, 2021, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories