Namma Metro: ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೆಟ್ರೋ ರೈಲು ನಿಗಮವು ಏಪ್ರಿಲ್​ 23 ರಂದು ರಾತ್ರಿ 9.30 ಗಂಟೆಗೆ ಇಂದಿರಾನಗರ ಮತ್ತು ಸ್ವಾಮಿ ವಿವೇಕಾನಂದ ವಿವೇಕಾನಂದ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳುತ್ತಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾಳೆ ನಮ್ಮ ಮೆಟ್ರೋ (Namma Metro) ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಇಂದಿರಾನಗರ (Indiranagar) ಹಾಗೂ ಸ್ವಾಮಿ ವಿವೇಕಾನಂದ ಮಾರ್ಗದ ನಡುವೆ ಸಿವಿಲ್ ಕಾಮಗಾರಿ ಹಿನ್ನೆಲೆ  ಎಂ.ಜಿ ರಸ್ತೆಯಿಂದ ಬೈಯಪ್ಪನಹಳ್ಳಿವರೆಗೆ ಮೆಟ್ರೋ ಸಂಚಾರ ಸ್ಥಗಿತಗೊಳ್ಳಲಿದೆ ಎಂದು ಬಿಎಂಆರ್​ಸಿಎಲ್​ ಪ್ರಕಟಣೆ ಹೊರಡಿಸಿದೆ. ಎಂಜಿ ರೋಡ್ (M Road) ಹಾಗೂ ಕೆಂಗೇರಿ ನಿಲ್ದಾಣಗಳ ಮೆಟ್ರೋ ಸಂಚಾರ ನಾಳೆ ರಾತ್ರಿ 9.30ರ ಬಳಿಕ ಸ್ಥಗಿತಗೊಳ್ಳಲಿದೆ. ರಾತ್ರಿ 9 ಗಂಟೆಗೆ ಬೈಯಪ್ಪನಹಳ್ಳಿ ಕಡೆ ಕೊನೆಯ ಮೆಟ್ರೋ ರೈಲು ಹೊರಡಲಿದೆ. ಭಾನುವಾರ ಬೆಳಗ್ಗೆಯಿಂದ ನೇರಳೆ ಮಾರ್ಗದಲ್ಲಿ (Purple Line) ಎಂದಿನಂತೆ ಮೆಟ್ರೊ ಸೇವೆ ಇರಲಿದೆ ಎಂದು ಬಿಎಂಆರ್​ಸಿಎಲ್​ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.

ನಾಳೆ ನಮ್ಮ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು ಮೆಟ್ರೋ ರೈಲು ನಿಗಮವು ಏಪ್ರಿಲ್​ 23 ರಂದು ರಾತ್ರಿ 9.30 ಗಂಟೆಗೆ ಇಂದಿರಾನಗರ ಮತ್ತು ಸ್ವಾಮಿ ವಿವೇಕಾನಂದ ವಿವೇಕಾನಂದ ಮೆಟ್ರೋ ನಿಲ್ದಾಣಗಳ ನಡುವೆ ನೇರಳೆ ಮಾರ್ಗದಲ್ಲಿ ಸಿವಿಲ್ ನಿರ್ವಹಣೆ ಕಾಮಗಾರಿಯನ್ನು ಕೈಗೊಳ್ಳುತ್ತಿದೆ. ಈ ಕಾಮಗಾರಿ ನಿರ್ವಹಿಸಲು ನೇರಳೆ ಮಾರ್ಗದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ನಾಳೆ (ಏಪ್ರಿಲ್ 23) ರಂದು ರಾತ್ರಿ 9.30 ಗಂಟೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ರಾತ್ರಿ 9.30ರ ಬಳಿಕ ಸಂಚಾರ ಸ್ಥಗಿತ

ಈ ಅವಧಿಯಲ್ಲಿ ಮೆಟ್ರೋ ವೇಳಾಪಟ್ಟಿಯ ಪ್ರಕಾರ ಪ್ರಯಾಣಿಕರಿಗೆ ಮೆಟ್ರೋ ಸೇವೆಯೂ ಎಂ.ಜಿ ರಸ್ತೆ ಹಾಗೂ ಕೆಂಗೇರಿ ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಲಭ್ಯವಿರುತ್ತದೆ. ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಕಡೆಗೆ ಕೊನೆಯ ರೈಲು ರಾತ್ರಿ 9.30 ಗಂಟೆಗೆ ಹೊರಡುತ್ತದೆ. ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ಹಸಿರು ಮಾರ್ಗದ ರೈಲುಗಳನ್ನು ಸಂಪರ್ಕಿಸಿದ ನಂತರ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿಗೆ ಕೊನೆಯ ರೈಲು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ರಾತ್ರಿ 9 ಗಂಟೆಗೆ ಹೊರಡಲಿದೆ.

ಹಸಿರು ಮಾರ್ಗದಲ್ಲಿ ಯಾವುದೇ ಬದಲಾವಣೆ ಇಲ್ಲ

ಭಾನುವಾರದಂದು ಮೆಟ್ರೋ ಸೇವೆಯು ನೇರಳರ ಮಾರ್ಗದಲ್ಲಿ ಪೂರ್ಣವಾಗಿ ಬೆಳಗ್ಗೆ 7.00 ಗಂಟೆಯಿಂದ ವೇಳಾಪಟ್ಟಿಯ ಪ್ರಕಾರ ಪುನರಾಂಭಿಸಲಾಗುತ್ತದೆ. ಹಸಿರು ಮಾರ್ಗದ ಮೆಟ್ರೋ ರೈಲು ಸೇವೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಮತ್ತು ವೇಳಾಪಟ್ಟಿಯ ಪ್ರಕಾರ ರೈಲು ಸೇವೆಯು ಈ ಮಾರ್ಗದಲ್ಲಿ ಲಭ್ಯವಿರುತ್ತದೆ.

ನಮ್ಮ ಮೆಟ್ರೊ ಸ್ಪೆಷಲ್ ಪಾಸ್ ಕೇಳೋರೇ ಇಲ್ಲ

ನಮ್ಮ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬಿಎಂಟಿಸಿ ಮಾದರಿಯಲ್ಲಿ BMRCL ಸಹ ದಿನದ ಹಾಗೂ ಮೂರು ದಿನದ ಪಾಸ್ ವಿತರಣೆ ಮಾಡಲಾರಂಭಿಸಿದೆ. ಆದರೆ ಪಾಸ್ ಖರೀದಿಗೆ ಜನರು ಮುಂದಾಗುತ್ತಿಲ್ಲ ವಿಷಯ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ. ಸದ್ಯ ಕೇವಲ ಬೆರಳಣಿಕೆ ಪಾಸ್ ಗಳು ಮಾತ್ರ ಮಾರಾಟ ಆಗ್ತಿದೆ. ಯುಗಾದಿಗೆ BMRCL ಪ್ರಯಾಣಿಕರಿಗೆ ದಿನದ ಪಾಸ್ ಹಾಗೂ ಮೂರು ದಿನದ ಪಾಸ್ ಪರಿಚಯಿಸಿತ್ತು.

ಇದನ್ನೂ ಓದಿ:  Warrant to DK Shivakumar: ಕೊರೊನಾ ನಿಯಮ ಉಲ್ಲಂಘಿಸಿ ಪ್ರತಿಭಟನೆ; ಡಿಕೆ ಶಿವಕುಮಾರ್​ಗೆ ವಾರೆಂಟ್
ಮೂರು ದಿನದ ಪಾಸ್ ಗೆ 400 ರೂ. ನಿಗದಿ
Published by:Pavana HS
First published: